ಚಿಕ್ಕಬಳ್ಳಾಪುರ: ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆಯಾಗಿರುವ ಘಟನೆ ನಿನ್ನೆ ಚಿಕ್ಕಬಳ್ಳಾಪುರ ನಗರದ ಶೆಟ್ಟಳ್ಳಿ ಬಡಾವಣೆಯಲ್ಲಿ ನಡೆದಿದೆ.
ಅನುಷಾ (21) ಮೃತ ದುರ್ದೈವಿ.
ಮೃತ ಅನುಷಾ ಹಾಗೂ ಅಭಿಲಾಷ್ ಎಂಬಾತ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ನಡುವೆ ಮನಸ್ತಾಪ ಆಗಿದ್ದರಿಂದ ಈತನೇ ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ತಡರಾತ್ರಿ ಅನುಷಾ ಮೃತದೇಹ ಗಂಡನ ಮನೆಯಲ್ಲೇ ಪತ್ತೆಯಾಗಿದೆ. ಈಕೆಯ ಪೋಷಕರು ಅವನ ಮೇಲೆ ಆರೋಪಿಸಿ ದೂರು ದಾಖಲಿಸಿದ್ದಾರೆ.
ಸದ್ಯ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.