DAKSHINA KANNADA
ಉಪ್ಪಿನಂಗಡಿ: ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಮೊಬೈಲ್ ಅಂಗಡಿಗೆ ದಾಳಿ-ಓರ್ವನ ಬಂಧನ
Published
2 years agoon
By
Adminಉಪ್ಪಿನಂಗಡಿ: ನಿಷೇಧಿತ ಇ – ಸಿಗರೇಟ್ ಮಾರಾಟ ಮಾಡುತ್ತಿದ್ದ ಮೊಬೈಲ್ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಸಿಗರೇಟ್ ಗೆ ಬಳಸಲಾಗುವ ಅಮಲು ಪದಾರ್ಥ ಸೇರಿದಂತೆ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಬಂಧಿತನನ್ನು ಶೇಖ್ ಶಾಹಿದ್ ಎಂದು ಗುರುತಿಸಲಾಗಿದೆ.
ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ನ ಹಿಂಬದಿಯ ಒಳಸಂದಿನಲ್ಲಿರುವ ಮೊಬೈಲ್ ಅಂಗಡಿಯೊಂದರಲ್ಲಿ ಇ- ಸಿಗರೇಟ್ ಮಾರಲಾಗುತ್ತಿದೆ ಅನ್ನುವ ಖಚಿತ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ಠಾಣೆಯ ಹಾಗು ಉಪ್ಪಿನಂಗಡಿ ಠಾಣೆಯ ಪೊಲೀಸರು ಈ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಂಗಡಿಯಿಂದ ಇ- ಸಿಗರೇಟ್ ಗೆ ಬಳಸಲಾಗುವ ಅಮಲು ಪದಾರ್ಥ, ಸ್ಮೋಕ್ ಮಾಡಲು ಬೇಕಾದ ಟ್ಯೂಬ್ ಗಳನ್ನು ಸೇರಿ ಸುಮಾರು 26 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರವಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿಯವರ ತಂಡ ಭಾಗವಹಿಸಿತ್ತು.
ಇನ್ನು ಯುವ ಜನತೆಯನ್ನು ಆಕರ್ಷಿಸುವ ಇ – ಸಿಗರೇಟ್ ಮಾರಾಟ ಕಾನೂನು ಬಾಹಿರವಾಗಿದ್ದು, ಇದು ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್ ನೆಪದಲ್ಲಿ ಈ ನಂಬರ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್ಐಆರ್ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.
ಅನಂತರ ವಾಟ್ಸಪ್ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.
DAKSHINA KANNADA
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
Published
22 hours agoon
21/11/2024By
NEWS DESK3ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.
ಇದನ್ನು ಓದಿ:ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.
bangalore
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
Published
24 hours agoon
21/11/2024By
NEWS DESK3ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.
ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.
LATEST NEWS
ಕದ್ರಿ ಪಾರ್ಕ್ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್ನಿಂದ ಲಾಂಛನ ಬಿಡುಗಡೆ
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
ಶೀಘ್ರದಲ್ಲೇ ಉಬರ್ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ