Connect with us

LATEST NEWS

ಪತಿ ಅಗಲಿದ ಕೆಲವೇ ಗಂಟೆಗಳಲ್ಲಿ ಪತ್ನಿ ಸಾವು…..!!

Published

on

ಮಂಗಳೂರು : ಪತಿ ಸಾವನಪ್ಪಿದ ಕೆಲವೇ ಗಂಟೆಗಳಲ್ಲಿ ಪತ್ನಿಯೂ ಮೃತಪಟ್ಟ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಎಂದ ಮೃತಪಟ್ಟ ದಂಪತಿಯಾಗಿದ್ದಾರೆ.

ನಝೀರ್ ಅಹ್ಮದ್ ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ರಾತ್ರಿ ತೀವ್ರ ಅಸೌಖ್ಯ ಉಂಟಾಗಿತ್ತು. ಈ ಹಿನ್ನಲೆ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿಮಧ್ಯೆ ಕೊನೆಯುಸಿರೆಳೆದರು. ನಂತರ ಅವರ ಮೃತದೇಹವನ್ನು ಮನೆಗೆ ತರಲಾಗಿದ್ದು, ಅಂತಿಮ ದರ್ಶನ ಪಡೆದ ನಝೀರ್ ಅಹ್ಮದ್ ಅವರ ಪತ್ನಿ ಜಮೀಲಾ ಅವರು ಪತಿಯ ಅಗಲುವಿಕೆಯಿಂದ ಖಿನ್ನರಾಗಿದ್ದು ಸುಮಾರು 2:30ರ ಸುಮಾರಿಗೆ ಹೃದಯಾಘಾತದಿಂದ ಅವರೂ ಕೊನೆಯುಸಿರೆಳೆದಿದ್ದಾರೆ.

ಮೃತರ ದಫನ ಕಾರ್ಯ ಗುರುವಾರ ಉಳ್ಳಾಲ ದರ್ಗಾ ವಠಾರದ ‘ಮಯ್ಯತ್ ಗಾರ್’ ನಲ್ಲಿ ನೆರವೇರಿತು.

ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಸೇರಿದ್ದರು. ಆ ಪಕ್ಷದಿಂದ ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿ, ಸೋತಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿಯಾಗಿ, 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಉಳ್ಳಾಲ ನಗರ ಸಭೆಯ ಕುಡಿಯುವ ನೀರಿನ ಗುತ್ತಿಗೆದಾರರಾಗಿದ್ದರು.

LATEST NEWS

ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Published

on

ಬೆಂಗಳೂರು: ಚುನಾವಣಾ ಪ್ರಚಾರದ ವೇಳೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಕಿರಿಕ್ ಮಾಡಿಕೊಂಡಿದ್ದಾರೆ. ಠೇವಣಿದಾರರ ಸಭೆ ಕರೆದು ಸಭೇಯ ನಡುವೆ ಕಿರಿಕ್ ಮಾಡಿ ಸಭೆಯಿಂದ ಹೊರ ನಡೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದು, ಚುನಾವಣಾ ಅಧಿಕಾರಿಗಳ  ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

thejasvi surya

READ MORE..; ಮೈದಾನ ಸ್ವಚ್ಛತೆಯಲ್ಲಿ ತೊಡಗಿದ ಒಡೆಯರ್ ದಂಪತಿ..!

ಎಪ್ರಿಲ್ 13 ರಂದು ಈ ಘಟನೆ ನಡೆದಿದ್ದು, ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿ ಸೂರ್ಯ ಕೋಪರೇಟಿವ ಬ್ಯಾಂಕ್ ಠೇವಣಿದಾರರ ಸಭೆ ಕರೆದಿದ್ದರು. ಸಭೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಠೇವಣಿದಾರರು ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ತಬ್ಬಿಬ್ಬಾಗಿದ್ದರು. ಹೀಗಾಗಿ ಠೇವಣಿದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ ತೇಜಸ್ವಿ ಸೂರ್ಯ ಸಭೆಯಿಂದ ಹೊರ ನಡೆಯಲು ಮುಂದಾಗಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಸಭೆಯಲ್ಲಿದ್ದವರು ಡೌನ್ ಡೌನ್ ಎಂದು ಘೋಷಣೆ ಕೂಗಿದ್ದಾರೆ. ಅವರು ಹೊರ ಹೋಗದಂತೆ ತಡೆಯಲು ಬಂದವರನ್ನು ತಳ್ಳಿದ್ದು , ಮಹಿಳೆಯೊಬ್ಬರ ಕೈ ಹಿಡಿದು ಎಳೆದಿದ್ದಾರೆ. ಚುನಾವಣಾ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾಗಿ ಸಭೆಯಲ್ಲಿದ್ದ ಠೇವಣಿದಾರರು ಆರೋಪಿಸಿದ್ದಾರೆ.

Continue Reading

LATEST NEWS

ಜೀವನದಲ್ಲಿ ಸಂಪಾದಿಸಿದ್ದ 200 ಕೋಟಿ ಆಸ್ತಿ ದಾನ! ಕಾರಣವೇನು?

Published

on

ಅಹ್ಮದಾಬಾದ್: ಒಬ್ಬ ಸನ್ಯಾಸಿಯು ತನ್ನ ಲೌಕಿಕ ಪ್ರಪಂಚದಿಂದ ದೂರವಾಗಿ, ಏಕಾಂಗಿ ಮತ್ತು ಏಕಾಂತದಲ್ಲಿ ತನ್ನ ಜೀವನವನ್ನು ನಡೆಸಲು ಭಯಸುತ್ತಾನೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿದ್ಯಾವಂತರು ಮಾತ್ರ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಸಾಕಷ್ಟು ಜನರು ಸನ್ಯಾಸತ್ವದ ಕಡೆಗೆ ವಾಲುತ್ತಿದ್ದಾರೆ. ಇದೀಗ ಗುಜರಾತ್‌ನ ಉದ್ಯಮಿಯೊಬ್ಬರು ಹಾಗೂ ಅವರ ಪತ್ನಿ ತಮ್ಮ 200 ಕೋಟಿ ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.

ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಭಾವೇಶ್ ಭಾಯಿ ಭಂಡಾರಿ ಹಾಗೂ ಪತ್ನಿ ತಮ್ಮ ಇಡೀ ಜೀವಮಾನದಲ್ಲಿ ಗಳಿಸಿದ 200 ಕೋಟಿಗೂ ಹೆಚ್ಚು ಆಸ್ತಿಯನ್ನ ದತ್ತಿ ಸಂಸ್ಥೆಗೆ ದಾನ ನೀಡಿದ್ದಾರೆ. ಲೌಕಿಕ ಜೀವನ ತೊರೆದು ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ಭಾವೇಶ್ ಭಂಡಾರಿ ಅವರು ಗುಜರಾತ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರು ಆಗಾಗ್ಗೆ ಜೈನ ಸಮುದಾಯದ ಮುನಿಗಳನ್ನು ಭೇಟಿಯಾಗುತ್ತಿದ್ದರು. ಇದೀಗ ಲೌಕಿಕ ಜೀವನ ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.

ಉದ್ಯಮಿ ಭಾವೇಶ್ ಭಾಯ್ ಭಂಡಾರಿ ಯಾರು?

ಭಾವೇಶ್ ಭಾಯ್ ಭಂಡಾರಿ ಅವರು ಸಬರಕಾಂತದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದ ಯಾವುದೇ ಕಷ್ಟವನ್ನು ನೋಡದೇ ಬೆಳೆದಿದ್ದಾರೆ. ಭಾವೇಶ್ ಭಾಯ್ ಭಂಡಾರಿ ಅವರು ಕನ್ಸ್​ಟ್ರಕ್ಷನ್​ ವ್ಯವಹಾರವನ್ನು ಹೊಂದಿದ್ದು, ಅಹಮದಾಬಾದ್‌ನಲ್ಲೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು.

ಜೈನ ಸಮುದಾಯದತ್ತ ಒಲವು:

ಭಾವೇಶ್ ಭಾಯ್ ಭಂಡಾರಿ ಅವರ ಕುಟುಂಬ ಜೈನ ಸಮುದಾಯದತ್ತ ಒಲವು ಹೊಂದಿತ್ತು. ಆಗಾಗ್ಗೆ ಅವರ ಕುಟುಂಬವು ಜೈನ ಮುನಿಗಳನ್ನು, ದೀಕ್ಷಿಕರನ್ನ ಭೇಟಿಯಾಗುತ್ತಿತ್ತು. ಇದೀಗ ಭಾವೇಶ್, ಅವರ ಪತ್ನಿ ಜೈನ ಸಮುದಾಯಕ್ಕೆ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಈಗ ದೀಕ್ಷೆ ತೆಗೆದುಕೊಂಡ ನಂತರ ಭಿಕ್ಷಾಟನೆಯಲ್ಲಿಯೇ ಜೀವನ ಕಳೆಯಲಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್, ಎಸಿ, ಮೊಬೈಲ್ ಫೋನ್ ಇತ್ಯಾದಿ ಎಲ್ಲ ಸೌಕರ್ಯಗಳನ್ನೂ ತ್ಯಜಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈಗ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ತಿರುಗಾಡಬೇಕಾಗುತ್ತದೆ.

ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಭವೇಶ್ ಭಾಯ್ ಭಂಡಾರಿ ಅವರ ಪರಿಚಿತರಾದ ದಿಕುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದು, ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.

Continue Reading

LATEST NEWS

ಮೈದಾನ ಸ್ವಚ್ಛತೆಯಲ್ಲಿ ತೊಡಗಿದ ಒಡೆಯರ್ ದಂಪತಿ..!

Published

on

ಮೈಸೂರು: ಮೈಸೂರು ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿರುವ ಯದುವೀರ್ ಒಡೆಯರ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ  ಪ್ರಚಾರದಲ್ಲಿ ಭಾಗವಹಿಸಿದ್ದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದರು. 60 ಸಾವಿರಕ್ಕಿಂತಲೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.  ಇದೀಗ ಕಾಲೇಜು ಮೈದಾನದಲ್ಲಿ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ದಂಪತಿ ಕಸ ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ.

ಈ ಮೂಲಕ ಯದುವೀರ್ ದಂಪತಿ ಗಮನ ಸೆಳೆದಿದ್ದಾರೆ.  ಮಹಾರಾಜ ಕಾಲೇಜು ಮೈದಾನದಲ್ಲಿ ಇತರ ಕಾರ್ಯಕರ್ತರ ಜತೆ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ದಂಪತಿ ಶುಚಿತ್ವ ಕಾರ್ಯದಲ್ಲಿ ಭಾಗಿಯಾದರು. ಈ ಮೂಲಕ ನಾನೂ ಕೂಡಾ ಸಾಮಾನ್ಯ ಕಾರ್ಯಕರ್ತ ಎಂದು ಸಾಬೀತು ಪಡಿಸಿದ್ದಾರೆ. ಯದುವೀರ್ ಪರವಾಗಿ ಪ್ರಧಾನಿ ಮೋದಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಮತಯಾಚನೆ ಮಾಡಿದ್ದರು. ಅಲ್ಲದೆ, ರಾಜ್ಯ ಇತರ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆಯೂ ಮತದಾರರಿಗೆ ಮನವಿ ಮಾಡಿದ್ದರು.

Continue Reading

LATEST NEWS

Trending