ಉಡುಪಿ: ಸೈಲೆಂಟಾಗಿದ್ದ ಕೃಷ್ಣ ನಗರಿ ಉಡುಪಿ ಸದ್ಯ ಹೊಸತೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಹೌದು ಉಡುಪಿಯ ಹಿರಿಯಡ್ಕದ ಕಾಜರಗುತ್ತು ಎಂಬ ಎಂಬ ಜೈಲು ಇದೀಗ ಭಾರೀ ಸುದ್ದಿಯಲ್ಲಿರುವಂತಹ ಜೈಲು.
ಕಾಜರಗುತ್ತು ಜೈಲಿನಲ್ಲಿ ಸರಕಾರದಿಂದ ಕೈದಿಗಳಿಗೆ ಬರುವ ಸವಲತ್ತುಗಳನ್ನು ಕೈದಿಗಳಿಗೆ ನೀಡುತ್ತಿಲ್ಲ ಎಂದು ಆರೋಪ ವ್ಯಕ್ತವಾಗಿರುವುದರಿಂದ ಖೈದಿಗಳು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಕಾಜರಗುತ್ತು ಜೈಲ್ಲಿನಲ್ಲಿ ಸೂಪರಿಡೆಂಟ್ ಆಗಿರುವ ಶ್ರೀನಿವಾಸ ಗೌಡ ಅವರು ನಮಗೆ ನೀಡಬೇಕಾದ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಕೈದಿಗಳು ಆರೋಪಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೈದಿಗಳು ಜೈಲಿನಲ್ಲಿ ಅತ್ಯಂತ ಕಳಪೆ ಮಟ್ಟದ ಆಹಾರ ವಿತರಣೆ ನಡೆಯುತ್ತಿದೆ. ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು.
ಆದರೆ ಇಲ್ಲಿ ಕೋಳಿ ಕಾಲು ಬೇಯಿಸಿ ಸಾರು ಮಾಡಿ ಹಾಕುತ್ತಾರೆ. ಕೈದಿಗಳಿಗೆ ಬರುವ ರೇಷನ್ ಜೈಲು ಸುಪರಿಡೆಂಟ್ ಮನೆ ಸೇರುತ್ತಿದೆ.
ಪ್ರತಿಯೊಂದು ವಸ್ತುವಿಗೂ ಜೈಲು ಸುಪರಿಡೆಂಟ್ ಶ್ರೀನಿವಾಸಗೌಡ ಲಂಚ ಕೇಳುತ್ತಿದ್ದಾರೆ. ಕೈದಿಗಳಿಗೆ ಬರುವ ಸವಲತ್ತುಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎನ್ನುವ ಆರೋಪವನ್ನು ಖೈದಿಗಳು ಮಾಡಿದ್ದಾರೆ.