Connect with us

    DAKSHINA KANNADA

    ‘ಹೆಂಡ ಇಳಿಸುವವರ ನಾಯಕ’ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅವಹೇಳನ: ದೂರು ದಾಖಲು

    Published

    on

    ಬೆಂಗಳೂರು: ಆರ್ಯ ಈಡಿಗ ಹಾಗೂ ಬಿಲ್ಲವರ ಆರಾಧ್ಯ ದೈವ, ಹಾಗೂ ಸಾಮಾಜಿಕ ಸುಧಾರಣೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಅವರನ್ನು ಕೃತಿಯಲ್ಲಿ ಅವಹೇಳನ ಮಾಡಲಾಗಿದೆ ಎಂದು ಲೇಖಕ, ಅಂಕಣಕಾರ ರಾಮಚಂದ್ರ ಗುಹಾ ವಿರುದ್ಧ ದೂರು ದಾಖಲಾಗಿದೆ.


    ರಾಮಚಂದ್ರ ಗುಹಾ ಅವರ ‘India After Gandhi’ ಪುಸ್ತಕದ ಪುಟ 284ರಲ್ಲಿ ಹೆಂಡ ಇಳಿಸುವವರ ನಾಯಕ ಹಾಗೂ ನಮ್ಮ ಸಮಾಜವನ್ನು ಕೀಳು ಮಟ್ಟದ ಜಾತಿ ಎಂದು ನಿಂದಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ರಾಮಚಂದ್ರ ಗುಹಾ ಅವರನ್ನು ಬಂಧಿಸಬೇಕು.

    ಜೊತೆಗೆ ಆ ಪುಸ್ತಕ ಮುಟ್ಟುಗೋಲು ಹಾಕುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಪ್ರಣವಾನಂದ ಸ್ವಾಮೀಜಿ ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    DAKSHINA KANNADA

    ವಿಟ್ಲ : ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ

    Published

    on

    ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3 ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಜೂನ್ 6 ರಂದು ಶಾಲೆಯ ಚುನಾವಣಾ ಅಭ್ಯರ್ಥಿಗಳು ಶಾಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.


    ಜೂನ್ 11 ರಿಂದ ಜೂನ್ 13 ರ ವರೆಗೆ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ 5 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಜೂನ್ 15 ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಚುನಾಯಿತರಾದವರು :

    ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ ಹತ್ತನೇ ತರಗತಿಯ ಸಾಕ್ಷಿ, ಗೃಹ ಮಂತ್ರಿಯಾಗಿ ಅಬೂಬಕರ್ ನವವಿ (10ನೇ ತರಗತಿ), ಸಂವಹನ ಮಂತ್ರಿಯಾಗಿ ಖತಿಜಾ ಇಫ್ಹಾ (10ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಶುಭಂ ಶೆಟ್ಟಿ (10ನೇ ತರಗತಿ ), ಶಿಕ್ಷಣ ಮಂತ್ರಿಯಾಗಿ ನಿಧಿಶಾ (9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಪ್ರಗತಿ (9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕುಮಾರ್ ಎಲ್ (9ನೇ ತರಗತಿ) ಹಾಗೂ ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ದೀಪಿತ್ (8ನೇ ತರಗತಿ) ಚುನಾಯಿತರಾದರು.

    ಸಹಾಯಕ ಮಂತ್ರಿಗಳಾಗಿ ಪ್ರಾಥಮಿಕ ವಿಭಾಗದಿಂದ ಯಶಸ್ವಿ ಟಿ ಎಮ್ (7ನೇ ತರಗತಿ), ದಿಯಾ ವೈ ಶೆಟ್ಟಿ (7ನೇ ತರಗತಿ), ಸನ್ನಿಧಿ ಎಲ್ ಎಸ್ (5ನೇ ತರಗತಿ), ಮುಹಮ್ಮದ್ ಫಹ್ಮಾನ್ (7ನೇ ತರಗತಿ), ಸಾತ್ವಿಕ್ ಕೆ (6ನೇ ತರಗತಿ), ಕೌಶಲ್ ಬಿ (5ನೇ ತರಗತಿ), ಸುಶಾನ್ (6ನೇ ತರಗತಿ) ಹಾಗೂ ಜಿ ಎಸ್ ರಿಷಿಕ್ ಅಂಚನ್ (5ನೇ ತರಗತಿ ಚುನಾಯಿತರಾದರು.

    ಇದನ್ನೂ ಓದಿ : ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

    ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ದರ್ಬೆ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ಲೀಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ಶೋಭಾ ಎಂ ಶೆಟ್ಟಿ ಉಪ ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಸಿದರು.

    ಶಿಕ್ಷಕಿ ರಶ್ಮಿ ಕೆ ಫೆರ್ನಾಂಡೀಸ್ ಚುನಾವಣಾ ಫಲಿತಾ0ಶ ಘೋಷಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಸಹಕರಿಸಿದರು.

    Continue Reading

    DAKSHINA KANNADA

    ಏಕಕಾಲಕ್ಕೆ ಅರಳಿ ನಿಂತ 42 ಬ್ರಹ್ಮಕಮಲ ಪುಷ್ಪ; ಮಧ್ಯರಾತ್ರಿಯೇ ವಿಶೇಷ ಪೂಜೆ ಸಲ್ಲಿಕೆ!

    Published

    on

    ಉತ್ತರ ಕನ್ನಡ: ಶ್ರಾವಣದ ಸಂಜೆಗಳಲ್ಲಿ ಬ್ರಹ್ಮ ಕಮಲ ಅರಳುವುದು ವಾಡಿಕೆ. ಒಮ್ಮೊಮ್ಮೆ ಅದಕ್ಕೆ ವ್ಯತಿರಿಕ್ತವಾಗಿ ಬೇಗವೂ ಬ್ರಹ್ಮ ಕಮಲ ಅರಳುತ್ತದೆ. ಆದರೆ ಒಮ್ಮೆಲೆ ಪುಷ್ಪಗುಚ್ಛದಷ್ಟು ಅಂದವಾಗಿ ಒಂದೆಡೆಗೇ ಅರಳುವ ಬ್ರಹ್ಮಕಮಲದ ಸೊಬಗನ್ನು ನೋಡುವ ಅನುಭವವೇ ಬೇರೆ! ಬ್ರಹ್ಮಕಮಲವು ಅಧ್ಯಾತ್ಮಿಕ ಸ್ಥಾನವನ್ನು ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳಲ್ಲಿ ಹೊಂದಿದೆ. ಹೀಗಾಗಿ ಬ್ರಹ್ಮಕಮಲ ಬರೀ ಹೂವಾಗದೇ ಈ ಹೂವೇ ಆರಾಧನೆಯ ವಸ್ತುವಾಗಿರುವುದು ವಿಶೇಷ!

    ಏಕಕಾಲಕ್ಕೆ 42 ಹೂಗಳು!

    ಯಲ್ಲಾಪುರ ಪಟ್ಟಣದ ರಾಮಾಪುರ ವ್ಯಾಪ್ತಿಯಲ್ಲಿ ವಾಸಿಸುವ ಗಣೇಶ್ ಪಂಡರಾಪುರ ಅವರ ಮನೆಯ ವಿಶೇಷವಾದ ಬ್ರಹ್ಮಕಮಲದ ಹೂವುಗಳು! ಯಾಕೆ ವಿಶೇಷ ಎಂದರೆ, ಹೋದ ವರ್ಷ ಇವರ ಮನೆಯಲ್ಲಿ ಸುಮಾರು 84 ಬ್ರಹ್ಮಕಮಲಗಳು ಒಟ್ಟಿಗೆ ಅರಳಿದ್ದವು. ಈ ವರ್ಷ 42 ಬ್ರಹ್ಮಕಮಲ ಏಕಕಾಲಕ್ಕೆ ಅರಳಿ ನಿಂತಿವೆ.

    ಪುಷ್ಪಕ್ಕೆ ಪೂಜೆ!

    ಮಧ್ಯರಾತ್ರಿ 12: 40 ರ ಸುಮಾರಿಗೆ ಈ ಹೂವುಗಳೆಲ್ಲಾ ಅರಳಿದ್ದವು ತಕ್ಷಣ ಗಣೇಶ್ ಪಂಡರಾಪುರ ಅವರ ಕುಟುಂಬ ವಾಡಿಕೆಯಂತೆ ಪೂಜೆ ಮಾಡಿ ನಂತರ ಮನೆಯವರಿಗೆ ಜನರಿಗೆ ಪ್ರಸಾದ ಹಂಚಿ ಹೂವುಗಳ ಮುಂದೆ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು, ಬ್ರಹ್ಮಕಮಲ ಅರಳುವ ವೇಳೆ ಕೇಳಿದ ಕೋರಿಕೆಗಳು ಈಡೇರುತ್ತವೆ ಎಂಬುದು ಪ್ರಸಿದ್ಧ ಲೋಕಾರೂಢಿಯ ನಂಬಿಕೆ.

    Continue Reading

    DAKSHINA KANNADA

    ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

    Published

    on

    ಭಾರತದಲ್ಲಿ ಐದು ವರ್ಷಗಳ ಬಳಿಕ ವ್ಯಕ್ತಿಯೊಬ್ಬರಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ದೃಢಪಡಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿಗೆ ಹಕ್ಕಿ ಜ್ವರ ತಗುಲಿದ್ದು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈರಸ್‌ನಿಂದ ಬಳಲುತ್ತಿರುವ ಮಗು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕೋಳಿಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. H9N2 ವೈರಸ್‌ನಿಂದ ಉಂಟಾಗುವ ಹಕ್ಕಿ ಜ್ವರದಿಂದ ಮಾನವ ಸೋಂಕಿನ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

    ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ. ಹಾಗಾದರೆ ಹಕ್ಕಿ ಜ್ವರ ಸೋಂಕಿತ ಪಕ್ಷಿಯನ್ನು ಸೇವಿಸುವುದು ಸುರಕ್ಷಿತವೇ? ಎಂಬ ಅನುಮಾನ ಜನರಲ್ಲಿ ಮೂಡಿತ್ತು.

    ಮಾಹಿತಿಯ ಪ್ರಕಾರ, ಹಕ್ಕಿ ಜ್ವರದ ಸೋಂಕಿಗೆ ಒಳಗಾದ ಪಕ್ಷಿಗಳನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು, ಆದರೂ ಪಕ್ಷಿಗಳನ್ನು ಬೇಯಿಸಿ, ಹೆಚ್ಚಿನ ಕಾಳಜಿ ವಹಿಸಿ ಸೇವನೆ ಮಾಡಬಹುದು. ಇದನ್ನು ಚೆನ್ನಾಗಿ ಬೇಯಿಸದಿದ್ದರೆ ವೈರಸ್ ಬರುವ ಅಪಾಯ ಹೆಚ್ಚಾಗಿರುತ್ತದೆ.
    ಹಾಗಾಗಿ ಅಡುಗೆ ಮಾಡುವಾಗ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸಿ ಕೋಳಿಯನ್ನು ಸ್ವಚ್ಛಗೊಳಿಸಿದ ಮೇಲೆ ಕೈಗಳು, ಪಾತ್ರೆಗಳನ್ನು ಸ್ವಚ್ಛ ಮಾಡಬೇಕು. ಮೊಟ್ಟೆ ಬಳಸುವಾಗಲೂ ಕೂಡ ಈ ಕ್ರಮಗಳನ್ನು ಪಾಲನೆ ಮಾಡಬೇಕು.

    Continue Reading

    LATEST NEWS

    Trending