Connect with us

    LATEST NEWS

    ಮಂಗಳೂರು: ವಿಧಾನ ಪರಿಷತ್ ಉಪಚುನಾವಣೆ – ರಾಜು ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ

    Published

    on

    ಮಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ರಾಜು ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ಟಿಕೆಟ್ ನೀಡಿದೆ.

    ವಿಧಾನ ಪರಿಷತ್ ನಲ್ಲಿ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ನಂತರ ರಾಜೀನಾಮೆ ನೀಡಿದ್ದರು.

    ಉಪ ಚುನಾವಣೆಗೆ ಅ. 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅ.21ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಅವರ ಹೆಸರನ್ನು ಪ್ರಕಟಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಲೆ; ನಶೆಯಲ್ಲಿ ತೇಲುತ್ತಿದ್ದ ಆರೋಪಿ ಪತಿ ಅರೇಸ್ಟ್

    Published

    on

    ಮಂಗಳೂರು/ಕಲಬುರಗಿ: ಪತಿ, ಪತ್ನಿ ರಾತ್ರಿ ಜೊತೆಗೆ ಎಣ್ಣೆ ಹಾಕುವಾಗ ನಡೆದ ಸಣ್ಣ ಗಲಾಟೆ ವಿಕೋಪಕ್ಕೆ ತೆರಳಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಗುಲ್ಬರ್ಗ ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯ ಶಹಬಾದ ರಸ್ತೆಯ ಇಟ್ಟಂಗಿ ಬಟ್ಟಿಯಲ್ಲಿ ನಿನ್ನೆ (ಅ.1) ರಾತ್ರಿ ನಡೆದಿದೆ.


    ಪ್ರಿಯಾಂಕ ರಾಥೋಡ್ (35) ಕೊಲೆಯಾದ ಮಹಿಳೆ ಹಾಗೂ ಪತಿ ವಕೀಲ್ ರಾಥೋಡ್ ಕೊಲೆ ಮಾಡಿದಾತ ಎಂದು ಗುರುತಿಸಲಾಗಿದೆ.
    ನಿನ್ನೆ (ಅ.1) ರಾತ್ರಿ ದಂಪತಿಗಳು ಮಬ್ಬು ಕತ್ತಲಿನಲ್ಲಿ ತಂಪಾದ ವಾತವರಣದಲ್ಲಿ ಮಸ್ತ್ ಮಜವಾಗಿ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಕೌಟುಂಬಿಕ ಕಲಹ ಶುರುವಾಗಿ, ಪತಿ ಸಿಟ್ಟಿನಲ್ಲಿ ಪಕ್ಕದಲ್ಲೇ ಇದ್ದ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ. ಆಕೆ ತಕ್ಷಣವೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಅರ್ಜುನ್ ಕುಟಂಬಸ್ಥರಿಂದ ಮನಾಫ್ ಮೇಲೆ ಗಂಭೀರ ಆರೋಪ..! ಜನ ಕೊಟ್ರು ಉತ್ತರ..!

    Published

    on

    ಮಂಗಳೂರು/ ಶಿರೂರು : ಶಿರೂರು ಭೂಕುಸಿತದಲ್ಲಿ ಮೃ*ತಪಟ್ಟಿರುವ ಅರ್ಜುನ್ ಮೃ*ತ ದೇಹ ಸಿಕ್ಕು ಮನೆಯವರಿಗೆ ಹಸ್ತಾಂತರವಾಗಿ ಅಂ*ತ್ಯಸಂಸ್ಕಾರ ಕೂಡ ನಡೆದಿದೆ. ಆದ್ರೆ, ಅರ್ಜುನ್ ಕುಟುಂಬ ಮತ್ತು ಲಾರಿ ಮಾಲೀಕ ಮನಾಫ್ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿದೆ. ಇದೇ ಕಾರಣದಿಂದ ಈಗ ಲಾರಿ ಮಾಲೀಕ ಮನಾಫ್ ಆರಂಭಿಸಿದ್ದ ಯೂಟ್ಯೂಬ್ ಚಾನೆಲ್ ಚಂದಾದಾರರು ಒಂದೇ ದಿನದಲ್ಲಿ 90 ಸಾವಿರ ಏರಿಕೆಯಾಗಿ ಲಕ್ಷ ತಲುಪಿದೆ.

    ಅರ್ಜುನ್ ನಾಪತ್ತೆಯಾದ ಬಳಿಕ ರಕ್ಷಣಾ ಮಾಹಿತಿ ಹಂಚಲು ಲಾರಿ ಮಾಲೀಕ ಮನಾಫ್‌ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆದ್ರೆ ಕಳೆದ ಹದಿಮೂರು ದಿನಗಳಿಂದ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಯಾವುದೇ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಆದ್ರೆ ಅರ್ಜುನ್ ಕುಟುಂಬಸ್ಥರು ಪತ್ರಿಕಾಗೋಷ್ಠಿ ನಡೆಸಿ ಮನಾಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮನಾಫ್ ಏಜನ್ಸಿಯಂತೆ ಕೆಲಸ ಮಾಡುತ್ತಿದ್ದು ಭಾವುಕತೆಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅರ್ಜುನ್ ಹೆಸರಿನಲ್ಲಿ ಹಲವೆಡೆ ಹಣ ವಸೂಲಿ ಮಾಡಿರುವುದಾಗಿಯೂ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮನಾಫ್, ನಾನು ಯಾರಿಂದಲೂ ಹಣ ಪಡೆದಿಲ್ಲ ಮತ್ತು ನಾನು ಯಾವ ತಪ್ಪೂ ಮಾಡಿಲ್ಲ. ಹಾಗೊಂದು ವೇಳೆ ನಾನು ತಪ್ಪಿತಸ್ಥನಾದ್ರೆ ಮಾನಂಚಿರ ಮೈದಾನಕ್ಕೆ ಬಂದು ಕಲ್ಲು ಹೊಡೆದು ಕೊ*ಲ್ಲಬಹುದು ಎಂದು ಹೇಳಿದ್ದರು.

    ಇದನ್ನೂ ಓದಿ : 50 ವರ್ಷದ ಸಂಬಂಧಕ್ಕೆ ಬ್ರೇಕ್; ಮಹಿಳೆಯ ಕೊಂ*ದು ವ್ಯಕ್ತಿ ಪರಾರಿ

    ಈ ಆರೋಪ ಪ್ರತ್ಯಾರೋಪ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಜನ ಮನಾಫ್ ಮತ್ತು ಅರ್ಜುನ್ ಕುಟುಂಬದ ಪರ ವಿರೋಧ ಚರ್ಚೆಗಳನ್ನು ನಡೆಸಿದ್ದಾರೆ. ಮನಾಫ್  ಭಾವುಕತೆಯ ಮಾರಾಟವೇ ಆಗಿದ್ದರೆ, ಆತ ಅರ್ಜುನ್‌ ಮೃತ ದೇಹ ಸಿಕ್ಕ ಸಮಯದ ವೀಡಿಯೋಗಳನ್ನು ಹಾಕಬೇಕಾಗಿತ್ತು. ಆದ್ರೆ, ಅರ್ಜುನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಕಾರಣದಿಂದ ಮನಾಫ್ ಯೂಟ್ಯೂಬ್ ಚಾನೆಲ್‌ ವೀಕ್ಷಿಸಿ ಸದಸ್ಯರಾಗುತ್ತಿದ್ದಾರೆ. ಹೀಗಾಗಿ ಒಂದೇ ದಿನದಲ್ಲಿ ಮನಾಫ್ ಯೂಟ್ಯೂಬ್ ಚಾನೆಲ್‌ಗೆ 90 ಸಾವಿರ ಸದಸ್ಯರಾಗಿದ್ದು, ಸದಸ್ಯರ ಸಂಖ್ಯೆ 10 ಸಾವಿರದಿಂದ 1 ಲಕ್ಷದ ಗಡಿ ದಾಟಿದೆ

    Continue Reading

    LATEST NEWS

    50 ವರ್ಷದ ಸಂಬಂಧಕ್ಕೆ ಬ್ರೇಕ್; ಮಹಿಳೆಯ ಕೊಂ*ದು ವ್ಯಕ್ತಿ ಪರಾರಿ

    Published

    on

    ಮಂಗಳೂರು/ನೊಯ್ಡಾ; ಸಂಬಂಧಕ್ಕೆ ಬಿರುಕು ಬಿದ್ದದ್ದನ್ನು ಸಹಿಸದ ಯುವಕನು ಆವೇಶದಿಂದ ಯುವತಿಯ ಕ*ತ್ತು ಹಿ*ಸುಕಿ ಕೊ*ಲೆ ಮಾಡಿ ದೇಹವನ್ನು ಹೊಲದಲ್ಲಿ ಎಸೆದಿದ್ದ ಘಟನೆ ನೋಯ್ಡಾದಲ್ಲಿ ನಡೆದಿದೆ. ಆರೋಪಿ ಜಿತೇಂದರ್ ಎಂದು ಗುರುತಿಸಲಾಗಿದೆ,


    50 ವರ್ಷದಿಂದ ಮಹಿಳೆಯೊಂದಿಗೆ ಸಂಬಂಧವಿದ್ದು, ಅದು ಮುರಿದುಬಿದ್ದಿದ್ದಕ್ಕೆ ಆಕೆಯನ್ನು ಕೊ*ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
    ಆರಂಭದಲ್ಲಿ ಆತ ತಪ್ಪು ಮಾಹಿತಿ ನೀಡಿದ್ದು, ನಿರಂತರ ವಿಚಾರಣೆಯ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಂಕಿತ್ ಚೌಹಾಣ್ ಹೇಳಿದ್ದಾರೆ. ಆತನ ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ಗೋಣಿಚೀಲದಲ್ಲಿ ತುಂಬಿದ್ದ ಶವ*ವನ್ನು ಬಿಡಾಡಿ ಗದ್ದೆಯಿಂದ ಹಾಗೂ ಅಪರಾಧಕ್ಕೆ ಬಳಸಲಾದ ಗೇರ್ ವೈರ್ ಅನ್ನು ಮನೆಯಿಂದ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending