LATEST NEWS
ಉಡುಪಿ ಶಾಸಕ ರಘುಪತಿ ಭಟ್ ಗೂ ವಕ್ಕರಿಸಿದ ಕೊರೋನಾ..!
ಉಡುಪಿ ಶಾಸಕ ರಘುಪತಿ ಭಟ್ ಗೂ ವಕ್ಕರಿಸಿದ ಕೊರೋನಾ..!
ಉಡುಪಿ : ಉಡುಪಿ ಶಾಸಕ ರಘುಪತಿ ಭಟ್ ಗೂ ಮಹಾಮಾರಿ ಕೊರೋನಾ ವಕ್ಕರಿಸಿದೆ. ಸೋಂಕಿನ ಹಿನ್ನೆಲೆಯಲ್ಲಿ ಉಡುಪಿ ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಂಕು ದೃಡಪಟ್ಟಿರುದಾಗಿ ಟ್ವಿಟ್ ಮಾಡಿದ ರಘುಪತಿ ಭಟ್ ನಾಲ್ಕೈದು ದಿನಗಳಿಂದ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಆಗಲು ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಭಟ್ ಅವರು ಶಿವಮೊಗ್ಗದಲ್ಲಿ ನಡೆದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ. ಎಸ್. ಗುರುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಸಿ. ಟಿ. ರವಿ, ಶಾಸಕ ಅರಗ ಜ್ಞಾನೆಂದ್ರ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಂ.ಕೆ. ಶ್ರೀ ರಂಗಯ್ಯ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೀಗ ಅವರೆಲ್ಲರೂ ಕ್ವಾರಂಟೈನ್ ಆಗ ಬೇಕಿದೆ.
DAKSHINA KANNADA
ರೆಡ್ ಅಲರ್ಟ್ ಹಿನ್ನೆಲೆ…! ಜುಲೈ 9 ಶಾಲೆಗೆ ರಜೆ ಘೋಷಣೆ..!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜುಲೈ9 )ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 8 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.
ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 9 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
LATEST NEWS
ರಾಹುಲ್ಗೆ ಕೆನ್ನೆಗೆ ಯಾರಾದ್ರೂ ಹೊಡಿಬೇಕು..! ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ..!
ಮಂಗಳೂರು : ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಕೆಯ ತನ್ನ ಭಾಷಣದ ವೇಳೆ ಹಿಂದೂ ಸಮಾಜವನ್ನು ಅವಹೇಳನ ಮಾಡಿದ್ದಾರೆ ಅಂತ ಬಿಜೆಪಿ ಪ್ರತಿಭಟನೆ ನಡೆಸ್ತಾ ಇದೆ. ಇದೇ ವಿಚಾರಕ್ಕೆ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದೇನು..?
ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ತನ್ನ ಮೊದಲ ಭಾಷಣದಲ್ಲೇ ವಿವಾದ ಸೃಷ್ಠಿಸಿದ್ದಾರೆ. ಭಾಷಣದಲ್ಲಿ ರಾಹುಲ್ ಗಾಂಧಿ “ಬಿಜೆಪಿ ಹಾಗೂ ಸಂಘಪರಿವಾರ ಸೇರಿದಂತೆ ಪ್ರಧಾನಿ ಮೋದಿ ಕೂಡಾ ನೈಜ್ಯ ಹಿಂದೂ ಅಲ್ಲ” ಎಂದು ಹೇಳಿಕೆ ನೀಡಿದ್ದರು. ಈಶ್ವರನ ಫೋಟೋ ತೋರಿಸಿ ” ಹಿಂದೂ ಯಾವತ್ತೂ ಹಿಂಸೆಯನ್ನು ಪ್ರೋಚೋಧಿಸುವುದಿಲ್ಲ ಎಂದು ಈಶ್ವರನ ಈ ಚಿತ್ರ ಹೇಳುತ್ತದೆ . ಆದ್ರೆ ಬಿಜೆಪಿ ಹಿಂಸೆಯನ್ನು ಪ್ರಚೋಧಿಸುತ್ತದೆ, ಪ್ರಧಾನಿ ಮೋದಿ ಹಿಂಸೆಯ ಭಾಷಣ ಮಾಡುತ್ತಾರೆ ಹೀಗಾಗಿ ಅವರು ನೈಜ್ಯ ಹಿಂದೂ ಆಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.
ಇದೇ ವಿಚಾರ ಈಗ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸ್ತಾ ಇದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ರೋಶಭರಿತ ಮಾತನಾಡಿರುವ ಶಾಸಕ ಭರತ್ ಶೆಟ್ಟಿ “ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಯಾರಾದ್ರೂ ಕೆನ್ನೆಗೆ ಹೊಡಿಬೇಕು ಅನಿಸುತ್ತಿದೆ” ಎಂಬ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ರಾಹುಲ್ ಗಾಂಧಿ ಪರ ನಿಂತ ಜೋತಿರ್ ಮಠದ ಜಗದ್ಗುರು
ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿಯವರು ರಾಹುಲ್ ಗಾಂಧಿ ಎಲ್ಲೂ ಹಿಂದೂ ಧರ್ಮಕ್ಕೆ ಅವಮಾನ ಮಾಡಿಲ್ಲ. ಅವರು ಭಾಷಣದಲ್ಲಿ ಇದು ಸ್ಪಷ್ಟವಾಗಿದ್ದು, ಅವರು ತನ್ನ ಎದುರು ಇರುವ ಪಕ್ಷವನ್ನು ಉಲ್ಲೇಖಸಿದ್ದಾರೆ ಎಂದು ಹೇಳಿದ್ದಾರೆ.
ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿ, “ಆರೋಪ ಕೇಳಿ ಬಂದಾಗ ನಾನೂ ಕೂಡಾ ಅವರ ಸಂಪೂರ್ಣ ಭಾಷಣವನ್ನು ವೀಕ್ಷಿಸಿದ್ದೇನೆ. ಎಲ್ಲೂ ಕೂಡಾ ಅವರು ಹಿಂದೂ ಧರ್ಮವನ್ನು ಹಿಂಸೆ ಮಾಡುವವರು ಎಂದಿಲ್ಲ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಅವರ ಹೇಳಿಕೆಯನ್ನು ತಿರುಚಿ ಒಂದು ಭಾಗವನ್ನು ಮಾತ್ರ ಹರಡಿ ಅವರು ಹಿಂದೂಗಳಿಗೆ ಹಿಂಸಾತ್ಮಕರು ಎಂದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ರಾಹುಲ್ ಗಾಂಧಿ ತನ್ನ ಎದರು ಇರುವಂತಹ ರಾಜಕೀಯ ಪಕ್ಷ ಹಾಗೂ ಅದರ ನಾಯಕನನ್ನು ಉದ್ದೇಶಿಸಿ ಹೇಳಿದ ಭಾಗವಷ್ಟೇ ಹರಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
LATEST NEWS
ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆ*ತ್ಮಹ*ತ್ಯೆಗೆ ಶರಣು
ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಅವರು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಬಿಸಿ ಪಾಟೀಲ್ ದೊಡ್ಡ ಮಗಳಾದ ಸೌಮ್ಯ ಅವರ ಗಂಡ ಪ್ರತಾಪ್ ಕುಮಾರ್ ಅವರು ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ.
ಪ್ರತಾಪ್ ಕುಮಾರ್ ಅವರಿಗೆ 43 ವರ್ಷ. ಈ ಘಟನೆ ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರ ಸಾ*ವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
- FILM5 days ago
‘ಪೆಂಡ್ರೈವ್’ನಲ್ಲಿ ಬಿಗ್ಬಾಸ್ ತನಿಷಾ ಕುಪ್ಪಂಡ..!
- DAKSHINA KANNADA6 days ago
ಉಳ್ಳಾಲ : ಟಿಪ್ಪರ್ – ಸ್ಕೂಟರ್ ಅಪಘಾ*ತ; ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾ*ವು
- DAKSHINA KANNADA2 days ago
ನಿರಂತರ ಮಳೆ, ಬಟ್ಟೆ ಒಣಗುತ್ತಿಲ್ಲವೇ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
- LATEST NEWS3 days ago
ಉಡುಪಿ : ಪ್ರೇಯಸಿಯೊಂದಿಗೆ ಜಗಳ; ಅರ್ಧ ದಾರಿಯಲ್ಲೇ ಬಸ್ ನಿಲ್ಲಿಸಿ ಹೋದ ಡ್ರೈವರ್!