Connect with us

    LATEST NEWS

    ಯಾದಗರಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಪ್ರಕರಣ : ನಾಲ್ವರು ಅರೆಸ್ಟ್

    Published

    on

    ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ನಡೆದ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ನಾಲ್ರು ಆರೋಪಿಗಳನ್ನು ಬಂಧಿಸಿದ್ದಾರೆ.

    ಯಾದಗಿರಿ ಜಿಲ್ಲೆಯ ಎಸ್‍ಪಿ ವೇದಮೂರ್ತಿ ಅವರು ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ, ಇದು 8 ರಿಂದ 9 ತಿಂಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ 3 ತಂಡಗಳಿಂದ ತನಿಖೆ ನಡೆಯುತ್ತಿದೆ.

    ಇದು ಘಟನೆಯ ಹಳೆಯ ವಿಡಿಯೋ ಆಗಿದೆ. ಇದು ಶಹಾಪೂರದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.

    ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಘಟನೆ ನಡೆದಾಗ ಇದ್ದಂತಹ ಓರ್ವ ಆರೋಪಿ ಪಿಎಸ್‍ಐ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದ, ಕಳೆದ ಒಂದು ವರ್ಷದ ಹಿಂದೆ ಪೊಲೀಸ್ ಜೀಪ್ ಡ್ರೈವರ್ ಆಗಿದ್ದ ಆರೋಪಿ ಪ್ರಸ್ತುತ ಕೆಲಸ ಬಿಟ್ಟಿದ್ದಾನೆ.

    ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಉಳಿದವರನ್ನು ಪತ್ತೆ ಮಾಡಿದ್ದಾರೆ. ಅದಲ್ಲದೆ ಶಹಾಪುರ ನಗರದಲ್ಲೇ ವಾಸವಿದ್ದ ಹಲ್ಲೆಗೊಳಗಾದ ಮಹಿಳೆಯನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದು, ಸಂಪೂರ್ಣ ವಿಚಾರಣೆ ಬಳಿಕ ಪ್ರಕರಣದ ಅಸಲಿಯತ್ತು ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಇದು ಜಗತ್ತಿನ ಅತ್ಯಂತ ಸುರಕ್ಷಿತ ಬಿಲ್ಡಿಂಗ್

    Published

    on

    ಇತ್ತೀಚಿನ ದಿನಗಳಲ್ಲಿ ನಾವು ಎಷ್ಟೇ ಸುರಕ್ಷಿತವಾಗಿದ್ದರೂ ಅದು ಸಾಕಾಗುವುದಿಲ್ಲ. ಶತ್ರುಗಳ ದಾಳಿ ಯಾವಾಗ ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಆಗಬಹುದು. ಆದರೆ  ಈ ಒಂದು ಬಿಲ್ಡಿಂಗ್‌ ಸುರಕ್ಷತೆಯಲ್ಲಿ ಜಗತ್ತನ್ನೇ ಮೀರಿಸಿದೆ. ಯಾಕೆಂದರೆ ಈ ಬಿಲ್ಡಿಂಗ್‌ ಹೊಕ್ಕಲು ಯಾರಿಗೂ ಅಷ್ಟು ಸಾಧ್ಯವಿಲ್ಲದ ಸಂಗತಿ. ಇದರಲ್ಲಿರುವ ಹೈ ಸೆಕ್ಯೂರಿಟಿಯಿಂದಾಗಿ ಶತ್ರುಗಳಿಗೆ ಏನು ಮಾಡಲು ಅಸಾಧ್ಯ. ಹಾಗಾದರೆ ಅದು ಯಾವ ಬಿಲ್ಡಿಂಗ್ ? ಎಲ್ಲಿದೆ ಎಂಬುದನ್ನು ನೋಡೋಣ ಬನ್ನಿ.

    ಅಮೇರಿಕ ಅಧ್ಯಕ್ಷರ ವೈಟ್ ಹೌಸ್ ಪ್ರಪಂಚದ ಅತ್ಯಂತ ಸುರಕ್ಷಿತ ಕಟ್ಟಡ. ಇಲ್ಲಿರುವ ಸೆಕ್ಯೂರಿಟಿ ನೋಡಿದರೆ ನಿಮಗೂ ಶಾಕ್ ಆಗಬಹುದು. ಈ ಬಿಲ್ಡಿಂಗ್‌ನ ನಾಲ್ಕು ಸುತ್ತಲೂ 13 ಫೀಟ್ ಎತ್ತರದ ಸ್ಟೀಲ್‌ನ ಗೇಟ್‌ಗಳಿವೆ. ಇದರಲ್ಲಿ ಸ್ಪೇಷಲ್ ಫ್ರೇಜರ್ ಸೆನ್ಸರ್‌ಗಳನ್ನ ಅಳವಡಿಸಲಾಗಿದೆ. ಇದನ್ನು ಯಾರಾದರೂ ಹತ್ತುವ ಪ್ರಯತ್ನ ಪಟ್ಟರೆ ಸೆಕ್ಯೂರಿಟಿ ಅಲರಾಂ ಅಲರ್ಟ್‌ ಆಗುತ್ತದೆ.

    ಇನ್ನು ಇದರ ಸುತ್ತಲೂ ಇನ್ಫ್ರಾರೆಡ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಚಲಿಸುವ ವ್ಯಕ್ತಿಗಳ ಹೀಟರ್‌ಗಳನ್ನ ಮೇಜರ್ ಮಾಡುತ್ತದೆ. ಯಾವೂದೇ ರೀತಿಯ ಅಪಾಯ ಬಂದರೂ ಸೆಕ್ಯೂರಿಟಿ ಟೀಮ್‌ಗಳಿಗೆ ಅಲರ್ಟ್‌ ಕೊಡುತ್ತದೆ. ಈ ವೈಟ್ ಹೌಸ್‌ನ ಏರಿಯಾ ನೋ ಫೈಝೋನ್. ಅಂದರೆ ಒಂದು ವೇಳೆ ಶತ್ರುಗಳು ಉಪದ್ರ ಕೊಡಲು ಬಂದರೆ Surface to air machine system ಇದೆ. ಇದು ಮೊದಲೇ ಪತ್ತೇ ಮಾಡಿ ನಾಶ ಮಾಡುತ್ತದೆ.

    ವೈಟ್‌ ಹೌಸ್‌ನ ಒಳಗಡೆ ಮಲ್ಟಿ ಲೇವಲ್ ಬಂಕರ್ ಕೂಡ ಇದೆ. ಇದು ಅಮೇರಿಕ ಅಧ್ಯಕ್ಷರನ್ನ ನ್ಯೂಕ್ಲಿಯರ್ ಅಟ್ಯಾಕ್ ಮತ್ತು ಕೆಮಿಕಲ್ ಅಟ್ಯಾಕ್ ನಿಂದ ಸುರಕ್ಷಿತ ಮಾಡುತ್ತದೆ. ಇನ್ನು ಈ ಕಟ್ಟಡದ ಕಿಟಕಿಗಳೆಲ್ಲಾ ಬುಲೆಟ್ ಫ್ರೂಫ್, 24×7 ವೇ ಯಲ್ಲಿ ಎಐ ಕ್ಯಾಮಾರಗಳು, ಅಷ್ಟೇ ಅಲ್ಲದೇ ನುರಿತ ಶ್ವಾನಗಳು ಕೂಡ ಇಲ್ಲಿ ಇದೆ.

    Continue Reading

    DAKSHINA KANNADA

    ಪುತ್ತೂರು : ಖತರ್ನಾಕ್ ಮನೆಗಳ್ಳ ಅರೆಸ್ಟ್; ತನಿಖೆ ವೇಳೆ ಬಹಿರಂಗವಾಯ್ತು ಹಲವು ಪ್ರಕರಣ

    Published

    on

    ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ.  ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.

    ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ.  ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ : ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?

    ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

     

     

     

    Continue Reading

    chikkamagaluru

    ಕರ್ನಾಟಕ ಇನ್ನೂ ನಕ್ಸಲ್ ಮುಕ್ತ ರಾಜ್ಯವಾಗಿಲ್ಲ; ಹಾಗಾದರೆ ಉಳಿದಿರುವ ಆ ಮೋಸ್ಟ್ ವಾಂಟೆಡ್ ನಕ್ಸಲ್ ಯಾರು ?

    Published

    on

    ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರ ಶರಣಾಗತಿಯೊಂದಿಗೆ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯ ಎಂದು ಸರ್ಕಾರ ಹೇಳುತ್ತಿದ್ದರೂ, ಆ ಒಬ್ಬ ಕುಖ್ಯಾತ ನಕ್ಸಲ್ ಇನ್ನೂ ಶರಣಾಗತಿಯಾಗದೇ ತಲೆಮರೆಸಿಕೊಂಡಿದ್ದಾನೆ.

    ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಎಂಟು ನಕ್ಸಲರ ಪೈಕಿ ವಿಕ್ರಮ್ ಗೌಡ ಎನ್ ಕೌಂಟರ್ ಆಗಿದ್ದರೆ, ಆರು ಮಂದಿ ಬುಧವಾರ ಶರಣಾಗತರಾಗಿದ್ದಾರೆ. ಆದರೆ ಓರ್ವ ನಕ್ಸಲ್ ರವಿಂದ್ರ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.

    ಹೇಗಾದರೂ ಮಾಡಿ ಆತನನ್ನೂ ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ.

    ಜಾತ್ರೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ರವೀಂದ್ರ
    ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕೊಟೆ ಹೊಂಡದ ಮರಾಠ ಕಾಲೋನಿ ನಿವಾಸಿಯಾಗಿರುವ ರವೀಂದ್ರ ನಾಯ್ಕ ಪೊಲೀಸರಿಗೆ ಬೇಕಾಗಿರುವ ಕೊನೆಯ ನಕ್ಸಲ್ ಮುಖಂಡನಾಗಿದ್ದಾನೆ. ಈತ 2007ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳು ಅಮಾವಾಸ್ಯೆ ಜಾತ್ರೆಯಲ್ಲಿ, ಅಂದು ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿದ್ದ ಶ್ರೀಮತಿಯೊಂದಿಗೆ ಕಾಣಿಸಿಕೊಂಡಿದ್ದೇ ಕೊನೆ. ನಂತರ ಆತ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.

    ಇದನ್ನೂ ಓದಿ: ನಕ್ಸಲರ ಶರಣಾಗತಿ ಬೆನ್ನಲ್ಲೇ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ !

    ನಕ್ಸಲ್ ಸಂಘಟನೆ ತೊರೆದ ಶ್ರೀಮತಿ
    ರವೀಂದ್ರ ನಾಯಕ ಅವರ ಶ್ರೀಮತಿ ನಕ್ಸಲ್ ಸಂಘಟನೆ ತೊರೆದು ಜಿಲ್ಲಾಡಳಿತದೆದುರು ಶರಣಾದರೂ ರವೀಂದ್ರ ನಾಯ್ಕ ಮಾತ್ರ ಚಳುವಳಿಯಲ್ಲೇ ಸಕ್ರೀಯನಾಗಿದ್ದ. ಆತನ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲೇ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಚಿಕ್ಕಮಗಳೂರಿನ ಬೇರೆ ಬೇರೆ ಠಾಣೆಗಳು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಸುಮಾರು 38 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹೊರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.

    ಶರಣಾಗತಿಗೆ ಒಪ್ಪುತ್ತಿಲ್ಲ ರವೀಂದ್ರ
    ಕಳೆದ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದ ರವೀಂದ್ರ ನಾಯ್ಕ ಈಗ ಶರಣಾಗತಿ ಹೊಂದಿರುವ ಆರು ಜನರಿಗಿಂತಲೂ ಕಿರಿಯ ಎನ್ನಲಾಗುತ್ತಿದೆ. ಇನ್ನೂ ಹೋರಾಟದ ಕಿಚ್ಚಿರುವುದರಿಂದ ಆತ ಶರಣಾಗತಿಗೆ ಒಪ್ಪುತ್ತಿಲ್ಲ ಎಂದೂ ನಿನ್ನೆ ಪ್ರವಾಸಿಮಂದಿರದ ಬಳಿ ನಕ್ಸಲ್ ಸಹಾನುಭೂತಿ ಹೊಂದಿದ ಕೆಲವರು ಈ ಕುರಿತು ಮಾತನಾಡಿಕೊಂಡಿದ್ದಾರೆ.

    ಸ್ಪಷ್ಟನೆ ಕೊಟ್ಟ ಗೃಹ ಸಚಿವರು
    ಈ ಬಗ್ಗೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ನಕ್ಸಲ್ ರವೀಂದ್ರನನ್ನು ಶರಣಾಗತರಾಗಿರುವ ಗುಂಪಿನವರು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ, ತನಿಖೆ ನಡೆದಿದೆ. ನಕ್ಸಲರ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.

    ನಕ್ಸಲ್ ಮುಕ್ತ ರಾಜ್ಯ ಎನ್ನುವ ಅಧಿಕೃತ ಘೋಷಣೆ ಹೊರಬೀಳಲು ಅಡ್ಡಿಯಾಗಿರುವ ಕೊನೆಯ ಹೆಸರು ಈಗ ರವೀಂದ್ರ ನಾಯ್ಕನದ್ದಾಗಿದೆ. ಆದರೆ ಈತ ಮಾತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.

    Continue Reading

    LATEST NEWS

    Trending