Connect with us

  LATEST NEWS

  ಉಡುಪಿಯ ವಿಶಾಲ ಗಾಣಿಗ ಕೊಲೆಗೆ ಟ್ವಿಸ್ಟ್ ನೀಡಿದ ‘ಎರಡು ಟೀ ಕಪ್‌’

  Published

  on

  ಉಡುಪಿ: ದುಬೈನಲ್ಲೇ 6 ತಿಂಗಳ ಹಿಂದೆ ಪತ್ನಿ ವಿಶಾಲ ಗಾಣಿಗ ಕೊಲೆಗೆ ಪತಿ ರಾಮಕೃಷ್ಣ ಗಾಣಿಗ ಮಾಸ್ಟರ್‌ ಪ್ಲ್ಯಾನ್‌ ಸಿದ್ದಪಡಿಸಿದ್ದ ಎಂದು ಉಡುಪಿ ಎಸ್‌ಪಿ ವಿಷ್ಣುವರ್ಧನ್‌ ಮಾಹಿತಿ ನೀಡಿದರು.
  ದುಬೈನಲ್ಲೇ ಕುಳಿತು 2 ಲಕ್ಷ ಕೊಟ್ಟು ಸುಪಾರಿ ಕಿಲ್ಲಿಂಗ್‌ ಬುಕ್‌ ಮಾಡಿದ್ದ
  ಪತ್ನಿ ವಿಶಾಲಾರನ್ನು ಕೊಲೆ ಮಾಡಲೇಬೇಕು ಎಂದು ಸಂಚು ರೂಪಿಸಿದ್ದ ರಾಮಕೃಷ್ಣ ಗಾಣಿಗಾ ಇದಕ್ಕಾಗಿ ಆರೇಳು ತಿಂಗಳ ಹಿಂದೆಯೇ ದುಬೈನಲ್ಲಿ ಕುಳಿತು ಮರ್ಡರ್‌ ಪ್ಲ್ಯಾನ್‌ ರೂಪಿಸಿದ್ದ. ಇದಕ್ಕಾಗಿಯೇ ಕೇರಳದ ಒಬ್ಬ ಗೆಳೆಯನನ್ನು ಗೊತ್ತು ಮಾಡಿ ಸುಪಾರಿ ಕಿಲ್ಲರ್‌ ಒಬ್ಬನನ್ನು ಪರಿಚಯಿಸುವಂತೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತ ಉತ್ತರ ಪ್ರದೇಶ ಮೂಲದ ಸುಪಾರಿ ಕಿಲ್ಲರ್ ಆರೋಪಿ ಸ್ವಾಮಿನಾಥ ನಿಶಾದ ಎಂಬುವವನನ್ನು ಪರಿಚಯಿಸಿದ್ದ. ಅವನಿಗೆ ಮುಂಗಡವಾಗಿ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟು ಸುಪಾರಿ ಕಿಲ್ಲಿಂಗ್‌ ಬುಕ್‌ ಮಾಡಿಕೊಂಡಿದ್ದ.


  ಊರಿಗೆ ಬಂದಾಗ ಆರೋಪಿಗಳಿಗೆ ಸ್ಥಳ ಪತ್ನಿ ಪರಿಚಯ
  ಪತ್ನಿಯ ಕೊಲೆಯ ಉದ್ದೇಶದಿಂದಲೇ ಮಾರ್ಚ್‌ನಲ್ಲಿ ಪತ್ನಿ ಹಾಗೂ ಮಕ್ಕಳು ಸಮೇತ ರಾಮಕೃಷ್ಣ ಊರಿಗೆ ಬಂದಿದ್ದ. ಈ ವೇಳೆ ಉಪ್ಪಿನ ಕೋಟೆಯ ತನ್ನ ಪ್ಲ್ಯಾಟ್‌ಗೆ ಸುಪಾರಿ ಕಿಲ್ಲರ್‌ಗಳನ್ನು ಕರೆಸಿ ಇವರು ತನ್ನ ಸ್ನೇಹಿತರು ಎಂದು ಪತ್ನಿಗೆ ಪರಿಚಯಿಸಿಕೊಂಡಿದ್ದ. ಆ ಸಮಯದಲ್ಲಿ ಹಂತಕ ಆಕೆಯನ್ನು ಹಾಗೂ ಕೊಲೆ ನಡೆಸಲು ಸೂಕ್ತವಾದ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ಜೊತೆಗೆ ಪತಿ ರಾಮಕೃಷ್ಣ ಅವರೊಂದಿಗೆ ಕುಳಿತು ಕೊಲೆಯ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿ, ಮತ್ತೆ ಆತ ಉತ್ತರ ಪ್ರದೇಶಕ್ಕೆ ಹಿಂತಿರುಗುತ್ತಾನೆ. ಇದಾದ ಕೆಲವೇ ದಿನಗಳಲ್ಲಿ ರಾಮಕೃಷ್ಣ ಪತ್ನಿ, ಮಕ್ಕಳು ಸಮೇತ ಮತ್ತೆ ದುಬೈಗೆ ಹಾರುತ್ತಾರೆ.

  ಪತ್ನಿಯ ಬರುವಿಕೆಯನ್ನು ಖಚಿತಪಡಿಸಿಕೊಂಡಿದ್ದ
  ಮತ್ತೆ ಇದೇ ಜು.2ರಂದು ವಿಶಾಲ ಗಾಣಿಗ ಅವರನ್ನು ಮಗುವಿನ ಸಮೇತ ಊರಿಗೆ ಕಳುಹಿಸಿಕೊಡುತ್ತಾನೆ ಪತಿ ರಾಮಕೃಷ್ಣ. ಅದಾದ 5 ದಿನಗಳಲ್ಲಿ ಅಂದರೆ ಜು.7ರಂದು ಪತಿ ರಾಮಕೃಷ್ಣ ಗಾಣಿಗರ ಆಸ್ತಿಗೆ ಸಂಬಂಧಿಸಿದ ಪಾಲುಪಟ್ಟಿ ನಡೆದಿತ್ತು. ತದನಂತರ ಜುಲೈ 12ರಂದು ವಿಶಾಲ ಗಾಣಿಗ ಆಕೆಯ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು. ಈ ವೇಳೆ ಮಗುವನ್ನು ತನ್ನ ತವರು ಮನೆಯಲ್ಲಿ ಮಗುವನ್ನು ಬಿಟ್ಟು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ವಿಶಾಲ ಗಾಣಿಗ ಮತ್ತೆ ಆಟೋರಿಕ್ಷಾ ಮೂಲಕ ಗಂಡನ ಫ್ಲ್ಯಾಟ್‌ಗೆ ಹಿಂತಿರುಗಿದ್ದರು. ದೂರವಾಣಿ ಕರೆ ಮೂಲಕ ಪತ್ನಿಯ ಬರುವಿಕೆಯನ್ನು ಖಚಿತಪಡಿಸಿಕೊಂಡಿದ್ದ ಪತಿ ರಾಮಕೃಷ್ಣ ಫ್ಲ್ಯಾಟ್‌ ಗೆ ತನ್ನಿಬ್ಬರು ಸ್ನೇಹಿತರು ಬಂದಿದ್ದಾರೆ ಎಂದು ಆಕೆಗೆ ಮಾಹಿತಿ ನೀಡಿದ್ದ.

  ಕಾಫಿ ಕುಡಿದು ಮರ್ಡರ್‌
  ಈ ಮೊದಲು ಆಕೆ ಪರಿಚಯವಿಲ್ಲದವರನ್ನು ಆಕೆ ತನ್ನ ಫ್ಲ್ಯಾಟ್‌ ಒಳಗಡೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ಮಾರ್ಚ್‌ನಲ್ಲಿ ತನ್ನ ಗೆಳೆಯರು ಎಂದು ಪರಿಚಯಿಸಿದ್ದ ಸುಪಾರಿ ಕಿಲ್ಲರ್‌ಗಳನ್ನು ಆಕೆ ಮನೆಯ ಒಳಗೆ ಬಿಟ್ಟುಕೊಂಡಿದ್ದಳು. ಅಲ್ಲಿ ಆಕೆ ತನ್ನ ಪತಿಯ ಸ್ನೇಹಿತರೆಂದು ನಂಬಿ ಕಾಫೀ ನೀಡಿದ್ದಳು. ತದನಂತರ ಆಕೆಯನ್ನು ಬಾಗಿಲು ಹಾಕಿ ಕುತ್ತಿಗೆಗೆ ವಯರ್‌ ಬಿಗಿದು ಕೊಲೆ ಮಾಡಿದ್ದಾರೆ. ತನಿಖೆಯ ದಾರಿ ತಪ್ಪಿಸಲು ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ಎಗರಿಸಿದ್ದರು. ಇದಾದ ಮೇಲೆ ಸುಪಾರಿ ಕಿಲ್ಲರ್‌ಗಳು ಗಂಡ ರಾಮಕೃಷ್ಣ ಅವರಿಗೆ ಕೆಲಸ ಮುಗಿಸಿದ ಮಾಹಿತಿ ನೀಡಿ ಸದ್ದಿಲ್ಲದೇ ಉತ್ತರ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ.

  ಹೆಣದ ಮುಂದೆ ಗಳಗಳನೆ ಅತ್ತ ಗಂಡ
  ಕೊಲೆ ನಡೆದ ನಂತರ ಕುಟುಂಬಸ್ಥರು ಗಂಡ ರಾಮಕೃಷ್ಣನಿಗೆ ಮಾಹಿತಿ ತಲುಪಿಸುತ್ತಾರೆ. ಈ ವೇಳೆ ಆತ ಏನೂ ಗೊತ್ತಿಲ್ಲದವನಂತೆ ನಟಿಸಿ ತರಾತುರಿಯಲ್ಲಿ ದುಬೈನಿಂದ ಊರಿಗೆ ಬರುತ್ತಾನೆ. ತನ್ನ ಮನೆಯಲ್ಲೇ ಅಂತ್ಯಸಂಸ್ಕಾರದ ವ್ಯವಸ್ಥೆಗೆ ಸಿದ್ದತೆ ನಡೆಸುತ್ತಾನೆ. ಈ ವೇಳೆ ಮಗುವನ್ನು ಅಪ್ಪಿ ಅತ್ತು ನಾಟಕವಾಡುತ್ತಾನೆ. ತದನಂತರ ಆಕೆಯನ್ನು ಅಂತ್ಯಸಂಸ್ಕಾರ ನೆರವೇರಿಸಿ, ಆಕೆಯ ಕ್ರಿಯೆಯಲ್ಲೂ ಭಾಗವಹಿಸುತ್ತಾನೆ. ಈದಾಗಲೇ ಪೊಲೀಸರು ತಮ್ಮ ತನಿಖೆ ಪ್ರಾರಂಭಿಸಿದ್ದರು. ಇದರ ವಿಚಾರಣೆಗಾಗಿ ಗಂಡ ರಾಮಕೃಷ್ಣನನ್ನು ಕರೆಯುತ್ತಾರೆ. ಈ ವೇಳೆ ಪೊಲೀಸರ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡುವುದಿಲ್ಲ. ಆದರೂ ಪೊಲೀಸರು ಯಾವುದೇ ಸಾಕ್ಷ್ಯವಿಲ್ಲದ ಕಾರಣ ಮುಂದಿನ ಬಾರಿ ವಿಚಾರಣೆಗೆ ಕರೆದಾಗ ಬರುವಂತೆ ಹೇಳಿ ಕಳುಹಿಸಿದ್ದರು.

  5 ತಂಡಗಳಿಂದ ತೀವ್ರ ತನಿಖೆ
  ಈ ಮಧ್ಯೆ ಉತ್ತರ ಪ್ರದೇಶದ ಪೊಲೀಸರ ಸಹಕಾರದಿಂದ ಸುಪಾರಿ ಕಿಲ್ಲರ್‌ನನ್ನು ನೇಪಾಳದ ಗಡಿಯಲ್ಲಿ ಬಂಧನ ನಡೆಸಿ ಉಡುಪಿಗೆ ಕರೆತರುತ್ತಾರೆ. ಈ ವೇಳೆ ಆತ ನನಗೆ ಸುಪಾರಿ ನೀಡಿದ್ದು ಆಕೆಯ ಗಂಡನೇ ಎಂಬುವುದಾಗಿ ವಿಚಾರಣೆಯಲ್ಲಿ ತಿಳಿಸುತ್ತಾನೆ. ಈ ವೇಳೆ ಮತ್ತೊಮ್ಮೆ ಪತಿ ರಾಮಕೃಷ್ಣನನ್ನು ವಿಚಾರಣೆಗೆ ಕರೆಸಿ ತೀವ್ರ ತನಿಖೆ ನಡೆಸಿದಾಗ ಸುಪಾರಿ ನೀಡಿದ್ದರ ಬಗ್ಗೆ ಮಾಹಿತಿ ನೀಡುತ್ತಾನೆ. ಸದ್ಯ ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ವಿಷಯ ತನಿಖಾ ಹಂತದಲ್ಲಿದೆ ಎಂದು ಎಸ್‌ಪಿ ವಿಷ್ಣುವರ್ಧನ್‌ ಮಾಹಿತಿ ನೀಡಿದರು. ಸುಪಾರಿ ಕಿಲ್ಲರ್‌ ಪರಿಚಯಿಸಿದ ಕೇರಳ ಮೂಲದ ಆರೋಪಿಯ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗುವುದು ಎಂದರು.
  50,000 ಸಾವಿರ ನಗದು ಬಹುಮಾನ
  ಕೊಲೆ ಪ್ರಕರಣವನ್ನು ಪರಿಹರಿಸುವಲ್ಲಿ ಭಾಗಿಯಾಗಿರುವ ಇಡೀ ತಂಡಕ್ಕೆ ಕರ್ನಾಟಕ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಮತ್ತು ನಿರೀಕ್ಷಕ ಪ್ರವೀಣ್ ಸೂದ್ 50,000 ಸಾವಿರ ನಗದು ಬಹುಮಾನ ಹಾಗೂ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸನೀಯ ಪ್ರಮಾಣಪತ್ರ ಘೋಷಿಸಿದ್ದಾರೆ.

  DAKSHINA KANNADA

  ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

  Published

  on

  ಮಂಗಳೂರು : ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಮಂಗಳವಾರ(ಜೂ.18) ಕೆಎಸ್ ರಾವ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.


  ಈ ಸಂದರ್ಭ ಸರ್ವೋತ್ತಮ ಅಂಚನ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಹಿಂದುಸ್ತಾನ್ ಪೆಟ್ರೋಲಿಯಂನ ರವಿ ಎಸ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಕೆ, ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

  ಇದನ್ನೂ ಓದಿ : ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

  Continue Reading

  LATEST NEWS

  ಹಾವು ಕಚ್ಚಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..!

  Published

  on

  ಪಶ್ಚಿಮ ಬಂಗಾಳ/ಮಂಗಳೂರು: ಇಲ್ಲೊಂದು ವೈದ್ಯೆ ಹಾವಿನಿಂದ ಕಚ್ಚಿಸಿಕೊಂಡರೂ ಮರುದಿನ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.  ವೈದ್ಯೋ ನಾರಾಯಣೋ ಹರಿ: ಎಂಬ ಮಾತು ಈ ವೈದ್ಯೆಯ ವಿಷಯದಲ್ಲಿ  ನಿಜವಾಗಿದೆ.

  ಹಿಂದಿನ ದಿನ ರಾತ್ರಿ ವೈದ್ಯೆ ಶ್ರೀಜಿತಾರಿಗೆ ಹಾವು ಕಚ್ಚಿತ್ತು. ಈ ಪರಿಣಾಮ ಮೈಕೈ ನೋವು, ಒಂದೆಡೆ ಕೈಯಲ್ಲಿ ಸೂಜಿ, ಡ್ರಿಪ್ಸ್ ಏರಿಸಿಕೊಂಡ ವೈದ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳಿಗೆ ಚಿಕಿತ್ಸೆ ನೀಡಿದ್ಧಾರೆ. ಎದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜನರಿಗೆ ಚಿಕಿತ್ಸೆ ನೀಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  Read More..;  ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

  ಪಶ್ಚಿಮ ಬಂಗಾಳದ ದುಫಗಿರಿ ಗ್ರಾಮೀಣ ಆಸ್ಪತ್ರೆಯು ಇತ್ತೀಚೆಗಷ್ಟೇ ಉಪ-ಜಿಲ್ಲಾ ಆಸ್ಪತ್ರೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದರೂ ವೈದ್ಯರ ಸಂಖ್ಯೆ ಕಡಿಮೆ ಇದೆ ಎಂಬುದು ಜನರ ದೂರಾಗಿದೆ.

  ಈ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ವೈದ್ಯರಿರುವ ಕಾರಣ ವೈದ್ಯರು ತಮಗೆ ಆರೋಗ್ಯ ಸರಿಯಿಲ್ಲದಿದ್ದರೂ ಕೂಡಾ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ. ಇನ್ನು ಈ ವೈದ್ಯೆಗೆ ಹಾವು ಕಚ್ಚಿದ್ದರೂ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿತ್ತು. ವೈದ್ಯೆ ಶ್ರೀಜಿತಾರವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

  Continue Reading

  LATEST NEWS

  ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

  Published

  on

  ಬೆಳಗಾವಿ/ಮಂಗಳೂರು: ಹೆತ್ತ ಮಕ್ಕಳನ್ನು ಬಿಟ್ಟು ಇಪ್ಪತ್ತೈದು ವರ್ಷದ ಯುವಕನ ಜೊತೆ ತಾಯಿಯೊಬ್ಬಳು ಪರಾರಿಯಾದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ನಡೆದಿದೆ. ತಾಯಿಯಿಂದಾಗಿ ಮೂರು ಗಂಡು ಮಕ್ಕಳು ಬೀದಿಗೆ ಬಂದಿದ್ದಾರೆ. ನಮಗೆ ನ್ಯಾಯ ಕೊಡಿಸುವಂತೆ ಮೂರು ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.

  ಸರಕಾರಿ ನೌಕರಿಯಲ್ಲಿದ್ದ ಪತಿಯ ಅಕಾಲಿಕ ಮರಣದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಪತಿಯ ಮರಣ ನಂತರ ಮೂರು ಮಕ್ಕಳು ತಾಯಿಯ ನೆರಳಲ್ಲಿ ಬೆಳೆದಿದ್ದಾರೆ. ಇದೀಗ ಮೂರು ಗಂಡು ಮಕ್ಕಳನ್ನು ಬೀದಿ ಪಾಳು ಮಾಡಿ ಇಪ್ಪತ್ತೈದು ವರ್ಷದ ಯುವಕನ ಜೊತೆ ಓಡಿ ಹೋಗಿದ್ದಾಳೆ. ಕೆಲ ತಿಂಗಳಿನಿಂದ ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.

  Read More..; ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

  ಇತ್ತ ತಂದೆಯೂ ಇಲ್ಲದೆ ತಾಯಿಯೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನೆ ಬಾಡಿಗೆ ಕಟ್ಟದೆ ಮನೆ ಮಾಲೀಕ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಸದ್ಯಕ್ಕೆ ಅಜ್ಜಿ ಮನೆಯಲ್ಲಿ ಮೂರು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ.

  ಬೆಳಗಾವಿ ಕ್ಯಾಂಪ್ ಪೊಲೀಸರ ಬಳಿ ಹೋಗಿ ತಮ್ಮ ತಾಯಿಯನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ. ನಾವು ವಿದ್ಯಾಭ್ಯಾಸ ಬಿಟ್ಟು ಕೆಲಸಕ್ಕೆ ಹೋಗಿ ತಾಯಿಯನ್ನು ಸಾಕುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆಲ್ಲಾ ಮರುಗದ ನಲುವತ್ತು ವರುಷದ ತಾಯಿ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದಾಳೆ.

  Read More..; WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

  ಇನ್ನು ಯುವಕ ವಿನಾಯಕ ಕೋಲ್ಕಾರ ಈ ಹಿಂದೆ ಮಹಿಳೆಯೊಬ್ಬರಿಂದ ಚಪ್ಪಲಿ ಏಟು ತಿಂದಿದ್ದನು. ಮಹಿಳೆಗೆ ಕರೆ ಮಾಡಿ ಐ ಲವ್‌ ಯೂ ಎಂದಿದ್ದನಂತೆ. ಇದರಿಂದ ಆಕ್ರೋಶಗೊಂಡ ಮಹಿಳೆ ಯುವಕನಿಗೆ ಚಪ್ಪಲಿ ಸೇವೆ ಮಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಸದ್ಯ ಯುವಕನ ಜಾಲದಲ್ಲಿ ಸಿಲುಕಿಕೊಂಡಿರುವ ಮಹಿಳೆ ತನ್ನ ಮೂರು ಮಕ್ಕಳನ್ನು ಬಿಟ್ಟು ಹಾಯಾಗಿದ್ದಾಳೆ. ಕರುಳಿನ ಕೂಗು ಆಕೆಗೆ ಕೇಳಿಸದೆ ಇರುವುದು ವಿಪರ್ಯಾಸ.

  Continue Reading

  LATEST NEWS

  Trending