Wednesday, July 28, 2021

ಡ್ರಗ್-ಪೆಡ್ಲರ್‌ ಗಳ ವಿರುದ್ದ ಉಡುಪಿ ಪೊಲೀಸರ ಸಮರ :73.39 ಲಕ್ಷ ಮೌಲ್ಯದ ಡ್ರಗ್ಸ್ ವಶ..! ಎಸ್‌ಪಿ ವಿಷ್ಣುವರ್ಧನ್

ಉಡುಪಿ : ಮಾದಕ ದ್ರವ್ಯದ ವಿರುದ್ಧ ಕರ್ನಾಟಕ ಪೊಲೀಸರು ಕಳೆದ ಎರಡು ತಿಂಗಳಿಂದ ಸಮರ ಸಾರಿದ್ದಾರೆ.

ಈ ನಡುವೆ ಕರಾವಳಿ ಜಿಲ್ಲೆ ಉಡುಪಿ ಪೊಲೀಸರು ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಯುವ ಸಮೂಹವನ್ನು ನಾಶಮಾಡುವ ಮೂಲಕ ಸಮಾಜದ ಅಸ್ತಿತ್ವವನ್ನೇ ಬುಡ ಮೇಲು ಮಾಡಲು ಹೊರಟ ಮಾದಕ ದ್ರವ್ಯ- ವ್ಯಸನಿಗಳು, ಪೆಡ್ಲರ್‌ ಗಳ ವಿರುದ್ದ ಅಕ್ಷರಶ ಸಮರವನ್ನೇ ಸಾರಿ ಮಾದರಿಯಾಗಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಮಹತ್ವದ ಮಾಹಿತಿಯನ್ನು ನೀಡಿದರು.

ಉಡುಪಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಿಂಥೆಟಿಕ್ ಡ್ರಗ್ ಜಾಲ ಕಾರ್ಯಾಚರಿಸಿರುವ ಬಗ್ಗೆ ಮಾಹಿತಿ ನೀಡಿದರು. 73.39 ಲಕ್ಷ ಮೌಲ್ಯದ ಮಾದಕ ವಸ್ತು ವಶ ಮಾಡಿದ್ದೇವೆ.

ಡಾರ್ಕ್ ನೆಟ್ ಮೂಲಕ ವ್ಯವಹರಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲ ಪತ್ತೆ ಮಾಡಿ, ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದೇವೆ ಎಂದರು.

ಮಣಿಪಾಲ ವಿದ್ಯಾರ್ಥಿಗಳಿಗೆ ಸೇಲ್ ಮಾಡಲು ತರಿಸಿದ್ದ ನಿಷೇಧಿತ ಡ್ರಗ್ ಇದಾಗಿದ್ದು, 540 ಗ್ರಾಂ ತೂಕದ 1019 ಎಂಡಿಎಂ ಎ ಮಾತ್ರೆಗಳು,ಒಂದು ಸಾವಿರ ಎಲ್ ಎಸ್ ಡಿ ಸ್ಟಾಂಪ್ಸ್, 30 ಗ್ರಾಂ ಬ್ರೌನ್ ಶುಗರ್ , 131 ಗ್ರಾಂ ಹೈಡ್ರೋ ವೀಡ್ ವಶಕ್ಕೆ ಪಡೆದಿರುವುದಾಗಿ ಹೇಳಿದರು.

ಕಳೆದ ಎರಡು ವಾರಗಳಿಂದ ಕಾರ್ಯಾಚರಣೆ ನಡೆಸಿದ 3 ಪೊಲೀಸ್ ತಂಡಗಳಿಗೆ ಎಸ್ಪಿ ಅಭಿನಂದನೆ ಸಲ್ಲಿಸಿದರು. ಮಾದಕ ದ್ರೌವ್ಯದ ವಿರುದ್ಧ ಸಮರ ಮುಂದುವರೆಸುವುದಾಗಿ ಎಸ್ ಪಿ ಈ ಮೂಲಕ ಎಚ್ಚರಿಕೆ ನೀಡಿದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...