LATEST NEWS
‘ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿರೋದು ನಿಜ; ಮರುಪರೀಕ್ಷೆ ನಡೆಸಿ’ ಎಂದ ಸುಪ್ರೀಂಕೋರ್ಟ್!
ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ನೀಟ್. ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಕೇಸ್ ಸುಪ್ರೀಂ ಕೋರ್ಟ್ನಲ್ಲಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಈಗಾಗಲೇ ಕೇಂದ್ರ ಸರ್ಕಾರ ತನ್ನ ನಿಲುವು ಸುಪ್ರೀಂಕೋರ್ಟ್ಗೆ ತಿಳಿಸಿದ್ದು, ಪರೀಕ್ಷೆ ರದ್ದುಗೊಳಿಸೋ ಉದ್ದೇಶವಿಲ್ಲ ಎಂದು ಹೇಳಿದೆ. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ ನೀಡಿದೆ.
ನೀಟ್ ಪರೀಕ್ಷೆ ಅನ್ನೋದು ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟ. ನೀಟ್ ಪರೀಕ್ಷೆ ರದ್ದು ಎಂಬುದು ಕೊನೆಯ ಆಯ್ಕೆಯಾಗಬೇಕು. ದೇಶದ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬ ನೀಟ್, ಜೆಇಇ ಪಾಸ್ ಮಾಡೋ ಗುರಿ ಹೊಂದಿದೆ. ಹಾಗಾಗಿ ನೀಟ್ ರದ್ದು ಮಾಡುವುದು ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮರು ಪರೀಕ್ಷೆಗೆ ಆದೇಶ ಮಾಡುವಾಗ ಎಚ್ಚರ ಇರಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಷ್ಟೇ ಅಲ್ಲ ಪ್ರಶ್ನೆ ಪತ್ರಿಕೆ ಲೀಕ್ ಯಾರು ಮಾಡಿದ್ದು ಎಂದು ಗುರುತಿಸೋದು ಹೇಗೆ? ಲೀಕ್ ಆಗಿರೋದು ಪಕ್ಕಾ . ಆದರೆ, ಅದರ ಫಲಾನುಭವಿಗಳು ಯಾರು ಎಂದು ಹೇಗೆ ಗುರುತಿಸುವುದು. ಎಷ್ಟರ ಮಟ್ಟಿಗೆ ಲೀಕ್ ಆಗಿದೆ ಎಂದು ಗೊತ್ತಾಗಬೇಕು. ಲೀಕ್ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯವೇ ಆಗದಿದ್ರೆ ರೀ ಎಕ್ಸಾಮ್ ಮಾಡಿ ಎಂದಿದೆ ಸುಪ್ರೀಂ ಕೋರ್ಟ್.
DAKSHINA KANNADA
ಮಮ್ತಾಜ್ ಅಲಿ ಜೀವಂತವಿದ್ದಾರಾ ? ಮುಳುಗುತಜ್ಙ ಈಶ್ವರ ಮಲ್ಪೆ ತಂಡದವರು ದೇಹ ಪತ್ತೆ ಹಚ್ಚಿದ್ರಾ ? ಇಲ್ಲಿದೆ ಸಂಪೂರ್ಣ ಮಾಹಿತಿ… !
ಮಂಗಳೂರು: ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯಚರಣೆ ತೀವ್ರವಾಗಿ ಮುಂದುವರೆಯುತ್ತಿವೆ.
ಮುಳುಗುತಜ್ಙ ಈಶ್ವರ ಮಲ್ಪೆ ತಂಡ ಸಹಿತ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತರವಾಗಿವೆ. ಮಾಜಿ ಶಾಸಕ ಮೋಯಿದ್ದೀನ್ ಬಾವ ಕೂಡ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿದ್ದಾರೆ.
ಒಂದು ಹಂತದ ಹುಡುಕಾಟ ನಡೆಸಿದ ತಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, “ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಎಲ್ಲೂ ಕೂಡ ದೇಹ ಪತ್ತೆಯಾಗಿಲ್ಲ” ಎಮದರು.
“ಸದ್ಯಕ್ಕೆ 100 ಮೀ. ಸುತ್ತಾಟ ಹುಡುಕಾಟ ನಡೆಸಲಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಆಳದಲ್ಲಿ ಕತ್ತಲಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ” ಎಂದರು.
ಮುಂದುವರೆದು ಮಾತನಾಡಿ, “ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು. ಇಷ್ಡು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುತ್ತಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ” ಎಂದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.
LATEST NEWS
ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದ ರಾಮ; ಮುಂದೇನಾಯ್ತು ಗೊತ್ತಾ???
ಮಂಗಳೂರು/ದೆಹಲಿ: ನಗರದ ಶಹದಾರದಲ್ಲಿರುವ ಜೈ ಶ್ರೀರಾಮಲೀಲಾ ವಿಶ್ವಕರ್ಮ ನಗರದಲ್ಲಿ ಶನಿವಾರ (ಅ.5) ನಡೆದ ರಾಮಲೀಲಾ ಕಾರ್ಯಕ್ರಮದ ವೇಳೆ ಭಗವಾನ್ ರಾಮನ ಪಾತ್ರವನ್ನು ಹಾಕಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ನಡೆದಿರುವುದು ತಿಳಿದು ಬಂದಿದೆ.
ಮೃತ ಸುಶೀಲ್ ಕೌಶಿಕ್ (45) ಅವರು ರಿಯಲ್ ಎಸ್ಟೇಟ್ ಡೀಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಯಲ್ಲೇ ನಾಟಕಗಳಲ್ಲಿ ನಟಿಸುವ ಹವ್ಯಾಸವನ್ನೂ ಹೊಂದಿದ್ದರು. ಅದರಲ್ಲೂ ರಾಮ ಲೀಲಾ ನಾಟಕದಲ್ಲಿ ಭಗವಾನ್ ಶ್ರೀರಾಮನ ಪಾತ್ರಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದರು.
ಕಾರ್ಯಕ್ರಮ ನಡೆಯುತ್ತಿರುವಾಲೇ ಎದೆನೋವು ಕಾಣಿಸಿಕೊಂಡು ವೇದಿಕೆ ಬದಿಗೆ ಹೋಗಿದ್ದಾರೆ. ಬದಿಗೆ ಸರಿಯುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಹೃದಯಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
LATEST NEWS
ಮೊಬೈಲ್ ಗೇಮ್ ದುಷ್ಪರಿಣಾಮ; ಸಾಲದಲ್ಲಿ ಮುಳುಗಿ ಮಗನ ಸಮೇತ ಕುಟುಂಬ ಆ*ತ್ಮಹತ್ಯೆಗೆ ಶರಣು
ಮಂಗಳೂರು/ತೆಲಂಗಾಣ: ಆನ್ಲೈನ್ ಜೂಜಾಟದ ಮೂಲಕ ಮಗ ಮಾಡಿದ 30 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ದಂಪತಿ ಮತ್ತು ಅವರ ಮಗ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೃ*ತರನ್ನು ರಂಗವೇಣಿ ಸುರೇಶ್ (53), ಪತ್ನಿ ಹೇಮಲತಾ (45) ಮತ್ತು ಮಗ ಹರೀಶ್ (22) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹರೀಶ್ ಆನ್ಲೈನ್ ಮೊಬೈಲ್ ಗೇಮ್ಗಳಿಗೆ ವ್ಯಸನಿಯಾಗಿದ್ದನು. ಅವನ ಚಟದಿಂದಾಗಿ ಕುಟುಂಬವು ರೂ.30 ಲಕ್ಷ ಸಾಲವನ್ನು ಹೊಂದಿತ್ತು.
ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದರೂ ಸಾಲ ತೀರಿಸಲು ಸಾಕಾಗಲಿಲ್ಲ. ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಕಂಗಾಲಾಗಿದ್ದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೋಧನ್ ಏರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
- BIG BOSS6 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS6 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS2 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS5 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್