Connect with us

LATEST NEWS

ಯೋಗಿ ಆದಿತ್ಯನಾಥ್‌ ಪ್ರಮಾಣವಚನಕ್ಕೆ ಭರದ ಸಿದ್ದತೆ: ಪ್ರಧಾನಿ ಭಾಗಿ ಸಾಧ್ಯತೆ

Published

on

ಲಖನೌ: ದೇಶದ ಗಮನ ಸೆಳೆದಿದ್ದ ಉತ್ತರಪ್ರದೇಶದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿರುವ ಯೋಗಿ ಆದಿತ್ಯನಾಥ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲು ಭರದ ಸಿದ್ಧತೆ ನಡೆಯುತ್ತಿದೆ. ಮಾ.21ರಂದು ಈ ಸಮಾರಂಭ ನಡೆಯುವ ಸಾಧ್ಯತೆ ಇದೆ.


ಹೋಳಿ ಹುಣ್ಣಿಮೆಯ ಬಳಿಕ ಪ್ರಮಾಣ ವಚನ ಪಡೆಯಲಿರುವ ಸಿಎಂ ಯೋಗಿ ಆದಿತ್ಯನಾಥ್‌ ಅವರು ಖುದ್ದಾಗಿ ವಿಶೇಷ ಅತಿಥಿಗಳ ಪಟ್ಟಿ ತಯಾರಿಸಿ,

ಅವರಿಗೆಲ್ಲ ವಿಶೇಷ ಆಹ್ವಾನ ಕಳುಹಿಸಿದ್ದಾರೆ. ಎಕಾನ ಮೈದಾನದಲ್ಲಿ ಬೃಹತ್‌ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ

ಕಳೆದ ಐದು ವರ್ಷಗಳಲ್ಲಿ ಯೋಗಿ ನೇತೃತ್ವದ ಸರಕಾರ ಜಾರಿಗೆ ತಂದ ಯೋಜನೆಗಳ ನೂರಾರು ಫಲಾನುಭವಿಗಳನ್ನು ಕರೆಸಿ , ಅವರ ಅನುಭವಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅವಕಾಶ ನೀಡಲು ಉದ್ದೇಶಿಸಲಾಗಿದೆ.


ಉತ್ತರ ಪ್ರದೇಶ ಸರಕಾರಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಸಮಾರಂಭದಲ್ಲಿ ಸುಮಾರು 45 ಸಾವಿರ ಜನರು ಜಮಾವಣೆಗೊಳ್ಳುವ ನಿರೀಕ್ಷೆಯಿದೆ.

ಇವರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ 200 ವಿವಿಐಪಿಗಳಿಗೆ ಆಸನ ವ್ಯವಸ್ಥೆ ಸಮೇತ ತಂಗುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.

ಕೇಂದ್ರ ಸಚಿವರ ಸಂಪುಟದ ಪ್ರಭಾವಿ ಸಚಿವರ ದಂಡೇ ಸಮಾರಂಭದಲ್ಲಿ ವೇದಿಕೆ ಮೇಲಿರಲಿದೆ ಎನ್ನಲಾಗುತ್ತಿದೆ. ಈ ಮೂಲಕ ಉತ್ತರ ಪ್ರದೇಶಕ್ಕೆ ಕೇಂದ್ರ ಸರಕಾರದ ಪೂರ್ಣ ಬೆಂಬಲವಿದೆ ಎಂಬ ಸಂದೇಶವನ್ನು ಸಾರಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

International news

WATCH VIDEO : ಆಗಸದಲ್ಲೇ ಡಿ*ಕ್ಕಿಯಾದ ಸೇನಾ ಹೆಲಿಕಾಪ್ಟರ್; 10 ಮಂದಿ ಸಾ*ವು

Published

on

ಕೌಲಾಲಂಪುರ : ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಡಿ*ಕ್ಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಇಹಲೋಕ ತ್ಯಜಿಸಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂ*ತ ಸಂಭವಿಸಿದೆ.


ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲಾ 10 ಸಿಬ್ಬಂದಿ ವಿ*ಧಿವಶರಾಗಿದ್ದಾರೆ. ಮೃ*ತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ತನಿಖೆಗೆ ಆದೇಶ:


ಘಟನೆಗೆ ಸಂಬಂಧಪಟ್ಟಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದೆ. ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್‌ ಮಾಡುತ್ತಿದ್ದವು.
ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನ್ನು ಪತನವಾಗಿದೆ ಎಂದು ಹೇಳಿದೆ.

Continue Reading

DAKSHINA KANNADA

ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

Published

on

ಸಾಮಾನ್ಯವಾಗಿ ಎಲ್ಲರೂ ಚಪ್ಪಲಿ ತೆಗೆದುಕೊಳ್ಳುವಾಗ ಕೊಟ್ಟಂತಹ ಗಮನವನ್ನ ಅದನ್ನು ತೆಗೆದುಕೊಂಡು ಆದ ಮೇಲೆ ಯಾರೂ ಅದನ್ನ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಚಪ್ಪಲಿಯನ್ನ ಇನ್ನು ಮುಂದೆ ನಿರ್ಲಕ್ಷ್ಯ ಮಾಡಬೇಡಿ. ಚಪ್ಪಲಿ ಸಹ ನಮ್ಮ ನಸೀಬನ್ನ ಬದಲಿಸಿ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲದು.

ನಾವು ಫ್ಯಾಶನೇಬಲ್ ಆದ್ರೆ ಮಾತ್ರ ಬೇರೆಯವರ ಗಮನವನ್ನು ನಮ್ಮ ಕಡೆಗೆ ಸೆಳೆಯಬಹುದು ಅಂತ ತುಂಬಾ ಜನ ಅಂದುಕೊಂಡು ಇರುತ್ತಾರೆ. ಫ್ಯಾಶನೇಬಲ್ ಬಟ್ಟೆ, ಟ್ರೆಂಡೀ ಶೂ ಅಥವಾ ಚಪ್ಪಲಿಗಳಿರಬಹುದು ಅಥವಾ ಫ್ಯಾಶನೇಬಲ್ ಜ್ಯುವೆಲ್ಲರಿ ಆಗಿರಬಹುದು ಈ ರೀತಿ ಟ್ರೆಂಡಿಯಾಗಿ ಡ್ರೆಸ್ ಮಾಡಿದ್ರೆ ಎಲ್ಲರ ಗಮನ ನಮ್ಮ ಹತ್ತಿರ ತಿರುಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಮನೆಯೊಳಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದು ಸೂಕ್ತವಲ್ಲ. ನಾವು ಚಪ್ಪಲಿಯನ್ನು ಹೊರಗಡೆ ಎಲ್ಲಿಗೂ ಹೋಗುವಾಗಲು ಹಾಕುತ್ತೇವೆ.

ಹೀಗೆ ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿಯನ್ನು ಹಾಕಿಕೊಂಡು ಹೋಗುತ್ತೇವೆ. ಕೆಲವೊಂದು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ತುಂಬಾ ಭಕ್ತಾಧಿಗಳು ಹೋಗುತ್ತಾ ಬರುತ್ತಾ ಇರುತ್ತಾರೆ. ಅಲ್ಲಿ ಚಪ್ಪಲಿಗೆಂದೇ ಸ್ಟ್ಯಾಂಡ್ ಇಟ್ಟಿರುತ್ತಾರೆ. ನಾವು ಹಣ ಕೊಟ್ಟು ನಮ್ಮ ಚಪ್ಪಲಿಯನ್ನ ಅಲ್ಲಿ ಕಾಪಾಡಬಹುದು. ಆದ್ರೆ ಕೆಲವರು ಚಪ್ಪಲಿಯನ್ನು ಹೊರಗಡೇ ಇಟ್ಟು ಹೋಗುತ್ತಾರೆ. ದೇವರ ದರ್ಶನ ಮಾಡಿ ಹೊರಗೆ ಬರುವಾಗ ಆ ಚಪ್ಪಲಿ ಕಾಣುವುದಿಲ್ಲ. ಕೆಲವೊಮ್ಮೆ ರಶ್ ಇರಬೇಕಾದ್ರೆ ತಿಳಿಯದೇ ಜನರು ಹಾಕಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ಬೇಕುಬೇಕಂತಲೆ ಅದನ್ನು ಕದ್ದುಕೊಂಡು ಹೋಗುತ್ತಾರೆ. ದೇವಸ್ಥಾನಗಳಲ್ಲಿ ಚಪ್ಪಲಿ ಕಳುವಾದ್ರೆ ಅದು ಒಳ್ಳೆಯದೇ ಎನ್ನುವ ನಂಬಿಕೆ ಕೂಡ ಇದೆ.

ಚಪ್ಪಲಿ ಹಾಳತ್ತಾಗಿದ್ದರೆ ಕಳೆದು ಹೋದರೂ ಬೇಜಾರಿಲ್ಲ. ಆದರೆ ಹೊಸತ್ತಾದರೆ ತುಂಬಾ ಬೇಜಾರ್ ಆಗುತ್ತದೆ. ಇಂತ ಸಮಯದಲ್ಲಿ ಕೆಲವರು ಹೇಳುತ್ತಾರೆ ಚಪ್ಪಲಿ ಕಳೆದು ಹೋದರೆ ನಿನ್ನ ದಾರಿದ್ರ್ಯ ಹೋಯಿತು. ಇನ್ನು ಮುಂದಕ್ಕೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ:

ಚಪ್ಪಲಿ ಕಳೆದುಹೋದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಶನಿವಾರ ಚಪ್ಪಲಿ ಕಳೆದುಹೋದರೆ ಪಾದರಕ್ಷೆಯೊಂದಿಗೆ ನಿಮ್ಮ ಶನಿಯು ದೂರವಾಯಿತು ಎಂದು ಅರ್ಥ. ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ. ಶನಿ ಚರ್ಮ ಮತ್ತು ಪಾದಗಳಲ್ಲಿ ವಾಸಿಸುತ್ತಾನೆ. ಹೀಗೆ ಪಾದರಕ್ಷೆ ಕಳುವಾದ್ರೆ ನಿಮ್ಮ ಸಮಸ್ಯೆ ದೂರವಾಯ್ತು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

Continue Reading

LATEST NEWS

ಇಲ್ಲಿ ಕಂಠಪೂರ್ತಿ ವೈನ್‌‌ ಕುಡಿದ್ರೂ ಫ್ರೀ! ಆದ್ರೆ ಒಂದು ಕಂಡೀಷನ್‌!

Published

on

ಫ್ರೀ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಫ್ರೀ ಅನ್ನುವ ಪದ ಕೇಳಿದ ಕೂಡಲೇ ಜನ ನಾ ಮುಂದು ತಾ ಮುಂದು ಅಂತ ನುಗ್ಗುತ್ತಾ ಇರುತ್ತಾರೆ. ಇನ್ನು ವೈನ್ ಫ್ರೀ ಅಂದರೆ ಬಾಯಿ ಬಿಡೋದು ಗ್ಯಾರಂಟಿನೇ. ಆದರೆ ವೈನ್ ಫ್ರೀ ಆಫರ್ ನಮ್ಮ ಭಾರತದಲ್ಲಿ ಅಲ್ವೇ ಅಲ್ಲ. ಈ ರೀತಿಯ ಆಫರ್ ಇರೋದು ಇಟಲಿ ದೇಶದಲ್ಲಿ. ಇಟಲಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಎಷ್ಟೇ ವೈನ್ ಕುಡಿದರೂ ಹಣ ಕೇಳಲ್ಲ. ಆದರೆ ರೆಸ್ಟೋರೆಂಟ್ ಮಾಲೀಕರ ಒಂದು ಕಂಡೀಷನ್ ಮಾತ್ರ ಫಾಲೋ ಮಾಡಲೇಬೇಕು. ವೈನ್ ಫ್ರೀ ಆಫರ್, ಮಾಲೀಕರ ಕಂಡೀಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಸುದ್ದಿ ನೋಡಿದವರೆಲ್ಲಾ ವ್ಹಾವ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ರೆಸ್ಟೋರೆಂಟ್‌ನಲ್ಲಿ ಎಷ್ಟಾದರೂ ವೈನ್ ಕುಡಿಯಬಹುದು!

ಇಟಲಿಯಲ್ಲಿನ ವೆರೋನಾದಲ್ಲಿರುವ ಅಲ್ ಕಾಂಡೋಮಿನಿಯೊ ಹೆಸರಿನ ಇಟಾಲಿಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವ ಗ್ರಾಹಕರಿಗೆ ಉಚಿತವಾಗಿ ವೈನ್ ದೊರೆಯುತ್ತದೆ. ಆದರೆ ಊಟಕ್ಕೆ ಕುಳಿತುಕೊಳ್ಳುವಾಗ ಗ್ರಾಹಕರ ಬಳಿ ಮೊಬೈಲ್ ಫೋನ್ ಗಳು ಇರಬಾರದು. ರೆಸ್ಟೋರೆಂಟ್ ಗೆ ಪ್ರವೇಶಿಸಿದ ಕೂಡಲೇ ಮೊಬೈಲ್ ಫೋನ್ ಅನ್ನು ಸಿಬ್ಬಂದಿ ಬಳಿ ಒಪ್ಪಿಸಿಬಿಡಬೇಕು.

ಮೊಬೈಲ್‌ ಸೈಡಿಗಿಟ್ಟು ವೈನ್‌ ಕುಡಿಯಿರಿ!

ಇದೇ ಉದ್ದೇಶಕ್ಕಾಗಿ ಒಂದು ಬಾಟಲ್ ವೈನ್ ಅನ್ನು ಫ್ರೀ ಆಗಿ ಕೊಟ್ಟಿರಬಹುದು ಎಂದು ಅನ್ನಿಸುತ್ತದೆ. ಆದರೆ ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಸಮಸ್ಯೆ ಆಗೋಗಿದೆ. ಪ್ರತಿ 5 ಸೆಕೆಂಡ್‌ಗೆ ಜನರು ತಮ್ಮ ಫೋನ್ ನೋಡುತ್ತಾ ಇರುತ್ತಾರೆ. ಆದರೆ ಆಗಾಗ ಫೋನ್ ನೋಡುವ ಅವಶ್ಯಕತೆ ಜನರಿಗೆ ಇಲ್ಲ ಕಾಣಿಸುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಜನರು ಸ್ವಲ್ಪ ಕಾಲ ಮೊಬೈಲ್ ಪಕ್ಕಕ್ಕೆ ಇಟ್ಟು ವೈನ್ ಕುಡಿಯಬೇಕು. ವೈನ್ ಕುಡಿದು ಮುಗಿಸುವವರೆಗೆ ಜನರು ಮೋನ್ ಮುಟ್ಟುವಂತಿಲ್ಲ.

ಇನ್ ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ನ ಆಫರ್, ಕಂಡೀಷನ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್ ಗೆ ಸುಮಾರು 68000 ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ತಮಾಷೆ ಸಹ ಮಾಡಿದ್ದಾರೆ.

ರೆಸ್ಟೋರೆಂಟ್ ಮಾಲೀಕರ ಈ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ನೆಟ್ಟಿಗರೊಬ್ಬರು, ಗ್ರಾಹಕರು ತಮ್ಮ ಸಮಯವನ್ನು ಆನಂದಿಸಲು ಈ ಮಾಲೀಕರು ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಿಜಕ್ಕೂ ಮಾಲೀಕರು ಒಳ್ಳೆಯ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading

LATEST NEWS

Trending