Friday, May 27, 2022

ಡಾನ್‌ ರವಿ ಪೂಜಾರಿ ನಂತರ ಮಂಗಳೂರಿನ ಮತ್ತೊಬ್ಬ ಭೂಗತ ಪಾತಕಿಯನ್ನು ಬಂಧಿಸಿದ ಇಂಟರ್‌ ಪೋಲ್‌ ಪೊಲೀಸರು

ಮಂಗಳೂರು: ಮಂಗಳೂರು ಮೂಲದ ಭೂಗತ ಪಾತಕಿ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್​ನಲ್ಲಿ ಇಂಟರ್​ಪೋಲ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ.


ಈತ ಭೂಗತ ಪಾತಕಿ ಛೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ನಡೆಸುತ್ತಿದ್ದ. ಬೆಂಗಳೂರಿನ ಕೆಲವು ಕೇಸ್​ಗಳಲ್ಲೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಇದೀಗ ಫಿಲಿಫೈನ್ಸ್​​ನಲ್ಲಿ ಇಂಟರ್​ಪೋಲ್ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಕಳೆದ 10 ವರ್ಷದಿಂದ ರವಿ ಪೂಜಾರಿ ಗ್ಯಾಂಗ್​ನಿಂದ ಬೇರೆ ಆಗಿ, ಪ್ರತ್ಯೇಕ ಗ್ಯಾಂಗ್ ಮಾಡಿಕೊಂಡಿದ್ದ ಸುರೇಶ್ ಪೂಜಾರಿ, ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು.

ಮೂಲಗಳ ಪ್ರಕಾರ, ಸುರೇಶ್ ಪೂಜಾರಿ ಅಕ್ಟೋಬರ್ 15ರಂದು ಸಿಕ್ಕಿಬಿದ್ದಿದ್ದು, ಪೊಲೀಶ್ ವಶದಲ್ಲಿದ್ದಾನೆ. ಈ ವರ್ಷದ ಆರಂಭದಲ್ಲಿ ಮತ್ತೊಬ್ಬ ಕುಖ್ಯಾತ ಡಾನ್ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿತ್ತು.

LEAVE A REPLY

Please enter your comment!
Please enter your name here

Hot Topics

ಪುತ್ತೂರು: ಮರ ಕಡಿಯುತ್ತಿದ್ದಾಗ ವಿದ್ಯುತ್ ಶಾಕ್-ಕಾರ್ಮಿಕ ಸಾವು

ಪುತ್ತೂರು: ಮರ ಕಡಿಯುತ್ತಿದ್ದ ಸಂದರ್ಭ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ವಯರ್ ತಾಗಿ ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರಿನ ನರಿಮೊಗರು ಎಂಬಲ್ಲಿ ಗುರುವಾರ ನಡೆದಿದೆ.ಮಾಡನ್ನೂರು ನಿವಾಸಿ ಮಲ್ಲ ಎಂಬವರ ಪುತ್ರ ವಸಂತ(35)...