Connect with us

    DAKSHINA KANNADA

    ಸುರತ್ಕಲ್ : ಯುವತಿಗೆ ಬೆ*ದರಿಕೆ ಪ್ರಕರಣ; ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ : ಶಾಸಕ ಭರತ್ ಶೆಟ್ಟಿ ಆಕ್ರೋಶ

    Published

    on

    ಸುರತ್ಕಲ್ :  ಸುರತ್ಕಲ್  ಇಡ್ಯಾ ನಿವಾಸಿ ಹಿಂದು ಯುವತಿ ಒಬ್ಬಳಿಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಅಶ್ಲೀ*ಲ ಮೆಸೇಜ್  ಹಾಗೂ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆ*ದರಿಕೆ ಹಾಕಿದ ಯುವಕನ ವಿರುದ್ಧ  ಕ್ಷಿಪ್ರ ಕ್ರಮವನ್ನು  ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ  ಸಂ*ತ್ರಸ್ತ ಯುವತಿ ಆ*ತ್ಮಹ*ತ್ಯೆಗೆ ಯತ್ನ ಮಾಡಿದ್ದಾಳೆ ಎಂದು  ಶಾಸಕ  ಡಾ. ಭರತ್ ಶೆಟ್ಟಿ  ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವತಿ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭವೇ ನಿರ್ಲಕ್ಷ್ಯವಾಗಿ ವರ್ತಿಸಿರುವ ಠಾಣಾ ಪೊಲೀಸರ ಕ್ರಮ ಖಂಡನೀಯ. ಯುವತಿ ಇದೀಗ ಜೀ*ವನ್ಮ*ರಣದ ಸ್ಥಿತಿಯಲ್ಲಿದ್ದು, ಇದರ ಜವಾಬ್ದಾರಿಯನ್ನು ಪೊಲೀಸರೇ ಹೊರಬೇಕು .  ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

    DAKSHINA KANNADA

    ರಿಕ್ಷಾದಲ್ಲಿ ಅ*ಕ್ರಮ ಗೋ ಸಾ*ಗಾಟ; ಓರ್ವ ಸೆರೆ, ಇಬ್ಬರು ಪರಾರಿ

    Published

    on

    ಮೂಡುಬಿದಿರೆ : ರಿಕ್ಷಾದಲ್ಲಿ ಅಕ್ರಮವಾಗಿ ಗೋವುಗಳನ್ನು ಹಿಂ*ಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಗೋವುಗಳನ್ನು ರಕ್ಷಿಸಿ, ಓರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅಳಿಯೂರಿನಲ್ಲಿ ನಡೆದಿದೆ.

    ಮೂಡುಬಿದಿರೆ ತಾಲೂಕಿನ ಅಳಿಯೂರು ಎಂಬಲ್ಲಿ ಅತಿವೇಗವಾಗಿ ಸಾಗುತ್ತಿದ್ದ ರಿಕ್ಷಾವನ್ನು ಕಂಡು ಸಾರ್ವಜನಿಕರಿಗೆ ಸಂಶಯ ಮೂಡಿದ್ದು, ಕೂಡಲೇ ಭಜರಂಗದಳ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿದ್ದಾರೆ. ಅಳಿಯೂರು ಸುಮಂಗಲಿ ಸಭಾ ಭವನದ ಮುಂಭಾಗದಲ್ಲಿ ಆಟೋರಿಕ್ಷಾವನ್ನು ತಡೆದಾಗ ಅದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಗೋವು ಪತ್ತೆಯಾಗಿದೆ. ಕೂಡಲೇ, ರಿಕ್ಷಾದಲ್ಲಿದ್ದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದು, ಜಲಲುದ್ದೀನ್ ಎಂಬಾತನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

    ಇದನ್ನೂ ಓದಿ : ಕಾರ್ಕಳ : ಪ್ರಿಯಕರನ ಜೊತೆ ಸೇರಿ ಪತಿಯ ಕೊಂ*ದ ಪತ್ನಿ

    ಪಣಪಿಲ ಗುಡ್ಡಲಪಕ್ಕೆಯ ಕಂಬಳ ಓಟಗಾರ ದೀಕ್ಷಿತ್ ಎಂಬಾತ ಅ*ಕ್ರಮವಾಗಿ ಗೋವನ್ನು ಮಾರಾಟ ಮಾಡಿದ್ದಾನೆ ಎಂದು ಜಲಲುದ್ದೀನ್ ಹೇಳಿಕೆ ನೀಡಿದ್ದು ಪೊಲೀಸರು ದೀಕ್ಷಿತ್ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದ್ದಾರೆ. ಗೋವಿನ ಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು ಪರಾರಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಲ್ಲಿ ಕೋರಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    Continue Reading

    DAKSHINA KANNADA

    ಮಾನವೀಯತೆ ಮೆರೆದ ಲೇಡಿ ಪೊಲೀಸ್; ಮಹಿಳೆಯರಿಂದ ಸನ್ಮಾನ

    Published

    on

    ಮಂಗಳೂರು: ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕದ್ರಿ ಠಾಣೆಯ ಕಾನ್‌ಸ್ಟೇಬಲ್ ಮುರ್ಶಿದಾ ಬಾನು ಅವರನ್ನು ಮಂಜುಳಾ ನಾಯಕ್ ನೇತೃತ್ವದ ಸಾಮರಸ್ಯ ವೇದಿಕೆ ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು.

    ಈ ಸಂದರ್ಭ ಕದ್ರಿ ಎಸ್ಸೈ ಉಮೇಶ, ವೇದಿಕೆಯ ಮುಖಂಡರಾದ ಶ್ರೀನಿವಾಸ ಸಾಲ್ಯಾನ್, ಚಂಚಲಾಕ್ಷಿ, ಸಿಂಥಿಯಾ ಮಿರಾಂದ, ಮಮತಾ ಶೆಟ್ಟಿ, ನೀನಾ ಟೆಲ್ಲಿಸ್, ಡಿ.ಸಿ.ರಚನಾ, ಯೋಗೀಶ್ ನಾಯಕ್ ಮತ್ತಿತರರಿದ್ದರು.

    Continue Reading

    DAKSHINA KANNADA

    ಸುರತ್ಕಲ್: ಅಶ್ಲೀಲ ಸಂದೇಶ ಹಾಗೂ “ನಿನ್ನನ್ನು 24 ತುಂಡು ಮಾಡುವೆ” ಎಂದು ಬೆದರಿಕೆ ಹಾಕಿದ ಮುಸ್ಲಿಂ ಯುವಕ – ಯುವತಿ ಆತ್ಮಹತ್ಯೆಗೆ ಯತ್ನ.!!

    Published

    on

    ಸುರತ್ಕಲ್: “ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ” ಎಂದು ಬೆದರಿಕೆ ಸಂದೇಶ ಕಳುಹಿಸಿ ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ನಡೆದಿದೆ.

    ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಮುಸ್ಲಿಂ ಯುವಕರಾದ ಶಾರಿಕ್ ಹಾಗೂ ನೂರ್‌ಜಹಾನ್ ಎಂಬವರು ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಈತ ಯುವತಿಯ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದಲ್ಲದೆ ಬೆದರಿಕೆಯೊಡ್ಡಿದ್ದ. ಅಲ್ಲದೆ ಯುವತಿಯ ಸಹೋದರನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಇವರ ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಯತ್ನಿಸಿದ್ದಾಳೆ.

    ಈ ಹಿಂದೆಯೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕವೂ ನಿರಂತರ ಮೆಸೇಜ್ ಹಿನ್ನೆಲೆಯಲ್ಲಿ ಮನನೊಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆತ್ಮಹತ್ಯೆ ಯತ್ನಕ್ಕೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಳು.

    “ಒಬ್ಬ ಮುಸ್ಲಿಮನ ಕೈಯ್ಯಲ್ಲಿ ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯ್ತನೆ”. ಆದರೆ ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನು ಬಿಡಬಾರದು ಎಂದು ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

    Continue Reading

    LATEST NEWS

    Trending