Connect with us

    LATEST NEWS

    Udupi: ದೇವಸ್ಥಾನಕ್ಕೆ ಪೂಜೆಗೆ ಹೊರಟ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು..!

    Published

    on

    ಕುಂದಾಪುರದ ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.5ರಂದು ನಡೆದಿದೆ.

    ಉಡುಪಿ: ಕುಂದಾಪುರದ ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.5ರಂದು ನಡೆದಿದೆ.

    ಮೃತ ವ್ಯಕ್ತಿಯನ್ನು ಕಮಲಶಿಲೆ ತಪ್ಪಲು ನಿವಾಸಿ ಶೇಷಾದ್ರಿ ಐತಾಳ್ (75) ಎಂದು ಗುರುತಿಸಲಾಗಿದೆ.

    ಮಾಹಿತಿ ಪ್ರಕಾರ ಶೇಷಾದ್ರಿ ಐತಾಳ್ ಕಮಲ ಶಿಲೆ ದೇವಳಕ್ಕೆ ಪೂಜೆಗೆಂದು ಆಗಮಿಸಿದ್ದರು.

    ಈ ವೇಳೆ ಕಮಲಶಿಲೆ ದೇವಾಲಯದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಇಳಿದ ಸಂದರ್ಭ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

    ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು, ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿಂದ ಶವ ಪತ್ತೆ ಕಾರ್ಯ ನಡೆಸಿದೆ.

    ಈ ಪ್ರಕರಣ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಡೆಂಗ್ಯೂ ಜ್ವರದಿಂದ ಮಗುವಿನ ಜೀವಾಂ*ತ್ಯ..! ಸರ್ಕಾರಿ ಆಸ್ಪತ್ರೆ ಅಭಿವೃದ್ದಿಗೆ ತಂದೆಯ ಮನವಿ..!

    Published

    on

    ಚಿಕ್ಕಮಗಳೂರು: ಡೆಂಘೀ ಜ್ವರದ ಶಂಕೆ, ಚಿಕಿತ್ಸೆ ಫಲಿಸದೆ ಆರು ವರ್ಷದ ಬಾಲಕಿ ಸಾವ*ನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

    ಆರು ವರ್ಷದ ಸಾನಿಯಾ ಸಾವ*ನ್ನಪ್ಪಿದ ಬಾಲಕಿ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಫಲಿಸದೆ ಸಾವ*ನ್ನಪ್ಪಿದ್ದಾಳೆ.

    ಮಗಳನ್ನು ಕಳೆದುಕೊಂಡ ತಂದೆ ಆಸಿಫ್ ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದು, ಬಾಲಕಿಯ ಮೃ*ತದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಬೇಸರ ಹೊರಹಾಕಿದ್ದಾರೆ.

    ಆಸಿಫ್ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಕಣ್ಣೀರು ಸುರಿಸಿದ್ದಾರೆ.

    Continue Reading

    LATEST NEWS

    ನೇ*ಣಿಗೆ ಶರಣಾದ ಪಾಗಲ್ ಪ್ರೇಮಿ..! ವ್ಯಾಟ್ಸಾಪ್ ಸ್ಟೇಟಸ್ ಹಾಕಿ ಜೀವಾಂ*ತ್ಯ..!!

    Published

    on

    ರಾಯಚೂರು: ಪಾಗಲ್ ಪ್ರೇಮಿಯೊಬ್ಬ ಪ್ರೇಮ ವೈಫಲ್ಯಗೊಂಡು ಆತ್ಮಹ*ತ್ಯೆಗೆ ಶರಣಾದ  ಘಟನೆ ಲಿಂಗಸುಗೂರು ತಾಲೂಕಿನ ಕನಸಾವಿಯಲ್ಲಿ ನಡೆದಿದೆ. ಮುದಗಲ್ ಪಟ್ಟಣದ ಕನಸಾವಿ ಗ್ರಾಮ ನಿವಾಸಿ ಸಂತೋಷ್(22 ವ) ಆತ್ಮಹ*ತ್ಯೆ ಮಾಡಿಕೊಂಡ ಯುವಕ.

    ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!

    ಮೊಬೈಲ್ ವ್ಯಾಟ್ಸಾಪ್‌ ನಲ್ಲಿ ಸ್ಟೇಟಸ್ ಹಾಕಿ ಫ್ಯಾನ್‌ ಗೆ ನೇಣುಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ‘ನಾನು ಸತ್ತರು ಪ್ರೀತಿಗೋಸ್ಕರ.. ನಾನೊಬ್ಬ ಹುಚ್ಚು ಪ್ರೇಮಿ’ ಎಂದು ಬರೆದುಕೊಂಡಿದ್ದಾನೆ.ಅಷ್ಟಕ್ಕೂ ಸಂತೋಷ್ ಪ್ರೀತಿಸುತ್ತಿದ್ದ ಯುವತಿ ತನ್ನ ಅತ್ತಿಗೆಯ ತಂಗಿಯಾದ್ದಳು. ಆಕೆ ಮದುವೆಗೆ ಒಪ್ಪದೇ ಇದ್ದು, ಇದರಿಂದ ಮನನೊಂದು ಯುವಕ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Continue Reading

    DAKSHINA KANNADA

    ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!

    Published

    on

    ಉಪ್ಪಿನಂಗಡಿ : ಪತಿಯೊಂದಿಗೆ ಜಗಳವಾಡಿ ರಾತೋರಾತ್ರಿ ಮನೆಬಿಟ್ಟು ಬಂದ ಮಹಿಳೆ ನದಿಗೆ ಹಾರಿ ಜೀವಾಂ*ತ್ಯಗೊಳಿಸಲು ಯತ್ನಿಸಿದ್ದಾರೆ. ಆದ್ರೆ ಮನೆಯಿಂದ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಆಕೆಯ ಶಾಲು ಹಿಡಿದು ಎಳೆದು ಬೊಗಳುವ ಮೂಲಕ ರಕ್ಷಣೆಗೆ ಮುಂದಾಗಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಇನ್ನೇನು ನದಿಗೆ ಹಾರಲು ಸಿದ್ಧವಾದ ಮಹಿಳೆಯನ್ನು ಚಾಣಾಕ್ಷತನದಿಂದ ರಕ್ಷಣೆ ಮಾಡಿದ್ದಾರೆ.


    ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ನಾಯಿಯ ನಿಯತ್ತು ಹಾಗೂ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯ ಸಮಯಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ.

    ಏನು ಈ ಪ್ರಹಸನ?

    ಉಪ್ಪಿನಂಗಡಿ ಸಮೀಪದ ಪಿಲಿಗೋಡು ಸಮೀಪ ವಾಸವಾಗಿರುವ ಹಾಗೂ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ವ್ಯಕ್ತಿಯೊಬ್ಬರ ಕಥೆ ಇದು. ಹದಿನಾರು ವರ್ಷಗಳ ಹಿಂದೆ ಬೆಂಗಳೂರು ಮೂಲದ ಯುವತಿಯನ್ನು ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದಾರೆ. ಪತಿಯ ಪಿತ್ರಾರ್ಜಿತ ಆಸ್ತಿಯ ಪಾಲಿನಲ್ಲಿ ಪುಟ್ಟದೊಂದು ಮನೆ ಕಟ್ಟಿಕೊಂಡು ಸುಂದರ ಸಂಸಾರ ನಡೆಸುತ್ತಿದ್ದಾರೆ. ಆದ್ರೆ, ಗುರುವಾರ (ಜೂನ್ 27 ) ರಂದು ಪತಿ – ಪತ್ನಿ ನಡುವೆ ಯಾವುದೋ ವಿಚಾರದಲ್ಲಿ ಜಗಳ ನಡೆದಿದೆ. ಇದರಿಂದ ಬೇಸರಗೊಂಡ ಪತ್ನಿ ರಾತ್ರಿಯಲ್ಲಿ ಮಳೆಯ ನಡುವೆ ನಡೆದುಕೊಂಡು ನಾಲ್ಕು ಕಿಲೋ ಮೀಟರ್ ದೂರದ ಉಪ್ಪಿನಂಗಡಿಗೆ ಬಂದಿದ್ದಾರೆ.

    ಉಪ್ಪಿನಂಗಡಿ ನೇತ್ರಾವತಿ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆಕೆಯ ಜೊತೆ ಬಂದಿದ್ದ ಸಾಕು ನಾಯಿ ಆಕೆಯ ಶಾಲು ಎಳೆದು ಬೊಗಳುತ್ತಾ ತನ್ನದೇ ಭಾಷೆಯಲ್ಲಿ ಆಕೆಯನ್ನು ಸಂತೈಸಲು ಯತ್ನಿಸಿದೆ.

    ಈ ವೇಳೆ ಇದೇ ದಾರಿಯಲ್ಲಿ ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಗೊಂಡು ಈ ವಿಚಾರವನ್ನು ಸ್ಥಳೀಯ ಸಮಾಜ ಸೇವಕ ಫಯಾಝ್ ಎಂಬವರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಫಯಾಜ್ ಇನ್ನೇನು ನದಿಗೆ ಹಾರಬೇಕು ಅಂತಿದ್ದ ಮಹಿಳೆಯನ್ನು ಚಾಣಾಕ್ಷತನದಿಂದ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಇದನ್ನೂ ಓದಿ : ಬ್ಯಾಂಕ್ ಎಸಿಯೊಳಗೆ ಹೆಬ್ಬಾವಿನ ಮರಿ ಪ್ರತ್ಯಕ್ಷ!

    ಘಟನೆಯ ಬಳಿಕ ಶುಕ್ರವಾರ ( ಜೂನ್ 28) ಪೊಲೀಸರು ದಂಪತಿಗೆ ಕೌನ್ಸಿಲಿಂಗ್ ಮಾಡಿದ್ದಾರೆ. ಆದ್ರೆ, ಪತಿಯ ಜೊತೆಗೆ ಹೋಗಲು ಒಪ್ಪದ ಮಹಿಳೆ ಬೆಂಗಳೂರಿನ ತವರಿಗೆ ಹೋಗುವುದಾಗಿ ಹಠ ಹಿಡಿದಿದ್ದಾರೆ. ಮಕ್ಕಳು ಮಾತ್ರ ತಂದೆಯ ಜೊತೆಗೆ ಇರುವುದಾಗಿ ಹೇಳಿದ್ದಾರೆ. ಆದರೆ ಇಷ್ಟೊಂದು ಕಠಿಣ ನಿಲುವು ತಾಳಲು ಕಾರಣ ಏನು ಅನ್ನೋದು ಮಾತ್ರ ಗೊತ್ತಾಗಿಲ್ಲ.

    Continue Reading

    LATEST NEWS

    Trending