Connect with us

DAKSHINA KANNADA

ಬೀದಿ ಪಾಲಾದ ಮಂಗಳಮುಖಿಯರು: ಸಹಾಯ ಹಸ್ತ ಚಾಚಿದ ಸಮಾಜ ಸೇವಕ ವಿಶು ಶೆಟ್ಟಿ..!

Published

on

ಉಡುಪಿ:ದೇಶವನ್ನೇ ತಲ್ಲಣಗೊಳಿಸಿದ ರೂಪಾಂತರಿ ಕೊರೊನಾ ಸಮಾಜದ ಎಲ್ಲಾ ವರ್ಗವನ್ನು ಕಾಡಲಾರಂಭಿಸಿದೆ. ಸಾರ್ವಜನಿಕ ಜೀವನದಿಂದ, ಹೊರಗುಳಿದಿರುವ ತೃತೀಯ ಲಿಂಗಿಗಳ ಬದುಕು ತೀರ ದುಸ್ತರವಾಗಿದೆ.ಮಂಗಳ ಮುಖಿಯರನ್ನು ಈ ಸಮಾಜ  ನೋಡುವ  ನೋಡುವ ದೃಷ್ಠಿನೇ ಬೇರೆ. ಇವರು ಸಾರ್ವಜನಿಕವಾಗಿ ಓಡಾಡುವಾಗ ವಾಸ್ತವದ ಮಾತಿಗಿಂತ ಅಪಹಾಸ್ಯದ ನುಡಿಗಳೇ ಹೆಚ್ಚಾಗಿ ಕೇಳುವ ಪರಿಸ್ಥಿತಿ.

ಅತ್ತ ಹೆಣ್ಣೂ ಅಲ್ಲದ ಇತ್ತ ಗಂಡೂ ಅಲ್ಲದ ಇವರ ಬದುಕು ಶೋಚನಿಯ.ಅಂತಹ ಎಡರು- ತೋಡರುಗಳ ನಡುವೆ ಈ  ಸಮಾಜದಲ್ಲಿ ಅವರದಲ್ಲದ ತಪ್ಪಿಗೆ ಬದುಕು ನಡಸಬೇಕಾದ ಅನಿವಾರ್ಯ ಪರಿಸ್ಥಿತಿ.

ಇವರಲ್ಲಿ  ಕೆಲವರು ಉತ್ತಮ ಉದ್ಯೋಗ ಮಾಡಿಕೊಂಡು ಜೀವನ ನಡೆಸಿದೆ,್ರ ಇನ್ನು ಕೆಲವು ಮಂಗಳ ಮುಖಿಯರು ಭಿಕ್ಷೆ  ಬೇಡಿ ಜೀವನ ನಡೆಸುತ್ತಿದ್ದಾರೆ.

ಸಮಾಜದಲ್ಲಿ ಸ್ವಾಭಿಮಾನದ ಬದುಕು ನಡೆಸುವ ಕೆಲವು ಮಂಗಳ ಮುಖಿಯರ  ಜೀವನಕ್ಕೆ ಕೊರೊನಾ ಎನ್ನುವ ಮಹಾಮಾರಿ  ಲಾಕ್ ಡೌನ್ ಮೂಲಕ ಕೊಳ್ಳಿ ಇಟ್ಟು ಬಿಟ್ಟಿದೆ.

ಇವರ ಈ ಸಂಕಷ್ಟ ಮನಗಂಡ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ  ಮಂಗಳ ಮುಖಿಯರಿಗೆ ಸಹಾಯ ಹಸ್ತ ಚಾಚಿದ್ದಾರೆ…

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಮಂಗಳ ಮುಖಿ ಲಾವಣ್ಯ   ಕಳೆದ ಲಾಕ್ ಡೌನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಕಿಟ್ಟ್ ನೀಡಿ ಸಹಕರಿಸಿದ್ದವು.  ಬಹಳಷ್ಟು ಸಹಾಯಧನಗಳು ಬಂದವು. ಅದೆಷ್ಟೋ ಜನ ಊಟ ನೀಡಿ ಮಾನವೀಯತೆ ಮೆರೆದರು.ಅಂಥ ಜನರ ಮಧ್ಯೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಇಂದಿಗೂ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಹಸ್ತ ನೀಡುತ್ತ ಬಂದಿದ್ದಾರೆ.

ತೃತೀಯ ಲಿಂಗಿಗಳ ಪರಿಸ್ಥಿತಿ ಕಂಡು ವಿಶು ಶೆಟ್ಟಿ ಅಹಾರ ಧಾನ್ಯಗಳ ಕಿಟ್ಟ್ ನೀಡಿ ಆಸರೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಅಧಿಕ ಸಂಖ್ಯೆಯ ತೃತೀಯ ಲಿಂಗಿಗಳಿದ್ದಾರೆ.

ಅವರಲ್ಲಿ ಅನೇಕರು ಬೇರೆ ಪ್ರದೇಶದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಕೊರೊನಾ ಕಾರಣದಿಂದ ಸರಕಾರ ಕೆಲವು ಅನುದಾನಗಳನ್ನು ಘೋಷಣೆ ಮಾಡಿತ್ತು.

ಜಿಲ್ಲಾಡಳಿತ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಈ ಎಲ್ಲ ವ್ಯವಸ್ಥೆಗಳು  ಕೆಲವೇ ದಿನಗಳಿಗೆ ಸೀಮಿತವಾಗಿ ತೃತೀಯ ಲಿಂಗಿಗಳಿಗೆ ಯಾವುದೇ ಆಸರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು…

ಈ ಕುರಿತು ಸಮಾಜ ಸೇವಕ ವಿಶು ಶೆಟ್ಟಿ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಕಳೆದ ಬಾರಿ ಪ್ರತಿ ವರ್ಗದ ಜನ ಅದೆಷ್ಟೋ ಕಷ್ಟ ಪಟ್ಟು ದಿನಕಳೆದರು.ಇದೀಗ ಎರಡನೇ ಬಾರಿ ಕೊರೊನಾ ವಕ್ಕರಿಸಿ ಮರ್ಮಾಘಾತ ನೀಡಿದೆ. ಜನ ನಾಳೆಯ ದಿನಗಳ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದ ತೃತೀಯ ಲಿಂಗಿಗಳು ದಿಕ್ಕು ತೋಚದೆ ಕಂಗಾಲಾಗಿದ್ದು, ಜಿಲ್ಲಾಡಳಿತ ಹಾಗು ಸರಕಾರದ ವತಿಯಿಂದ ಅವರಿಗೆ ಭದ್ರತೆ ದೊರೆಯಲಿ ಎಂಬುದೇ ನಮ್ಮ ಆಶಯ ಎಂದರು.

Click to comment

Leave a Reply

Your email address will not be published. Required fields are marked *

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರಿನ ಮೊದಲ ಬಸ್ ಇದೇ ನೋಡಿ…!

Published

on

ಹಿಂದಿನ ಕಾಲದಲ್ಲಿ ಮಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಬೇಕಿದ್ದರೆ ಒಂದಾ ಎತ್ತಿನಗಾಡಿ ಇಲ್ಲದಿದ್ದರೆ ಕುದುರೆಗಾಡಿಯಲ್ಲಿ ಹೋಗಬೇಕಿತ್ತು. ಇದೂ ಎರಡೂ ಇಲ್ಲದಿದ್ದರೆ ನಡೆದುಕೊಂಡೇ ಹೋಗಬೇಕಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಮೊದಲ ಬಸ್ಸಿನ ಪರಿಚಯ ಆಗ್ತದೆ. ಅದು ಯಾವಾ ಬಸ್. ಎಲ್ಲೆಲ್ಲ ತಿರ್ಗಾಡುತ್ತಾ ಇತ್ತು. ನೋಡೋಣ ಬನ್ನಿ.

1914ರಲ್ಲಿ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿ (ಸಿಪಿಸಿ) ಇವರು ಮೊದಲ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭ ಮಾಡ್ತಾರೆ. 1914 ಮಾರ್ಚ್‌ 23 ತಾರೀಕಿನಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಹೊರಡ್ತದೆ. ಪ್ರತಿದಿನ ಕೂಡ 2 ಟ್ರಿಪ್ ಇರ್ತಾ ಇತ್ತು. ಒಂದು ಸಲಕ್ಕೆ 22 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಸಾಮಾರ್ಥ್ಯ ಈ ಬಸ್ಸಿಗೆ ಇತ್ತಂತೆ.

ವಿಶೇಷವೆಂದರೆ ಈ ಬಸ್ ಅನ್ನು ಜರ್ಮನ್‌ನಿಂದ ಮಂಗಳೂರಿಗೆ ಶಿಪ್‌ನಲ್ಲಿ ತಂದದ್ದು. ಆ ಕಾಲದಲ್ಲಿ ಅದಕ್ಕೆ 2500 ರೂಪಾಯಿ ಮಾತ್ರ ಖರ್ಚಾಗಿತ್ತು. ತದನಂತರ 1916ರಲ್ಲಿ ಹಿಂದೂ ಟ್ರಾಸಿಸ್ಟ್ ಎನ್ನುವ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. 1917ರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭವಾಯಿತು. ಇದಾದ ಮೇಲೆ ಒಂದೊಂದೆ ಬಸ್ಸಿನ ಸಂಖ್ಯೆ ಎಚ್ಚಾಗುತ್ತಾ ಬಂತು.

ದುರ್ಗಾಪರಮೇಶ್ವರಿ ಮೋಟಾರ್ ಸರ್ವೀಸ್, ಶಂಕರ್ ವಿಠಲ್, ಮಂಜುನಾಥ್ ಟ್ರಾನ್ಸ್‌ಪೋರ್ಟ್‌, ಶೆಟ್ಟಿ ಮೋಟಾರ್ಸ್, ಹನುಮಾನ್ ಟ್ರಾನ್ಸ್‌ಪೋರ್ಟ್‌, ಬಲ್ಲಾಳ್ ಮೋಟಾರ್ಸ್ ಹೀಗೆ ಹಲವು ಬಗೆಯ ಖಾಸಗಿ ಸಂಸ್ಥೆಗಳು ಶುರುವಾಯಿತು. ಆ ಸಮಯದಲ್ಲಿ ಮಂಗಳೂರಿನಿಂದ ಉಡುಪಿಗೆ ಬಸ್ಸ್‌ನಲ್ಲಿ ಹೋಗಬೇಕಿದ್ದರೆ ಸಾಧಾರಣ 5 ಗಂಟೆ ಬೇಕಿತ್ತು.

ಇವತ್ತಿನ ನಮ್ಮ ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಎನ್ನುವಂತದ್ದು ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದ್ರೆ ಅದರ ಹಿಂದೆ ಇಷ್ಟೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳು ಇವೆ.

Continue Reading

DAKSHINA KANNADA

ನೀರು ಕುಡಿಯುವ ನೆಪದಲ್ಲಿ ದರೋಡೆಗೆ ಯತ್ನ..!!

Published

on

ಪಡುಬಿದ್ರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಕೂಲಿ ಕಾರ್ಮಿಕರೊಬ್ಬ ಮನೆಗೆ ಬಂದು ಮನೆಯೊಡತಿಯ ಮಾಂಗಲ್ಯ ದೋಚಲು ಮುಂದಾಗಿರುವ ಘಟನೆ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಎಲ್ಲರೂ ಗ್ರಾಮದ ದಳಂತ್ರ ಕೆರೆ ಸಮೀಪದ ಕೃಷ್ಣರಾಜ ಹೆಗಡೆ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೃಷ್ಣ ರಾಜ್‌ ಅವರ ಪತ್ನಿ ಸುನೀತಿ ಹೆಗಡೆ ಅವರ ಮಾಂಗಲ್ಯ ಎಳೆಯಲು ಪ್ರಯತ್ನಿಸಿದ್ದಾನೆ. ಪಾಲಡ್ಕ ನಿವಾಸಿ ಶರತ್ ಎಂಬಾತ ಈ ಹಿಂದೆ ಈ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅದೇ ಪರಿಚಯದಲ್ಲಿ ಮನೆಗೆ ಬಂದು ಮನೆಯ ಯಜಮಾನಿಯಲ್ಲಿ ನೀರು ಕೇಳಿದ್ದಾನೆ.

ನೀರು ತರಲು ಒಳ ಹೋದಾಗ ಸುನೀತಿ ಹೆಗಡೆಯವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಅಡುಗೆ ಮನೆಯಿಂದ ಸ್ನಾನದ ಮನೆಯವರೆಗೂ ಅವರನ್ನು ಎಳೆದೊಯ್ದು ಬಾತ್ ಟವಲ್‌ನಿಂದ ಉಸಿರುಗಟ್ಟಿಸಿದ್ದಾನೆ . ಇದೇ ವೇಳೆ ಅವರ ಕತ್ತಿನಲ್ಲಿದ್ದ ಬಂಗಾರದ ಕರಿಮಣಿ ಕಸಿಯಲು ಮುಂದಾಗಿದ್ದ. ಈ ವೇಳೆ ಪತ್ನಿಯ ಬೊಬ್ಬೆ ಕೇಳಿ ಹೊರಗಡೆ ಇದ್ದ ಕೃಷ್ಣರಾಜ ಹೆಗಡೆಯವರು ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು 12 ಗಂಟೆಯಲ್ಲಿ ಪೊಲೀಸರು ಮುದರಂಗಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

LATEST NEWS

Trending