Connect with us

    LATEST NEWS

    ಮಕ್ಕಳು ಅಪ್ಪ – ಅಮ್ಮನ ಮುಂದೆ ಸುಳ್ಳು ಹೇಳಲು ಮುಖ್ಯ ಕಾರಣಗಳೇನು ಗೊತ್ತಾ ??

    Published

    on

    ಮಕ್ಕಳು ಏನೇ ವಿಷಯಗಳಿದ್ದರೂ ಅದನ್ನು ತಂದೆ – ತಾಯಿಯ ಬಳಿ ಹೇಳಲು ಬಯಸುತ್ತಾರೆ. ಆದರೆ, ಹೀಗೆ ಹೇಳಲು ಬಂದ ಮಕ್ಕಳ ಮೇಲೆ ಕೆಲವೊಮ್ಮೆ ಪೋಷಕರು ರೇಗುವುದುಂಟು. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿಲ್ಲದೆ ಮಾಡುವ ಈ ತಪ್ಪು ಮುಂದೆ ಪೋಷಕರಿಗೇ ಸಮಸ್ಯೆಯಾಗಬಹುದು.

    ಅಮ್ಮನ ಅಡುಗೆ ರುಚಿಯ ವಿಚಾರ ಇರಬಹುದು, ಸಹೋದರ ಸಹೋದರಿಯರ ನಡುವಿನ ಜಗಳ ಇರಬಹುದು, ಶಾಲೆಯಲ್ಲಿ ನಡೆದಿರುವ ಅದ್ಯಾವುದೋ ಸಂತಸದ ಅಥವಾ ಬೇಸರದ ಸಂಗತಿ ಇರಬಹುದು, ಪೋಷಕರು ವ್ಯವಧಾನದಿಂದ ಕೇಳಿಸಿಕೊಳ್ಳಬೇಕು. ಅದರ ಬದಲಾಗಿ ಮಕ್ಕಳು ಅದೇನೋ ಹೇಳಲು ಬಂದಾಗ ಅಸಹನೆ, ಸಿಟ್ಟು ಪ್ರದರ್ಶಿಸಿದರೆ ಮಕ್ಕಳ ಮೃದು ಮನಸಿಗೆ ಘಾಸಿ ಉಂಟಾಗುವ ಅಪಾಯ ಇದೆ. ಇದು ಪೋಷಕರನ್ನು ಮೆಚ್ಚಿಸಲು ಅಥವಾ ಗಮನವನ್ನು ತಮ್ಮತ್ತ ಸೆಳೆಯಲು ಮಕ್ಕಳು ಸುಳ್ಳಿನ ದಾರಿ ಹಿಡಿಯಲು ಅವಕಾಶ ಮಾಡಿಕೊಡುವ ಅಪಾಯ ಇದೆ.
    ಇನ್ನು ಮಕ್ಕಳೇನೋ ಮಾಡಬೇಕು ಎಂಬ ತುಡಿತವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ ಗದರಿಸಿ ಸುಮ್ಮನಿರುವಂತೆ ಮಾಡುವುದು ಕೂಡ ಅವರ ಭವಿಷ್ಯವನ್ನು ಚಿವುಟಿದಂತೆ. ಇದರಿಂದ ತಮ್ಮ ಕನಸನ್ನು ಪೋಷಕರು ಕಮರಿ ಹಾಕಿದ್ರು ಎಂಬ ಅಸಮಾಧಾನ ಮಕ್ಕಳ ಮನಸಿನ ಮೂಲೆಯಲ್ಲಿ ಕೂತು ಬಿಡುತ್ತದೆ. ಇದು ಮುಂದೆ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಪೋಷಕರು ತಮಗೇನು ಮಾಡಿಲ್ಲ ಎಂಬ ಭಾವ ಮೂಡಿಸುವ ಸಾಧ್ಯತೆ ಕೂಡ ಇದೆ. ತಾನು ಮಾಡಬೇಕು ಅಂದುಕೊಂಡಿದ್ದನ್ನು ಮನೆಯಲ್ಲಿ ಸುಳ್ಳು ಹೇಳಿ ಮಾಡಲು ಆರಂಭಿಸಿ ಮುಂದೆ ಸುಳ್ಳು ಹೇಳುವುದನ್ನೇ ಮೈಗೂಡಿಸುವ ಮನಸ್ಥಿತಿಗೆ ಮಕ್ಕಳು ಬರಬಹುದು.
    ಹುಟ್ಟಿದ ಮಗುವಿನ ಲಾಲನೆ ಪಾಲನೆ ಮಾಡುವ ಪೋಷಕರು ಮಗುವಿಗೆ ನಡೆಯುವುದರಿಂದ ಹಿಡಿದು ಮಾತನಾಡುವುದು, ತಿನ್ನುವುದು ಎಲ್ಲವನ್ನೂ ಕಲಿಸುತ್ತಾರೆ. ಆದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಕೆಲವೊಂದು ಬಾರಿ ಮಕ್ಕಳು ಕೇಳುವ ಪ್ರಶ್ನೆಗಳು, ಮಾಡುವ ಹಠಗಳು, ಹಾಗೂ ಅವರ ಬೇಡಿಕೆಗಳು ಕಿರಿಕಿರಿ ಅನಿಸಿ ಬಿಡುತ್ತದೆ. ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬುವುದು ಪೋಷಕರಿಗೆ ಗೊತ್ತಿರುತ್ತದೆಯಾದ್ರೂ ಕೆಲವೊಂದು ವಿಚಾರವನ್ನು ಮಕ್ಕಳಿಗೆ ನವಿರಾಗಿ ವಿವರಿಸಿ ಅರ್ಥೈಸಬೇಕು. ಆದ್ರೆ, ಎಲ್ಲವನ್ನೂ ನವಿರಾಗಿ ನಿರಾಕರಿಸುತ್ತಾ ಹೋದರೆ ನನ್ನ ಹೆತ್ತವರು ನನಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವ ಮಕ್ಕಳಲ್ಲಿ ಮೂಡಬಹುದು. ತಮ್ಮ ಕನಸಿಗೆ ಪೋಷಕರೇ ಅಡ್ಡಿ ಎಂಬ ಸಣ್ಣದೊಂದು ಅಸಹನೆ ಇಲ್ಲಿಂದಲೇ ಆರಂಭವಾಗಬಹುದು.

    ಸಣ್ಣ ಪ್ರಾಯದಲ್ಲಿ ಮಕ್ಕಳು ದೂರು ಹೇಳುವ ಪ್ರಮುಖ ಕಾರಣಗಳು :

    ಗಮನವನ್ನು ತನ್ನತ್ತ ಸೆಳೆಯಲು:

    ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು, ಒಬ್ಬರ ಕಡೆ ಹೆಚ್ಚಿನ ಗಮನ ನೀಡುತ್ತಾರೆ ಅಂತ ಮಗುವಿನ ಮನಸಿನಲ್ಲಿ ಮೂಡಿದಾಗ ಗಮನ ತನ್ನತ್ತ ಸೆಳೆಯಲು ಸುಳ್ಳು ದೂರುಗಳನ್ನು ಹೇಳಲು ಆರಂಭಿಸುತ್ತಾರೆ. ಇದು ಶಾಲೆಯಲ್ಲೂ , ಕುಟುಂಬ ಸದಸ್ಯರ ಮುಂದೆಯೂ ನಡೆಯುವ ಮೂಲಕ ಪೋಷಕರನ್ನು ಮುಜುಗರಕ್ಕೆ ಸಿಲುಕಿಸಬಹುದು. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಮನೋಭಾವನೆಯಿಂದ ಮಕ್ಕಳು ಸಣ್ಣ ಸಣ್ಣ ವಿಚಾರಗಳಲ್ಲೂ ಜಗಳ ಆಡುವುದು, ಸುಳ್ಳು ಹೇಳುವುದು ಮಾಡಬಹುದು. ಇಂತಹ ವಿಚಾರ ಬಂದಾಗ ಮಕ್ಕಳ ಜಗಳವನ್ನು ನಾಜೂಕಾಗಿ ಪರಿಹರಿಸಬೇಕು.
    ಅಸಹನೆ , ಸಿಟ್ಟು, ಜಗಳ , ದೂರುಗಳು ಇವುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
    ಮಕ್ಕಳು ಪದೇಪದೇ ಸಿಟ್ಟಾಗುವುದು, ಅಸಹನೆಯಿಂದ ಒಂಟಿಯಾಗಿ ಕೂರುವುದು, ಸ್ನೇಹಿತರ ಜೊತೆ ಜಗಳ ಮಾಡುವುದು, ದೂರುಗಳನ್ನು ಹೇಳಿಕೊಂಡು ಬರುತ್ತಾರೆ ಅಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು ಯಾಕಾಗಿ ಹೀಗೆ ಎಂಬುವುದನ್ನು ಮೊದಲು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಿ. ಪೋಷಕರಾಗಿ ತಮ್ಮಿಂದೇನು ತಪ್ಪಾಗಿಲ್ಲ ಎಂದರೆ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ.

    LATEST NEWS

    ಮಗ ರಿಂಕುನಿಂದ ತಂದೆಗೆ ಭರ್ಜರಿ ಗಿಫ್ಟ್; ಇದರ ಬೆಲೆ ಕೇಳಿದ್ರೆ ನೀವೆ ಶಾಕ್ ಆಗ್ತೀರ

    Published

    on

    ಇಂಡಿಯಾ ಟೀಮ್‌ನ ಆಟಗಾರ ರಿಂಕು ಸಿಂಗ್ ಕಳೆದ ಕೆಲ ದಿನಗಳಿಂದ ಭಾರೀ ಸುದ್ಧಿಯಲ್ಲಿದ್ದಾರೆ.. ಒಂದೆಡೆ ಮದುವೆ, ಮತ್ತೊಂದೆಡೆ ಹೊಸ ಮನೆ ಖರೀದಿಸಿ ಗಮನ ಸೆಳೆದಿದ್ದಾರೆ. ಇದೀಗ ತಂದೆಗೆ ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಅನ್ನು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ಧಿಯಲ್ಲಿದ್ದಾರೆ.

    ರಿಂಕು ತನ್ನ ತಂದೆ ಖಂಚಂದ್ ಸಿಂಗ್ ಗೆ ಬರೋಬ್ಬರಿ 3.19 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ. ಖಂಚಂದ್ ಸಿಂಗ್ ನಿಂಜಾ ಬೈಕ್ ಅನ್ನು ಓಡಿಸುತ್ತಿರುವ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

    ಈ ಹಿಂದೆ ಸಿಲಿಂಡರ್ ವಿತರಕರಾಗಿ ರಿಂಕು ತಂದೆ ಕಾರ್ಯ ನಿರ್ವಹಿಸುತ್ತಿದ್ದರು. ಈ ಕೆಲಸದೊಂದಿಗೆ ಮಗನನ್ನು ಕ್ರಿಕೆಟಿಗನಾಗಿ ಬೆಳೆಸಿದ್ದರು. ಇದೀಗ ಸ್ಟಾರ್ ಆಟಗಾರನಾಗಿ ಬೆಳೆದಿರುವ ರಿಂಕು ಸಿಂಗ್ ತಂದೆಯ ಆಸೆಗಳೆಲ್ಲವನ್ನೂ ಪೂರೈಸುತ್ತಿದ್ದಾರೆ. ಇದಕ್ಕೂ ಮುನ್ನ ರಿಂಕು ಸಿಂಗ್ ಅಲಿಗಢದಲ್ಲಿ 3.5 ಕೋಟಿ ರೂ. ಬೆಲೆಯ ಮನೆ ಖರೀದಿ ಮಾಡಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಪ್ರಿಯಾ ಸರೋಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ರಿಂಕು ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ.

    ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಂಕು ಸಿಂಗ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 13 ಕೋಟಿ ರೂ. ರಿಟೈನ್ ಮಾಡಿಕೊಂಡಿದೆ. ಅದರಂತೆ ಕೆಕೆಆರ್ ಆಟಗಾರ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಈ ಕೋಟಿ ಮೊತ್ತವನ್ನು ವಿವಿಧೆಡೆ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಇದೀಗ ತಮ್ಮ ಬಹುಕಾಲದ ಕನಸಾಗಿರುವ ಮನೆಯನ್ನು ಖರೀದಿಸಿದ್ದಾರೆ. ಇದರ ಜೊತೆಗೆ ತಂದೆಗೂ ಬೈಕ್ ಗಿಫ್ಟ್ ಮಾಡಿದ್ದಾರೆ.

    Continue Reading

    LATEST NEWS

    ಏನಿದು ಸಿಂಹಸ್ಥ ಕುಂಭಮೇಳ? ಇದರ ವಿಶೇಷತೆ ಏನು?

    Published

    on

    ಮಂಗಳೂರು/ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಪಪ್ರಯಾಗ್‌ರಾಜ್‌ನಲ್ಲಿ ಬಹಳ ಅದ್ದೂರಿಯಾಗಿ ಮಹಾಕುಂಭ ಮೇಳ ನಡೆಯುತ್ತಿದೆ. ಮಹಾ ಕುಂಭದಂತೆ ಸಿಂಹಸ್ಥ ಕುಂಭವನ್ನು ಸಹ ಬಹಳ ಮುಖ್ಯವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದೆ. ‘ಯಾರು ಸಿಂಹಸ್ಥ ಕುಂಭದಲ್ಲಿ ಪವಿತ್ರ ಸ್ನಾನ ಮಾಡುತ್ತಾರೋ, ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ’ ಎನ್ನಲಾಗಿದೆ. ಆ ಸಿಂಹಸ್ಥ ಕುಂಭವನ್ನು ಎಲ್ಲಿ ಮತ್ತು ಯಾವಾಗ ಆಯೋಜಿಸಲಾಗುವುದು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಮಹಾ ಕುಂಭವನ್ನು ತೀರ್ಥಯಾತ್ರೆಯ ನಗರವಾದ ಪ್ರಯಾಗ್ರಾಜ್‌ನಲ್ಲಿ ಆಯೋಜಿಸಲಾಗಿದೆ, ಆದರೆ ಕುಂಭಮೇಳವನ್ನು ಹರಿದ್ವಾರ, ನಾಸಿಕ್, ಪ್ರಯಾಗರಾಜ್ ಮತ್ತು ಉಜ್ಜಯಿನಿ ಎಂಬ ನಾಲ್ಕು ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಮಹಾಕುಂಭದ ಜೊತೆಗೆ ಮುಂದಿನ ಸಿಂಹಸ್ಥ ಕುಂಭದ ಬಗ್ಗೆ ಚರ್ಚೆ ಶುರುವಾಗಿದೆ.

     

    ಇದನ್ನೂ ಓದಿ : ಮಂಗಳೂರು : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ : ಪ್ರಯಾಗ್ ರಾಜ್ ಕುಂಭಮೇಳ ಪ್ರಯಾಣ

     

    ಸಿಂಹಸ್ಥ ಕುಂಭದ ವಿಶೇಷತೆ :

    2028 ರ ವೇಳೆಗೆ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭವನ್ನು ಆಯೋಜಿಸಲಾಗುವುದು. ಭಕ್ತರು ಇದಕ್ಕಾಗಿ ಕಾಯುತ್ತಿದ್ದಾರೆ. ವಾಸ್ತವವಾಗಿ, ಸಿಂಹಸ್ಥ ಕುಂಭವನ್ನು ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ಗುರುವು ಸಿಂಹ ಮತ್ತು ಸೂರ್ಯ ಮೇಷದಲ್ಲಿ ಸಂಕ್ರಮಿಸುವಾಗ, ಸಿಂಹಸ್ಥ ಕುಂಭವನ್ನು ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಆಚರಿಸಲಾಗುತ್ತದೆ. ಸಿಂಹಸ್ಥ ಮಹಾಕುಂಭಕ್ಕೆ ತನ್ನದೇ ಆದ ಮಹತ್ವವಿದೆ. ನಾಸಿಕ್​ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಂಹಸ್ಥ ಕುಂಭ ಮೇಳ ನಡೆಯುತ್ತದೆ. ನಾಸಿಕ್ ಅಥವಾ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭ ನಡೆಯುವ ವೇಳೆ ಅಪಾರ ಸಂಖ್ಯೆಯ ಭಕ್ತರು ಪ್ರವಿತ್ರ ಸ್ನಾನಕ್ಕೆ ಬರುತ್ತಾರೆ. ಸಿಂಹಸ್ಥ ಕುಂಭದಲ್ಲಿ ಯಾರು ಭಾಗವಹಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಶಾಶ್ವತ ಫಲಗಳನ್ನು ಪಡೆಯುತ್ತಾರೆ.

    ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ :

    ಪ್ರಸ್ತುತ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭವು ಫೆಬ್ರವರಿ 26 ರವರೆಗೆ ನಡೆಯಲಿದೆ. ಮಹಾಕುಂಭದಲ್ಲಿ ಮಕರ ಸಂಕ್ರಾಂತಿ ನಂತರ, ಈಗ ಮೌನಿ ಅಮವಾಸ್ಯೆಯ ಅಮೃತ ಸ್ನಾನವನ್ನು ಜನವರಿ 29 ರಂದು ಮಾಡಲಾಗುತ್ತದೆ. ನಂತರ ಫೆಬ್ರವರಿ 3 ರಂದು ವಸಂತ ಪಂಚಮಿಯ ಅಮೃತ ಸ್ನಾನವನ್ನು ಫೆಬ್ರವರಿ 12 ರಂದು ಮಾಡಲಾಗುತ್ತದೆ. ಕೊನೆಯ ಅಮೃತ ಸ್ನಾನವನ್ನು ಮಹಾಶಿವರಾತ್ರಿಯಂದು ಫೆಬ್ರವರಿ 26 ರಂದು ನಡೆಸಲಾಗುತ್ತದೆ. ಈ ಸ್ನಾನದೊಂದಿಗೆ ಮಹಾಕುಂಭವು ಕೊನೆಗೊಳ್ಳುತ್ತದೆ.

    Continue Reading

    DAKSHINA KANNADA

    ಉಳ್ಳಾಲ : ಕೋಟೆಕಾರು ಬ್ಯಾಂಕ್ ರಾಬರಿ ಪ್ರಕರಣ; ಖದೀಮರು ಸಿಕ್ಕಿ ಬಿದ್ದಿದ್ದು ಎಲ್ಲಿ?

    Published

    on

    ಉಳ್ಳಾಲ : ಕೋಟೆಕಾರು ವ್ಯವಸಾಯ ಸಹಕಾರಿ ಸಂಘ ಕೆ.ಸಿ.ರೋಡ್ ತಲಪಾಡಿ ಶಾಖೆ ಕಚೇರಿಯಲ್ಲಿ ಶುಕ್ರವಾರ(ಜ.17) ನಡೆದ ಕೋಟ್ಯಂತರ ರೂ. ಮೌಲ್ಯದ ನಗ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಅಮ್ಮನಕೋವಿಲ್‌ನ ಮುರುಗಂಡಿ ತೇವರ್ (36), ಮುಂಬೈ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್ (35) , ಮುಂಬೈ ಚೆಂಬೂರ್‌ನ ತಿಲಕ್‌ನಗರದ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು ಎಂದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಸಹಕಾರಿ ಸಂಘದಿಂದ ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆಗೆ ಬಳಸಿದ ಕಾರು, ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ :ಆರ್‌ಜಿಕರ್ ವೈದ್ಯೆ ಅ*ತ್ಯಾಚಾರ, ಕೊ*ಲೆ ಪ್ರಕರಣ : ಆರೋಪಿ ಸಂಜಯ್ ರಾಯ್‌ಗೆ ಶಿಕ್ಷೆ ಪ್ರಕಟ

    ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯ ಇಲ್ಲ. ತನಿಖೆ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

     

    Continue Reading

    LATEST NEWS

    Trending