ರಸ್ತೆ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಳಿಸದ ಹಿನ್ನೆಲೆ ಡಿವೈಎಫ್ಐ ಪಕ್ಕಲಡ್ಕ ನೇತೃತ್ವದಲ್ಲಿ ಪ್ರತಿಭಟನೆ
Published
5 years agoon
By
Adminಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್
ಮಂಗಳೂರು: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಬಜಾಲ್ ಪಕ್ಕಲಡ್ಕ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಗುತ್ತಿಗೆದಾರನ ಜೊತೆ ಸರಿಯಾಗಿ ಸಿಬ್ಬಂದಿಗಳಿಲ್ಲ ಇರುವ ಬೆರಳೆಣಿಕೆಯ ನೌಕರರು ಸರಿಯಾಗಿ ಸಲಕರಣಿಗಳಿಲ್ಲದೆ ಸುತ್ತಮುತ್ತಲಿನ ಜನರಲ್ಲಿ ಕೇಳುವಂತಾಗಿದೆ. ಈ ಬಗ್ಗೆ ಗಮನಹರಿಸ ಬೇಕಾಗಿದ್ದ ಪಾಲಿಕೆ ಇಂಜನೀಯರ್ ಗಳಾಗಲಿ, ಸ್ಥಳೀಯ ಶಾಸಕನಾಗಲಿ ಕಾಮಗಾರಿ ಕೆಲಸಕ್ಕೆ ಸರಿಯಾಗಿ ಮತ್ತುವರ್ಜಿವಹಿಸುತ್ತಿಲ್ಲ ಕಾಮಗಾರಿ ಕೆಲಸ ಇದೇ ರೀತಿ ನಿಧಾನಗತಿಯಲ್ಲಿ ಮುಂದುವರಿದಲ್ಲಿ ಮನಪಾ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಡಿವೈಎಫ್ಐ ಮಂಗಳೂರು ನಗರಾದ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿ ಬಜಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವಂತ ಬಹುತೇಕರು ಬಡವರು, ಮದ್ಯಮವರ್ಗದವರಾಗಿರುತ್ತಾರೆ. ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಂಗಳೂರು ನಗರ ಪಾಲಿಕೆ ನಿರ್ಲಕ್ಷಿಸಿದೆ. ಈ ಭಾಗದ ಎಲ್ಲಾ ಸೌಕರ್ಯಗಳ ಈಡೇರಿಕೆಗೆ ಜನ ಪ್ರತಿ ಬಾರಿ ಬೀದಿಗೆ ಬರುವಂತಾಗಿದೆ. ಈ ರಸ್ತೆ ಹೋರಾಟವೂ ಯಶಸ್ವಿಯಾಗಲಿ ಮನಪಾ ಸ್ಥಳೀಯ ಸಮಸ್ಯೆ ಕೂಡಲೇ ಪರಿಹರಿಸಲು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಸ್ಥಳೀಯ ಮುಖಂಡರಾದ ದೀಪಕ್ ಬೊಲ್ಲ, ಸ್ಥಳೀಯ ವೈದ್ಯರಾದ ಡಾ. ಪ್ಲಾಯಿಡ್ ಡಿಸೋಜ, ವಿಲ್ಪ್ರೇಡ್ ಡಿಸೋಜ, ಉದಯ ಕುಂಟಲ್ ಗುಡ್ಡೆ, ಅಶೋಕ್ ಸಾಲ್ಯಾನ್, ಶಾಂತಾ ಪಕ್ಕಲಡ್ಕ, ಜಗದೀಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
You may like
DAKSHINA KANNADA
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
Published
15 hours agoon
03/01/2025By
NEWS DESKಮಂಗಳೂರು/ ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಜನರು ತಮ್ಮ ಕೃಷಿ ಹಾಗೂ ಪಟ್ಟಾ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. ಹೀಗೆ ಬಿಟ್ಟು ಕೊಟ್ಟ ಜಮೀನಿಗೆ ಪರಿಹಾರ ನೀಡಲಾಗುತ್ತಿದೆಯಾದ್ರೂ ಪರಿಹಾರದ ಹಣಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಕೂಡಾ ಇದೆ. ಆದ್ರೆ ಇನ್ನು ಮುಂದೆ ಈ ರೀತಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನೀಡಲು ವಿಳಂಬವಾದ್ರೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿ ತೀರ್ಪೊಂದನ್ನು ನೀಡಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿಕೊಂಡು ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇನ್ನು ಮುಂದೆ ಭೂ ಸ್ವಾಧೀನ ಮಾಡಿ ಪರಿಹಾರ ಸಮಯಕ್ಕೆ ಸರಿಯಾಗಿ ನೀಡದೇ ಇದ್ರೆ ಸರ್ಕಾರದ ಬೊಕ್ಕಸಕ್ಕೇ ನಷ್ಟ ಉಂಟಾಗಲಿದೆ. ಯಾಕಂದ್ರೆ ಇನ್ನು ಮುಂದೆ ಸರ್ಕಾರ ಭೂ ಸ್ವಾಧೀನ ಮಾಡಿ ಧೀರ್ಘಕಾಲ ಪರಿಹಾರ ನೀಡದೇ ಇದ್ದರೆ ಪರಿಹಾರ ನೀಡುವ ಸಮಯದಲ್ಲಿನ ಮಾರುಕಟ್ಟೆಯ ದರವನ್ನು ಸಂತ್ರಸ್ತರಿಗೆ ನೀಡಬೇಕಾಗುತ್ತದೆ.
ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ವಿರುದ್ಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆ ಹೊರಡಿಸಿತ್ತು. ಆದ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ನೋಟಿಫಿಕೇಷನ್ ಬಳಿಕವೂ ಪರಿಹಾರ ಸಿಗದ ಕಾರಣ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರಲ್ಲಿ ಪರಿಹಾರ ನೀಡಲು KIADB ಮುಂದಾಗಿತ್ತಾದ್ರೂ ಅದು 2003 ರ ಮಾರುಕಟ್ಟೆ ದರವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೆಐಎಡಿಬಿಯು ಸಂತ್ರಸ್ತರಿಗೆ 2019 ರ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ
ಬಂಟ್ವಾಳ: ನೇತ್ರಾವತಿ ನದಿಯ ದೋಣಿಯ ಅಂಬಿಗ ಬರಿಮಾರು ಕಡವಿನಬಾಗಿಲು ನಿವಾಸಿ ದಿವಾಕರ ನಾಪತ್ತೆಯಾಗಿದ್ದಾರೆ.
ದಿವಾಕರ ಅವರು ಸುಮಾರು 30 ವರ್ಷಗಳಿಂದ ಅಂಬಿಗನಾಗಿ ಕೆಲಸ ಮಾಡುತ್ತಿದ್ದು, ಇವರು ನುರಿತ ಈಜುಗಾರರಾಗಿದ್ದರು. ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಇವರು ಪ್ರತಿದಿನ ಕೆಲಸ ಮಾಡುತ್ತಿದ್ದರು.
ಜ.3 ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಪಡೆದು, ವಾಪಸ್ ತೆರಳಿದ್ದು, 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ದಿವಾಕರ ಅವರು ಕಾಣಿಸಿದ ಕಾರಣ ಅವರ ಪತ್ನಿ ಸರಪಾಡಿಯ ಅಂಗಡಿಯ ಮೂಲಕ ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದ್ದರು.
ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್, ಚಪ್ಪಲಿ ಕಂಡು ಬಂದಿದೆ. ದಿವಾಕರ ಅವರಿಗೆ ಮೂರ್ಛೆ ರೋಗವಿದ್ದು, ಈ ಹಿಂದೆ ಕೂಡಾ ನದಿ ಬದಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಇವತ್ತು ಕೂಡಾ ಮೂರ್ಛೆ ರೋಗ ಭಾದಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದು, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.
LATEST NEWS
ಮನೆಯಲ್ಲಿ ಹೊಸ ಕ್ಯಾಲೆಂಡರ್ ಎಲ್ಲಿ ಹಾಕಿದರೆ ಸೂಕ್ತ ಗೊತ್ತಾ..?
Published
16 hours agoon
03/01/2025By
NEWS DESK2ಹೊಸ ವರ್ಷ ಬಂದಾಗ ಹಳೆಯ ಕ್ಯಾಲೆಂಡರ್ ತೆಗೆದು ಹೊಸ ಕ್ಯಾಲೆಂಡರ್ ಹಾಕುವುದು ಪದ್ಧತಿ. ವಾಸ್ತುಪ್ರಕಾರ ಕೆಲವೊಂದು ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಲಾಭವಿದೆ. ಆದರೆ ಇನ್ನು ಕೆಲವು ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದರೆ ಅಪಾಯ ಕಟ್ಟಿಟ್ಟ ಭುತ್ತಿ. ಅದರ ಕುರಿತು ವಿವರ ಇಲ್ಲಿದೆ.
ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಬೇಕು. ಇದರಿಂದ ಹೊಸ ವರ್ಷದಲ್ಲಿ ಹಳೆ ವರ್ಷಕ್ಕಿಂತ ಹೆಚ್ಚು ಶುಭ ಅವಕಾಶಗಳು ಲಭಿಸುತ್ತವೆ. ಹೊಸ ಕ್ಯಾಲೆಂಡರ್ ಅನ್ನು ಇಡುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು ಯಾವುವು ಎಂದು ತಿಳಿಯೋಣ.
ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಕ್ಯಾಲೆಂಡರ್ ಅನ್ನು ಹಾಕಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಕೆಲಸಕ್ಕೂ ಸಹ ಅಡ್ಡಿಯಾಗುತ್ತದೆ. ಕ್ಯಾಲೆಂಡರ್‌ಗಳನ್ನು ಮುಖ್ಯ ಬಾಗಿಲಿನ ಮೇಲೆ ಇಡಬಾರದು.
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡುವುದರಿಂದ ಬಹಳಷ್ಟು ಹಾನಿಯಾಗುತ್ತದೆ. ವಾಸ್ತವವಾಗಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕ್ಯಾಲೆಂಡರ್ ಅನ್ನು ಯಾವಾಗಲೂ ನಿಮ್ಮ ಮುಂದೆ ಇರಿಸಿ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು.
ಅನೇಕ ಜನರು ಹೊಸ ವರ್ಷದ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುತ್ತಾರೆ ಆದರೆ ಹಳೆಯದನ್ನು ತೆಗೆದುಹಾಕಲು ಮರೆಯುತ್ತಾರೆ. ಆ ತಪ್ಪನ್ನು ಮಾಡಬೇಡಿ. ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬೇಡಿ. ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆ ಸಾಧಿಸಲು ಬಿಡುವುದಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಅದರಲ್ಲೂ ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಇಡಬೇಕು. ಬಹಳ ಮುಖ್ಯವಾಗಿ ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳೊಂದಿಗೆ ಇರುವ ಕ್ಯಾಲೆಂಡರ್ ಹಾಕಬೇಡಿ. ಉತ್ತರ ದಿಕ್ಕು ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಹಸಿರು, ಕಾರಂಜಿ, ನದಿ, ಸಮುದ್ರ, ಜಲಪಾತಗಳು, ಮದುವೆ ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬೇಕು. ಇನ್ನು ಈ ದಿಕ್ಕಿನದಲ್ಲಿ ಕ್ಯಾಲೆಂಡರ್ ಹಾಕಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ.
LATEST NEWS
ಶುಭ್ ಮನ್ ಗಿಲ್ ಸೇರಿ 4 ಕ್ರಿಕೇಟಿಗರಿಗೆ ಸಿಐಡಿ ಸಮನ್ಸ್ !
BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್- ನಾಚಿ ನೀರಾದ ಪತ್ನಿ
ದೆಹಲಿಯಲ್ಲಿ ದಟ್ಟವಾದ ಮಂಜು, ಶೀತ ಗಾಳಿ – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಪ್ಲೇಯಿಂಗ್-11ನಿಂದ ರೋಹಿತ್ ಶರ್ಮಾ ಡ್ರಾಪ್; ಸ್ಪಷ್ಟನೆ ಕೊಟ್ಟ ಬುಮ್ರಾ !
ಫೆ.17, 18ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಹಾಪೂಜೆ ಸಂಭ್ರಮ
185 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ಆಸೀಸ್ ಗೆ ಆರಂಭಿಕ ಆಘಾತ
Trending
- DAKSHINA KANNADA3 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- BIG BOSS7 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA7 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
- BIG BOSS6 days ago
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!