Connect with us

    BANTWAL

    ವಿಟ್ಲದಲ್ಲಿ ಅಣ್ಣನೇ ಸ್ವಂತ ತಮ್ಮನನ್ನು ಹತ್ಯೆಗೈದ ಪ್ರಕರಣ-ಆರೋಪಿ ಬಂಧನ

    Published

    on

    ಬಂಟ್ವಾಳ: ತಾಲೂಕಿನ ವಿಟ್ಲ ಬಳಿಯ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಭತ್ತದ ಫಸಲಿನಲ್ಲಿ ಪಾಲು ಕೇಳಿದ ಕಾರಣಕ್ಕೆ ಸಹೋದರರ ಮಧ್ಯೆ ಜಗಳ ನಡೆದು ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

    ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಐತಪ್ಪ ನಾಯ್ಕ್(45) ಬಂಧಿತ ಆರೋಪಿ.


    ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಬಾಲಪ್ಪ ನಾಯ್ಕ್ ಅವರು ಮಂಗಳವಾರ ಸಂಜೆ ತರವಾಡು ಮನೆಗೆ ತನ್ನ ತಾಯಿ ಜತೆ ಬಂದಿದ್ದರು.

    ಮಂಗಳವಾರ ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ತಮ್ಮ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಸಹೋದರರಿಬ್ಬರ ನಡುವೆ ಜಗಳ ಉಂಟಾಗಿದೆ.

    ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ ಸೋನಾವರ ಐಪಿಎಸ್ ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ IPS ರವರುಗಳ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್‌.ಈ ನೇತೃತ್ವದಲ್ಲಿ

    ಪಿ ಎಸ್ ಐ ಮಂಜುನಾಥ ಟಿ, Pro.ಪಿ ಎಸ್ ಐ ಗಳಾದ ಧನಂಜಯ, ಬಿ.ಸಿ, ಜಯಶ್ರೀ ಪ್ರಭಾಕರ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    BANTWAL

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು

    Published

    on

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.

    ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.

    ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending