ಪುಣೆ: ಗಂಡ ಪ್ರೀತಿಯಿಂದ ಪತ್ನಿಗೆಂದು ತಂದುಕೊಂಡ ಪಾನಿಪುರಿಯಿಂದ ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಘಟನೆ ವಿವರ
ಪ್ರತಿಕ್ಷಾ ಸರ್ವಾಡೆ ಎಂಬಾಕೆ 2019 ರಲ್ಲಿ ಗಹಿನಿನಾಥ್ ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ವಿವಿಧ ಕಾರಣಗಳಿಗೆ ದಂಪತಿ ನಡುವೆ ಜಗಳವಾಗುತ್ತಲೇ ಇತ್ತು. ಒಂದು ದಿನ ಗಂಡ ಪತ್ನಿ ಹಾಗೂ ಮಗುವಿನ ಮೇಲಿನ ಪ್ರೀತಿಯಿಂದ ಗಹಿನಿನಾಥ್ ಕಚೇರಿಯಿಂದ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು.
ಆದರೆ ಇದು ಪತ್ನಿಗೆ ಗೊತ್ತಿರಲಿಲ್ಲ. ಪತಿಗಾಗಿ ಆಕೆ ತಿಂಡಿ ರೆಡಿ ಮಾಡಿ ಇಟ್ಟಿದ್ದಳು. ಮೊದಲೇ ಗೊತ್ತಿದ್ದರೆ ತಾನು ತಿಂಡಿ ರೆಡಿ ಮಾಡಿ ಇಡುತ್ತಿರಲಿಲ್ಲ ಎಂದು ಆಕೆಯ ಬೇಸರ.
ಇದೇ ದಂಪತಿ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಇದೇ ಸಿಟ್ಟಿನಿಂದ ಪಾನಿಪುರಿಯನ್ನು ಮುಟ್ಟದ ಆಕೆ ಮರುದಿನ ಬೆಳಗ್ಗೆ ಗಂಡ ಕಚೇರಿಗೆ ಹೋಗುವಾಗಲೂ ತಿಂಡಿ ಮಾಡಿಕೊಟ್ಟಿರಲಿಲ್ಲ.
ಇದರಿಂದ ಗಂಡ ತಿಂಡಿಯಿಲ್ಲದೇ ಮನೆಬಿಟ್ಟಿದ್ದಾರೆ. ಅವರು ಮನೆಗೆ ಬರುವಷ್ಟರಲ್ಲಿ ಪತ್ನಿ ವಿಷ ಸೇವಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ.
ಈಗ ಪ್ರತಿಕ್ಷಾಳ ಪಾಲಕರು ಅಳಿಯನ ವಿರುದ್ಧ ದೂರು ದಾಖಲು ಮಾಡಿದ್ದು, ತನಿಖೆ ನಡೆಯುತ್ತಿದೆ. ಅವರ 18 ತಿಂಗಳ ಮಗುವೀಗ ಅನಾಥವಾಗಿದೆ.