Tuesday, January 26, 2021

ಶಾಲೆಗೇಕೆ ತಡ ಬಸ್ಸು ಲೇಟ್-ಹೀಗೆಂದು ಉತ್ತರವಿತ್ತ  ವಿದ್ಯಾರ್ಥಿಗೇಕೆ ಪ್ರಶಂಸೆಯ ಸುರಿಮಳೆ..?

ಶಾಲೆಗೇಕೆ ತಡ ಬಸ್ಸು ಲೇಟ್-ಹೀಗೆಂದು ಉತ್ತರವಿತ್ತ  ವಿದ್ಯಾರ್ಥಿಗೇಕೆ ಪ್ರಶಂಸೆಯ ಸುರಿಮಳೆ..?

ಭುವನೇಶ್ವರ: ಶಾಲೆಗೆ, ಕಾಲೇಜಿಗೆ, ಆಫೀಸಿಗೆ ಲೇಟಾಗಿ ಹೋದರೆ ಸುಲಭವಾಗಿ ಹೇಳಲು ಸಿಗೋ ಕಾರಣ ಬಸ್ಸು ಲೇಟು ಅನ್ನೋದು. ಆದರೆ ನಿಜವಾಗಿಯೂ ಬಸ್ಸಿನ ತೊಂದರೆಯಿಂದ ಶಾಲೆಗೆ ಲೇಟಾಗಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಮಾಡಿದ ದೂರಿನಿಂದ ಬಸ್ಸಿನ ಸಮಯವೇ ಬದಲಾಗಿದ್ದು, ಪ್ರಶಂಸೆಯ ಸುರಿಮಳೆ ಕೇಳಿಬಂದಿದೆ.ಒಡಿಸ್ಸಾದ ಭುವನೇಶ್ವರದ ಎಂಬಿಎಸ್​ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪ್ರತಿದಿನ ಶಾಲೆಗೆ 7.30ಕ್ಕೆ ಹೋಗಬೇಕಿತ್ತಂತೆ. ಪ್ರತಿದಿನ ಅಲ್ಲಿನ ಸ್ಥಳೀಯ ಸಾರಿಗೆ ಬಸ್ಸಿನಲ್ಲೇ ಆತ ಶಾಲೆಗೆ ಹೋಗುತ್ತಿದ್ದ.

ಆದರೆ ಅಲ್ಲಿನ ಮೊದಲ ಬಸ್ಸಿದ್ದಿದ್ದು 7.40ಕ್ಕೆ ಇದರಿಂದಾಗಿ ಪ್ರತಿದಿನ ಶಾಲೆಗೆ ತಡವಾಗಿ ಹೋಗಬೇಕಾಗಿತ್ತಂತೆ. ಈ ವಿಚಾರವಾಗಿ ಬಾಲಕ ಟ್ವಿಟ್ಟರ್​ ಖಾತೆಯಲ್ಲಿ ಹೇಳಿಕೊಂಡಿದ್ದಾನೆ.

ಇದರ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದಾನೆ. ತನ್ನ ಟ್ವೀಟ್​ನಲ್ಲಿ ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್‌ಪೋರ್ಟ್ (ಸಿಆರ್‌ಯುಟಿ) ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರನ್ನು ಟ್ಯಾಗ್​ ಮಾಡಿದ್ದಾನೆ.

ಬಾಲಕ ಜನವರಿ 8ರಂದು ಈ ದೂರಿನ ಟ್ವೀಟ್ ಮಾಡಿದ್ದು, ಜನವರಿ 9ಕ್ಕೆ ಅರುಣ್ ಬೋತ್ರಾ ಅದಕ್ಕೆ ಸ್ಪಂದಿಸಿದ್ದಾರೆ.

ಜನವರಿ 11ರಿಂದ ಬಸ್ಸಿನ ಸಮಯ ಬದಲಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿದಿನ ಬೆಳಗ್ಗೆ 7 ಗಂಟೆಗೇ ಮೊದಲ ಬಸ್ಸು ಇರಲಿದೆ ಎಂದು ಅವರು ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಯು ಟ್ವಿಟ್ಟರ್​ನಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನಗರ ಸಾರಿಗೆಯ ಬಗ್ಗೆ ಇದೀಗ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ತಕ್ಷಣ  ಸ್ಪಂದಿಸಿ ಕ್ರಮ ಕೈಗೊಂಡ  ಅರುಣ್ ಬೋತ್ರಾ ಅವರಿಗೆ ಜನರು ಪ್ರಶಂಸಾ ಸುರಿಮಳೆಗೈದಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.