Connect with us

    DAKSHINA KANNADA

    ಅಕ್ರಮ ಮರಳುಗಾರಿಕೆ ತಡೆ; ಕೇಸು ಹಾಕುವಂತೆ ಗ್ರಾಮಸ್ಥರಿಂದ ಒತ್ತಾಯ

    Published

    on

    ಕಡಬ: ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿರುವ ಘಟನೆ ಕಡಬ ತಾಲೂಕಿನಲ್ಲಿ ನಡೆದಿದೆ.

    ಇದೀಗ ಬೋಟ್ ಕಟ್ಟಿ ಹಾಕಿದವರ ವಿರುದ್ದ ಕೇಸು ದಾಖಲಿಸುವ ಬಗ್ಗೆ ಬಂದ ಸುದ್ದಿಯ ಹಿನ್ನೆಲೆ ಶುಕ್ರವಾರ (ನ.29) ಸಂಜೆ ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ಕಡಬ ಠಾಣೆಗೆ  ಆಗಮಿಸಿದ್ದಾರೆ.

    ಚಾರ್ವಾಕ ಕುಂಬ್ಲಾಡಿ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರು ಊರವರು ಸೇರಿ ಚಾರ್ವಾಕ ಗ್ರಾಮದ ಭಾಗದಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದಲ್ಲದೆ, ನಿರ್ಣಯವನ್ನೂ ಮಾಡಿದ್ದರು.ಮರಳುಗಾರಿಕೆಯಿಂದ ದೈವಸಾನಿಧ್ಯ ನಾಶ ಮತ್ತು ಪ್ರಕೃತಿ ನಾಶವಾದ ಕಾರಣ ಊರವರು ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟ ಕಾಣಿಯೂರು ಗ್ರಾಮ ಪಂಚಾಯತಿಗೂ ಮನವಿ ಸಲ್ಲಿಸಿ ಇಲಾಖೆಗಳಿಗೆಲ್ಲ ಮರಳುಗಾರಿಕೆ ನಡೆಸದಂತೆ ಪತ್ರ ಬರೆದಿದ್ದಾರೆ.

    ಎರಡು ದಿನದ ಹಿಂದೆ ಚಾರ್ವಾಕ ಭಾಗದಲ್ಲಿ ಮರಳುಗಾರಿಕೆಗೆ ಬಂದ ತಂಡಕ್ಕೆ ಊರವರು ಪ್ರತಿರೋಧ ವ್ಯಕ್ತಪಡಿಸಿದ್ದರು. ನ.29ರಂದು ಮತ್ತೆ ಬೋಟ್ ಮೂಲಕ ತಂಡ ಬಂದಾಗ ಬೋಟನ್ನು ಹಿಡಿದು ಚಾರ್ವಾಕ ಭಾಗದಲ್ಲಿ ಕಟ್ಟಿ ಹಾಕಲಾಗಿತ್ತು. ಬೋಟ್ ನಲ್ಲಿದ್ದ ಮರಳು ಕಾರ್ಮಿಕರು ಈಜಿ ಆಚೆ ಬದಿಗೆ ಪರಾರಿಯಾಗಿದ್ದರು. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಡಬದ ತಹಶೀಲ್ದಾರ್ ಆಗಲಿ, ಕಂದಾಯ ನಿರೀಕ್ಷಕರೀಗಲೀ,ಕಡಬದ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ .

    DAKSHINA KANNADA

    ವ್ಯಾಟ್ಸಾಪ್‌ನಲ್ಲಿ ಬಂದ apk ಫೈಲ್‌; ಡೌನ್‌ಲೋಡ್ ಮಾಡುತ್ತಿದ್ದಂತೆ ಅಕೌಂಟ್ ಹ್ಯಾಕ್‌

    Published

    on

    ಮಂಗಳೂರು : ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ವಂಚಿಸಿ ಹಣ ಲೂಟಿ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಮೊಬೈಲ್‌ಗೆ ಬರುವ ಯಾವುದೇ ಅಪರಿಚಿತ ಕರೆ, ಮೆಸೇಜ್ ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ.

    ವ್ಯಾಟ್ಸಾಪ್‌ನಲ್ಲಿ ಸರ್ಕಾರದ ವಾಹನ್ ಪರಿವಾನ್ ಹೆಸರಿನಲ್ಲಿ ಬಂದ ಮೆಸೇಜ್ ಒಂದು ಮಂಗಳೂರಿನ ವ್ಯಕ್ತಿಯೊಬ್ಬರ ಖಾತೆಯಿಂದ 1ಲಕ್ಷದ 31 ಸಾವಿರ ಕಳೆದುಕೊಳ್ಳುವಂತೆ ಮಾಡಿದೆ. ವಾಹನ್ ಪರಿವಾಹನ್.ಎಪಿಕೆ ಫೈಲ್ ಡೌನ್ ಲೋಡ್ ಮಾಡಿದ ಯದುನಂದನ್ ಎಂಬವರು ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಫೈಲ್ ಡೌಲ್ ಲೋಡ್ ಆಗುತ್ತಿದ್ದಂತೆ ಇವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿದ್ದು, ಈ ಖಾತೆಯ ಮೂಲಕ ಇವರದೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ವಂಚಕರು ಮೊಬೈಲ್ ಖರೀದಿಸಿದ್ದಾರೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸರು ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ದೆಹಲಿಯಲ್ಲಿ ಆರೋಪಿ ಇರುವುದನ್ನು ಪತ್ತೆ ಮಾಡಿ 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗೌರವ್ ಮುಕ್ವಾನ್ ಎಂಬಾತನ್ನು ವಶಕ್ಕೆ ಪಡೆದು ಆತನಿಂದ 5 ಐ ಫೋನ್15, 2 ಅಂಡ್ರಾಯ್ಡ್ ಫೋನ್, 2 ಏರ್ ಪ್ಯಾಡ್‌ ಸೇರಿದಂತೆ ಒಟ್ಟು 4 ಲಕ್ಷದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

    Continue Reading

    DAKSHINA KANNADA

    ಮಾದಕ ವಸ್ತು ಸಾಗಾಟ; ನೈಜೀರಿಯಾ ಪ್ರಜೆ ಸಹಿತ ಇಬ್ಬರು ಆರೋಪಿಗಳ ಬಂಧನ

    Published

    on

    ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸಹಿತ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು 200 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

    ನೈಜೀರಿಯಾದ ಚಿಕ ಜೋಸೆಫ್ ಇಝಿ (26) ಮತ್ತು ಮೂಲತಃ ಬೆಂಗಳೂರಿನ ಪ್ರಸಕ್ತ ಮೈಸೂರಿನ ದರ್ಶನ್ ಕೆ.ಜಿ (25) ಬಂಧಿತ ಆರೋಪಿಗಳು.  ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ನೀಡಿದ್ದ. ಅದರಂತೆ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಮಂಗಳೂರಿಗೆ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಈ ಇಬ್ಬರು ಆರೋಪಿಗಳನ್ನು ಬಂಧಿಸಿದರು.

    ಆರೋಪಿಗಳಿಂದ 10,00,000 ರೂ.ಮೌಲ್ಯದ 200 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಕಾರು, 5 ಮೊಬೈಲ್ ಫೋನ್‌ಗಳು, ವಿವಿಧ ಬ್ಯಾಂಕ್‌ಗಳ 5 ಡೆಬಿಟ್ ಕಾರ್ಡ್‌ಗಳು, 7 ಸಿಮ್ ಕಾರ್ಡ್‌ಗಳು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 18,25,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.  ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಬಜ್ಪೆಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.  ಆರೋಪಿ ಚಿಕ ಜೋಸೆಫ್ ಇಝಿ ಎಂಬಾತನು 2023ರ ಮೇ ತಿಂಗಳಲ್ಲಿ ಭಾರತಕ್ಕೆ ಉದ್ಯೋಗ ವೀಸಾದಲ್ಲಿ ಬಂದಿದ್ದನು.

    ಬೆಂಗಳೂರಿನ ಯಲಹಂಕದಲ್ಲಿ ನೈಜೀರಿಯಾ ಪ್ರಜೆಯ ಹೇರ್ ಕಟ್ಟಿಂಗ್ ಉದ್ಯೋಗ ಮಾಡುತ್ತಿದ್ದು, ಈ ಸಮಯ ಈತನ ವಿರುದ್ಧ  ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಮಾರು 4 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

    Continue Reading

    DAKSHINA KANNADA

    ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾ ಷಷ್ಠಿಯ ಸಂಭ್ರಮ ರಥಯಾತ್ರೆ

    Published

    on

    ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಆರಂಭವಾಗಿದ್ದ ಉತ್ಸವಗಳು ನಿನ್ನೆ ರಾತ್ರಿ ಪಂಚಮಿ ರಥೋತ್ಸವ ಹಾಗೂ ಇಂದು ಮುಂಜಾನೆ ನಡೆದ ಬ್ರಹ್ಮ ರಥೋತ್ಸವದೊಂದಿಗೆ ಚಂಪಾ ಷಷ್ಠಿ ಸಂಪನ್ನಗೊಂಡಿದೆ.

    6.57 ರ ವೃಶ್ಚಿಕ ಲಗ್ನದಲ್ಲಿ ಚಂಪಾ ಷಷ್ಟಿ ಮಹೋತ್ಸವ ನಡೆಯಿತು. ಚಂಪಾ ಷಷ್ಠಿಯ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಹಲವು ಉತ್ಸವಾದಿಗಳು ನಡೆದಿದ್ದು, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಅಸಾಂಖ್ಯಾತ ಸಂಖ್ಯೆಯಲ್ಲಿ ಹರಿದು ಬಂದಿದ್ದಾರೆ. ಚರ್ಮ ರೋಗ ನಿವಾರಕ ಕ್ಷೇತ್ರವಾಗಿ ಜ್ಯೋತಿಷ್ಯ ಪರಿಹಾರ ಕ್ಷೇತ್ರವಾಗಿ ಜನರ ಸಂಕಷ್ಟ ಪರಿಹಾರ ಕೇಂದ್ರವಾಗಿರುವ ಕುಕ್ಕೆ ಕ್ಷೇತ್ರದಲ್ಲಿ ಷಷ್ಠಿಯ ಸಂದರ್ಭದಲ್ಲಿ ನಡೆಯುವ ಎಡೆ ಮಡೆಸ್ನಾನದಲ್ಲಿ ಹಲವಾರು ಭಕ್ತರು ಭಾಗವಹಿಸಿ ತಮ್ಮ ಹರಿಕೆ ತೀರಿಸಿಕೊಂಡಿದ್ದಾರೆ.

    ಚಂಪಾ ಷಷ್ಠಿಯ ಇಂದು ಎಡೆ ಮಡೆಸ್ನಾನ ವಿಶೇಷವಾಗಿದ್ದು, ಸಾಕಷ್ಟು ಭಕ್ತರು ದೇವಾಲಯದ ಅಂಗಣದಲ್ಲಿ ಈ ಸೇವೆ ನಡೆಸಲಿದ್ದಾರೆ. ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆ ನಡೆದ ಉತ್ಸವಾದಿಗಳು ಹೇಗಿತ್ತು ಎಂಬ ಜಲಕ್ ಇಲ್ಲಿದೆ.

    Continue Reading

    LATEST NEWS

    Trending