Connect with us

    DAKSHINA KANNADA

    ಸರ್ಕಾರದ ಸಹಾಯಕ್ಕಾಗಿ 4-5 ವರ್ಷದಿಂದ ಮಂದಾರಬೈಲಿನ ಯುವತಿ ಸುರಕ್ಷಾಳ ಕಚೇರಿ ಅಲೆದಾಟಕ್ಕೆ ಸಿಗದ ಮುಕ್ತಿ..! ಸುರಕ್ಷಾಳ ಕುಟುಂಬಕ್ಕೆ ಸುರಕ್ಷೆಯ ಆಸರೆ ನೀಡುವಿರಾ..?

    Published

    on

    ಸರ್ಕಾರದ ಸಹಾಯಕ್ಕಾಗಿ 4-5 ವರ್ಷದಿಂದ ಮಂದಾರಬೈಲಿನ ಯುವತಿ ಸುರಕ್ಷಾಳ ಕಚೇರಿ ಅಲೆದಾಟಕ್ಕೆ ಸಿಗದ ಮುಕ್ತಿ..! ಸುರಕ್ಷಾಳ ಕುಟುಂಬಕ್ಕೆ ಸುರಕ್ಷೆಯ ಆಸರೆ ನೀಡುವಿರಾ..? 

    ಪುತ್ತೂರು : ಸ್ವಂತ ಸೂರಿಗಾಗಿ ಕಳೆದ 4-5 ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಂದಾರಬೈಲಿನ ಯುವತಿ ಸುರಕ್ಷಾಳ ಸರ್ಕಾರಿ ಕಚೇರಿ ಅಲೆದಾಟಕ್ಕೆ ಮುಕ್ತಿ ಸಿಕ್ಕಿಲ್ಲ.

    ಈ ಮಧ್ಯೆ ಈ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಸುರಕ್ಷಾಳ ಕುಟುಂಬಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದು, ಇಡೀ ಕುಟುಂಬಕ್ಕೆ ಇದೀಗ ಅಸುರಕ್ಷತೆ ಕಾಡುತ್ತಿದೆ.

    ಪುತ್ತೂರು ನಗರಭಾ ವ್ಯಾಪ್ತಿಯ ಕೆಮ್ಮಿಂಜೆ ಸಮೀಪದ ಮಂದಾರ ಬೈಲು ನಿವಾಸಿಯಾಗಿರುವ ಸುರಕ್ಷಾ ತನ್ನ ಅನಾರೋಗ್ಯ ಪೀಡಿತ ತಂದೆ ತಾಯಿ ಹಾಗೂ ತಮ್ಮನ ಜತೆ ವಾಸವಾಗಿದ್ದಾಳೆ. ಪ್ರಸ್ಥುತ ಈ ಪುಟ್ಟ ಕುಟುಂಬ ಇರುವ ಜೋಪಡಿ ಮನೆ ಆಗಲೋ- ಈಗಲೋ ಕುಸಿಯುವ ಹಂತಕ್ಕೆ ತಲುಪಿದೆ.

    ಸರ್ಕಾರಿ ಜಮೀನಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಸುರಕ್ಷಾ ತಂದೆ ಪ್ರಕಾಶ್ ಪೂಜಾರಿ ಹಾಗೂ ಮೀನಾಕ್ಷಿ ಹೆಸರಿನಲ್ಲಿ 2018ರಲ್ಲಿ 94 ಸಿಸಿ ಯೋಜನೆಯಡಿ 2.5 ಸೆಂಟ್ ನಿವೇಶನ ನೀಡಲಾಗಿದೆ.

    ಆದರೆ ಮನೆ ಕಟ್ಟಲು ಬೇಕಾದ ಆರ್ಥಿಕ ಭದ್ರತೆ ಸುರಕ್ಷಾಳಲ್ಲಿ ಇರದ ಕಾರಣ ಅದು ಹಾಗೇಯೇ ಉಳಿದಿದೆ. ಇತ್ತ ಇದ್ದ ಜೋಪಡಿಯ ಹಳೆ ಮನೆ ಕಳೆದ ಮಳೆಗಾಲಕ್ಕೆ ಸಂಪೂರ್ಣ ಕುಸಿದಿದ್ದು, ಅಸುರಕ್ಷಿತ ಮನೆಯಲ್ಲೇ ಈ ಕುಟುಂಬ ವಾಸಿಸುತ್ತಿದೆ.

    ಮತಾಂತರ ಭಯದಲ್ಲಿ ಸುರಕ್ಷಾಳ ಕುಟುಂಬ:

    ಇತ್ತೀಚೆಗೆ ಕೇರಳ ಮೂಲದ ಸಂಸ್ಥೆಯೊಂದು ಪ್ರಕಾಶ್ ಪೂಜಾರಿ ಅವರನ್ನು ಸಂಪರ್ಕಿಸಿ ನಿಮಗೆ ವಿದೇಶದ ದಾನಿಗಳಿಂದ ೧೦ಲಕ್ಷ ರೂ. ವೆಚ್ಚದ ಮನೆ ನಿರ್ಮಿಸುವುದಾಗಿ ತಿಳಿಸಿ ಮನೆಯ ಹಾಗೂ ಪ್ರಕಾಶ್ ಪೂಜಾರಿ ಅವರ ಮಕ್ಕಳ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದು ವೈರಲ್ ಆಗಿತ್ತು.

    ಪ್ರಕಾಶ್ ಪೂಜಾರಿ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆ ಈಗಾಗಲೇ ೫ ಲಕ್ಷ ರೂ. ಅಽಕ ಮೊತ್ತದ ಹಣವನ್ನು ತಮ್ಮ ಬ್ಯಾಂಕ್ ಅಕೌಂಟ್ ನಂಬರ್ ನೀಡಿಯೇ ಸಂಗ್ರಹಿಸಿದ್ದು, ಪ್ರಕಾಶ್ ಪೂಜಾರಿ ಕುಟುಂಬಕ್ಕೆ ನೀಡಲು ನಿರಾಕರಿಸಿದೆ. ಈಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಮನೆ ಆಮಿಷ ನೀಡಿ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ ಎಂಬ ಆರೋಪಿ ತಾವೇ ಮನೆ ನಿರ್ಮಿಸಿ ಕೊಡಲು ಮುಂದಾಗಿದೆ.
    —————-
    ಕಚೇರಿ ಅಲೆದಾಟದಿಂದ ಸಿಗದ ಮುಕ್ತಿ :
    ನಗರಸಭೆಯಲ್ಲಿ ಈ ಹಿಂದಿನ ಆಡಳಿತಾವಧಿಯಲ್ಲಿ ಮಂದಾರಬೈಲಿನ ಯುವತಿ ಸುರಕ್ಷಾ ಅವರು ತಮ್ಮ ಕುಟುಂಬ ಅಪಾಯದಲ್ಲಿದ್ದು, ಸೂಕ್ತ ನಿವೇಶನದ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿ, ಕಚೇರಿಯಿಂದ ಕಚೇರಿ ಅಲೆದಾಡಿ ಸೂಕ್ತ ದಾಖಲೆ ಪತ್ರ ನೀಡಿದ್ದರು.

    ಆದರೆ ಈಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕಾಶ್ ಪೂಜಾರಿ ಕುಟುಂಬಕ್ಕೆ ಮನೆ ಆಮಿಷ ನೀಡಿ ಮತಾಂತರಕ್ಕೆ ಯತ್ನ ನಡೆಸಲಾಗುತ್ತಿದೆ ಎಂಬ ವದಂತಿ ಹಬ್ಬುತ್ತಿದ್ದಂತೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯ ಪಿಜಿ ಜಗನ್ನಿವಾಸ್ ರಾವ್, ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವರು ಬೇಟಿ ನೀಡಿ ಮನೆ ಸ್ಥಿತಿ ಗತಿ ಪರಿಶೀಲನೆ ನಡೆಸಿ ದಾನಿಗಳ ನೆರವಿನಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
    —————
    ೫ ವರ್ಷವಾದರೂ ಮನೆ ನಿರ್ಮಣವಾಗಲ್ಲ
    ನಿಮಗೆ ಮುಂದಿನ ೫ವರ್ಷ ಕಳೆದರೂ ಸರ್ಕಾರದಿಂದ ಮನೆ ನಿರ್ಮಣವಾಗಲ್ಲ, ನಮ್ಮ ಸಂಘದಿಂದ ೩ ತಿಂಗಳೊಳಗೆ ಮನೆ ನಿರ್ಮಿಸುತ್ತೇವೆ ಎಂದು ಕೇರಳ ಮೂಲದ ಸಂಸ್ಥೆ ಕಾರ್ಯಕರ್ತರು ಚಾಲೇಂಜ್ ಹಾಕಿದ್ದರು.

    ನಮ್ಮ ಅನಾರೋಗ್ಯದ ಮಧ್ಯೆ ಮನೆ ನಿರ್ಮಾಣ ನಮಗೆ ಕನಸಿನ ಮಾತು. ಈ ಕಾರಣಕ್ಕೆ ಕೇರಳ ಮೂಲದ ಸಂಸ್ಥೆಯ ಮನೆ ನಿರ್ಮಾಣ ಯೋಜನೆಗೆ ಒಪ್ಪಿಗೆ ಸೂಚಿಸಿದೆವು ಎಂದು ಪ್ರಕಾಶ್ ಪೂಜಾರಿ ವಿಜಯವಾಣಿಗೆ ತಿಳಿಸಿದ್ದಾರೆ.
    ————-
    ದಾನಿಗಳಿಂದ ನೆರವಿಗೆ ಮನವಿ
    ಸ್ವಂತ ಸೂರಿಗಾಗಿ ಹಾಗೂ ಸರ್ಕಾರದ ಸಹಾಯಕ್ಕಾಗಿ 4-5 ವರ್ಷದಿಂದ ಮಂದಾರಬೈಲಿನ ಯುವತಿ ಸುರಕ್ಷಾಳ ಕಚೇರಿ ಅಲೆದಾಟಕ್ಕೆ ಸಿಗದ ಮುಕ್ತಿ ನೀಡುವ ನೆಲೆಯಲ್ಲಿ ದಾನಿಗಳಿಂದ ಸಹಾಯಕ್ಕೆ ಮನವಿ ಮಾಡಲಾಗಿದೆ.

    ಪ್ರಕಾಶ್ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರ ಬ್ಯಾಂಕ್ ಖಾತೆಗೆ ದಾನಿಗಳು ನೆರವು ನೀಡುವಂತೆ ಮನವಿ ಮಾಡಲಾಗಿದೆ.

    ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆ

    ಖಾತೆ ನಂಬ್ರ- 00203020116289

    IFSC code – IBKL078SCDC

     

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ

    Published

    on

    ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಿಲ್ಲೆಗಳಿಗೆ ಒಟ್ಟು ಐದು ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಭಾಗಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

    ನ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಂದ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    Continue Reading

    BIG BOSS

    ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    Published

    on

    ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

    ‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

    Continue Reading

    DAKSHINA KANNADA

    ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !

    Published

    on

    ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.

    ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
    ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
    ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.

     

    Continue Reading

    LATEST NEWS

    Trending