ಮಂಗಳೂರು:ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಭರ್ಜರಿ ಚಿನ್ನ ಭೇಟೆಯಾಡಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಉಳ್ಳಾಲದ ಮೊಹಮ್ಮದ್ ಆಸಿಫ್ (28) ಬಂಧಿತ ಆರೋಪಿಯಾಗಿದ್ದಾನೆ. ತಪಾಸಣೆಯ ವೇಳೆ ಈತ ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್ ಪ್ಯಾಂಟ್, ಒಳಗೆ ಮೊಣಕಾಲಿಗಿಡುವ ಪ್ಯಾಡ್‍ನಲ್ಲಿ ಚಿನ್ನವನ್ನಿಟ್ಟು ಸಾಗಾಟ ಮಾಡುತ್ತಿದ್ದುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಆಸಿಫ್‍ನಿಂದ 92,27,590 ಲಕ್ಷ ರೂ ಮೌಲ್ಯದ 1.993 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ.
ಕಾರ್ಯಚರಣೆಯಲ್ಲಿ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ್ ರೊಂಗಾಲಿ ನೇತೃತ್ವದಲ್ಲಿ ಅದಿಕಾರಿಗಳಾದ ಶ್ರೀಕಾಂತ್ ಸತೀಶ್ ಭಾಗವಹಿಸಿದ್ದರು.