Connect with us

    BELTHANGADY

    ವೇಣೂರು ಜೋಡುಕರೆ ಕಂಬಳ ಕೂಟ ಸಂಪನ್ನ: ಫಲಿತಾಂಶ ಪ್ರಕಟ

    Published

    on

    ವೇಣೂರು: 29ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟ ನಿನ್ನೆ ಸಂಜೆ ಸಂಪನ್ನವಾಯಿತು. ಕೂಟದಲ್ಲಿ ಒಟ್ಟು 151 ಜೊತೆ ಕೋಣಗಳು ಭಾಗವಹಿಸಿದ್ದವು.

    ಕನೆಹಲಗೆ ವಿಭಾಗದಲ್ಲಿ ಮೂರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಎಂಟು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 28 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 86 ಜೊತೆ ಕೋಣಗಳು ಭಾಗವಹಿಸಿದ್ದವು.

    ಫಲಿತಾಂಶ:

    ಕನೆಹಲಗೆ: 03 ಜೊತೆ
    ಅಡ್ಡಹಲಗೆ: 08 ಜೊತೆ
    ಹಗ್ಗ ಹಿರಿಯ: 13 ಜೊತೆ
    ನೇಗಿಲು ಹಿರಿಯ: 28 ಜೊತೆ
    ಹಗ್ಗ ಕಿರಿಯ: 13 ಜೊತೆ
    ನೇಗಿಲು ಕಿರಿಯ: 86 ಜೊತೆ
    ಒಟ್ಟು ಕೋಣಗಳ ಸಂಖ್ಯೆ: 151 ಜೊತೆ
    ••••••••••••••••••••••••••••••••••••••••••••••
    ಕನೆಹಲಗೆ:
    ( ನೀರು ನೋಡಿ ಬಹುಮಾನ )

    ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
    ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

    ದ್ವಿತೀಯ: ಬಾರ್ಕೂರು ಶಾಂತಾರಾಮ್ ಶೆಟ್ಟಿ
    ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
    ••••••••••••••••••••••••••••••••••••••••••••••
    ಅಡ್ಡ ಹಲಗೆ:

    ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ “ಎ”
    ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

    ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಎ”
    ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
    ••••••••••••••••••••••••••••••••••••••••••••••
    ಹಗ್ಗ ಹಿರಿಯ:

    ಪ್ರಥಮ: ಪದವು ಕಾನಡ್ಕ ಫ್ಲೇವಿ ಡಿಸೋಜ “ಎ”
    ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

    ದ್ವಿತೀಯ: ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ “ಎ”
    ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
    ••••••••••••••••••••••••‌‌‌‌‌••••••••••••••••••••••
    ಹಗ್ಗ ಕಿರಿಯ:

    ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
    ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

    ದ್ವಿತೀಯ: ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ
    ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
    ••••••••••••••••••••••••••••••••••••••••••••••
    ನೇಗಿಲು ಹಿರಿಯ:

    ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ”
    ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

    ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ”
    ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
    ••••••••••••••••••••••••••••••••••••••••••••••
    ನೇಗಿಲು ಕಿರಿಯ:

    ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ”
    ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

    ದ್ವಿತೀಯ: ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ “ಬಿ”
    ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

    ಪ್ರಪ್ರಥಮ ತುಳು ವಾರ್ತಾವಾಹಿನಿ “ನಮ್ಮ ಕುಡ್ಲ” ವು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದ್ದು YouTube ಮತ್ತು Facebook ಮೂಲಕವೂ ದೇಶವಿದೇಶದ ಲಕ್ಷಾಂತರ ಕಂಬಳಾಭಿಮಾನಿಗಳು ವೇಣೂರು ಕಂಬಳವನ್ನು ವೀಕ್ಷಿಸಿದ್ದಾರೆ.

     

     

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending