Connect with us

    LATEST NEWS

    ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ ಯಾಕೆ?

    Published

    on

    ಬೆಂಗಳೂರು: ಜನರಲ್ಲಿ ಹೃದಯಾಘಾತದ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದೆ. ನೋಡಲು ಫಿಟ್ ಆಗಿದ್ದರೂ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದೆ. ಜೊತೆಗೆ ಯುವಕರೂ ಸಹ ಇತ್ತೀಚೆಗೆ ಹೃದಯ ಕಾಯಿಲೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.

    ಆಹಾರ ಪದ್ಧತಿ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ.
    ನಾವು ಸೇವಿಸುವಂತೆಯೇ ಹೃದಯಕ್ಕೂ ಆಹಾರ ಬೇಕು. ಅಂದರೆ ನಾವು ಸೇವಿಸುವ ಆಹಾರದಲ್ಲಿನ

    ಪೌಷ್ಟಿಕಾಂಶಗಳು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಪೋಷಣೆಯನ್ನು ನೀಡುತ್ತದೆ. ಹೃದಯಕ್ಕೆ ರಕ್ತನಾಳಗಳ ಮೂಲಕ ಹರಿಯುವ ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಹೃದಯಾಘಾತ, ಎದೆನೋವು ಕಾಣಿಸಿಕೊಳ್ಳುತ್ತದೆ.

    ಇದು ದೇಹದಲ್ಲಿನ ಒತ್ತಡ, ಚಿಂತೆ, ಆಘಾತ ಜೊತೆಗೆ ದೇಹಕ್ಕೆ ತೀವ್ರವಾಗಿ ಒತ್ತಡ ಬಿದ್ದಾಗಲೂ ಸಂಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

    ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹೃದಯಾಘಾತ ಮತ್ತು ಹೃದಯ ಸ್ತಂಭನದ ಬಗ್ಗೆ ಈಗಲೂ ಗೊಂದಲ ಇದೆ.
    ಹೃದಯಾಘಾತ ಎಂದರೇನು?
    ಹೃದಯವು ನಮ್ಮ ದೇಹದ ನರಗಳಿಗೆ ರಕ್ತವನ್ನು ಕಳುಹಿಸುವ ಕೆಲಸ ಮಾಡುತ್ತದೆ. ಪರಿಧಮನಿ ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಹೆಚ್ಚಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ.

    ಅಂತಹ ಅಡಚಣೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ, ಹೃದಯ ಸ್ನಾಯುವಿನ ಭಾಗಗಳು ಸಾಯಲು ಪ್ರಾರಂಭವಾಗುತ್ತದೆ.

    ಅಂದರೆ ಹೃದಯಕ್ಕೆ ರಕ್ತ ಸಂಚಲನೆ ಆಗದೆ ಬ್ಲಾಕ್ ಆದಾಗ ಹೃದಯಾಘಾತವಾಗುತ್ತದೆ. ಹೃದಯದ ನಾಲ್ಕು ರಕ್ತನಾಳಗಳಲ್ಲಿ ಬ್ಲಾಕ್ ಆದಲ್ಲಿ ಈ ಸಮಸ್ಯೆ ಎದುರಾಗುತ್ತದೆ.
    ಹೃದಯ ಸ್ತಂಭನ ಎಂದರೇನು?
    ಹೃದಯ ಸ್ತಂಭನವು ಹೃದಯಾಘಾತಕ್ಕಿಂತ ಭಿನ್ನವಾಗಿರುತ್ತದೆ. ಹೃದಯ ಸ್ತಂಭನದಲ್ಲಿ ರಕ್ತ ಪೂರೈಕೆ ನಿಲ್ಲುತ್ತದೆ.

    ಇದರಿಂದ ಹೃದಯವು ಬಡಿಯುವುದನ್ನು ನಿಲ್ಲಿಸುತ್ತದೆ. ಅಂದರೆ ಹೃದಯ ಸ್ತಂಭನವಾದಲ್ಲಿ ರಕ್ತ ಪರಿಚಲನೆ ನಿಲ್ಲುತ್ತದೆ.

    ಇದರಿಂದ ಮೆದುಳಿಗೆ ಕೂಡ ರಕ್ತ ಪೂರೈಕೆ ಆಗುವುದೇ ನಿಂತು ಹೋಗುತ್ತದೆ. ಇಂತಹ ಸನ್ನಿವೇಶದಲ್ಲಿ ಬ್ರೇನ್​ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

    BIG BOSS

    ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಆಡಳಿತ !

    Published

    on

    ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ ಈಗ, 9ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಹೊಸ ಟಾಸ್ಕ್ ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಅದುವೇ ಬಿಗ್ ಬಾಸ್ ಸಾಮ್ರಾಜ್ಯ. ಈ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವತಾರಕ್ಕೆ, ಇನ್ನುಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ.


    ಮಹಾರಾಜನಾಗಿರುವ ಉಗ್ರಂ ಮಂಜು ಆಸ್ಥಾನದಲ್ಲಿ, ಪ್ರಜೆಗಳೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಾರ ಮಂಜು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಾಗೀ ಮಹಾರಾಜನಾಗಿ ಮೆರೆಯುವ ಅವಕಾಶ ಸಿಕ್ಕಿದೆ. ಮಂಜು ಅವರ ಸಾಮ್ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ನೀಡುತ್ತಿದ್ದಾರೆ.

    ಇದನ್ನೂ ಓದಿ: ಮಹಿಳೆಯರಿಗೆ ಮಾತ್ರ ಎಂಟ್ರಿ ; ಪುರುಷರು ಈ ಪಬ್‌ಗೆ ಬರುವಂತಿಲ್ಲ  !! 
    ಇನ್ನೂ ದೊಡ್ಮನೆಯಲ್ಲಿ ಯಾವಾಗಲೂ ಸೌಂಡ್ ಮಾಡುತ್ತಿದ್ದ ಚೈತ್ರಾ ಅವರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಮಹಾರಾಜರು ಆದೇಶಿಸಿದ್ದಾರೆ. ಮಹಾರಾಜರ ಅಪ್ಪನೆಯಂತೆ ಬಾಯಲ್ಲಿ ಆಲೂಗಡ್ಡೆ ಇಟ್ಟುಕೊಂಡಿದ್ದ ಚೈತ್ರಾ ಕೆಲಹೊತ್ತು ಸುಮ್ಮನೆ ಕೂತಿದ್ದರು. ನಂತರ ಇದನ್ನು ನಾನು ಖಂಡಿಸುತ್ತೇನೆ ಎಂದು ಸೌಂಡ್ ಮಾಡೋಕೆ ಪ್ರಾರಂಭಿಸಿದರು.
    ಒಟ್ಟಿನಲ್ಲಿ ಮಂಜು ಅವರ ಆಡಳಿತಕ್ಕೆ ಪ್ರಜೆಗಳು ಉಸಿರಾಡುವುದಕ್ಕೂ ಭಯ ಪಡುತ್ತಿದ್ದಾರೆ. ಅಷ್ಟಕ್ಕೂ ಮಂಜು ಆಡಳಿತ ಇಂದಿನ ಸಂಚಿಕೆಯಲ್ಲಿ ನೋಡಬಹುದು.

    Continue Reading

    DAKSHINA KANNADA

    ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ

    Published

    on

    ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್‌ 22 ಮತ್ತು 23  ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.

    ಪ್ರಶಸ್ತಿ ವಿವರ :

    ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್‌ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.

    ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ  ಸ್ಥಾನ ಪಡೆದಿವೆ.

    ಇದನ್ನೂ ಓದಿ: WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ

    ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.

    Continue Reading

    LATEST NEWS

    ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ

    Published

    on

    ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

    ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.

    ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ  ಇಲಾಖೆ  ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

     

    Continue Reading

    LATEST NEWS

    Trending