Connect with us

    LATEST NEWS

    ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ

    Published

    on

    ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ನಾಡಹಬ್ಬ ದಸರಾಕ್ಕೆ ಅದ್ದೂರಿಯಾಗಿ ಇಂದು ಬೆಳಗ್ಗೆ(ಅ.3) ಚಾಲನೆ ಸಿಕ್ಕಿದೆ. ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು.

    ಇದಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಾಹಿತಿ ಹಂಪ ನಾಗರಾಜಯ್ಯ ಸೇರಿ ಹಲವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

    ಬಳಿಕ ವೇದಿಕೆ ಕಾರ್ಯಕ್ರಮವನ್ನು ಸಾಹಿತಿ ಹಂಪ ನಾಗರಾಜಯ್ಯ  ಉದ್ಘಾಟಿಸಿದರು. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ. ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಸಮಾರಂಭಕ್ಕೆ ಜಿಲ್ಲಾಡಳಿತದಿಂದ ವಾಟರ್ ಪ್ರೂಫ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.

    ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ:

    ಡಾ. ಹಂಪ ನಾಗರಾಜಯ್ಯ ಅವರು ಉದ್ಘಾಟನಾ ಭಾಷಣ ಮಾಡಿ, ಪ್ರತಿಪಕ್ಷಗಳು ಸರಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು. ಯುವಜನತೆ ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು. ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ಹೇಳಿದರು.

    ಇದನ್ನೂ ಓದಿ : ಬೆಳ್ತಂಗಡಿ : ತಲೆ ಮೇಲೆ ದಾರಂದ ಬಿದ್ದು ಬಾಲಕಿ ಸಾ*ವು

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಸಿಎಂ, ಡಿಸಿಎಂ ಒಂದು ರೀತಿಯಲ್ಲಿ ಗರಡಿ ಮನೆ ಆಳಿನಂತೆ ಜಟ್ಟಿಗಳು ಬಣ್ಣಿಸಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    Published

    on

    ಕಾರವಾರ: ಶಿರೂರು ಭೂ ಕುಸಿತ ದುರಂತದ ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತಮಾಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ.

    ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.

    ಇದಾದ ಬಳಿಕ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೆ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು ಹಾಗೂ ಪೋಕ್ ಲೈನ್ ಮೂಲಕ ಹೋಟೆಲ್ ಕುಸಿದುಹೋದ ಸ್ಥಳದಲ್ಲಿ ನಿಗದಿ ಮಾಡಿದ ಎರಡನೇ ಪಾಯಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.

    Continue Reading

    LATEST NEWS

    Watch Video: ದರೋಡೆಕೋರರಿಂದ ಮನೆಯವರನ್ನು ರಕ್ಷಿಸಿದ ಮಹಿಳೆ

    Published

    on

    ಪಂಜಾಬ್‌: ಚಿನ್ನದ ವ್ಯಾಪಾರಿಯ ಮನೆ ದರೋಡೆಗೆ ಹೊಂಚು ಹಾಕಿದ ದರೋಡೆ ತಂಡವೊಂದನ್ನು ಮನೆಯ ಮಹಿಳೆ ಏಕಾಂಗಿಯಾಗಿ ಅಡ್ಡಗಟ್ಟಿದ ಘಟನೆ ಪಂಜಾಬ್‌ನ ಅಮೃತಸರದ ವರ್ಕಾ ಎಂಬಲ್ಲಿ ನಡೆದಿದೆ.

    ಮನೆಯ ಮಹಡಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ ಮಾಸ್ಕ್ ಧರಿಸಿದ ಮೂವರು ಮನೆಯ ಹತ್ತಿರ ಸುಳಿದಾಡುವುದು ಕಂಡು ಮನೆ ಒಡತಿಗೆ ಅನುಮಾನ ಬಂದಿದೆ. ತಕ್ಷಣ ಕೆಳಗೆ ಓಡಿ ಬಂದು ತೆರೆದಿದ್ದ ಮನೆ ಬಾಗಿಲು ಹಾಕುವ ಯತ್ನ ಮಾಡಿದ್ದಾರೆ. ಆದ್ರೆ ಆ ವೇಳೆಗಾಗಲೇ ಬಾಗಿಲು ಸಮೀಪಿಸಿದ ದರೋಡೆಕೋರರು ಬಾಗಿಲು ತಳ್ಳಿ ಒಳ ಬರುವ ಪ್ರಯತ್ನ ನಡೆಸಿದ್ದಾರೆ.

    ಏಕಾಂಗಿಯಾದರೂ ಮನೆಯನ್ನು ಹಾಗೂ ಮನೆಯವರನ್ನು ಕಾಪಾಡುವ ನಿಟ್ಟಿನಲ್ಲಿ ಮಹಿಳೆ ತನ್ನೆಲ್ಲಾ ಬಲ ಪ್ರಯೋಗಿಸಿ ಬಾಗಿಲು ಲಾಕ್ ಮಾಡಿದ್ದಾರೆ. ಜತೆಗೆ ಜೋರಾಗಿ ಕೂಗಿಕೊಂಡಿದ್ದು, ಇದರಿಂದ ವಿಚಲಿತರಾದ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪಕ್ಕದಲ್ಲೇ ಇದ್ದ ಸೋಫಾವನ್ನು ಎಳೆದು ಬಾಗಿಲಿಗೆ ಅಡ್ಡ ಇಟ್ಟ ಮಹಿಳೆ ಸಹಾಯಕ್ಕಾಗಿ ಫೋನ್ ಮಾಡಿದ್ದಾರೆ.

    ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮಹಿಳೆಯ ಸಮಯ ಪ್ರಜ್ಞೆ ಹಾಗೂ ಸಾಹಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Watch Video:

    Continue Reading

    BIG BOSS

    ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳೊಂದಿಗೆ ಪ್ರೀತಿಯ ಕಳ್ಳಾಟವಾಡುತ್ತಿರುವ ಧರ್ಮ!

    Published

    on

    ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾದಂತಿದೆ. ನಟಿ ಐಶ್ವರ್ಯ ಸಿಂಧೋಗಿ ಹಾಗೂ ನಟ ರಂಜಿತ್ ಮಧ್ಯೆ ಏನೋ ನಡೆಯುತ್ತಿದೆ ಎಂದ್ಕೊಂಡಿದ್ದ ವೀಕ್ಷಕರಿಗೆ ಐಶು, ರಂಜಿತ್ ಅಲ್ಲ ನಟ ಧರ್ಮಕೀರ್ತಿ ಬುಟ್ಟಿಗೆ ಬಿದ್ದಿದ್ದಾರೆ ಎನ್ನುವ ಅನುಮಾನ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಐಶ್ವರ್ಯ, ಧರ್ಮಕೀರ್ತಿ ಅವರನ್ನು ಹಾಡಿ ಹೊಗಳಿದ್ದಾರೆ. ತಾನು ಧರ್ಮಗೆ ಬೀಳಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.

    ನರಕದ ಕಡೆ ಹೋದ್ರೆ ಸ್ವರ್ಗದಲ್ಲಿರೋರು ಯಾರೋ ಕೋಪ ಮಾಡ್ಕೊಳ್ತಾರೆ ಅಂತ ಯಮುನಾ ಶ್ರೀನಿಧಿ, ಧರ್ಮ ಬಳಿ ಹೇಳ್ತಾರೆ. ನಂತ್ರ ತಾನೇಕೆ ಧರ್ಮ ಮೇಲೆ ಇಂಪ್ರೆಸ್ ಆದೆ ಎನ್ನುವುದನ್ನು ಐಶ್ವರ್ಯ ಹೇಳ್ತಾರೆ. ಧರ್ಮ ಸಾಫ್ಟ್ ಆಗಿ ಮಾತನಾಡೋದು, ಮುದ್ದಾಗಿ ಹಣ್ಣು ಕಟ್ ಮಾಡೋದು ಎಲ್ಲ ಐಶ್ವರ್ಯಗೆ ಇಷ್ಟವಂತೆ. ಅಷ್ಟೇ ಅಲ್ಲ ಯಾವಾಗ ಫುಲ್ ಬಿದ್ದೋದೆ ಗೊತ್ತಾ ಎನ್ನುತ್ತಾ ಮಾತು ಮುಂದುವರೆಸ್ತಾರೆ ಐಶ್ವರ್ಯ. ನರಕದಲ್ಲಿರೋ ಅನುಷಾ ಬಂದ್ರೆ ಈಗ ಏನ್ ಮಾಡ್ತೀರಿ ಅಂತ ಯಮುನಾ ಕೇಳುವ ಪ್ರಶ್ನೆಗೆ ಜೊತೆಯಾಗಿ ಚೆನ್ನಾಗಿರೋಣ ಎನ್ನುತ್ತಾರೆ ಧರ್ಮ.

    ಕಲರ್ಸ್ ಕನ್ನಡ, ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಅತ್ಲಾಗೆ ಅನುಷಾ, ಇತ್ಲಾಗೆ ಐಶ್ವರ್ಯಾ, ನಡುವೆ ಪ್ರೀತಿಯ ಧರ್ಮ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ವೀಕ್ಷಕರು, ಅಂತೂ ಬಿಗ್ ಬಾಸ್ ಮನೆಯಲ್ಲಿ ಲವ್ ಶುರುವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಜೋಡಿಯಾಗಿಯೇ ಬಂದವರು ನಟಿ ಅನುಷಾ ಹಾಗೂ ಧರ್ಮಕೀರ್ತಿ. ಅನುಷಾಗೆ ವಿಶ್ ಮಾಡಲು ಧರ್ಮಕೀರ್ತಿ ಕುಟುಂಬ ಸಮೇತ ಬಂದಿದ್ದಾರೆ ಎಂದಿದ್ದ ಕಿಚ್ಚ ಸುದೀಪ್, ಇಬ್ಬರಿಗೂ ವೇದಿಕೆ ಮೇಲೆಯೇ ಹಿರಿಯರಿಂದ ಆಶೀರ್ವಾದ ಮಾಡಿಸಿದ್ದರು. ಧರ್ಮ ಹಾಗೂ ಅನುಷಾ ಒಟ್ಟಿಗೆ ಸಿನಿಮಾದಲ್ಲಿ ಕೂಡ ನಟಿಸಿದ್ದು, ಇಬ್ಬರೂ ಆಪ್ತ ಸ್ನೇಹಿತರು. ಸುದೀಪ್ ಮಾತಿನ ನಂತ್ರ ಇಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಏನೋ ಇದೆ ಎಂದು ಭಾವಿಸಿರುವ ಫ್ಯಾನ್ಸ್, ಬಿಗ್ ಬಾಸ್ ಮನೆಯಲ್ಲಿ ಈ ಜೋಡಿಯನ್ನು ಕಣ್ತುಂಬಿಕೊಳ್ಬಹುದು ಅಂದ್ಕೊಂಡಿದ್ದರು. ಆದ್ರೀಗ ಐಶ್, ಧರ್ಮ ಹಿಂದೆ ಬಿದ್ದಿದ್ದು, ಜೋಡಿ ಚೇಂಜ್ ಆಗುತ್ತಾ ಕಾದುನೋಡ್ಬೇಕಿದೆ.

    Continue Reading

    LATEST NEWS

    Trending