Connect with us

    LATEST NEWS

    ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

    Published

    on

    ಮಂಗಳೂರು/ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸ್ಪೀಕರ್, ಸಿಎಂ, ಸಚಿವರು, ಶಾಸಕರು, ಸಚಿವಾಲಯ ಮಟ್ಟದ ಅಧಿಕಾರಿಗಳು ಸೇರಿ ಗಣ್ಯರು ಕುಂದಾ ನಗರಿಗೆ ಆಗಮಿಸಲಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸರ್ಕಾರದ ಆಡಳಿತ ಯಂತ್ರವೇ ಶಿಫ್ಟ್ ಆಗಲಿದೆ.


    ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಸರ್ಕಾರ ಠಿಕಾಣಿ ಹೂಡಲಿದ್ದು, ಪೊಲೀಸರು ಸೇರಿ ವಿವಿಧ ಇಲಾಖೆಯಿಂದ 12 ಸಾವಿರ ಸಿಬ್ಬಂದಿ ಅಧಿವೇಶನದ ಕರ್ತವ್ಯ ನಿರ್ವಹಿಸಲಿದ್ದಾರೆ.

    ಉತ್ತರ ಕರ್ನಾಟಕದ ಶಕ್ತಿ ಸೌಧದಲ್ಲಿ ಏಳನೇ ಬಾರಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಅಧಿವೇಶನ ನಡೆಯಲಿದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸತತ 5 ವರ್ಷ ಅಧಿವೇಶನ ನಡೆಸಿದ ಹೆಗ್ಗಳಿಕೆ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗ ಎರಡನೇ ಬಾರಿಗೆ ಸಿಎಂ ಆಗಿರೋ ಸಿದ್ದರಾಮಯ್ಯ ಅವರ ಎರಡನೇ ಅಧಿವೇಶನ ನಡೆಯಲಿದೆ.

    ಇದನ್ನೂ ಓದಿ: ಗ್ಯಾಸ್ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ !

     

    2006 ರಿಂದ ಈವರೆಗೂ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಪ್ರತಿ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಅದನ್ನು ಈಡೇರಿಸುವ ಪ್ರಯತ್ನ ಮಾಡುವುದಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂಬ ಆಗ್ರಹ ಜೋರಾಗಿದೆ.

    ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ಅಧಿವೇಶನದ ಭದ್ರತೆಗಾಗಿ ಆರು ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

     

    DAKSHINA KANNADA

    ಮೂಡುಬಿದಿರೆಯಲ್ಲಿ ಉತ್ತುಂಗಕ್ಕೇರಿದ ಸಾಂಸ್ಕೃತಿಕ ಲೋಕ !!

    Published

    on

    ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷಷ್ಠಾನದ ವತಿಯಿಂದ ಪುತ್ತಿಗೆ ವಿವೇಕಾನಂದ ನಗರ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್‌ ಬಯಲು ರಂಗ ಮಂದಿರದಲ್ಲಿ ಬುಧವಾರದಂದು ಆಳ್ವಾಸ್‌ ವಿರಾಸತ್ 2004ರ ಸಾಂಸ್ಕೃತಿಕ ಲೋಕದ ಅನಾವರಣಗೊಂಡಿದ್ದು, ಸಾಹಸ್ರಾರು ಮಂದಿ ವೀಕ್ಷಕರು ಸ್ವರ ಮಾಂತ್ರಿಕನ ಸಂಗೀತ ಲೋಕದಲ್ಲಿ ತೇಲಿ ಹೋದರು.

    ಪಂಡಿತ್ ವೆಂಕಟೇಶ್‌ ಕುಮಾರ್‌ಗೆ ಆಳ್ವಾಸ್ ವಿರಾಸತ್‌ 2024 ಪ್ರಶಸ್ತಿ :

    ಖ್ಯಾತ ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ವೆಂಕಟೇಶ್‌ ಕುಮಾರ್ ಅವರಿಗೆ ಈ ಬಾರಿಯ ಆಳ್ವಾಸ್ ವಿರಾಸತ್‌ 2024 ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಹಾಗೂ ನನ್ನಂತಹ ಪ್ರತಿಭಾನ್ವಿತ ಬಡ ವಿದ್ಯಾರ್ತಿಗಳಿಗೆ ಸಂಗೀತ ಶಿಕ್ಷಣ ನೀಡಿ ಸಾಧನೆಗೆ ಕಾರಣೀಕರ್ತರಾದ, ಬಡವರು, ದೀನದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟ ಗುರು ಪುಟ್ಟ ರಾಜ ಗವಾಯಿ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವುದಾಗಿ ವೆಂಕಟೇಶ್‌ ಕುಮಾರ್ ನುಡಿದರು.

    ಇಡೀ ಹಿಂದೂಸ್ಥಾನದೊಳಗೆ ಇಂತಹ ಅದ್ಭುತ ಕಾರ್ಯಕ್ರಮ ನೋಡಲು ಸಿಗುವುದಿಲ್ಲ. ಅಂತಹ ಅಪೂರ್ವ ಕಾರ್ಯಕ್ರಮವೇ ಈ ವಿರಾಸತ್‌ ಎಂದು ಬಣ್ಣಿಸಿದರು. ಆಳ್ವಾಸ್ ವಿರಾಸತ್‌ ಪ್ರಶಸ್ತಿ ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಕಲೆ – ಸಂಸ್ಕೃತಿಯ ಸಮ್ಮಿಲದ ಸ್ವರೂಪದಂತೆ ಅಲಂಕೃತಗೊಂಡ ವಿರಾಸತ್‌ನ ಬಯಲುರಂಗಮಂದಿರದ ಬೃಹತ್ ವೇದಿಕೆಗೆ ಪಂಡಿತ್‌ ವೆಂಕಟೇಶ್ ಕುಮಾರ್ ಅವರನ್ನು ಸಾಂಪ್ರದಾಯಿಕ ಗೌರವ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಬ್ಯಾಂಡ್‌ ಸೆಟ್‌, ಕೊಂಬು, ಕಹಳೆ, ದೀಪ ಹಿಡಿದ ಯುವತಿಯರ ಸರದಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಎಲ್ ಧರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಜಿ ನಿರ್ದೇಶಕ ಡಾ ಎಲ್ ಎಚ್ ಮಂಜುನಾಥ್‌ ಮೊದಲಾದವರಿದ್ದರು. ಇನ್ನು ಆಳ್ವಾಸ್‌ ಕ್ಯಾಂಪಸ್ ಸಂಪೂರ್ಣ ಸಂಗೀತಮಯವಾಗಿತ್ತು.

    ಪದ್ಮಶ್ರೀ ಪಂಡಿತ್‌ ವೆಂಕಟೇಶ್‌ ಕುಮಾರ್ ಬಳಗದವರು ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಗಾಯನ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಿತು. ಅಲ್ಲದೆ ಗುಜರಾತಿನ ಅತ್ಯಂತ ಪ್ರಸಿದ್ಧ ಜಾನಪದ ನೃತ್ಯ ನವರಾತ್ರಿ ಸಂದರ್ಭದಲ್ಲಿ ಕುಣಿಯುವ ಗರ್ಭಾ, ಬಣ್ಣಬಣ್ಣದ ಕೋಲು , ಕೊಡೆಗಳನ್ನು ಹಿಡಿದು ನೃತ್ಯ ಮಾಡುವ ದಾಂಡಿಯಾರಾಸ್‌, ಕೃಷ್ಣ ರಾಧೆಯರ ಕಥೆಯನ್ನು ನೆನಪಿಸುವ ಭವಾಯಿ ಸಹಿತ ವಿವಿಧ ನೃತ್ಯಗಳನ್ನೊಳಗೊಂಡ ಗುಜರಾತಿ ಜಾಣಪದ ನೃತ್ಯ ಪ್ರಕಾರಗಳು ವಿರಾಸತ್‌ನಲ್ಲಿ ಪ್ರೇಕ್ಷಕರನ್ನು ಮುದಗೊಳಿಸಿತು.

    Continue Reading

    LATEST NEWS

    57 ಗಂಟೆಗಳ ಶ್ರಮ ವ್ಯರ್ಥ: ಕೊಳವೆಬಾವಿಯಲ್ಲಿ ಸಿಲುಕಿದ್ದ 5 ವರ್ಷದ ಬಾಲಕ ಮೃ*ತ್ಯು !

    Published

    on

    ಮಂಗಳೂರು/ರಾಜಸ್ಥಾನ: ಐದು ವರ್ಷದ ಆರ್ಯನ್ ಎಂಬ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.

    ದೌಸಾ ಜಿಲ್ಲೆಯ ಕಲಿಖಂಡ್ ಎಂಬ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಾಲಕ ಆರ್ಯನ್ ಕೊಳವೆ ಬಾವಿಗೆ ಬಿದ್ದನು. ಇದನ್ನು ಅಲ್ಲೇ ಇದ್ದ ಮಹಿಳೆಯೊಬ್ಬರು ನೋಡಿ ಮನೆಮಂದಿಗೆ ಮಾಹಿತಿ ನೀಡಿದ್ದಾರೆ. ಇದಾದ ಒಂದು ಘಂಟೆಯ ನಂತರ ರಕ್ಷಣಾ ತಂಡಕ್ಕೆ ಮಾಹಿತಿ ದೊರೆಯಿತು.

    ಇದನ್ನೂ ಓದಿ: ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !

    ಸುಮಾರು 150 ಅಡಿ ಆಳದಲ್ಲಿ ಸಿಲುಕ್ಕಿದ್ದ ಆರ್ಯನ್ ರಕ್ಷಣೆ ಮಾಡಲು ಜಿಲ್ಲಾಡಳಿತ ಜೆಸಿಬಿ ಜೊತೆಗೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಕ್ಯಾಮೆರಾ ಮೂಲಕ ಬಾಲಕನ ಇರುವಿಕೆ ಪತ್ತೆಹಚ್ಚಲಾಯಿತು. ಈ ವೇಳೆ ಬಾಲಕ ಸುಮಾರು 150 ಅಡಿ ಆಳದಲ್ಲಿ ಸಿಲುಕಿರುವುದು ಗೊತ್ತಾಗಿದೆ.

    ಕೂಡಲೇ ಬಾಲಕ ಇರುವ ಜಾಗಕ್ಕೆ ಪೈಪ್ ಮೂಲಕ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಡಿಸೆಂಬರ್ 9ರಂದು ಮಧ್ಯಾಹ್ನ 3.30 ರಿಂದ 4ರವರೆಗೆ ಪ್ರಾರಂಭವಾದ ರಕ್ಷಣಾ ಕಾರ್ಯಾಚರಣೆಯು ಡಿಸೆಂಬರ್ 11 ರಂದು ತಡರಾತ್ರಿ ಕೊನೆಗೊಂಡಿತು.

    ಸುಮಾರು 57 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಆರ್ಯನ್ ನನ್ನು ರಕ್ಷಣೆ ಮಾಡಿ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಮಗುವನ್ನು ಪರಿಶೀಲಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ದೀಪಕ್ ಶರ್ಮಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ.

    Continue Reading

    DAKSHINA KANNADA

    ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ

    Published

    on

    ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.

    2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :

    ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

    Continue Reading

    LATEST NEWS

    Trending