Connect with us

  LATEST NEWS

  ವಿಜಯನಗರ:; ಭಾರೀ ಗುಡುಗು ಸಿಡಿಲ ಮಳೆಗೆ ನಾಲ್ವರು ಬಲಿ..!

  Published

  on

  ಹೊಸಪೇಟೆ :ವಾಯುಭಾರ ಕುಸಿತದಿಂದ ಮೇ 6ರವರೆಗೆ ರಾಜ್ಯದೆಲ್ಲೆಲ್ಲ ಭಾರೀ ಗುಡುಗು, ಸಿಡಿಲು ಸಹಿತ ಮಳೆಯಾಗಲಿರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಸಿಡಿಲಿಗೆ ವಿವಿಧೆಡೆಗಳಲ್ಲಿ ಒಟ್ಟು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
  ಗ್ರ‍ಾಮೀಣ ಭಾಗದಲ್ಲಿ ಸಿಡಿಲು ಗುಡುಗು ಸಮೇತ ಮಳೆ ಸುರಿದಿದ್ದು,ಜೊತೆಗೆ ಸಿಡಿಲಿಗೆ ನಾಲ್ವರು ಮೃತಪಟ್ಟಿದ್ದು ಓರ್ವ ಕೋಮಾ ಸ್ಥಿತಿಯಲ್ಲಿದ್ದಾನೆ.


  ಕೂಡ್ಲಿಗಿ ತಾಲೂಕು ನೆಲಬೊಮ್ಮನಹಳ್ಳಿ ಇಬ್ಬರು ಕುರಿಗಾಯಿಗಳು ಸೇರಿದಂತೆ, ಎಂ.ಬಿ.ಅಯ್ಯನಹಳ್ಳಿ ಯಲ್ಲಿ ಓರ್ವ ಹಾಗೂ ಹರವದಿ ಯಲ್ಲಿ ಓರ್ವ.ಒಟ್ಟು ನಾಲ್ವರು ಸಿಡಿಲಿಗೆ ಮೃತಪಟ್ಟಿದ್ದಾರೆ.

  ಕುರಿಕಾಯುವವರಿಬ್ಬರು ನೆಲಬೊಮ್ಮನಹಳ್ಳಿಯ ಬ್ರಹ್ಮಪ್ಪ(45)ಚಿನ್ನಾಪ್ರಪ್ಪ(40),ಇವರು ಕುರಿಗಳನ್ನು ಮೇಯಿಸಲು ತೆರಳಿದ್ದು,
  ಮಳೆಯಿಂದ ರಕ್ಷಿಸಿಕೊಳ್ಳಲು ಬೇವಿನ ಮರದ ಬುಡದಲ್ಲಿ ನಿಂತಿದ್ದಾಗ.ಸಿಡಿಲು ಬಡಿದಿದೆ.ಪರಿಣಾಮ ಸ್ಥಳದಳಲ್ಲಿಯೇ ಮೃತಪಟ್ಟಿದ್ದಾರೆ.

  ಜರ್ಮಲಿ ಗ್ರಾಮ ಪಂಚಾಯಿತಿಯ ಹರವದಿ ಗ್ರಾಮದ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ(30) ರಾಜಶೇಖರ್ ಮೃತಪಟ್ಟಿದ್ದಾರೆ.
  ಅವರ ಜೊತೆಯಲ್ಲಿದ್ದ ಆರ್.(16)ಪಾಲಾಕ್ಷ ಮೂರ್ಚೆ ಹೋಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಎಂ.ಬಿ.ಅಯ್ಯನಹಳ್ಳಿಯಲ್ಲಿ, ತನ್ನ ಮನೆಯ ಮಾಳಿಗೆ ಮೇಲೆ ಹೊಗೆ ಗೂಡು ಮುಚ್ಚಲು ಹೋದಾಗ ಸಿಡಿಲು ಬಡಿದು ಸಾವಪ್ಪಿರುವ ಘಟನೆ ನಡೆದಿದೆ.

  ಎಂ.ಬಿ.ಅಯ್ಯನಹಳ್ಳಿ ಗ್ರಾಮದ (37)ಪತ್ರೆಪ್ಪ ಎಂಬಾತನು ತನ್ನ ಮಾಳಿಗೆಯ ಮೇಲೆ ಹತ್ತಿ,ಹೊಗೆ ಗೂಡು ಮುಚ್ಚಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

  DAKSHINA KANNADA

  ಮಳೆ ಬಂದು ತುಂಬಿ ತುಳುಕಿದ ಡ್ಯಾಂ.. ಮಂಗಳೂರಿನಲ್ಲಿ ನೀರಿನ ರೇಶನಿಂಗ್ ಸಿಸ್ಟಂ ರದ್ದು

  Published

  on

  ಮಂಗಳೂರು: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಮಂಗಳವಾರ ನೀರಿನ ಮಟ್ಟ 5.5 ಮೀಟರ್‌ಗೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದ್ದ ನೀರಿನ ರೇಶನಿಂಗ್ ಸಿಸ್ಟಂ ರದ್ದು ಮಾಡಲು ನಿರ್ಧರಿಸಲಾಗಿದೆ.

  dam

  ನೀರು ತುಂಬಿರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಕಾರಣ ಬಂಟ್ವಾಳದ ಶಂಭೂರಿನಲ್ಲಿರುವ ಎಎಂಆರ್‌ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ತುಂಬೆ ಅಣೆಕಟ್ಟಿಗೆ ಸೋಮವಾರ(ಮೇ.20) ಹರಿಸಲಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಗರಿಷ್ಠ ಎತ್ತರ 6 ಮೀಟರ್ ಆಗಿದ್ದು, ಸೋಮವಾರ 3.42 ಮೀಟರ್ ಮತ್ತು ಮಂಗಳವಾರ ಬೆಳಗ್ಗೆವರೆಗೆ 3.68 ಮೀಟರ್‌ ಮಾತ್ರ ನೀರು ಲಭ್ಯವಿತ್ತು. ಬಳಿಕ ದಿಢೀರ್‌ ಏರಿಕೆ ಕಂಡಿದ್ದು, ಸಂಜೆ ವೇಳೆಗೆ 5.5 ಮೀಟರ್‌ ನೀರು ನಿಲ್ಲಿಸಲಾಗಿತ್ತು. ಅಣೆಕಟ್ಟಿನಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ನೀರು ತುಂಬಿದ ಬಳಿಕ ಗೇಟ್‌ ತೆರೆಯಲಾಗುತ್ತದೆ.

  ಆದರೆ ಕಳೆದ 2 ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟು ತುಂಬಿದೆ. ಕಳೆದ ವರ್ಷ ಮೇ 21ಕ್ಕೆ ನೀರಿನ ಮಟ್ಟ ಗಣನೀಯ ಇಳಿಕೆ ಕಂಡು 3.20 ಮೀಟರ್‌ ಇತ್ತು. ತುಂಬೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ನೀರಿನ ರೇಶನಿಂಗ್‌ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

  Read More..; ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

  ಕುಡಿಯುವ ನೀರಿನ ಹಾಹಾಕಾರ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಏಪ್ರಿಲ್ 4ರಿಂದ ನೀರಿನ ರೇಶನಿಂಗ್‌ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದರಿಂದಾಗಿ ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿತ್ತು. 3 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಉಡುಪಿಯ ಸ್ವರ್ಣಾ ನದಿಯಲ್ಲಿ ಒಳ ಹರಿವು ಆರಂಭಗೊಳ್ಳುವ ನಿರೀಕ್ಷೆ ಇದೆ. ಬಳಿಕ ಇಲ್ಲೂ ರೇಶನಿಂಗ್‌ ಸ್ಥಗಿತವಾಗುವ ನಿರೀಕ್ಷೆ ಹೊಂದಲಾಗಿದೆ.

  Continue Reading

  LATEST NEWS

  ಮಂಗಳೂರು ವಿಮಾನ ದುರಂತ ಕಹಿ ನೆನಪಿಗೆ ಇಂದು 14 ವರ್ಷ..! ಕೂಳೂರಿನಲ್ಲಿ ಶ್ರದ್ದಾಂಜಲಿ

  Published

  on

  ಮಂಗಳೂರು: ಮಂಗಳೂರು ವಿಮಾನ ದುರಂತಕ್ಕೆ ಇಂದು 14 ವರ್ಷ ತುಂಬಿದೆ. 2010 ರ ಮೇ 22 ರ ಮುಂಜಾನೆ ನಡೆದಿದ್ದ ಘಟನೆಯನ್ನು ಇಡೀ ದೇಶವೇ ಮರೆಯುವ ಹಾಗಿಲ್ಲ. 158 ಜನರನ್ನು ಆಹುತಿ ಪಡೆದಿದ್ದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಹನ್ನೆರಡು ಜನರ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಮಂಗಳೂರಿನ ಕೂಳೂರು ಬಳಿಯಲ್ಲಿ ಆ ದೇಹಗಳನ್ನು ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅಲ್ಲಿ ಸ್ಮಾರಕ ನಿರ್ಮಿಸಿ ಪ್ರತಿ ವರ್ಷ ಗೌರವ ಸೂಚಿಸಲಾಗುತ್ತಿತ್ತು. ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೂಳೂರು ಸೇತುವೆ ಸಮೀಪ ನಿರ್ಮಿಸಲಾದ ಸ್ಮಾರಕದಲ್ಲಿ ಇದೇ ಸ್ಮಾರಕದ ಬಳಿ ವಿಮಾನ ದುರಂತದಲ್ಲಿ ಮೃತ ಪಟ್ಟ ಎಲ್ಲರಿಗೂ ಶೃದ್ಧಾಂಜಲಿ ಕಾರ್ಯಕ್ರಮ ನಡೆಸಿದೆ.

  Read More..; ಪತಿಯಿಂದಲೇ ಭೀಕರ ಹ*ತ್ಯೆಯಾದ ‘ಭಜರಂಗಿ’ ಸಿನೆಮಾ ನಟಿ ..!

   AIR CRASH

  ಅಂದು ಏನಾಗಿತ್ತು?: 

  2010ರ ಮೇ 22ರಂದು ಬೆಳಗ್ಗೆ 6.20ರ ಸಮಯದಂದು ದುಬೈನಿಂದ ಮಂಗಳೂರು ಏರ್‌ ಪೋರ್ಟ್ ಆಗಮಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಲ್ಯಾಂಡಿಂಗ್‌ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಕೂಡಲೆ ವಿಮಾನ ಪೂರ್ತಿ ಅಗ್ನಿ ಆವರಿಸಿದ್ದು, ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ಕೇವಲ 8 ಮಂದಿಯಷ್ಟೇ ಬದುಕಿ ಉಳಿದಿದ್ದರು. ನಸುಕಿನ ನಿದ್ರೆಯಲ್ಲಿದ್ದವರು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದ್ದರು.

   

   

   

   

  Continue Reading

  DAKSHINA KANNADA

  ಮಂಗಳೂರು : ಭಾರಿ ಮಳೆಗೆ ಧರೆಗುರುಳಿದ ಮರ

  Published

  on

  ಮಂಗಳೂರು : ಬಿರುಬಿಸಿಲಿನಿಂದ ಕಂಗಾಲಾಗಿದ್ದ ಕರಾವಳಿಗರ ಮೇಲೆ ವರುಣ ಕೃಪೆ ತೋರಿದ್ದು, ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು(ಮೇ 21) ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.

   

  ಸಂಜೆಯಿಂದ ಶುರುವಾದ ಮಳೆಗೆ ಮಂಗಳೂರು ನಗರದ ಕರಂಗಲ್ಪಾಡಿ ಬಳಿ ಇರುವ ರಾಧಾ ಮೆಡಿಕಲ್ಸ್ ಎದುರುಗಡೆ ಭಾರಿ ಗಾತ್ರದ ಮರವೊಂದು ಧರೆಗುರುಳಿದ್ದು, ವಾಹನಗಳು ಜಖಂ ಗೊಂಡಿವೆ.

  ಘಟನೆಯಿಂದ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮರದ ಕೊಂಬೆಗಳನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ಲಭಿಸಿದೆ.

  Continue Reading

  LATEST NEWS

  Trending