Connect with us

    LATEST NEWS

    WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    Published

    on

    ಉತ್ತರಾಖಂಡ : ಚಾರ್ ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿ ಹಿಮಪಾತ ಸಂಭವಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.


    ಭಾನುವಾರ(ಜೂ.30) ಬೆಳಗ್ಗೆ ಗಾಂಧಿ ಸರೋವರ ಬೆಟ್ಟಗಳಿಂದ ಭಾರೀ ಮಳೆ ಸುರಿದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಕೇದಾರನಾಥದ ಗಾಂಧಿ ಸರೋವರದಲ್ಲಿ ಹಿಮಕುಸಿತ ಸಂಭವಿಸಿದೆ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಶಾಖ ಅಶೋಕ್ ಮಾಹಿತಿ ನೀಡಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

    ಇದನ್ನೂ ಓದಿ : ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!

    ವೀಡಿಯೋದಲ್ಲಿ ಏನಿದೆ?

    ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿರುವ ಪರ್ವತದ ಮೇಲೆ ಹಠಾತ್ ಹಿಮಕುಸಿತವಾಗಿದೆ. ಈ ದೃಶ್ಯವನ್ನು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಿಮಪಾತದಲ್ಲಿ ಬಿದ್ದ ಹಿಮವು ಹೆಚ್ಚಿನ ವೇಗದಲ್ಲಿ ಧಾವಿಸಿ ದೇವಸ್ಥಾನದ ಹಿಂದೆ ಇರುವ ಗಾಂಧಿ ಸರೋವರಕ್ಕೆ ಬಿದ್ದಿದೆ. ಈ ದೃಶ್ಯ ನೋಡುತ್ತಿದ್ದರೆ ಮೈಜುಮ್ಮೆನಿಸುತ್ತದೆ.

    ಈ ಅವಘಡದಿಂದಾಗಿ ಯಾವುದೇ ಪ್ರಾ*ಣ ಅಥವಾ ಆಸ್ತಿ ಹಾ*ನಿಯಾಗಿಲ್ಲ. ದೇವಾಲಯ ಸಂಪೂರ್ಣ ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.

    DAKSHINA KANNADA

    ಅಕ್ಷರ ದಾಸೋಹದ ಅನ್ನ ಚರಂಡಿಗೆ ಎಸೆದು ಬೇಜವಾಬ್ದಾರಿ..! ಎಸ್‌ಡಿಎಂಸಿ, ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

    Published

    on

    ಉಪ್ಪಿನಂಗಡಿ: ಅಕ್ಷರ ದಾಸೋಹದ ಅನ್ನವನ್ನು ಚರಂಡಿಗೆ ಎಸೆದು ಬೇಜವಾಬ್ದಾರಿ ಪ್ರದರ್ಶಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಶಿಕ್ಷಣ ಶಾಲೆಯ ಶಿಕ್ಷಕರ ಮತ್ತು ಎಸ್‌.ಡಿ.ಎಂ.ಸಿ. ಸದಸ್ಯರ ವಿರುದ್ಧ ಪೋಷಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಾಲೆಯಲ್ಲಿ  ಪ್ರತಿನಿತ್ಯ ಅನ್ನವನ್ನು ರಸ್ತೆ ಬದಿಯ ಚರಂಡಿಗೆ ಎಸೆಯುತ್ತಿರುವುದು ಬೆಳಕಿಗೆ ಬಂದಿದ್ದು, ಸರಕಾರ ಮಕ್ಕಳಿಗೆ ನೀಡುವ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಊಟದ ಯೋಜನೆಗೆ ಎಳ್ಳುನೀರು ಬಿಡಲಾಗುತ್ತಿದೆ ಎಂದು ಊರಿನ ಜನರು ಆರೋಪಿಸುತ್ತಿದ್ದಾರೆ.

    ಕಂದಮ್ಮನನ್ನು ತಬ್ಬಲಿ ಮಾಡಿ ನೇ*ಣಿಗೆ ಶರಣಾದ ತಾಯಿ..! ಕಾರಣ ಇನ್ನೂ ನಿಗೂಢ

    ಅನ್ನವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಚರಂಡಿ ಬ್ಲಾಕ್ ಆಗಿ ಗಬ್ಬು ನಾರುತ್ತಿದೆ. ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಶಾಲೆಯ ಮಕ್ಕಳಿಗೆ ಮತ್ತು ಸುತ್ತಮುತ್ತಲ ಜನರಿಗೆ  ರೋಗ ಹರಡುವ ಭೀತಿ ಎದುರಾಗಿದೆ.  ಈ ಶಾಲೆಯಲ್ಲಿ ಸಿದ್ಧಪಡಿಸಿದ ಊಟವನ್ನು ಮಕ್ಕಳು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಶಾಲೆಯ ಊಟ ಸೇವನೆಯಿಂದ ಹೊಟ್ಟೆ ನೋವು ಆಗುತ್ತದೆ ಎಂಬ ಕಾರಣ ನೀಡಿ ಹಲವಾರು ಮಂದಿ ವಿದ್ಯಾರ್ಥಿಗಳು ಊಟವನ್ನು ನಿರಾಕರಿಸುತ್ತಿದ್ದಾರೆ. ಮತ್ತು ಅಂತಹ ಮಕ್ಕಳು ಮನೆಯಿಂದಲೇ ಬುತ್ತಿ ಊಟ ತರುತ್ತಿರುವುದು ಬೆಳಕಿಗೆ ಬಂದಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕುಚಲಕ್ಕಿ ಉಪಯೋಗ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಬಿಳಿ ಅಕ್ಕಿ ಊಟ ನೀಡಲಾಗುತ್ತಿದ್ದು, ಇದರಿಂದ ಹಲವು ಮಕ್ಕಳ  ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ಶಾಲೆಯಲ್ಲಿ ತಯಾರಿಸುವ ಅನ್ನದ ಊಟವನ್ನು ವಿದ್ಯಾರ್ಥಿಗಳು ಸೇವಿಸುತ್ತಿಲ್ಲ ಎನ್ನಲಾಗಿದೆ. ಇವೆಲ್ಲದರ ನಡುವೆ ಅಕ್ಷರ ದಾಸೋಹದ ಅನ್ನವನ್ನು ಶಾಲೆಯ ಶಿಕ್ಷಕ ವರ್ಗ ಚರಂಡಿಗೆ ಎಸೆದು ವ್ಯರ್ಥಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಉಪ್ಪಿನಂಗಡಿ ಪಂಚಾಯತ್ ಸದಸ್ಯ ಧನಂಜಯ ಕುಮಾರ್ ಅವರು ಶಾಲಾ ಆಡಳಿತ ಮತ್ತು ಶಿಕ್ಷಕರು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

     

     

    Continue Reading

    DAKSHINA KANNADA

    ಕಂದಮ್ಮನನ್ನು ತಬ್ಬಲಿ ಮಾಡಿ ನೇ*ಣಿಗೆ ಶರಣಾದ ತಾಯಿ..! ಕಾರಣ ಇನ್ನೂ ನಿಗೂಢ

    Published

    on

    ಬೆಳ್ತಂಗಡಿ: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿ ನಡೆದಿದೆ. ಇಲ್ಲಿನ ನಿತ್ಯ ನೂತನ ಭಜನ ಮಂದಿರದ ಬಳಿಯ ನಿವಾಸಿ ರಕ್ಷಿತಾ ಜೈನ್(26 ವ) ಆತ್ಮಹ*ತ್ಯೆ ಮಾಡಿಕೊಂಡವರಾಗಿದ್ದಾರೆ. ರಕ್ಷಿತಾ ಜೈನ್‌ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಘಟನೆ ಮನೆಯಲ್ಲಿ ನಡೆದಿಲ್ಲ ಅನ್ನೋದು ಇವರ ಆತ್ಮಹ*ತ್ಯೆಯ ನಿಗೂಢತೆಗೆ ಕಾರಣವಾಗಿದೆ.

    ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ

    ಇದುವರೆಗೂ ಯಾವುದೇ ಡೆತ್ ನೋಟ್ ಕೂಡಾ ಸಿಗದ ಕಾರಣ ಆತ್ಮಹತ್ಯೆಗೆ ಕಾರಣ ಏನು ಎಂಬುವುದರ ಬಗ್ಗೆ ಮನೆಯವರು ಕೂಡಾ ಚಿಂತಿತರಾಗಿದ್ದಾರೆ. ವಿಪರ್ಯಾಸ ಅಂದ್ರೆ ರಕ್ಷಿತಾ ಜೈನ್‌ ಅವರಿಗೆ 2 ವರ್ಷದ ಮುದ್ದಾದ ಹೆಣ್ಣು ಮಗುವಿದ್ದು ಮಗು ತಾಯಿಗಾಗಿ ಅತ್ತುಕರೆಯುತ್ತಿದೆ. ರಕ್ಷಿತಾ ತಂದೆ, ತಾಯಿ ಹಾಗೂ ಪತಿ ಈ ಆತ್ಮಹತ್ಯೆಯ ಕಾರಣ ತಿಳಿಯದಂತಾಗಿದ್ದಾರೆ.

    Continue Reading

    LATEST NEWS

    ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ

    Published

    on

    ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀ*ಕರ ಕಾಲ್ತು*ಳಿತ ಸಂಭವಿಸಿದ್ದು, 27ಕ್ಕೂ ಅಧಿಕ ಮಂದಿ ಸಾವ*ನ್ನಪ್ಪಿರುವುದಾಗಿ ವರದಿಯಾಗಿದೆ.

    ಮಂಗಳವಾರ ಭೋಲೆ ಬಾಬಾ ಎಂಬವರ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತು*ಳಿತ ಉಂಟಾಗಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಗಾಯಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ 27 ಮೃ*ತದೇಹಗಳು ಇಟಾಹ್ ಜಿಲ್ಲೆಯ ಆಸ್ಪತ್ರೆಗೆ ತಲುಪಿರುವುದಾಗಿ ವರದಿಯಾಗಿದೆ.

    ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳವು ಇಟಾಹ್- ಸಿಕಂದರ ರಾವ್ ಗಡಿಯಲ್ಲಿದ್ದು, ಮೃ*ತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಒಂದು ಮಗು ಕೂಡ ಸೇರಿರುವುದಾಗಿ ವರದಿಯಾಗಿದೆ.

    ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಬಳಿಕ ಹಲವರು ಸಾವ*ನ್ನಪ್ಪಿದ್ದು, ಮಹಿಳೆಯರು ಹಾಗೂ ಮಕ್ಕಳ ಮೃ*ತದೇಹಗಳು ಅಲ್ಲಲ್ಲಿ ಬಿದ್ದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೃ*ತದೇಹಗಳನ್ನು ಟೆಂಪೋಗಳಲ್ಲಿ ಸಾಗಿಸುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿವೆ.

    Continue Reading

    LATEST NEWS

    Trending