Connect with us

    BANTWAL

    ಪಶ್ಚಿಮ ವಲಯ ಐಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ವರ್ಗಾವಣೆ..!

    Published

    on

    ಮಂಗಳೂರು: ಪಶ್ಚಿಮ ವಲಯ ಐಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ವರ್ಗಾವಣೆಯಾಗಿದ್ದಾರೆ. ಮಾನವ ಹಕ್ಕು ವಿಭಾಗದ ಐಜಿಪಿಯಾಗಿ ಖಾಲಿ ಇದ್ದ ಹುದ್ದೆಗೆ ದೇವಜ್ಯೋತಿ ರೇ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಇದೇ ಸಂದರ್ಭ ಪಶ್ಚಿಮ ವಲಯ ಐಜಿಪಿಯಾಗಿ ಡಾ. ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದೆ. ಚಂದ್ರಗುಪ್ತರು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ರಾಜ್ಯ ಸರ್ಕಾರ ಸೋಮವಾರ ಸಂಜೆ ರಾಜ್ಯದ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ದೇವಜ್ಯೋತಿ ರೇ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಾಗಿದ್ದರು.

    ಪೊಲೀಸ್ ಇಲಾಖೆಯಲ್ಲಿ ತನಗೆ ಲಭಿಸಿದ ಹುದ್ದೆ ಅದೊಂದು ವರದಾನ ಎಂಬಂತೆ ಭಾವಿಸಿಕೊಂಡು ಆ ಮೂಲಕ ಜನಸೇವೆ ಮಾಡುವ ಕಾರ್ಯದಲ್ಲಿ ತೃಪ್ತಿ ಕಂಡ ಕೆಲವೇ ಮಂದಿ ಪ್ರಾಮಾಣಿಕ ಪೋಲಿಸ್ ಉನ್ನತಾಧಿಕಾರಿಗಳಲ್ಲಿ ದೇವಜ್ಯೋತಿ ರೇ ಒಬ್ಬರಾಗಿದ್ದಾರೆ.

    BANTWAL

    ಬಂಟ್ವಾಳ: ಅಣೇಜ ತಿರುವಿನಲ್ಲಿ ಸಿಲುಕಿಕೊಂಡ ಕಂಟೈನರ್ ಲಾರಿ

    Published

    on

    ಬಂಟ್ವಾಳ: ಬೆಂಗಳೂರು ಭಾಗದಿಂದ ಆಗಮಿಸುವ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿಯಿಂದ ಸರಪಾಡಿ ಮಣಿಹಳ್ಳ ರಸ್ತೆಯಲ್ಲಿ ಆಗಮಿಸಿ, ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ನಡೆದಿದೆ.

    ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ,ಉಪ್ಪಿನಂಗಡಿಯಲ್ಲಿ ಮಂಗಳೂರು ತೆರಳಲು ಚಾಲಕ ಗೂಗಲ್ ಮ್ಯಾಪ್ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ,ಮಂಗಳೂರಿಗೆ ತೆರಳಲು ಸೂಚಿಸಿದೆ.

    ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮ್ಯಾಪ್ ಈ ರಸ್ತೆಯನ್ನು ಸೂಚಿಸುತ್ತಿದೆ.ಆದರೆ ಈ ರಸ್ತೆಯು ಘನವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ. ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದು ಕೊಳ್ಳುವುದಿಲ್ಲ.ಎರಡು ಮೂರು ಬಾರಿ ಹಿಂದೆ ಮುಂದೆ ಚಲಿಸಿ ತಿರುಗಿಸಬೇಕಿದೆ.ಪ್ರಸ್ತುತ ಈ ಲಾರಿಯು ಮುಂದೆ ಹೋಗಿದ್ದು,ಆದರೆ ಹಿಂದೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸರಪಾಡಿ ಬಿ.ಸಿ ರೋಡು ಸಂಚರಿಸುವ ಬಸ್ ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದ್ದು, ಈಗಾಗಿ ಸರಪಾಡಿ ಮಣಿನಾಲ್ಕೂರು ಗ್ರಾಮದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು.

    Continue Reading

    BANTWAL

    ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.

    Published

    on

    ವಿಟ್ಲ:  ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳಾದ ಸಂಜನಾ ರಜಪೂತ ಹಾಗೂ ಪಿ ಕೆ ವಿಕಾಸ್ ಯೋಗ ಮಾರ್ಗದರ್ಶಕರಾಗಿ ಆಗಮಿಸಿ, ಹಲವಾರು ಯೋಗದ ಆಸನಗಳನ್ನು ಪ್ರದರ್ಶಿಸಿ ಅದರ ಮಹತ್ವವನ್ನು ತಿಳಿಸಿದರು.

    ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ,ಶಾಲಾ ಪ್ರಾಂಶುಪಾಲರಾದ ರವೀಂದ್ರ ದರ್ಬೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹ ಶಿಕ್ಷಕಿಯರಾದ ಶೋಭಾ ಎಂ ಶೆಟ್ಟಿ ಹಾಗೂ ಜಯಶೀಲ ಕಾರ್ಯಕ್ರಮ ನಿರ್ವಹಿಸಿದರು.

    Continue Reading

    BANTWAL

    ಬಂಟ್ವಾಳ: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂ*ಗಿಕ ಕಿರು*ಕುಳ; ಆರೋಪಿ ಅರೆಸ್ಟ್

    Published

    on

    ಬಂಟ್ವಾಳ: ಹಾಸನ ಮೂಲದ ವ್ಯಕ್ತಿಯೋರ್ವನಿಂದ ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂ*ಗಿಕ ಕಿರು*ಕುಳ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಜೂನ್ 11 ರಂದು ಕಲ್ಲಡ್ಕದಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಹಾಸನ ಮೂಲದ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿನ ಸಂತ್ರಸ್ತ ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಮಹಿಳೆಯ ಸ್ವಂತ ಊರು ಹಾಸನ ತಾಲೂಕಿನ ಬೇಲೂರು ಆಗಿದ್ದು, ಕಲ್ಲಡ್ಕದ ಅಮ್ಟೂರು ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ. ಒಂದೆರೆಡು ಬಾರಿ ತಾಯಿ ಮನೆಗೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಹೋಗಿರುವಾಗ ಸಂತ್ರಸ್ತ ಮಹಿಳೆಗೆ ಈತ ಪರಿಚಯಸ್ಥನಾಗಿದ್ದು, ಮೊಬೈಲ್ ನಂಬರ್‌ ಅನ್ನು ಆತ ಪಡೆದುಕೊಂಡಿದ್ದ ಎನ್ನಲಾಗಿದೆ.

    ಮೊಬೈಲ್ ಮೂಲಕ ಈತನ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಗಂಡನ ಮನೆ ಕಲ್ಲಡ್ಕಕ್ಕೆ ಬಂದಿದ್ದ. ಮನೆಗೆ ಬಂದ ಈತ ಮಹಿಳೆಗೆ ಕಿರು*ಕುಳ ನೀಡಿದ್ದಲ್ಲದೇ, ಮನೆಯೊಳಗೆ ಇದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದ. ಈ ವೇಳೆ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.

    ಇದೀಗ ಮತ್ತೆ ಹಾಸನದಿಂದ ಬಂಟ್ವಾಳಕ್ಕೆ ಬಂದಿಳಿದ ಆರೋಪಿ ಪ್ರಮೋದ್ ಮತ್ತೆ ಗಂಡನಿಲ್ಲದ ಸಮಯ ನೋಡಿಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಈ ವೇಳೆ ಮಹಿಳೆಗೆ ಲೈಂ*ಗಿಕ ಕಿರು*ಕುಳ ನೀಡಲು ಪ್ರಯತ್ನಿಸಿದ್ದಾನೆ.

    ಮಹಿಳೆ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯ ಸಮೀಪದ ದೇವಾಲದೊಳಗೆ ಇದ್ದ ಗಂಡ ಬಂದು ರಕ್ಷಣೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭ ಮಹಿಳೆಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಗಂಡ ಮಗುವಿನ ಜೊತೆ ಸೇರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಇದೀಗ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    Continue Reading

    LATEST NEWS

    Trending