Monday, July 4, 2022

ಕೇರಳದ ಬೀಚಿನಲ್ಲಿ ಗಾಯಗೊಂಡ ಡಾಲ್ಫಿನ್‌ನ್ನು ರಕ್ಷಿಸಿ ಚಿಕಿತ್ಸೆ ನೀಡಿದ ಅಪ್ಪ-ಮಗಳು

ಕೊಚ್ಚಿ: ಕೇರಳದ ಮೂಲಂಕುಳಿ ಬೀಚಿನಲ್ಲಿ ಈಜಾಡಲೆಂದು ತೆರಳಿದ್ದ ತಂದೆ ಹಾಗೂ ಮಗಳಿಗೆ ಮರಳ ತೀರದಲ್ಲಿ ಡಾಲ್ಫಿನ್ ಕಾಣಿಸಿಕೊಂಡಿದ್ದು ಗಾಯಗೊಂಡಿದ್ದ ಡಾಲ್ಫಿನ್‌ನ್ನು ರಕ್ಷಿಸಿದ ಘಟನೆ ನಡೆದಿದೆ.

ಗಾಯಗೊಂಡ ಡಾಲ್ಫಿನ್ ನೋವಿನಿಂದ ನರಳಾಡುತ್ತಿರುವುದನ್ನು ಕಂಡ ವಿಲ್‌ಫ್ರೆಡ್ ಮತ್ತು ಆಂಜೆಲ್ ಅದರ ರಕ್ಷಣೆಗೆ ಮುಂದಾದರು. ಅದು ಇತರೆ ಮೀನುಗಳ ಭಯದಿಂದ ಸಮುದ್ರಕ್ಕೆ ಇಳಿಯದೆ ತೀರಕ್ಕೆ ಬಂದಿತ್ತು.

ಸೂಕ್ತ ಚಿಕಿತ್ಸೆ ನೀಡಿ ಸಮುದ್ರಕ್ಕೆ ಬಿಟ್ಟರೂ ಡಾಲ್ಫಿನ್ ಮತ್ತೆ ಮರಳಿ ತೀರಕ್ಕೆ ಬಂದುಬಿಡುತ್ತಿತ್ತು.

ಅದಕ್ಕೆ ವಿಲ್ ಫ್ರೆಡ್ ಒಂದು ಉಪಾಯ ಹೂಡಿದರು. ಅವರು ಡಾಲ್ಫಿನ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು 1 ಕಿ.ಮೀ. ವರೆಗೂ ಈಜಿದರು. ಅಷ್ಟು ದೂರ ಹೋದ ಮೇಲೆ ಅವರು ಡಾಲ್ಫಿನ್ ಅನ್ನು ಸಮುದ್ರಕ್ಕೆ ಬಿಟ್ಟರು.

ಡಾಲ್ಫಿನ್ ಮತ್ತೆ ಹಿಂತಿರುಗಿ ತೀರದ ಕಡೆ ಬರಲಿಲ್ಲ. ಈಜಿಕೊಂಡು ಸಮುದ್ರದಲ್ಲಿ ಮರೆಯಾಯಿತು. ಮೀನುಗಾರಿಕಾ ದೋಣಿ ತಗುಲಿದಕ್ಕೆ ಗಾಯವಾಗಿದೆ ಎಂಬುದು ವಿಲ್ ಫ್ರೆಡ್‌ನವರ ಅಭಿಪ್ರಾಯ.

ಈಗ ಅಪ್ಪ ಮಗಳ ಡಾಲ್ಫಿನ್ ರಕ್ಷಣೆ ಘಟನೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ‘ಬ್ಲಡ್ ಡೋನರ್ಸ್’ ಇದರ 350ನೇ ರಕ್ತದಾನ ಶಿಬಿರಕ್ಕೆ ಚಾಲನೆ

ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ...

ಬೆಳ್ತಂಗಡಿ: ಭಾರೀ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ದ.ಕ ಡಿಸಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಯವರು ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.ಗ್ರಾಮೀಣ...

ಸುಳ್ಯ: ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ-ಸಹಸವಾರೆಗೆ ಗಾಯ

ಸುಳ್ಯ: ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಎರಡು ವಾಹನಗಳ ಸವಾರರು ಅಪಾಯದಿಂದ ಪಾರಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಟ್ಟಿಪಳ್ಳ ಎಂಬಲ್ಲಿನ ಮುಖ್ಯ ರಸ್ತೆಯಲ್ಲಿ ನಡೆದಿದೆ.ಸುಳ್ಯದ ಮಾಧ್ಯಮವೊಂದರ...