Monday, July 4, 2022

ನೇತ್ರಾವತಿ ನದಿ ತಟದಲ್ಲಿ ಕೊಳೆತ ಶವ ಪತ್ತೆ

ಉಳ್ಳಾಲ: ಅಪರಿಚಿತ ಮೃತದೇಹವೊಂದು ನೇತ್ರಾವತಿ ನದಿ ತಟದಲ್ಲಿ ಕೊಳೆತ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹ ನೋಡಲು ವಾಹನ ಸವಾರರು ಸೇತುವೆ ಮೇಲೆ ಜಮಾಯಿಸಿದ ಹಿನ್ನೆಲೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.


ಸುಮಾರು 30-40 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ನೇತ್ರಾವತಿ ಸೇತುವೆ ಕೆಳಗಿನ ಭಾಗದಲ್ಲಿ ಪತ್ತೆಯಾಗಿದೆ. ವಾಹನ ಸವಾರರೊಬ್ಬರು ಮೃತದೇಹ ಗಮನಿಸಿ, ಬಳಿಕ ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಗ್ಗಿನ ಸಮಯವಾಗಿದ್ದುದರಿಂದ ಸೇತುವೆಯಲ್ಲಿ ವಾಹನಗಳು ಹೆಚ್ಚಿದ್ದು, ಮೃತದೇಹವನ್ನು ನೋಡಲು ಕೆಲ ವಾಹನಸವಾರರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮವಾಗಿ ವಾಹನಗಳಿಗೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿ ಮೃತದೇಹ ನೀರಿನಿಂದ ಮೇಲಕ್ಕೆತ್ತಿದೆ. ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ ವಾಹನ ಸವಾರರನ್ನು ಚದುರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಂದರಿಗೆ ಶ್ರೀಲಂಕಾದ MSC ಅರ್ಮೀನಿಯಾ ಹಡಗು ಆಗಮನ

ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್‌ಗೆ ನಿನ್ನೆ ಸಾಯಂಕಾಲ ಮುಖ್ಯ ಕಂಟೇನರ್ ಹಡಗು ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಆಗಮಿಸಿದ್ದು, ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು.ಇದರೊಂದಿಗೆ ಎನ್‌ಎಂಪಿಎ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. 276.5 ಮೀಟರ್ ಉದ್ದ...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...

ಮಂಗಳೂರಿನಲ್ಲಿ 518 ಅಕ್ರಮ ವಿದೇಶಿಗರು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.ಸರಿಯಾದ ದಾಖಲೆಗಳಿಲ್ಲದ 518 ವಿದೇಶಿ ವಲಸಿಗರೆಂದು ಹೇಳಲಾದವರ ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಕ್ರಮವಾಗಿ ‌ನೆಲೆಸಿರುವ ವಿದೇಶಿಯರ...