Monday, January 24, 2022

ಬಂಟ್ವಾಳ: ಪೂಜೆಗಾಗಿ ಹೂ ಕೊಯ್ಯಲು ಹೋಗಿದ್ದ ಯುವತಿ ನೀರಿಗೆ ಬಿದ್ದು ಸಾವು

ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ.


ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತ (24) ಮೃತ ಪಟ್ಟ ಯುವತಿ.
ರಶ್ಮಿತ ಬೆಳಿಗ್ಗೆ ದೇವರಿಗೆ ಪೂಜೆಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.

Hot Topics

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ನಾಪತ್ತೆಯಾಗಿದ್ದ ಬಸ್ ಮಾಲಕ ಶವವಾಗಿ ಪತ್ತೆ: ಸಾಲದಿಂದ ಬೇಸತ್ತು ಆತ್ಮಹತ್ಯೆ ಶಂಕೆ

ಶಿವಮೊಗ್ಗ: ಶನಿವಾರದಂದು ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್​ನ ಮಾಲೀಕ ಇಂದು ಶವವಾಗಿ ಪತ್ತೆಯಾಗಿದ್ದಾರೆ.ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿ ಶನಿವಾರದಂದು ಅವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿತ್ತು. ಅನುಮಾನಗೊಂಡು ಪಟಗುಪ್ಪ ಸೇತುವೆ ಬಳಿ...