Monday, August 15, 2022

ಬಂಟ್ವಾಳ: ಕಟ್ಟಡದ 4ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿದ್ದು ಯುವಕ ಸಾವು

ಬಂಟ್ವಾಳ: ಕಟ್ಟಡವೊಂದರ 4 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕನೋರ್ವ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಪಡೀಲ್ ಬಳಿ ನಡೆದಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಅಜಿಲಮೊಗರು ಪುಣ್ಕೆದಡಿ ನಿವಾಸಿ ವಿಜಯ್‌ ಪುಣ್ಕೆದಡಿ (23)ಮಹಡಿಯಿಂದ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ.

ನಿನ್ನೆ ಬೆಳಗ್ಗೆ ಎಂದಿನಿಂತೆ ಕೆಲಸಕ್ಕೆ ಹೋಗಿದ್ದ ವಿಜಯ್ ಕೆಲಸ ಮಾಡುವ ವೇಳೆ ಆಯತಪ್ಪಿ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವಿಜಯ್ ಅದಾಗಲೇ ಮೃತಪಟ್ಟದ್ದಾನೆ ಎಂದು ವೈದ್ಯ ರು ತಿಳಿಸಿದ್ದಾರೆ.

ಮೃತ ವಿಜಯ್ ತಂದೆ ,ತಾಯಿ ಅಕ್ಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಸ್ವಾತಂತ್ರ್ಯ ಅಮೃತೋತ್ಸವದಲ್ಲಿ ಮಿಂದೆದ್ದ ಕೆನರಾ ಹೈಸ್ಕೂಲ್

ಮಂಗಳೂರು: ದೇಶದ ಮಹನೀಯರ ತ್ಯಾಗ, ಬಲಿದಾನ, ನಿಸ್ವಾರ್ಥ ಬದುಕಿನ ದ್ಯೋತಕವಾದ ಸ್ವಾತಂತ್ರ್ಯವೆಂಬ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ 75 ಸಂವತ್ಸರಗಳು ಕಳೆದು ರಾಷ್ಟ್ರ ಹೊಸ ಭರವಸೆಗಳ ಕಡೆ ಮುನ್ನಡೆಯುತ್ತಿದೆ.ದೇಶವಾಸಿಯ ಕಣಕಣದಲ್ಲೂ ರಾಷ್ಟ್ರಪ್ರೇಮದ ಸೌಗಂಧ...

ಬೆಳ್ತಂಗಡಿ: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ

ವೇಣೂರು: ಮರೋಡಿ ಅರುಣೋದಯ ಯುವಕ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಕಾರ್ಯಕ್ರಮವು ಮರೋಡಿಯ ಬೊವೂರಿ ಜಯ ಪೂಜಾರಿಯವರ ಗದ್ದೆಯಲ್ಲಿ ಭಾನುವಾರ ನಡೆಯಿತು.ಶಾಸಕ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಿ, ನಮ್ಮ ಮಣ್ಣಿನ ಕ್ರೀಡೆಯನ್ನು...

ಬಿ.ಸಿ ರೋಡಿನ ಬಾನೆತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಬಂಟ್ವಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳದ ಬಿ.ಸಿ ರೋಡಿನ ವಿಜಯಲಕ್ಮೀ ಗ್ರೂಪ್ ವತಿಯಿಂದ ಬಾನೆತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.20×30 ಅಳತೆಯ ರಾಷ್ಟ್ರ ಧ್ವಜವನ್ನು ಕ್ರೇನ್ ಮೂಲಕ ಸುಮಾರು 174 ಅಡಿ ಎತ್ತರದಲ್ಲಿ...