Connect with us

DAKSHINA KANNADA

ಮುಲ್ಕಿಗೆ ಬಂತು ಯುಕೆ ರಾಣಿ ಸಾಕುತ್ತಿದ್ದ ವೆಲ್ಶ್‌ ಕೊರ್ಗಿ ತಳಿ ಶ್ವಾನ-1.5 ಲಕ್ಷ ಕೊಟ್ಟು ಖರೀದಿಸಿದ ಮಾಲಕರು

Published

on

ಮುಲ್ಕಿ: ಕೆಲವರಿಗೆ ದುಬಾರಿ ನಾಯಿಯನ್ನು ಸಾಕಿ ತಮ್ಮ ಪ್ರತಿಷ್ಠೆ ತೋರುವ ಆಸೆ. ಇನ್ನು ಕೆಲವರಿಗೆ ಯಾರಲ್ಲೂ ಇಲ್ಲದ ಅಪರೂಪದ ನಾಯಿಗಳನ್ನು ಸಾಕುವ ಆಸೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಗೆ ಇದೀಗ ಯುನೈಟೆಡ್ ಕಿಂಗ್ ಡಮ್ ಬ್ರಿಟನ್ ನ ರಾಣಿಯವರ ಅರಮನೆಯ 1.5 ಲಕ್ಷ ದುಬಾರಿಯ ಸಾಕುನಾಯಿ ವೆಲ್ಶ್ ಕೊರ್ಗಿ ಯ ತಳಿ ಆಗಮಿಸಿದೆ.


ಈ ನಾಯಿ ಮರಿ ಜನ್ಮ ನೀಡಿ ಸುಮಾರು 45 ದಿನ ಕಳೆದಿದ್ದು , ವೆಲ್ಶ್ ಕೊರ್ಗಿಯನ್ನು ಹೊರ ದೇಶದಿಂದ ಆಮದು ಮಾಡಿ ದೆಹಲಿ ಮುಖಾಂತರ ವಿಮಾನದಲ್ಲಿ ಸ್ಥಳೀಯ ರೋಯಲ್ ಪೆಟ್ ಶಾಪ್ ಮೂಲಕ ತರಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 1.5 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ವೆಲ್ಶ್ ಕೊರ್ಗಿಯ ಗಂಡು ಮತ್ತು ಹೆಣ್ಣು ಮರಿಯನ್ನು ಅನಿತಾ ಸೋನ್ಸ್ ರವರಿಗೆ ರೋಯಲ್ ಪೆಟ್ ಶೋಪ್ ನ ಎಲ್ ರೋಯ್ ಸೋನ್ಸ್ ಹಸ್ತಾಂತರಿಸಿದ್ದಾರೆ.


ವೆಲ್ಶ್ ಕೊರ್ಗಿ ಬುದ್ದಿವಂತ ನಾಯಿಯಲ್ಲಿ 11ನೇ ಸ್ಥಾನ ಪಡೆದಿದ್ದು ಎರಡನೇ ರಾಣಿ ಎಲಿಜಬೆತ್ ರವರು ರಾಯಲ್ ಕೊರ್ಗಿಯನ್ನು ಕಳೆದ 70 ವರ್ಷಗಳಿಂದ ಸುಮಾರು 30ಕ್ಕೂ ಮಿಕ್ಕಿ ನಾಯಿಯನ್ನು ಸಾಕಿದ್ದಾರೆ. ವೆಲ್ಶ್ ಕೊರ್ಗಿ ಜಾನುವಾರು ಸಾಕಾಣೆ ಮಾಡಲು ಬಹಳ ಉಪಕಾರಿಯಾಗಿದ್ದು ಬ್ರಿಟನ್ ದೇಶದಲ್ಲಿ ಕೊರ್ಗಿಯ ಬೇಡಿಕೆ ಬಹಳವಿದ್ದರೂ ಅವುಗಳ ಸಂತತಿ ಕಡಿಮೆ ಆಗುತ್ತಿದೆ.

ನ್ಯೂಯಾರ್ಕ್, ಬೋಸ್ತನ್ ,ಲಾಸ್ ಎಂಜಲೀಸ್.ಸ್ಯಾನ್ ಫ್ರಾನ್ಸಿಸ್ ಕೋದಲ್ಲಿ ನೂರಾರು ನಾಯಿಗಳನ್ನು ಒಟ್ಟಾಗಿ ಸೇರಿಸಿ ಒಂದು ದಿನ ಸ್ನೇಹ ಸಮ್ಮೇಳನವನ್ನು ನಡೆಸುವ ಪದ್ದತಿಯಿದೆ.

ಅಮೆರಿಕನ್ ಕೆನ್ ಕ್ಲಬ್ ನಿಂದ 2020ಕ್ಕೆ ಬಹಳ ಬುದ್ದಿವಂತ ಎಂಬ ಬಿರುದನ್ನು ವೆಲ್ಶ್ ಕೊರ್ಗಿ ಪಡೆದಿದೆ.

DAKSHINA KANNADA

ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

Published

on

ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.

ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

Continue Reading

DAKSHINA KANNADA

Mangaluru: ಶಿಬರೂರು ಕೊಡಮಣಿತ್ತಾಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ

Published

on

ಮಂಗಳೂರು: ಕಟೀಲು ಮತ್ತು ಶಿಬರೂರು ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ, ಇಂತಹ ಶಿಬರೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.

ಅವರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇಲ್ಲಿನ ಮೇಲಿನ ಸಾನದ ಚಾವಡಿ, ಸುತ್ತುಪೌಳಿಯ ಪುನರ್ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಜಾಂಲ ಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಕಳೆದ 12 ವರ್ಷದ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿಯೂ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಇದೀಗ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಭಕ್ತರು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದರು.

ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ಕಟೀಲು ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್, ಧರ್ಮಧರ್ಶಿ ಹರಿಕೃಷ್ಣ ಪುನರೂರು, ಕೊಡೆತ್ತೂರು ವೇದವ್ಯಾಸ ಉಡುಪ, ಗುತ್ತಿನಾರ್ ಲಕ್ಷೀನಾರಾಯಣ ರಾವ್ ಕೈಯೂರುಗುತ್ತು ಉದ್ಯಮಿ ರಘನಾಥ ಸೋಮಯಾಜಿ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಎಸ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಶಿಬರೂರುಗುತ್ತು ರಾಮಚಂದ್ರ ಶೆಟ್ಟಿ, ರಾಧಕೃಷ್ಣ ಶೆಟ್ಟಿ ಸೂರತ್, ಅಶೋಕ್ ಶೆಟ್ಟಿ ಬಜಾಲ್ ಬೀಡು, ಶಿಬರೂರುಗುತ್ತು ಕಿಶೋರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ,  ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ , ಉಮೇಶ್ ಗುತ್ತಿನಾರ್ ಶಿಬರೂರು ಗುತ್ತು, ಸುಧಾಕರ ಶೇಣವ ದೇಂದೊಟ್ಟು ಗುತ್ತು, ಪಡುಮನೆ ಶಿವಾನಂದ ಶೆಟ್ಟಿ, ತುಕಾಮ ಶೆಟ್ಟಿ‌ಪರ್ಲಬೈಲ್, ಜಿತೇಂದ್ರ ಶೆಟ್ಟಿ ಕೊರ್ಯಾರಗುತ್ತು, ಸದಾಶಿವ ಶೆಟ್ಟಿ ಅಶ್ವತ್ತಡಿ ಉದ್ಯಮಿ ಕಿರಣ್ ಶೆಟ್ಟಿ, ಎಸ್ ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ವಿನಯಕುಮಾರ್ ಸೂರಿಂಜೆ, ಶಿಬರೂರು ಲಕ್ಷೀಜನಾರ್ಥನ ಮಠದ ಅರ್ಚಕ ಲಕ್ಷೀನಾರಾಯಣ ಆಚಾರ್ಯ, ಕ್ಷೇತ್ರದ ಅರ್ಚಕ ಕುಟ್ಟಿ‌ಮೂಲ್ಯ, ಶಂಭು ಮುಕಾಲ್ದಿ ಅತ್ತೂರು, ಜಯರಾಮ‌ ಮುಕಾಲ್ದಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ದೊಡ್ಡಯ್ಯ ಮೂಲ್ಯ ಕಟೀಲು, ಯಾದವ ಕೋಟ್ಯಾನ್ ಪೆರ್ಮುದೆ, ಶ್ಯಾಮಲಾ ಪಿ ಶೆಟ್ಟಿ ಶಿಬರೂರುಗುತ್ತು, ಉಷಾ ಯು ಶೆಟ್ಟಿ ಶಿಬರೂರುಗುತ್ತು, ಉದ್ಯಮಿ ನಿತ್ಯಾನಂದ ಶೆಟ್ಟಿ, ವಕೀಲರಾದ ರವಿ ಕೋಟ್ಯಾನ್, ಸಿ.ಎ ಉದಯಕುಮಾರ್ , ಸುರೇಶ್ ಶೆಟ್ಟಿ ಅಡು, ದೇವದಾಸ್ ಅಳ್ವ ಬೆಳ್ಳಿಬೆಟ್ಟುಗುತ್ತು, ಮುರ ಸದಾಶಿವ ಶೆಟ್ಟಿ, ಕಾಂತಪ್ಪ ಸಾಲಿಯಾನ್, ದಾಮೋಧರ ಶೆಟ್ಟಿ ಶಿಬರೂರುಗುತ್ತು, ಚರಣ್ ಶೆಟ್ಟಿ ಅತ್ತೂರು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಮಾಲಾಡಿ ಅಜಿತ್ ಕುಮಾರ್ ರೈ, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ ತಿಬಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್ ಶಿಬರೂರು , ಸುಮನ್ ಶೆಟ್ಟಿ, ಸುಧಾಕರ ಶೆಟ್ಟಿ ಶಿಬರೂರುಗುತ್ತು, ಸುಧಾಕರ ಶಿಬರೂರು, ಸುರೇಶ್ ಶೆಟ್ಟಿ ಪುಚ್ಚಾಡಿ ಸುಬ್ರಮಣ್ಯ‌ಪ್ರಸಾದ್ ಪ್ರಸ್ತಾವನೆಗೈದರು.

ಮಧುಕರ ಅಮೀನ್ ಸ್ವಾಗತಿಸಿ, ಸುರೇಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಸಾಯಿನಾಥ ಶೆಟ್ಟಿ, ಅನಂತ ರಾಮ ಆಚಾರ್ಯ ಮೂಡುಮನೆ ನಿರೂಪಿಸಿದರು.

Continue Reading

DAKSHINA KANNADA

Ullala: ಬಾವಿಗೆ ಹಾರಿ ಟೆಂಪೋ ಚಾಲಕ ಜೀವಾಂತ್ಯ..!

Published

on

ಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ಸೆ.27ರಂದು  ನಡೆದಿದೆ.

ತೊಕ್ಕೊಟ್ಟು, ಕೃಷ್ಣ ನಗರ ಲಚ್ಚಿಲ್ ನಿವಾಸಿ 62 ವರ್ಷದ ನಾಗೇಶ್  (62) ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ನಾಗೇಶ್ ಅವರು ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು.

ಟೆಂಪೋವನ್ನು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು.

ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಟೆಂಪೋ ಸೀಟ್ ನಲ್ಲಿ ನಾಗೇಶ್ ಅವರ ಮೊಬೈಲ್, ನಗದು, ಫೋಟೊ, ಚಪ್ಪಲಿ ದೊರಕಿದ್ದು, ಅನುಮಾನಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಯಲ್ಲಿ ನಾಗೇಶ್ ಅವರ ದೇಹವಿರುವುದು ಖಾತ್ರಿ ಪಡಿಸಿ ಮೃತ ದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿತ್ತು.

ಮರಣೋತ್ತರ ಪರೀಕ್ಷೆಯ ಬಳಿಕ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.

ನಾಗೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಅವರು ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Continue Reading

LATEST NEWS

Trending