Connect with us

    LATEST NEWS

    ಕರ್ನಾಟಕದಿಂದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ..!? ಯಾರೆಲ್ಲಾ ಗೊತ್ತಾ?

    Published

    on

    ದೆಹಲಿ/ಮಂಗಳೂರು:  ಸತತ 3ನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ. ನರೇಂದ್ರ ಮೋದಿ ಅವರ ಪದಗ್ರಹಣದ ಜೊತೆಗೆ ಕೇಂದ್ರ ಸಚಿವರಾಗಿ ಯಾರು ಅಧಿಕಾರ ಸ್ವೀಕಾರ ಮಾಡುತ್ತಾರೆ ಅನ್ನೋ ಕುತೂಹಲ ಕೆರಳಿಸಿದೆ. ಈಗಾಗಲೇ ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಕೂಡಾ ಲಭ್ಯವಾಗಿದೆ.

    ನೂತನ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುವ ನಾಯಕರಿಗೆ ಇಂದು ಪ್ರಧಾನಿ ನಿವಾಸಕ್ಕೆ ಆಹ್ವಾನ ನೀಡಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕದ ಮೂವರು ಸಂಸದರಾದ ಹೆಚ್‌.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಸಭೆಯಲ್ಲಿ ಭಾಗಿಯಾಗಿದ್ದರು.

    ರಾಜ್ಯದಿಂದ ಈ ಮೂವರ ಜೊತೆಗೆ  ತುಮಕೂರು ಸಂಸದ ವಿ.ಸೋಮಣ್ಣ ಅವರು ಕೂಡಾ ಪ್ರಧಾನಿ ನಿವಾಸದಲ್ಲಿ ನಡೆದ ಚಹಾಕೂಟದಲ್ಲಿ ಭಾಗಿಯಾಗಿದ್ದು, ಕೇಂದ್ರ ಸಚಿವ ಸ್ಥಾನ ಸಿಗಲಿದೆಯಾ ಎಂಬುದು ಕುತೂಹಲ ಮೂಡಿದೆ.

    ಪ್ರಮಾಣ ವಚನಕ್ಕೂ ಮೊದಲು ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಶ್ರದ್ದಾಂಜಲಿ ಸಲ್ಲಿಸಿದ ‘ಮೋದಿ’

    ಕೇಂದ್ರ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಕೂಡ ಮೋದಿ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಕರ್ನಾಟಕದ ಐವರಿಗೆ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ದೊರಕಲಿದೆ ಎಂದು ಹೇಳಲಾಗಿದೆ.

    Click to comment

    Leave a Reply

    Your email address will not be published. Required fields are marked *

    BANTWAL

    ಉಳಾಯಿಬೆಟ್ಟು ದರೋಡೆ ಪ್ರಕರಣ : 10 ಜನರ ಬಂಧನ

    Published

    on

    ಜೂನ್ 21 ರಂದು ಉಳಾಯಿಬೆಟ್ಟಿನ ಪೆರ್ಮಂಕಿಯ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 7.45 ರ ಸುಮಾರಿಗೆ ಮುಸುಕುಧಾರಿ ವ್ಯಕ್ತಿಗಳು ಪದ್ಮನಾಭ ಕೋಟ್ಯಾನ್ ಅವರಿಗೆ ಚೂರಿಯಿಂದ ಹಲ್ಲೆ ಮಾಡಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.

    ಗುತ್ತಿಗೆದಾರ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ನುಗ್ಗಿದ್ದ ದರೋಡೆಕೋರರು ಇಲ್ಲಿ ಅಪಾರ ಪ್ರಮಾಣದ ಹಣ ಹಾಗೂ ನಗದು ಅಡಗಿಸಿ ಇಡಲಾಗಿದೆ ಎಂಬ ಹಿನ್ನೆಲೆಯಲ್ಲಿ ದರೋಡೆ ನಡೆಸಿದ್ದಾರೆ. ದರೋಡೆ ನಡೆದ ಬಳಿಕ ಮನೆಯ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರಿಗೆ ಇದು ಉದ್ಯಮಿಯ ಪರಿಚಯದವರದೇ ಕೃತ್ಯ ಎಂಬುವುದು ಕೂಡಾ ಅರ್ಥವಾಗಿದೆ. ಹೀಗಾಗಿ ಮೊದಲಿಗೆ ಉದ್ಯಮಿಯ ಜೊತೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನೀರುಮಾರ್ಗದ ವಸಂತ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಅರೋಪಿ ವಸಂತ ಜೊತೆಯಲ್ಲಿ ನೀರುಮಾರ್ಗದ ಇನ್ನೋರ್ವ ಆರೋಪಿ ರಮೇಶ್ ಪೂಜಾರಿ ಹಾಗೂ ಅಡ್ಯನಡ್ಕದ ರೇಮಂಡ್ ಡಿಸೋಜಾ ಎಂಬವರು ಮಾಹಿತಿದಾರರಾಗಿ ಕೆಲಸ ಮಾಡಿದ್ದಾರೆ. ಇವರ ಜೊತೆ ಕಾಸರಗೋಡು ಜಿಲ್ಲೆಯ ಉಪ್ಪಳದ ಬಾಲಕೃಷ್ಣ ಶೆಟ್ಟಿ ಕೂಡಾ ಕೈ ಜೋಡಿಸಿ ಕೇರಳದ ದರೋಡೆ ತಂಡಕ್ಕೆ ಮಾಹಿತಿ ರವಾನಿಸಿದ್ದಾನೆ.

    ಈ ನಾಲ್ಕು ಆರೋಪಿಗಳು ನೀಡಿದ ಮಾಹಿತಿ ಪ್ರಕಾರ, ಕೇರಳದ ಬಿಜು ಹಾಗೂ ಸತೀಶ್ ಬಾಬು ಎಂಬ ಕ್ರಿಮಿನಲ್ ಗಳು ತಮ್ಮ ಎರಡು ತಂಡದ ಸದಸ್ಯರನ್ನು ದರೋಡೆ ನಡೆಸಲು ಮಂಗಳೂರಿಗೆ ಕಳುಹಿಸಿದ್ದಾರೆ. ಈ ದರೋಡೆಯ ಸಂಚಿನಲ್ಲಿ ಒಟ್ಟು ಹದಿನೈದು ಜನರು ಭಾಗಿಯಾಗಿದ್ದು, ಸದ್ಯ ಹತ್ತು ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜಾಕಿರ್, ವಿನೋಜ್ ಪಿಕೆ, ಸಜೀಶ್, ಶಿಜೋ ದೇವಸ್ಸಿ, ಸತೀಶ್ ಬಾಬು, ಬಿಜು ಕೇರಳದವರಾಗಿದ್ದರೆ, ಉಳಿದ ನಾಲ್ವರೂ ಕರ್ನಾಟಕದವರಾಗಿದ್ದಾರೆ.

    ಉದ್ಯಮಿ ಮನೆಯಲ್ಲಿ ಕೋಟ್ಯಂತರ ರೂಪಾಯಿಯ ಚಿನ್ನ ಹಾಗೂ ನಗದು ಇದೆ ಎಂದು ಈ ದರೋಡೆಗೆ ಸಂಚು ರೂಪಿಸಲಾಗಿತ್ತು. ದರೋಡೆ ನಡೆಸಿದ ಆರೋಪಿಗಳು ಬಚ್ಚಿಟ್ಟ ಚಿನ್ನಾಭರಣ ನೀಡುವಂತೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರಿಗೆ ಚಾಕುವಿನಿಂದ ಹಲ್ಲೆ ಕೂಡಾ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು

    Continue Reading

    kerala

    ಕೇರಳದಲ್ಲಿ ಅಮೀಬಾ ಕಾಯಿಲೆಗೆ 3 ಮಕ್ಕಳ ಬಲಿ..!

    Published

    on

    ಮಂಗಳೂರು ( ಕೇರಳ ) : ಕೇರಳದಲ್ಲಿ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುವ ಮೆದಳು ಸಂಬಂಧಿ ಕಾಯಿಲೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇಂದು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷ ಪ್ರಾಯದ ಮೃದುಲ್ ಎಂಬ ಬಾಲಕನ ಸಾವಿನೊಂದಿಗೆ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

    ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) 

    ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದು ಕರೆಯಲಾಗುವ ಮೆದುಳು ತಿನ್ನುವ ಅಮೀಬಾದಿಂದ ಈ ಕಾಯಿಲೆ ಹರಡುತ್ತದೆ. ವಿಶೇಷ ಅಂದ್ರೆ ಈ ಕಾಯಿಲೆ ನಿಂತ ನೀರಿನ ಕೆರೆ, ಈಜುಕೊಳ ಮೊದಲಾದ ಕಡೆಯಲ್ಲಿ ಸ್ನಾನ ಮಾಡಿದವರಿಗೆ ಹರಡಿದ್ದು ಮೃತ ಮೂವರೂ ಈ ರೀತಿ ಸ್ನಾನ ಮಾಡಿದವರಾಗಿದ್ದಾರೆ. ಇಲ್ಲಿಂದಲೇ ಈ ಅಮಿಬಾ ಮಕ್ಕಳ ದೇಹ ಪ್ರವೇಶ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಜೂನ್ 16 ರಂದು ಕೋಯಿಕ್ಕೋಡ್‌ನ ಅಚಂಕುಲಂ ಫಾರೂಕ್ ಕಾಲೇಜು ಬಳಿಯ ಕೆರೆಯಲ್ಲಿ ಮೃದುಲ್ ಈಜಾಡಿದ್ದಾನೆ . ಬಳಿಕ ಮೃದುಲ್‌ಗೆ ರೋಗ ಲಕ್ಷಣ ಕಾಣಿಸಿದ ತಕ್ಷಣ ಪಾಲಿಕೆ ಅಧಿಕಾರಿಗಳು ಕೆರೆಯನ್ನು ಮುಚ್ಚಿದ್ದಾರೆ. ಕಣ್ಣೂರಿನ 13 ವರ್ಷದ ದಕ್ಷಿಣಾ ಎಂಬ ಬಾಲಕಿ ಜೂನ್ 12 ರಂದು ಇದೇ ಕಾಯಿಲೆಯಿಂದ ಮೃತ ಪಟ್ಟಿದ್ದಳು. ಜನವರಿಯಲ್ಲಿ ಶಾಲೆಯಿಂದ ಮುನ್ನಾರ್‌ಗೆ ಅಧ್ಯಯನ ಪ್ರವಾಸ ಹೋಗಿದ್ದಾಗ ಈಜುಕೊಳದಲ್ಲಿ ಸ್ನಾನ ಮಾಡಿದ ಬಳಿಕ ಈ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಇನ್ನು ಮಲ್ಲಪುರಂ ಜಿಲ್ಲೆಯ ಮುನ್ನಿಯೂರ್ ಕಲಿಯತ್ತಮುಕ್ ಮೂಲದ ಫದ್ವಾ ಎಂಬ 5 ವರ್ಷದ ಮಗು ಕೂಡಾ ಇದೇ ರೋಗ ಲಕ್ಷಣದಿಂದ ಮೃತ ಪಟ್ಟಿದ್ದು, ಮಗು ಮನೆಯ ಸಮೀಪದ ಕಾಡುಂಡಿಪುಳ ಎಂಬಲ್ಲಿ ಸ್ನಾನ ಮಾಡಿದ ಬಳಿಕ ಜ್ವರ ಕಾಣಿಸಿಕೊಂಡಿತ್ತು.

    ರೋಗದ ಗುಣ ಲಕ್ಷಣ

    ನಾಗ್ಲೇರಿಯಾ ಫೌಲೆರಿ ಅಮೀಬಾ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸುವ ನರಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ. ಮೆದುಳು ಮತ್ತು ಮೆನಿಂಜಸ್ ಎಂಬ ಭಾಗವನ್ನು ಆವರಿಸಿಕೊಳ್ಳುವ ಮೂಲಕ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ರೋಗಾಣುಗಳು ಮೆದುಳಿಗೆ ಪ್ರವೇಶಿಸಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಾಮಾನ್ಯ ರೋಗಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ವಾಂತಿ, ಅರೆನಿದ್ರಾವಸ್ಥೆ ಹಾಗೂ ನಿತ್ರಾಣ ಉಂಟಾಗುತ್ತದೆ. ಮೆದುಳನ್ನು ಅಮೀಬಾ ತಿನ್ನುವುದರಿಂದ ಮೆದುಳಿನ ಕೋಶಗಳು ನಾಶವಾಗಿ ಜೀವಹಾನಿ ಸಂಭವಿಸುತ್ತಿದೆ. 10,000 ಜನರಲ್ಲಿ ಒಬ್ಬರಿಗೆ ಬರುವ ಈ ಅಪರೂಪದ ಕಾಯಿಲೆಯಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ 3% ಮಾತ್ರ.

    Continue Reading

    LATEST NEWS

    ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!

    Published

    on

    ಮಂಗಳೂರು: ಮದುವೆ, ಸಂಸಾರ ಹಾಗೂ ಮಕ್ಕಳು ಎಲ್ಲವೂ ಸರಿಯಾದ ಸಮಯಕ್ಕೆ ಆದರೇನೇ ಚಂದ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಮದುವೆಯನ್ನು ಮುಂದಕ್ಕೆ ಹಾಕುವವರೇ ಹೆಚ್ಚಾಗಿದ್ದಾರೆ. ಮದುವೆಗೆ ವಧು ಹುಡುಕುತ್ತಿರುವಾಗ, ಮನೆಯ ಹಿರಿಯರು ಹುಡುಗಿಯ ಮನೆಗೆ ಹೋಗುವ ಸಂಪ್ರದಾಯವಿದೆ. ಹುಡುಗಿ ನೋಡುವ ಶಾಸ್ತ್ರದ ಬಳಿಕ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡಲು ಅವಕಾಶವಿರುತ್ತದೆ. ಈ ವೇಳೆ ಆಕೆಯ ಬಳಿ ಈ ಪ್ರಶ್ನೆಗಳನ್ನು ಕಡ್ಡಾಯವಾಗಿ ಕೇಳಲೇ ಬೇಕಂತೆ. ಹುಡುಗಿಯು ನೀಡುವ ಉತ್ತರವು ಈಕೆಯು ತನಗೆ ಸಂಗಾತಿಯಾಗಲು ಅರ್ಹಳೇ ಎನ್ನುವುದಕ್ಕೆ ಸ್ಪಷ್ಟತೆಯೂ ಸಿಗುತ್ತದೆಯಂತೆ.

    ಯಾವ ರೀತಿಯ ಜೀವನ ಸಂಗಾತಿಯ ಬೇಕೆಂದು ಪ್ರಶ್ನಿಸಿ

    ತಮ್ಮ ಜೀವನ ಸಂಗಾತಿಯ ಕುರಿತು ಎಲ್ಲರೂ ಕನಸುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಹುಡುಗರು ಹುಡುಗಿಯ ಬಳಿ ಯಾವ ರೀತಿಯ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಪಡೆಯಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳುವುದು ಒಳ್ಳೆಯದು. ಆಕೆಯ ಉತ್ತರಕ್ಕೆ ತಕ್ಕಂತೆ ನೀವಿದ್ದರೆ ನೀವು ಅವರಿಗೆ ಸರಿಯಾದ ಸಂಗಾತಿಯಾದಂತೆಯೇ ಎನ್ನುವುದು ನಿಮಗೆ ತಿಳಿಯುತ್ತದೆ.

    ಇಷ್ಟ ಕಷ್ಟಗಳ ಬಗ್ಗೆ ತಿಳಿಯಿರಿ

    ಹುಡುಗ ಹುಡುಗಿಯ ಮಾತುಕತೆಯ ವೇಳೆಯಲ್ಲಿ ತನ್ನ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ಹುಡುಗಿಯ ಇಷ್ಟವೇನು ಎನ್ನುವುದು ತಿಳಿಯುವುದು ಮುಖ್ಯ. ಇಬ್ಬರ ಇಷ್ಟ ಕಷ್ಟಗಳು ಒಂದೇಯಾಗಿದ್ದರೆ ಮದುವೆಯ ನಿರ್ಧಾರಕ್ಕೆ ಹೋಗಬಹುದು. ಒಂದು ವೇಳೆ ಇಬ್ಬರ ಇಷ್ಟಗಳು ತದ್ವಿರುದ್ದವಾಗಿದ್ದರೆ ಸಂಬಂಧವನ್ನು ಮುಂದುವರೆಸುವುದೇ ಬೇಡವೇ ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣವು ಸಿಗುತ್ತದೆ.

    ಸೇವಿಸುವ ಆಹಾರದ ಬಗ್ಗೆ ಮಾತನಾಡಿ

    ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಳಿ ಸಸ್ಯಾಹಾರಿ ಅಥವಾ ಮಾಂಸಾಹಾರಿಯೇ? ಎನ್ನುವ ಪ್ರಶ್ನೆಗಳನ್ನು ಕೇಳಲೇಬೇಕು. ಇಬ್ಬರ ಆಹಾರ ಹಾಗೂ ಅಭಿರುಚಿಗಳು ಬೇರೆ ಬೇರೆಯಾಗಿದ್ದರೆ ಬದುಕು ಕಷ್ಟವೆನಿಸುತ್ತದೆ.

    ಭವಿಷ್ಯದ ಯೋಜನೆಯ ಬಗ್ಗೆ ಪ್ರಶ್ನಿಸಿ

    ಈಗಿನ ಕಾಲದಲ್ಲಿ ಬಹುತೇಕ ಹುಡುಗಿಯರು ಉದ್ಯೋಗದಲ್ಲಿರುತ್ತಾರೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲವೊಮ್ಮೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇರಬಹುದು. ಆದರೆ ಕೆಲ ವಿವಾಹದ ಬಳಿಕ ಉದ್ಯೋಗಕ್ಕೆ ಹೋಗಬೇಕು, ಹೀಗೆ ಜೀವನ ನಡೆಯಬೇಕು ಎಂದು ಕೊಂಡಿರುತ್ತಾರೆ. ಪರಸ್ಪರ ಪ್ರಶ್ನಿಸಿ ಉತ್ತರ ಕಂಡುಕೊಂಡರೆ ಇಬ್ಬರಿಗೂ ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಇಬ್ಬರ ಜೀವನದ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜೊತೆಯಾಗಿ ಬದುಕಲು ಕಷ್ಟವಾಗಬಹುದು. ಈ ಪ್ರಶ್ನೆಯನ್ನು ಮದುವೆಗೂ ಮುಂಚಿತವಾಗಿ ಕೇಳುವುದು ಸೂಕ್ತ.

    Continue Reading

    LATEST NEWS

    Trending