LATEST NEWS
ಉಡುಪಿಯಲ್ಲಿ ಹದಿಹರೆಯದ ಯುವತಿ ಶ್ರೀ ಲಕ್ಷ್ಮೀ ನಾಪತ್ತೆ..!
Published
2 years agoon
By
Adminಉಡುಪಿಯಲ್ಲಿ ಹದಿಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ಕಕ್ಕುಂಜೆ ಹೌಸ್ ನಿವಾಸಿ ಶ್ರೀಲಕ್ಷ್ಮೀ(19) ನಾಪತ್ತೆಯಾದ ಯುವತಿಯಾಗಿದ್ದಾಳೆ.
ಉಡುಪಿ: ಉಡುಪಿಯಲ್ಲಿ ಹದಿಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ಕಕ್ಕುಂಜೆ ಹೌಸ್ ನಿವಾಸಿ ಶ್ರೀಲಕ್ಷ್ಮೀ(19) ನಾಪತ್ತೆಯಾದ ಯುವತಿಯಾಗಿದ್ದಾಳೆ.
ಏಪ್ರಿಲ್ 7 ರಂದು ಶ್ರೀ ಲಕ್ಷ್ಮೀ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು/ಬೆಂಗಳೂರು: ಸರಿಯಾಗಿ ಒಂದು ತಿಂಗಳ ಬಳಿಕ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಹಿಂದಿನ ರಹಸ್ಯ ಬಹಿರಂಗಗೊಂಡಿದೆ.
ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆಯಿಂದ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಅವರು ಹಣ ಇಲ್ಲದೇ ಸಾಲ ಮಾಡಿಕೊಂಡಿದ್ದರು. ಸ್ನೇಹಿತರು, ಸಂಬಂಧಿಕರು ಸೇರಿ ಹಲವರ ಬಳಿ ಕೋಟ್ಯಂತರ ರೂ. ಸಾಲ ಮಾಡಿದ್ದಾರೆ.
ಇದನ್ನೂ ಓದಿ: ತಾಯಿಯ ಆಸೆ ಈಡೇರಿಸಲು ಹೋಗಿ ಕಂಬಿ ಎಣಿಸುತ್ತಿರುವ ಮಗ !
ಸಾಲದಿಂದ ರೋಸಿ ಹೋಗಿದ್ದ ಗುರುಪ್ರಸಾದ್, ಆನ್ ಲೈನ್ ಜೂಜಿನ ಚಟಕ್ಕೆ ಸಿಲುಕಿರುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸಾಲ ಹೆಚ್ಚಾದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಲ ಕೇಳುವಾಗ ‘ಫಿಲ್ಮ್ ಮಾಡ್ತಿದ್ದೀನಿ, ಸಿನಿಮಾದಿಂದ ಖಂಡಿತ ಹಣ ಬರುತ್ತೆ, ಆಗ ಹಣ ವಾಪಸ್ ಕೊಡುತ್ತೀನಿ ಎಂದು ಹೇಳುತ್ತಿದ್ದರಂತೆ. ಹೀಗಾಗಿ ಆನ್ ಲೈನ್ ಗೇಮ್ ಗಳಲ್ಲಿ ಬೆಟ್ಟಿಂಗ್ ಆಡುತ್ತಿದ್ದರು ಎಂದು ತಿಳಿದುಬಂದಿದೆ. ಅದರಲ್ಲೂ ಗುರುಪ್ರಸಾದ್ ರಮ್ಮಿ ಸರ್ಕಲ್ ಸುಳಿಗೆ ಸಿಲುಕ್ಕಿದ್ದರು. ಸಾಲ ಹೆಚ್ಚಾದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
LATEST NEWS
ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??
Published
19 minutes agoon
03/12/2024ಮಂಗಳೂರು/ವಿಜಯಪುರ: 18 ವರ್ಷದ ಸಮೈರಾ ಹುಲ್ಲೂರ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆಯುವ ಮೂಲಕ ಬಾರತದ ಅಯಿ ಕಿರಿಯ ಪೈಲಟ್ ಎಂದು ಗುರುತಿಸಿಕೊಂಡಿದ್ದಾರೆ. ಈಕೆ ವಿಜನಗರ ಮೂಲದವಳಾಗಿದ್ದು, ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಭಾರತದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಸಮೈರಾ ಆರು ತಿಂಗಳ ಕಾಲ ವಾಯುಯಾನ ತರಬೇತಿಯನ್ನು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಪಡೆದರು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರಯತ್ನದಲ್ಲೇ ಎಲ್ಲ ಸಿಪಿಎಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ‘ತರಬೇತಿ ಕಠಿಣವಾಗಿತ್ತು. ಆದರೆ, ಭೋದಕರ ನಿರಂತರ ಬೆಂಬಲದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗೆ ಸಲ್ಲುತ್ತದೆ’ ಎಂದು ಸಮೈರಾ ಹೇಳಿದರು.
ವಿಮಾನ ಚಾಲನೆ ಒಳಗೊಂಡಂತೆ ಆರು ಕಡ್ಡಾಯ ಕೋರ್ಸ್‌ಗಳಿಗೆ ಸೇರಿಕೊಂಡ ಬಳಿಕ ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ಏಳು ತಿಂಗಳ ವಿಮಾನ ತರಬೇತಿಯನ್ನು ಪಡೆದಿದ್ದಳು. ವಾಯುಯಾನದಲ್ಲಿನ ಅನೇಕ ಸವಾಲುಗಳನ್ನು ಎದುರಿಸಿದ ಸಮೈರಾ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ತಾಂತ್ರಿಕ ಪರಿಣತಿಯನ್ನು ಪಡೆದಿದ್ದಾರೆ. “ಈ ಸಾಧನೆಗೆ ಸ್ಫೂರ್ತಿ ಕ್ಯಾಪ್ಟನ್ ತಪೇಶ್ ಕುಮಾರ್. ತಮ್ಮ 25ನೇ ವರ್ಷ ವಯಸ್ಸಿನಲ್ಲೇ ಪೈಲಟ್ ಆಗುವ ಮೂಲಕ ಸಾಧನೆ ಮಾಡಿದ್ದರು. ಈಗ, ನಾನು ದೇಶದ ಅತ್ಯಂತ ಕಿರಿಯ ಕಮರ್ಷಿಯಲ್ ಪೈಲಟ್” ಎಂದು ಸಮೈರಾ ಹೇಳಿಕೊಂಡಿದ್ದಾರೆ.
“ನಮ್ಮ ಬಸವನಾಡು ಮತ್ತು ರಾಜ್ಯದ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ದೇಶದ ಅತಿ ಕಿರಿಯ ವಯಸ್ಸಿನ ಪೈಲಟ್ ಸಮೈರಾ ಹುಲ್ಲೂರರಿಗೆ ಹಾರ್ದಿಕ ಅಭಿನಂದನೆಗಳು. ಕೇವಲ 18ನೇ ವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಧನೆ ಮಾಡುವ ಮೂಲಕ ಲಕ್ಷಾಂತರ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿರುವ ವಿಜಯಪುರದ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ ಅಂತ ಹಾರೈಸುತ್ತೇನೆ” ಎಂದು ಟ್ವಿಟ್ ಮೂಲಕ ಎಂಬಿ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
LATEST NEWS
ಡಿ.7 ರಂದು ಕುಡುಪು ಕ್ಷೇತ್ರದಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ
Published
24 minutes agoon
03/12/2024By
NEWS DESK2ಮಂಗಳೂರು: ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿ.7ರಂದು ಮಧ್ಯಾಹ್ನ 1ಕ್ಕೆ ಷಷ್ಠಿಯ ಬ್ರಹ್ಮ ರಥೋತ್ಸವ ನಡೆಯಲಿದೆ.
ಡಿ. 4 ರಂದು ರಾತ್ರಿ ವಿಶೇಷವಾದ ಸರ್ಪ ವಾಹನೋತ್ಸವ, 5ರಂದು ಬೆಳಗ್ಗೆ ಗಣಹೋಮ, ರಾತ್ರಿ ಕಟ್ಟೆ ಪೂಜೆಗಳು, ಗಜವಾಹನೋತ್ಸವ, 6 ರಂದು ಪಂಚಮಿ, ಬೆಳಗ್ಗೆ, ಅಂಗಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಕಟ್ಟೆಪೂಜೆಗಳು, ಗರುಡ ವಾಹನೋತ್ಸವ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ 7 ರಂದು ಷಷ್ಟಿ, ಬೆಳಿಗ್ಗೆ ರಥ ಕಲಶ, ಮಧ್ಯಾಹ್ನ 1ಕ್ಕೆ ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ ಹಾಗೂ 8ರಂದು ಬೆಳಗ್ಗೆ 7ಕ್ಕೆ ಅತೀ ವಿಶಿಷ್ಟವಾದ ಜೋಡು ದೇವರ ಬಲಿ ಉತ್ಸವ, ಚಂದ್ರ ಮಂಡಲ ಉತ್ಸವ, ಪಲ್ಲಕ್ಕಿ ಉತ್ಸವ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
LATEST NEWS
ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್ನ ಖ್ಯಾತ ನಟಿಯ ತಂಗಿ ಅರೆಸ್ಟ್
ಸ್ಟೇಟಸ್ನಲ್ಲಿ ಫೋಟೋ ಹಾಕಿದ ಮಾಜಿ ಪ್ರಿಯಕರ; ಆ*ತ್ಮಹತ್ಯೆಗೆ ಶರಣಾದ ವಿವಾಹಿತೆ!
ಬಂಟ್ವಾಳ : ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯದಂತೆ ವಧುವನ್ನು ವರಿಸಿದ ಪಂಜಾಬಿ ವರ
ಮವ್ವಾರು ಬಾಲಕೃಷ್ಣ ಮಣಿಯಾಣಿ ಸರ್ವ ಸಮರ್ಥ ಹಾಸ್ಯಗಾರರು – ಪಟ್ಲ
ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್
ಬಿಗ್ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಚೈತ್ರಾ ಕುಂದಾಪುರ
Trending
- BANTWAL5 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM4 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru6 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS5 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !