International news
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋ*ಟ; ಹಲವು ಮನೆಗಳು ಭ*ಸ್ಮ, 9 ಮಂದಿ ಸಾ*ವು
ಇಂಡೋನೇಷ್ಯಾ : ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರವಾಗಿದೆ. ಪರಿಣಾಮ ಹಲವು ಮನೆಗಳು ಭಸ್ಮವಾಗಿವೆ. ಕನಿಷ್ಠ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ಕಳೆದ ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದೆ. ಗುರುವಾರದಿಂದ(ಅ.31) ಜ್ವಾಲಾಮುಖಿಯು ಪ್ರತಿದಿನ 2,000 ಮೀ(6,500 ಅಡಿ) ಎತ್ತರದ ವರೆಗೆ ದಟ್ಟವಾದ ಕಂದು ಬಣ್ಣದದ ಬೂದಿಯನ್ನು ಉಗುಳುತ್ತಿದೆ. ಹೀಗಾಗಿ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ಅಪಾಯದ ವಲಯವನ್ನು ವಿಸ್ತರಿಸಲಾಗಿದೆ.
ದೇಶದ ಜ್ವಾಲಾಮುಖಿ ಏಜೆನ್ಸಿಯು ಜ್ವಾಲಾಮುಖಿ ಅಲರ್ಟ್ ಘೋಷಿಸಿದೆ. ಮಧ್ಯರಾತ್ರಿಯ ನಂತರ ಆಗಾಗ್ಗೆ ಸ್ಫೋಟಗಳು ಸಂಭವಿಸುತ್ತಿದ್ದು, ಅಪಾಯದ ವಲಯವನ್ನು 7 ಕಿ.ಮೀ.ಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ : ಕ್ಯಾಂಡಲ್ ಲೈಟ್ ಡಿನ್ನರ್‌ನಲ್ಲಿ ಹೀಗೆಲ್ಲಾ ಮಾಡ್ತಾರಂತೆ..!
ಭಾನುವಾರ ಮಧ್ಯರಾತ್ರಿ ನಂತರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ ದಟ್ಟವಾದ ಕಂದು ಬಣ್ಣದ ಬೂದಿಯನ್ನು ಉಗುಳಿದೆ. ಈ ಬಿಸಿ ಬೂದಿಯು ಹತ್ತಿರದ ಹಳ್ಳಿಗೆ ಅಪ್ಪಳಿಸಿದೆ. ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವಾರು ಮನೆಗಳು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.
DAKSHINA KANNADA
ಮಸ್ಕತ್ ನಲ್ಲಿ ತುಳುನಾಡನ್ನು ಮರುಸೃಷ್ಠಿಸಿದ ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘ
ಮಂಗಳೂರು/ಮಸ್ಕತ್ : ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರೀಡೋತ್ಸವ ಶುಕ್ರವಾರ(ಅ.25) ಮಸ್ಕತ್ ನ ಬರ್ಕ ಗುತ್ತಿನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ, ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿಸಲಾಗಿತ್ತು.
ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆ ಯಲ್ಲಿ “ಬರ್ಕ ಗುತ್ತು ಮನೆ “, ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.
ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಬಾವಿ, ಸಿರಿ ತುಪ್ಪೆ – ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ ಬಾರ ಕಲದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳನ್ನು ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು.
ಕೊಡೆತ್ತೂರಿನಿಂದ ತರಿಸಿದ್ದ ಭತ್ತದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತುಳಸಿ ಕಟ್ಟೆಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ, ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.
ಬೆಳಗ್ಗಿನ ಉಪಹಾರಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ. ಮತ್ತು ಗೂಡoಗಡಿಗಳಲ್ಲಿ ನಿರಂತರವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ, ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು. ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆಯ ವ್ಯವಸ್ಥೆ ಇತ್ತು. ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ಬಾಳೆಎಲೆಯಲ್ಲಿ ಬಡಿಸಲಾಯಿತು.
ಮಸ್ಕತ್ ನ ಬರ್ಕಗುತ್ತು ಕಂಬಳ :
ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ, ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.
ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವಗಳನ್ನು ಪ್ರದರ್ಶನ ಮಾಡುವಾಗ ಸಾಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.
- ಕಾಪು ಮಲ್ಲಾರ್ ಸಹೋದರರ ಮಾಲಕತ್ವದ, ಕಿನ್ನಿಗೋಳಿ ಮುಕ್ಕಮನೆಯ ಚೆನ್ನೆ ಮತ್ತು ಪಾಂಡು ಕೋಣಗಳು.
- ಗೋಬ್ರ ಗುತ್ತು ಸುರೇಂದ್ರ ಶೆಟ್ಟಿ ಮತ್ತು ರುವಿ ಗುತ್ತು ಜಯರಾಜ್ ಶೆಟ್ಟಿ ಯವರ ಚಾಂಪಿಯನ್ ದೋಣಿ ಮತ್ತು ರಾಕೆಟ್ ಬೊಲ್ಲೇ ಕೋಣಗಳು.
- ಸೋಹರ್ ಗುತ್ತಿನವರ ಬರ್ಗಿ ಮತ್ತು ಲಕ್ಕಿ ಕೋಣಗಳು.
- ಮಸ್ಕತ್ ಗುತ್ತು ಕಿಶನ್ ಶೆಟ್ಟಿ ಕಿನ್ನಿಗೋಳಿಯವರ ಕಾಲೆ ಮತ್ತು ದೂಜೆ ಕೋಣಗಳು
- ಅಭಿಮನ್ಯು ಗೆಳೆಯರ ಬಳಗ ಮಸ್ಕತ್ ರವರ ಕರಿಯೆ ಮತ್ತು ತಾಟೆ ಕೋಣಗಳು
ಒಟ್ಟು ಐದು ಜೊತೆ ಕೋಣಗಳು ಭಾಗವಹಿಸಿದ್ದವು. ಗದ್ದೆ ಹುಣಿಯಲ್ಲಿ ಐಸಿರದ ಜೋಕುಲು (ಚಿಯರ್ ಗರ್ಲ್ಸ್ ) ಹುಲ್ಲು ಸೂಡಿ ಹಿಡಿದು ನಲಿದು ಹುರಿದುಂಬಿಸಿದರು.
ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೋತ್ಸವ :
ಬಂಗಾರದ ನರ್ತೆ ಹೆಕ್ಕುವ ನಿಧಿ ಶೋಧ, ಹಗ್ಗ ಜಗ್ಗಾಟ, ಕೈಚೆಂಡು, ಮೊಸರು ಕುಡಿಕೆ ಗೋಪುರ ರಚನೆ, ಬೊಂಡ ಗುಂಡು ಎಸೆತ, ಕೆಸರು ಗದ್ದೆ ಓಟ, ಮಕ್ಕಳಾಟದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡು ಸಂಭ್ರಮಿಸಿದರು. ಬಾಳ್ ಕಟ್ಟದೆ, ಜೂಜು ಇಲ್ಲದ ಕೋಳಿ ಅಂಕದಲ್ಲಿ ಹತ್ತಾರು ಕಟ್ಟದ ಹುಂಜಗಳ ಕೋಳಿ ಕಾಳಗ ನಡೆಸಲಾಯಿತು.
ಕೆಸರು ಗದ್ದೆಯಲ್ಲಿ ಜಾನಪದ ಕುಣಿತ, ಗುತ್ತಿನ ಅಂಗಳದಲ್ಲಿ ಕಂಗಿಲು ಕುಣಿತ, ನೃತ್ಯ ಭಜನೆ ನಡೆಯಿತು. ಗೂಡು ದೀಪ ಸ್ಪರ್ಧೆ ಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಗಳು ಇದ್ದವು. ರಂಗೋಲಿ, ಮಡಲು ಹೆಣೆಯುವ, ಭತ್ತ ಕುಟ್ಟುವ ಸ್ಪರ್ಧೆಗಳು ನಡೆದವು.
ಇದನ್ನೂ ಓದಿ : ಪುಡಿ ರಾಜಕಾರಣಿ ಎಂದಿದ್ದ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಪೇಜಾವರ ಶ್ರೀ
ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿ, ನಿರಂತರ 16 ಗಂಟೆಗಳ ಕಾಲ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸರೋಜ ಶಶಿಧರ ಶೆಟ್ಟಿ ಮಲ್ಲಾರ್, ಸುಧೀರಾ ದಿವಾಕರ್ ಶೆಟ್ಟಿ ಮಲ್ಲಾರ್, ಶೈನಾ ಗಣೇಶ್ ಶೆಟ್ಟಿ, ವಾಣಿಶ್ರೀ ನಾಗೇಶ್ ಶೆಟ್ಟಿ,ಶ್ರೇಯ ಮನೋಜ್ ಜಯರಾಮ್ ಶೆಟ್ಟಿ, ಅನುಷಾ ಶಿಶಿರ್ ರೈ, ಸುರಕ್ಷಾ ಹರ್ಷಿತ್ ರೈ ದಂಪತಿ ತಂಡವು ಸಾವಿರಾರು ಬಂಟರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಈ ಚಾರಿತ್ರಿಕ ಸಮ್ಮೇಳನ ನಡೆಯಿತು.
International news
‘ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024′ ಪ್ರಶಸ್ತಿ ; ಇತಿಹಾಸ ಸೃಷ್ಟಿಸಿದ ಭಾರತದ `ರಾಚೆಲ್ ಗುಪ್ತಾ’
ಮಂಗಳೂರು/ಬ್ಯಾಂಕಾಕ್ : ಭಾರತದ 20 ವರ್ಷದ ರಾಚೆಲ್ ಗುಪ್ತಾ ‘ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ 2024’ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ಬ್ರಾವೋ ಬಿಕೆಕೆ ಮಾಲ್‌ನ ಎಂಜಿಐ ಹಾಲ್‌ನಲ್ಲಿ ನಡೆದ ಫಿನಾಲೆಯಲ್ಲಿ ರಾಚೆಲ್ 69 ಸ್ಪರ್ಧಿಗಳ ನಡುವೆ ಭಾರತಕ್ಕೆ ಹೆಮ್ಮೆ ತಂದರು.
ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ರಲ್ಲಿ ಭಾಗವಹಿಸಿದ 69 ಸ್ಪರ್ಧಿಗಳಲ್ಲಿ ರಾಚೆಲ್ ಗುಪ್ತಾ ಒಬ್ಬರು. ರಾಚೆಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಫಿಲಿಪ್ಪೀನ್ಸ್‌ನ ನೆಚ್ಚಿನ ಸಿಜೆ ಒಪಿಯಾಜಾ ಅವರನ್ನು ಸೋಲಿಸಿ ಕಿರೀಟವನ್ನು ಗೆದ್ದರು. ಕಳೆದ ವರ್ಷದ ವಿಜೇತ ಪೆರುವಿನ ಲೂಸಿಯಾನಾ ಫಸ್ಟರ್ ಅವರು ರಾಚೆಲ್ ಗುಪ್ತಾ ಅವರನ್ನು ಸೋಲಿಸಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ವಿಜೇತ ಕಿರೀಟವನ್ನು ಪಡೆದರು, ಆದರೆ ಫಿಲಿಪಿನೋ ಮಾಡೆಲ್ ಕ್ರಿಸ್ಟಿನ್ ಜೂಲಿಯಾನ್ ಒಪಿಯಾಜಾ ಮೊದಲ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರು.
International news
ಹೋಟೆಲ್ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಸಾವು; ಘಟನೆಗೂ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ಯಾಕೆ?
ಮಂಗಳೂರು/ಅರ್ಜೆಂಟೀನಾ : ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಬ್ರಿಟನ್ನ ಖ್ಯಾತ ಪಾಪ್ ಗಾಯಕ ಲಿಯಾಮ್ ಪಾಯ್ನ್ ಮೃ*ತಪಟ್ಟಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್ನಲ್ಲಿ ತಾನು ತಂಗಿದ್ದ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾ*ವನ್ನಪ್ಪಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು, ಮಾತ್ರವಲ್ಲದೇ ಅವರ ಸಾ*ವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪೊಲೀಸರ ಹೇಳಿಕೆ ಏನು?
ಬೋನಸ್ ಐರಿಸ್ ಪೊಲೀಸರು ಗಾಯಕನ ಸಾ*ವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಲಿಯಾಮ್, ನಗರದ ಕಾಸಾ ಸರ್ ಹೋಟೆಲ್ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾ*ವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೋನಸ್ ಐರಿಸ್ ಭದ್ರತಾ ಮುಖ್ಯಸ್ಥ ಮಾಹಿತಿ ನೀಡಿ, ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಸ್ವಭಾವ ಹೊಂದಿದ್ದ. ಜೊತೆಗೆ ಮಾ*ದಕ ದ್ರವ್ಯ ವ್ಯಸನಿಯಾಗಿದ್ದ, ಮಾ*ದಕ ವಸ್ತು ಸೇವಿಸಿಯೇ ಆತ ಈ ಕೃ*ತ್ಯ ಎಸಗಿದ್ದಾನೆ ಎಂದಿದ್ದಾರೆ.
ಹೋಟೆಲ್ ನವರು ಪೊಲೀಸರಿಗೆ ಕರೆ ಮಾಡಿದ್ಯಾಕೆ?
ಲಿಯಾಮ್ ನಿ*ಧನ ಹೊಂದುವುದಕ್ಕೂ ಕೆಲ ಸಮಯ ಮುಂಚೆ ಕಾಸಾ ಸರ್ ಹೋಟೆಲ್ನ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ‘ನಮ್ಮ ಹೋಟೆಲ್ ನಲ್ಲಿರುವ ವ್ಯಕ್ತಿ ಬಹಳ ಗಲಾಟೆ ಮಾಡುತ್ತಿದ್ದಾನೆ, ಹೋಟೆಲ್ನ ವಸ್ತುಗಳನ್ನು ಹಾಳು ಮಾಡುತ್ತಿದ್ದಾನೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ನೀವು ಈಗಲೇ ಇಲ್ಲಿಗೆ ಬನ್ನಿ’ ಎಂದು ಮಾತನಾಡಿದ್ದಾರೆ. ಈ ಕರೆ ದಾಖಲಾಗಿದೆ. ಕೆಲವರ ಆರೋಪದ ಪ್ರಕಾರ, ಪೊಲೀಸರು ಬಂದು ಬೆದರಿಸಿದ್ದರಿಂದಲೇ ಲಿಯಾಮ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎನ್ನಲಾಗುತ್ತಿದೆ.
ಮ*ದ್ಯ ವ್ಯಸನಿಯಾಗಿದ್ದ ಲಿಯಾಮ್ :
ಲಿಯಾಮ್ ತಾನು ಮ*ದ್ಯ ವ್ಯಸನದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. 2023 ರಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದ ಲಿಯಾಮ್, ಮ*ದ್ಯ ವ್ಯಸನದಿಂದ ಸಮಸ್ಯೆ ಅನುಭವಿಸುತ್ತಿದ್ದೆ. ಚಿಕಿತ್ಸೆ ಬಳಿಕ ಕಳೆದ ಆರು ತಿಂಗಳಿನಿಂದಲೂ ನಾನು ಮ*ದ್ಯ ಸೇವಿಸಿಲ್ಲ ಎಂದಿದ್ದರು. ಆದರೆ ಈಗ ಹಠಾತ್ತನೆ ಮ*ದ್ಯ ಹಾಗೂ ಮಾ*ದಕ ವಸ್ತು ಸೇವಿಸಿ ಲಿಯಾಮ್ ನಿಧ*ನ ಹೊಂದಿದ್ದಾರೆ ಎಂಬ ವರದಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ : ತಿಂಗಳಲ್ಲೇ ಬಯಲಾಯ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಕೊಟ್ಟಿದ್ದ ಸೀರೆಯ ಸತ್ಯ!
ಲಿಯಾಮ್, ಬ್ರಿಟನ್ನ ಖ್ಯಾತ ಪಾಪ್ ಗಾಯಕರಲ್ಲಿ ಒಬ್ಬರು. ಬ್ರಿಟನ್ನ ಖ್ಯಾತ ಸಂಗೀತ ಬ್ಯಾಂಡ್ ಒನ್ ಡೈರೆಕ್ಷನ್ನ ಸದಸ್ಯರಾಗಿದ್ದರು. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಮಾಜಿ ಸಂಗಾತಿ ಶೆರಿಲ್ ಅವರಿಂದ 7 ವರ್ಷದ ಮಗನಿದ್ದಾನೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!