LATEST NEWS
ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
Published
2 hours agoon
By
NEWS DESK3ಮಂಗಳೂರು/ಬೆಂಗಳೂರು: ಆರ್‌ಸಿಬಿ ಎಂದರೆ ಸಾಕು ಕನ್ನಡಿಗರಿಗೆ ಎಲ್ಲಿಲ್ಲದ ವ್ಯಾಮೋಹ. ಆದರೆ ಅಭಿಮಾನಿಗಳ ಪ್ರಿತೀಯನ್ನು ಆರ್‌ಸಿಬಿ ಬಂಡಾವಾಳವನ್ನಾಗಿ ಪರಿವರ್ತಿಸುತ್ತಿರುವುದೇ ಬೇಸರದ ಸಂಗತಿ
ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹಿಂದಿ ಪೇಜ್ ಪ್ರಾರಂಭಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿವಾದಕ್ಕೆ ಈಗ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯ ಎಲ್ಲಾ ಅಪ್ಡೇಟ್ಸ್ ಗಳನ್ನು ನಾವು ಮೀಡಿಯಾದಲ್ಲಿ ಗಮನಿಸುತ್ತಿದ್ದೇವೆ. ಆರ್‌ಸಿಬಿಯನ್ನು ನಾವು ಬಹಳ ಗೌರವಿಸುತ್ತೇವೆ. ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ನೋವು ಮಾಡಬೇಡಿ ಎಂದು ಹೇಳಲಾಗಿದೆ. ಆರ್‌ಸಿಬಿ ಅವರು ಬದಲಾವಣೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿದ್ದೇನೆ. ಇಲ್ಲವಾದರೆ ನಾವು ಕಾರ್ಯದರ್ಶಿ ಗೆ ನೋಟಿಸ್ ಜಾರಿ ಮಾಡ್ತೀವಿ.
ಇದನ್ನೂ ಓದಿ: ಭಾರತೀಯ ಕೋಸ್ಟ್ ಗಾರ್ಡ್‌ನ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ; ಆರೋಪಿ ಅರೆಸ್ಟ್
ಆರ್‌ಸಿಬಿ ಎಷ್ಟೇ ಬಾರಿ ಸೋತರೂ ನಾವು ಆ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವುದು ಕನ್ನಡಿಗರು ಹಾಗೂ ಕರ್ನಾಟಕದಲ್ಲಿ ಎಂದು ಹೇಳಿದ್ದಾರೆ.
ಆರ್‌ಸಿಬಿ ಹಿಂದಿಯಲ್ಲಿ ಮಾತ್ರವಲ್ಲದೇ ಇನ್ನೂ ಬೇರೆ ಬೇರೆ ಭಾಷೆಯಲ್ಲೂ ಪೇಜ್ ತೆಗೆಯುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.
LATEST NEWS
ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
Published
38 minutes agoon
30/11/2024By
NEWS DESK4ಮಂಗಳೂರು/ಚೆನ್ನೈ : ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸುಮಾರು ಮೂರು ದಿನಗಳ ಬಳಿಕ ಇದೀಗ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ‘ಫೆಂಗಲ್’ ಚಂಡಮಾರುತ ರೂಪುಗೊಂಡಿದೆ. ಅದು ಉತ್ತರ ತಮಿಳುನಾಡು – ಪುದುಚೇರಿ ಕರಾವಳಿಯತ್ತ ಸಾಗುತ್ತಿದ್ದು, ಇಂದು(ನ.30) ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಚಂಡಮಾರುತವು ವಾಯುವ್ಯಕ್ಕೆ 15 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ನಾಗಪಟ್ಟಣಂನ ಪೂರ್ವ-ಈಶಾನ್ಯಕ್ಕೆ 240 ಕಿ.ಮೀ, ದೂರ, ಪಾಂಡಿಚೇರಿಯ ಪೂರ್ವ-ಆಗ್ನೇಯಕ್ಕೆ 230 ಕಿ.ಮೀ. ದೂರ ಹಾಗೂ ಚೆನ್ನೈನಿಂದ ಆಗ್ನೇಯಕ್ಕೆ 250 ಕಿ.ಮೀ. ದೂರ ಕೇಂದ್ರೀಕೃತವಾಗಿದೆ.
ತೀವ್ರ ಚಂಡಮಾರುತವಾಗಿ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಹಾಗೂ ಚಂಡಮಾರುತ ನೆಲೆಯಾಗುವ ಸಮಯದಲ್ಲಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಪಾಂಡಿಚೇರಿಗೆ ಸಮೀಪದಲ್ಲಿರುವ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
7 ಜಿಲ್ಲೆಗಳಿಗೆ ರೆಡ್ ಅಲರ್ಟ್ :
ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಮತ್ತು ಪಾಂಡಿಚೇರಿ, ಚೆನ್ನೈ ಸೇರಿದಂತೆ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಇತರ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮ ಕರ್ನಾಟಕದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಪತ್ನಿಯನ್ನು ಹನಿಮುನ್‌ಗೆ ಕರೆದೊಯ್ದು ಮಾರಿದ ಪಾ*ಪಿ ಪತಿ !! ಮುಂದೇನಾಯ್ತು…..
ಕರ್ನಾಟಕ ಕರಾವಳಿಯಲ್ಲಿ ಮುಂದಿನ 3 ದಿನಗಳಿಗೆ ಎಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್ 1,2, 3 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ರಾತ್ರಿ ವೇಳೆ ಹೆಚ್ಚು ಚಳಿಯ ಅನುಭವವಾಗಿದ್ದು, ಮುಂದಿನ ಒಂದು ವಾರಕ್ಕೂ ಅಧಿಕ ಕಾಲ ಚಳಿಯ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
LATEST NEWS
ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ
Published
1 hour agoon
30/11/2024By
NEWS DESK4ಉಡುಪಿ : ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಮನೆಯ ಎದುರಿನ ಗುಡ್ಡದಲ್ಲಿ ಶ*ವವಾಗಿ ಪತ್ತೆಯಾಗಿರುವ ಘಟನೆ ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ ನಡೆದಿದೆ. ಅವರ ಮೃತದೇಹ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾ*ಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಮೃ*ತಪಟ್ಟವರು. ಅವರು ಗುರುವಾರ(ನ.28) ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಶುಕ್ರವಾರ(ನ.29) ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶ*ವ ಪತ್ತೆಯಾಗಿದೆ. ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾ*ಯಗಳಾಗಿವೆ ಎಂದು ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ : ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
ಈ ಭಾಗದಲ್ಲಿ ಚಿರತೆ ಹಾ*ವಳಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿರತೆ ದಾ*ಳಿಯಿಂದ ಮೃ*ತಪಟ್ಟಿದ್ದಾರೆಯೋ ಅಥವಾ ಇನ್ಯಾವುದೋ ಕಾರಣದಿಂದ ಮೃ*ತಪಟ್ಟಿದ್ದಾರೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಟಪಾಡಿ: ಪತ್ನಿ ಮೃ*ತಪಟ್ಟ ಒಂದು ದಿನದಲ್ಲೇ ಪತಿ ಕೂಡ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನ.28ರಂದು ನಿ*ಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿ*ಧನ ಹೊಂದಿದರು.
ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪಾಲನ ಮಂಡಳಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ, ವಾರ್ಡ್‌ನ ಗುರಿಕಾರರಾಗಿದ್ದ ಮೃತರು ಉದ್ಯಾವರ ಬೋಳಾರಗುಡ್ಡೆ ಕಲಾಯಿಬೈಲ್ ನಿವಾಸಿ. ಉದ್ಯಾವರ ಮಂಡಲ ಪಂಚಾಯತ್ ಸದಸ್ಯರಾಗಿ, ಒಂದು ಅವಧಿಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾಗಿ ಸುದೀರ್ಘ ಸುಮಾರು ಮೂರು ದಶಕಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಉದ್ಯಾವರ ಕೆಥೋಲಿಕ್ ಸಭಾ, ಲಯನ್ಸ್ ಕ್ಲಬ್, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
LATEST NEWS
ಕಟಪಾಡಿ: ಪತ್ನಿ ನಿ*ಧನದ ಬೆನ್ನಲ್ಲೇ ಆಘಾತದಿಂದ ಪತಿ ಸಾ*ವು
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಡ್ರೈವರ್ ಎಡವಟ್ಟು: 12 ಮಂದಿಯ ದುರಂತ ಅಂತ್ಯ
ಓವರ್ಟೇಕ್ ಮಾಡಲು ಹೋಗಿ ಬೈಕ್ಗೆ ಕಾರು ಡಿ*ಕ್ಕಿ; ಇಬ್ಬರ ದುರ್ಮ*ರಣ
ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಮಂಗಳೂರು: ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ; ಆರೋಪಿಯ ಬಂಧನ
Trending
- BIG BOSS7 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL2 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru7 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru3 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
Pingback: ಚಿಕನ್ ಲೆಗ್ ಪೀಸ್ ಪ್ರಿಯರು ಇದನ್ನು ಓದಲೇ ಬೇಕು ! - NAMMAKUDLA NEWS - ನಮ್ಮಕುಡ್ಲ ನ್ಯೂಸ್