Connect with us

DAKSHINA KANNADA

ಟೋಲ್ ತೆರವಿಗೆ ಜನತೆ ಅಹೋರಾತ್ರಿ ಹೋರಾಟ ಮಾಡುವಾಗ ಭರತ್ ಎಲ್ಲಿದ್ರು..!? -ಖಾದರ್ ಪ್ರಶ್ನೆ..

Published

on

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತೆರವು ಆಗಿಲ್ಲ. ಕೇವಲ ಶಿಫ್ಟ್ ಆಗಿದೆಯಷ್ಟೆ. ಇದು ಮಂಗಳೂರಿನ ಜನತೆಯ ಯಶಸ್ಸು ಆಗಿದೆ. ಅಲ್ಲೇ ಮಲಗಿದವರಿಗೆ, ರಾತ್ರಿ ಹಗಲು ಊಟ ನಿದ್ದೆ ಬಿಟ್ಟು ಪ್ರತಿಭಟನೆ ಮಾಡಿದವರಿಗೆ, ಕೆಲಸ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ನಾವು ವಿಶೇಷವಾದ ಮಹತ್ವವನ್ನು ಕೊಡಬೇಕಾಗುತ್ತದೆ. ಇನ್ನು ಈ ಬಗ್ಗೆ ಸಂಸತ್ತಿನಲ್ಲಿ ಟೋಲ್ ಬಗ್ಗೆ ಮಾತನಾಡದವರು ಈಗ ಇದರ ರಾಜಕೀಯ ಲಾಭ ಪಡಿತಿದ್ದಾರೆ‌’ ಎಂದು ಶಾಸಕ ಯು.ಟಿ ಖಾದರ್ ಅವರು ವ್ಯಂಗ್ಯವಾಡಿದರು.


ಟೋಲ್‌ಗೇಟ್ ರದ್ದು ಕುರಿತು ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಕೇಂದ್ರ ಸರ್ಕಾರ ಕೇವಲ ನೋಟಿಪಿಕೇಶನ್ ನೀಡಿದೆ‌. ಯು.ಟಿ ಖಾದರ್ ಮಂತ್ರಿ ಆಗಿದ್ದಾಗ ಏನು ಮಾಡಿದ್ದಾರೆ‌‌‌ ಎಮದು ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡುತ್ತಾರೆ.

ಪಾಪ‌ ಭರತ್ ಶೆಟ್ಟಿ ಹೇಳಿಕೆಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾತನಾಡುವಾಗ ಆಲೋಚನೆ ಮಾಡಲಿ. ಇದರ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ನಾನೇ ಮಾತುಕತೆ ಮಾಡಿದ್ದೆ. ಎಂಟು ವರ್ಷ ಇವ್ರು ಏನು‌ ಮಾಡಿದ್ದಾರೆ…? ಮಂಗಳೂರಿನ ಜನತೆ ಅಹೋರಾತ್ರಿ ಹೋರಾಟ ಮಾಡುವಾಗ ಇವರು ಎಲ್ಲಿ ಇದ್ರು. ಜನ್ರ ಸಮಸ್ಯೆಗೆ ಇವ್ರು ಹೋಗಿ ಸ್ಪಂದಿಸಿದ್ರಾ? ಇವ್ರಿಗೆ ಯಾಕೆ ಸಚಿವರ ಭಯ, ಜನರ ಸಮಸ್ಯೆಗೆ ಸ್ಪಂದಿಸಲು ಭಯ..?

ಈ ಯೋಜನೆ 75 ಕೇಂದ್ರ ಸರ್ಕಾರ ಮತ್ತು ಎನ್ಎಂಪಿಟಿ ಜಂಟಿಯಲ್ಲಿ ಆಗಿದೆ. ಇದು ಬಿಓಬಿ ಯೋಜನೆ ಅಡಿ ಆಗಿಲ್ಲ. 36ಕಿಮೀ 364 ಕೋಟಿಗೆ ಕಾಮಗಾರಿ ಯೋಜನೆ ಆಗಿದೆ. 130 ಕೋಟಿ ಟೋಲ್ ಇನ್ನೂ ಕೂಡಾ ಬರಬೇಕಿದೆ ಎಂಬುದು ಟೋಲ್ ನವರ ವಾದ.

ಯಾರೋ ಒಬ್ಬನಿಗೆ ಎಷ್ಟು ಕೋಟಿಗೆ ಇವ್ರು ಟೋಲ್ ಟೆಂಡರ್ ಕೊಟ್ರು. 2013ರಲ್ಲಿ ಎಂಪಿ ಯಾರು, ಉಡುಪಿ ಎಂಪಿ ಯಾರು..? ಯಾಕೆ ಆಗ ಅವ್ರು ಧ್ವನಿ ಎತ್ತಲಿಲ್ಲ. ಯಾಕೆ ಎಂಪಿ ಎಂಎಲ್‌ಎ ಡೆಲ್ಲಿಗೆ ಹೋಗಿ ಕೂತಿಲ್ಲ. ನಮ್ಮದು ಊರು ಕುಟ್ಟುವ ಜನ್ರನ್ನು ಕಟ್ಟುವ ಕೆಲಸ.

ಅವ್ರದ್ದು ಜನ್ರನ್ನು ಮನಸ್ಸನ್ನು ಹೊಡೆಯುವ ಕೆಲಸ. ಅವ್ರು ಅವ್ರ ಕೆಲಸ ಮಾಡ್ತಾ ಹೋಗ್ತಾರೆ ನಾವು ಕಟ್ಟುತ್ತಾ ಹೋಗುತ್ತೇವೆ‌’ ಎಂದು ವಾಗ್ದಾಳಿ ನಡೆಸಿದರು.

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಚುನಾವಣಾ ಆಯೋಗಕ್ಕೆ ದೂರು

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

DAKSHINA KANNADA

ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ

Published

on

ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.

Continue Reading

LATEST NEWS

Trending