Connect with us

ಧರ್ಮಸ್ಥಳದಲ್ಲಿ ಎಸ್ ಕೆ ಡಿ ಆರ್ ಡಿ ಪಿಯ ನೂತನ ಕಟ್ಟಡ ಲೋಕಾರ್ಪಣೆ : ಗ್ರಾಮಾಭಿವೃದ್ದಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ- ಡಾ.ಹೆಗ್ಗಡೆ

Published

on

ಧರ್ಮಸ್ಥಳದಲ್ಲಿ ಎಸ್ ಕೆ ಡಿ ಆರ್ ಡಿ ಪಿಯ ನೂತನ ಕಟ್ಟಡ ಲೋಕಾರ್ಪಣೆ : ಗ್ರಾಮಾಭಿವೃದ್ದಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ- ಡಾ.ಹೆಗ್ಗಡೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆಯ ನೂತನ ಕಟ್ಟಡ ಧರ್ಮಶ್ರೀ(ವಿಸ್ತೃತ) ಇದರ ಉದ್ಘಾಟನಾ ಸಮಾರಂಭ ಅಮೃತವರ್ಷಿಣಿ ಸಭಾಭವನದಲ್ಲಿ ನಿನ್ನೆ ನಡೆಯಿತು.

ಧರ್ಮಸ್ಥಳ ವಲಯದ ಒಕ್ಕೂಟ ಪದಗ್ರಹಣ ಸಮಾರಂಭ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರಗಳ ಸ್ವಚ್ಚತಾ ಅಭಿಯಾನದ ಅಂಗವಾಗಿ 20,000 ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳ ವಿತರಣಾ ಸಮಾರಂಭವೂ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ ನಮ್ಮ ಯೋಜನೆ ಯಶಸ್ವಿಯಾಗಲು ರಾಜ್ಯದೆಲ್ಲೆಡೆ ಪ್ರತಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ 15000 ಸೇವಾಪ್ರತಿನಿದಿಗಳು ಕಾರಣ ಎಂದರು.

 

ಜೊತೆಗೆ ಸ್ವಚ್ಚತೆಯ ಬಗ್ಗೆ ಮಾತನಾಡಿದ ಅವರು, ಸಾಮಾಜಿಕ, ವ್ಯಕ್ತಿ, ಜೀವನ ಶೈಲಿ ಪರಿವರ್ತನೆ ಹೀಗೆ ಎಲ್ಲವನ್ನು ಪರಿವರ್ತಿಸುವ ಸಂಸ್ಥೆ ಎಂದು ಧರ್ಮಸ್ಥಳ ಯೋಜನೆ ಬಗ್ಗೆ ಸಂತಸದ ಮಾತುಗಳನ್ನಾಡಿದರು.

ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾಗಿರುವ ಶ್ರೀಮತಿ ಹೇಮಾವತಿ ಹೆಗ್ಗಡೆ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆ ಸಾಗರದಾಚೆ ವಿಶಾಲವಾಗಿ ವಿಸ್ತರಿಸ್ತಾ ಇದ್ದು, ದಿನದಿಂದ ದಿನಕ್ಕೆ ಯೋಜನೆ ಬೆಳೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಯಶಸ್ಸಿಗೆ ಕಾರಣರಾದ ಯೋಜನೆಯ ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರ ಕೆಲಸವನ್ನು ಶ್ಲಾಘಿಸಿದರು. ನಂತರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಅದ್ಭುತ ಯೋಜನೆಯಾಗಿದ್ದು, ಧರ್ಮಸ್ಥಳ ಧಾರ್ಮಿಕ ಶ್ರದ್ದಾ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯನ್ನಾಗಿ ರೂಪಿಸುವ ಕೇಂದ್ರವಾಗಿದೆ ಎಂದರು.

ಇನ್ನು ತ್ಯಾಜ್ಯ ಸಂಗ್ರಹಣ ಬುಟ್ಟಿಗಳನ್ನು ರಾಜ್ಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿತರಿಸಿದರು. ಶಾಸಕ ಹರೀಶ್ ಪೂಂಜಾ ವಿಶೇಷ ಚೇತನರಿಗೆ ಸಲಕರಣೆಗಳನ್ನು ವಿತರಿಸಿದರು. ಈ ಸಂದರ್ಭ ಕಾನೂರಾಯಣ ಸಿನೆಮಾ ನಿರ್ಮಾಪಕರಿಂದ 25ಲಕ್ಷ ರೂ.ಗಳನ್ನು ಗ್ರಾಮಾಭಿವೃದ್ದೀ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ಹೆಲ್ ಮಂಜುನಾಥ್ ರವರು ಡಿವಿ ಸದಾನಂದ ಗೌಡರಿಗೆ ಹಸ್ತಾಂತರಿಸುವ ಮೂಲಕ ರಾಷ್ಟ್ರೀಯ ರಕ್ಷಣಾನಿಧಿಗೆ ದೇಣಿಗೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಡಿ.ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಧನಲಕ್ಷ್ಮೀ ಜನಾರ್ದನ್, ಚಂದನ್ ಪ್ರಸಾದ್ ಕಾಮತ್ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಡಿಯೋಗಾಗಿ..

https://youtu.be/OGQfTnRIDfo

Click to comment

Leave a Reply

Your email address will not be published. Required fields are marked *

LATEST NEWS

ಒಡೆಯನನ್ನು ಹಾವಿನಿಂದ ಬಚಾವ್‌ ಮಾಡಿದ ಸಾಕು ನಾಯಿ.!

Published

on

ಮಂಗಳೂರು: ನಾಯಿಗೆ ಇರುವಷ್ಟು ನಿಯತ್ತು ಬಹುಶಃ ಯಾವುದೇ ಪ್ರಾಣಿಗಳಲ್ಲೂ ಇಲ್ಲ ಅನ್ನೋ ಮಾತು ಸಾಕಷ್ಟು ಬಾರಿ ರುಜುವಾತಾಗಿದೆ. ಇದೀಗ ಚಿತ್ರದುರ್ಗದ ಗ್ರಾಮವೊಂದರಲ್ಲಿ ಯಜಮಾನನ ಪ್ರಾಣ ಕಾಪಾಡುವ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಎಂಬಲ್ಲಿ ಈ ಘಟನೆ ನಡೆದಿದ್ದು ಜನರು ನಾಯಿಯ ನಿಯತ್ತಿಗೆ ಶರುಣು ಎಂದಿದ್ದಾರೆ. ಪ್ರಗತಿಪರ ರೈತ ಡಾ. ಆರ್.ಎ.ದಯಾನಂದ ಮೂರ್ತಿ ಎಂಬವರನ್ನು ಅವರ ಸಾಕು ನಾಯಿ ನಾಗರ ಹಾವಿನಿಂದ ರಕ್ಷಣೆ ಮಾಡಿದೆ.

snake attack

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ದಯಾನಂದ ಮೂರ್ತಿ ಅವರು ವಿಶ್ರಾಂತಿಗೆ ಅಂತ ಮಾವಿನ ಮರಕ್ಕೆ ಒರಗಿಕೊಂಡು ಮಲಗಿದ್ದಾರೆ. ಈ ವೇಳೆ ಮರದ ಇನ್ನೊಂದು ಪಕ್ಕದಲ್ಲಿದ್ದ ನಾಗರಹಾವು ಇವರನ್ನು ಗಮನಿಸಿ ಹೆಡೆಯೆತ್ತಿ ನಿಂತಿದೆ. ಆದ್ರೆ ನಾಗರ ಹಾವು ತನ್ನ ಹಿಂದೆ ಇದೆ ಅನ್ನೋ ವಿಚಾರ ದಯಾನಂದ ಮೂರ್ತಿ ಅವರ ಗಮನಕ್ಕೆ ಬಂದಿರಲಿಲ್ಲ. ಇದೇ ವೇಳೆ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಹಾವನ್ನು ಗಮನಿಸಿದೆ. ತಕ್ಷಣ ಬೊಗಳುತ್ತಾ ಇನ್ನೊಂದು ಬದಿಗೆ ಹಾವಿನ ಗಮನವನ್ನು ಸೆಳೆದಿದೆ. ನಾಯಿ ಯಾಕೆ ಹೀಗೆ ತನ್ನ ಹಿಂದಿನಿಂದ ಬೊಗಳುತ್ತಿದೆ ಅಂತ ಗಮನಿಸಿದ ರೈತನಿಗೆ ತನ್ನ ಹಿಂದೆ ಇದ್ದ ದೊಡ್ಡ ನಾಗರ ಹಾವು ಕಾಣಿಸಿದೆ. ತಕ್ಷಣ ಅಲ್ಲಿಂದ ಎದ್ದು ದೂರು ಹೋದ ರೈತ ದಯಾನಂದ ಮೂರ್ತಿ ಬಳಿಕ ಹಾವನ್ನು ತೋಟದಿಂದ ದೂರ ಓಡಿಸಿದ್ದಾರೆ. ಸಾಕು ನಾಯಿ ತೋರಿದ ನಿಯತ್ತಿನಿಂದಾಗಿ ನಾಗರ ಹಾವು ಕಚ್ಚುವುದರಿಂದ ದಯಾನಂದ ಮೂರ್ತಿ ಅವರು ಬಚಾವ್ ಆಗಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ನಾಯಿಯ ನಿಯತ್ತನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Continue Reading

FILM

ಕನ್ನಡ ಸಿನೆಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ..! ‘ನ್ಯಾಯ ಬೇಕು’ ಎಂದು ವೀಡಿಯೋ ಮಾಡಿದ ನಟ

Published

on

ಬೆಂಗಳೂರು: ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿರುವ ಚೇತನ್ ರವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.  ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಕೃತ್ಯ ನಡೆದಿದೆ.  ಸುಮಾರು 20 ಜನರ ತಂಡದಿಂದ ಚೇತನ್ ರವರ ಮೇಲೆ ಅಟ್ಯಾಕ್‌ ಆಗಿದ್ದು ರಕ್ತ ಸುರಿಯುವ ಹಾಗೆ ಹಲ್ಲೆ ನಡೆಸಿದ್ದಾರೆ. ತಾಯಂದಿರ ದಿನದಂದೆ ಈ ಘಟನೆ ನಡದಿದ್ದು ಚೇನತ ಬೇಸರ ವ್ಯಕ್ತಪಡಿಸಿದ್ದಾರೆ.

chethan halle

ನಿನ್ನೆ ತಾಯಂದಿರ ದಿನವಾಗಿದ್ದರಿಂದ ಚೇತನ್ ತಾಯಿ ಜೊತೆ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಕಾರು ಅಡ್ಡ ಗಟ್ಟಿ ಸುಮಾರು 20 ಜನರ ಕಿಡಿಗೇಡಿಗಳ ತಂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ‘ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳು ಮದ್ಯ ಸೇವನೆ ಮಾಡಿದ್ದರು. ಇದು ನನ್ನ ಜೀವನದಲ್ಲಿ ನಡೆದಿರುವ ಅತೀ ಕೆಟ್ಟ ಘಟನೆ. ನನಗೆ ನ್ಯಾಯ ಸಿಗಬೇಕು ಎಂದು ನಟ ಚೇತನ್ ಹೇಳಿದ್ದಾರೆ.  ಸುಮಾರು 20 ಜನ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರ ವಿಡಿಯೋ ಇದೆ. ಮೂಗು ಮುರಿದು ಹಾಕಿದ್ದಾರೆ. ಕಗ್ಗಲಿಪುರ ಪೊಲೀಸ್​ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ಅವರು ತುಂಬ ಕೆಟ್ಟ ಜನ ಎಂದು ಚೇತನ್​ ಚಂದ್ರ ಹೇಳಿದ್ದಾರೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಇನ್ನು ಹಲ್ಲೆಗೊಳಗಾದ ಚೇತನ್ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದು ಅಲ್ಲಿchetan_chanddrra ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವೀಡಿಯೋ ಮಾಡಿ ತಮ್ಮ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ತಿಳಿಸಿದ್ದಾರೆ.

Continue Reading

LATEST NEWS

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

Published

on

ಬೆಂಗಳೂರು: ಹುಟ್ಟಿದ ನಾಲ್ಕು ತಿಂಗಳಿನಲ್ಲಿ ಮಗುವೊಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ಬೆಂಗಳೂರಿನ ಪ್ರಜ್ವಲ್ ಹಾಗೂ ಸ್ನೇಹಾ ದಂಪತಿ ಪುತ್ರಿ ಇಶಾನ್ವಿ.ಪಿ ಹೆಸರಿನ ನಾಲ್ಕು ತಿಂಗಳ ಮಗು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಪುಟ್ಟ ಕಂದಮ್ಮ ಎರಡು ತಿಂಗಳಿದ್ದಾಗಲೇ ಪೋಷಕರು ಎರಡು ಫ್ಲಾಶ್ ಕಾರ್ಡ್‌ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಅದಕ್ಕೆ ಸರಿಯಾದ ಕಾರ್ಡ್‌ ಸೆಲೆಕ್ಟ್ ಮಾಡುತ್ತಿದ್ದಳು. ಇದನ್ನು ತಾಯಿ ಸ್ನೇಹಾ ಗಮನಿಸಿದ್ದಾರೆ.

world record

125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುತ್ತಾಳೆ ಇಶಾನ್ವಿ:

ಇಶಾನ್ವಿ ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿ ಫೊಟೋಗಳನ್ನು ಗುರುತಿಸುತ್ತಾಳೆ. ಅದರಲ್ಲಿ 10 ಹಕ್ಕಿಗಳು, 15 ತರಕಾರಿಗಳು, 10 ಕಾಡು ಪ್ರಾಣಿಗಳು, 10 ಸಾಕು ಪ್ರಾಣಿಗಳು, 11 ಕಲರ್ಸ್, 10 ವಿವಿಧ ದೇಶದ ಧ್ವಜಗಳು, 10 ವಾಹನಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್‌ಗಳನ್ನು ಗುರತಿಸುವ ಸಾಮರ್ಥ್ಯ ಹೊಂದಿದ್ದಾಳೆ ಈ ಪುಟ್ಟ ಪೋರಿ. 125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುವ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾಳೆ.

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

world record

ಇನ್ನು ಮಗುವಿನ ಸಾಮರ್ಥ್ಯವನ್ನು ಅರಿತ ಮಗುವಿನ ತಾಯಿ ಸ್ನೇಹಾ ತನ್ನ ಕುಟುಂಬದವರ ಸಹಾಯದಿಂದ ವೀಡಿಯೋ ರೆಕಾರ್ಡ್‌ ಮಾಡಿ ನೋಬಲ್ ವರ್ಲ್ಡ್‌ ರೆಕಾರ್ಡ್‌ಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ಮಗುವಿನ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗೆ ಆಯ್ಕೆ ಮಾಡಿದೆ. ಆಂಧ್ರಪ್ರದೇಶದ ನಾಲ್ಕು ತಿಂಗಳ ಮಗು ಕೈವಲ್ಯ ಮಾಡಿದ್ದ ಸಾಧನೆಯನ್ನು ಇಶಾನ್ವಿ ಹಿಂದಿಕ್ಕಿದ್ದಾಳೆ. ಕೈವಲ್ಯ 120 ಫ್ಲಾಶ್‌ಗಳನ್ನು ಗುರುತಿಸಿದ್ರೆ, ಇಶಾನ್ವಿ 125 ಫ್ಲಾಶ್‌ಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ.

Continue Reading

LATEST NEWS

Trending