Home ಬೆಳ್ತಂಗಡಿ ಬೆಳ್ತಂಗಡಿಯ ವಾಟ್ಸಪ್ ಗ್ರೂಪ್ ನಿಂದ ನಡೆಯುತ್ತೆ ಸದ್ದಿಲ್ಲದ ಸಮಾಜಸೇವೆ..!!

ಬೆಳ್ತಂಗಡಿಯ ವಾಟ್ಸಪ್ ಗ್ರೂಪ್ ನಿಂದ ನಡೆಯುತ್ತೆ ಸದ್ದಿಲ್ಲದ ಸಮಾಜಸೇವೆ..!!

ಬೆಳ್ತಂಗಡಿಯ ವಾಟ್ಸಪ್ ಗ್ರೂಪ್ ನಿಂದ ನಡೆಯುತ್ತೆ ಸದ್ದಿಲ್ಲದ ಸಮಾಜಸೇವೆ..!!

ಬೆಳ್ತಂಗಡಿ : ಸಾಮಾಜಿಕ ಜಾಲತಾಣವನ್ನು ಬಳಸಿ ಕ್ರೈಮ್ ಮಾಡುವ ಜನರ ಮಧ್ಯೆ ಬೆಳ್ತಂಗಡಿ ಯ ಒಂದು ವಾಟ್ಸಪ್ ಗ್ರೂಪ್ ಸಂಘಟನೆ ಸದ್ದಿಲ್ಲದೆ ಸಮಾಜಸೇವೆ ಕಾರ್ಯ ಮಾಡುತ್ತಿದೆ.

ವೀರ ಕೇಸರಿ ಎಂಬ ವಾಟ್ಸಪ್ ಗ್ರೂಪ್ ನ ಸದಸ್ಯರು ಕಳೆದ ಮೂರುವರೆ ವರ್ಷದಲ್ಲಿ‌42 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಿ ಬಡವರಿಗೆ ನೀಡಿದೆ.

40 ನೇ ತಿಂಗಳ 100 ನೇ ಯೋಜನೆಯನ್ನು ಈ ವಾಟ್ಸಪ್ ಗುಂಪಿನ ಸದಸ್ಯರು ಸೇರಿ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಮೂಲಕ ಅರ್ಥಪೂರ್ಣಗೊಳಿಸಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸೂರು ಇಲ್ಲದ ಕುಟುಂಬಕ್ಕೆ ಮನೆ ಕಟ್ಟಿ ನೀಡಿದ್ದಾರೆ.

ಈ 100 ನೇ ಯೋಜನೆಯನ್ನು ಅದ್ಧೂರಿ ಯಿಂದ ಮಾಡಿದ್ದು,ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ,ಯುವ ಉದ್ಯಮಿ ಅಶ್ವಥ್ ಬಳಂಜ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮನೆ ಹಸ್ತಾಂತರಿಸಿದ್ದಾರೆ.

.ಮಧ್ಯಮ‌ ಕುಟುಂಬದ ಜನರೇ ಈ ವಾಟ್ಸಪ್ ಗುಂಪಿನ ಸದಸ್ಯರಾಗಿದ್ದು,ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಬಡಬಗ್ಗರಿಗೆ ನೆರವಾಗಿ ಮಾದರಿಯಾಗಿದ್ದಾರೆ.

ವಿಡಿಯೋಗಾಗಿ..

- Advertisment -

RECENT NEWS

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ 

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ  ಚೀನಾ: ಚೀನಾದ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ 75,000 ಜನರು...

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ.ಚೆನ್ನಿಗಪ್ಪ ಇನ್ನಿಲ್ಲ

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ. ಚೆನ್ನಿಗಪ್ಪ ಇನ್ನಿಲ್ಲ ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ...

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವಂತೆ ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹತ್ತು ಅಪಾರ್ಟ್ ಮೆಂಟ್ ಗಳಿಗೆ ದಂಡ ವಿಧಿಸಲಾಗಿದೆ. ಕಳೆದ ಸೆಪ್ಟಂಬರ್...

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಮಾವೇಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಬಂಧಿಸಿದ ಪೋಲಿಸರು...