Connect with us

DAKSHINA KANNADA

ಉಪ್ಪಿನಂಗಡಿಯಲ್ಲಿ ಓಕುಳಿಯಾಟದಲ್ಲಿ ಬದಿಗೆ ಸರಿದು ‘ಮೈನಾ ಕಾಕ’ನ ಅಂತಿಮ ಯಾತ್ರೆಗೆ ಗೌರವ ಸಲ್ಲಿಸಿದ ಹಿಂದೂ ಬಾಂಧವರು

Published

on

ಮಂಗಳೂರು: ಉಡುಪಿಯ ಒಂದು ಕಾಲೇಜಿನಿಂದ ಪ್ರಾರಂಭವಾಗಿ ರಾಜ್ಯ, ದೇಶಾದ್ಯಂತ ಹಿಜಾಬ್‌-ಕೇಸರಿ ಗಲಾಟೆ ನಡೆಯುತ್ತಿದೆ.

ಆದರೆ ಪಕ್ಕದಲ್ಲೇ ಇರುವ ಸ್ಪೋಟಕ ತುಂಬಿರುವ ಗೋದಾಮಿನಂತಿರುವ ಹಾಗೂ ದೇಶದಲ್ಲೇ ಕೋಮುಸೂಕ್ಷ್ಮ ಎಂದೇ ಕುಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡದಿರುವುದು ತುಂಬಾ ಜನರಿಗೆ ಆಶ್ಚರ್ಯವಾಗಿರಿಸಿದೆ.

ಇದೆಲ್ಲದರ ಮಧ್ಯೆ ಮೃತ ಹೊಂದಿದ ಮುಸ್ಲಿಂ ವ್ಯಕ್ತಿಯನ್ನು ದಫನಕ್ಕೆ ಕೊಂಡೊಯ್ಯುತ್ತಿದ್ದಾಗ ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚಿಸಿರುವುದು ಇನ್ನೂ ಜಿಲ್ಲೆಯಲ್ಲಿ ಸಾಮರಸ್ಯ ಇದೆ ಎಂಬುವುದನ್ನು ಸಾಬೀತುಪಡಿಸಿದ್ದಾರೆ.


ಉಪ್ಪಿನಂಗಡಿ ಹಿರಿಯ ವರ್ತಕ ಹಾಗೂ ಸಾಮಾಜಿಕ ಕಾರ್ಯಕರ್ತ ಜ.ಹಸನಬ್ಬ ಹಾಜಿ ಎಂಬುವವರು ಫೆ.9ರಂದು ನಿಧನ ಹೊಂದಿದ್ದರು.

ನಿನ್ನೆ ಅವರ ದಫನ ಕಾರ್ಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಮಾಲಿಕ್‌ ದಿನಾರ್‌ ಜುಮಾ ಮಸೀದಿಗೆ ಮೃತದೇಹ ಕೊಂಡೊಯ್ಯುತ್ತಿದ್ದರು.

ಇದೇ ವೇಳೆ ಅದೇ ರಸ್ತೆಯಲ್ಲಿರುವ ವೆಂಕಟ್ರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮದ ಪ್ರಯುಕ್ತ ಭಕ್ತರು ಬ್ಯಾಂಡ್‌, ವಾದ್ಯ ಓಲಗೊಂದಿಗೆ ಬಣ್ಣದ ಓಕೊಳಿಯನ್ನು ಎರಚಿ ಕುಣಿದು ಕುಪ್ಪಳಿಸುತ್ತಿದ್ದರು.

ಅಂತಿಮ ಯಾತ್ರೆ ಬರುತ್ತಿದ್ದಂತೆ ಚೆಂಡೆ, ಬ್ಯಾಂಡ್‌, ವಾದ್ಯ ಸದ್ದು ಒಮ್ಮೆಲೆ ನಿಂತು ನಲಿಯುತ್ತಿದ್ದವರು ಬದಿಗೆ ಸರಿದು ಮೌನವಾಗಿ ಎದೆ ಮೇಲೆ ಕೈ ಇಟ್ಟು ಮೈನಾ ಕಾಕನಿಗೆ ಗೌರವ ಸಲ್ಲಿಸಿದರು.

ಈ ಮೂಲಕ ಕೋಮುಸೂಕ್ಷ್ಮ ಹಣೆಪಟ್ಟಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಇನ್ನು ಕೂಡ ಜೀವಂತ ಇದೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು ಹಲವು ಹಿಂದೂ-ಮುಸ್ಲಿಂ ಬಾಂಧವರು ಹಂಚಿ ಭಾವಕ್ಯತೆಯ ಸಂದೇಶ ನೀಡುತ್ತಿದ್ದಾರೆ.

ಇತ್ತೀಚೆಗೆ ಉಪ್ಪಿನಂಗಡಿ ಠಾಣೆಯ ಎದುರು ಪಿಎಫ್‌ಐ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಜನಾ ತಂಡವೊಂದು ಬಂದಾಗ ಪ್ರತಿಭನಕಾರರು ದಾರಿ ಬಿಟ್ಟು ಸೌಹಾರ್ದತೆಯನ್ನು ಮೆರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

DAKSHINA KANNADA

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ನಿಧನದ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ

Published

on

ಸುಳ್ಯ :  ಸಹೋದರರಿಬ್ಬರು ಸಾ*ವಿನಲ್ಲೂ ಒಂದಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ 82 ವರ್ಷದ ಎಸ್. ಇ. ಅಬ್ದುಲ್ಲಾ ಹಾಗೂ ಮಹಮ್ಮದ್ ಎಸ್. ಇ  ಮೃ*ತ ಸಹೋದರರು.

ಅಬ್ದುಲ್ಲಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧ*ನರಾಗಿದ್ದಾರೆ. ಈ ವಿಚಾರ ತಿಳಿದ ಅವರ ಸಹೋದರ ಮಹಮ್ಮದ್ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

ಇಬ್ಬರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Continue Reading

DAKSHINA KANNADA

ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

Published

on

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದ ಪ್ರತೀ ವರ್ಷ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ 2000 ರೂ. ನೇರವಾಗಿ ಕೃಷಿಗರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದೀಗ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದು, ಮೇ.2024ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.

16ನೇ ಕಂತನ್ನು ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್‌ ನಿಧಿ ಯೋಜನೆಯ ಕಂತನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 17ನೇ ಕಂತಿಗಾಗಿ ಕಾದು ನೋಡಬೇಕಿದೆ. ಈ ಯೋಜನೆಯ ಕಂತುಗಳನ್ನು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮೊದಲನೆಯ ಕಂತು ಏಪ್ರಿಲ್-ಜುಲೈನಲ್ಲಿ, ಎರಡನೆಯದು ಆಗಸ್ಟ್-ನವೆಂಬರ್ ನಲ್ಲಿ ಮತ್ತು ಮೂರನೆಯದು ಡಿಸೆಂಬರ್-ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಈಗಾಗಲೇ 16ನೇ ಕಂತನ್ನು ಫೆಬ್ರವರಿಯಲ್ಲಿ ನೀಡಿದ್ದು, 17 ನೇ ಕಂತು ಮೇ ತಿಂಗಳಿನಲ್ಲಿ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮಾತ್ರ ನಿಗದಿಯಾಗಿಲ್ಲ.

 

 

Continue Reading

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

LATEST NEWS

Trending