ಗಂಜಿಗಾಗಿ ಅಕ್ಕಿಕೊಡಿ ಅಂತ ನಿತ್ಯ ಕಣ್ಣೀರಾಗುತ್ತಿದ್ದಾರೆ ಈ ಅಣ್ಣ ತಂಗಿ……..!!
Published
5 years agoon
By
Adminಮೊದಲೇ ಕಷ್ಟದಲ್ಲಿದ್ದವರ ಬದುಕಿನಲ್ಲಿ ಕೊರೋನಾ ಸಂಕಷ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಬಾಣಲೆಯಲ್ಲಿ ಸುಡುತ್ತಿದ್ದವರು ಬೆಂಕಿಗೆ ಬಿದ್ದಂತಾಗಿದೆ. ಒಪ್ಪತ್ತು ಅನ್ನಕ್ಕೆ ಕಷ್ಟಪಡುತ್ತಿದ್ದ ಉಡುಪಿಯ ಅಣ್ಣ ತಂಗಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ನೆರವಿನ ಸಹಾಯಹಸ್ತ ಬೇಕಾಗಿದೆ. ದಾನಿಗಳು ನೆರವಾಗಬೇಕಾಗಿದೆ…
ಪುಟ್ಟ ಮನೆಯೊಳಗೆ ಕಷ್ಟವನ್ನೇ ಹೊದ್ದು ಮಲಗಿದ ಸಂಸಾರ. ಗುಡಿಸಲಿನ ಕತ್ತಲೆಯಲ್ಲಿ ಕಮರುತ್ತಿದೆ ಈ ವೃದ್ದ ಅಣ್ಣತಂಗಿಯ ಬದುಕು. ಹೌದು, ಉಡುಪಿಯ ಕಾಪು ತಾಲೂಕಿನ ಇನ್ನಂಜೆಯ ಈ ಒಡಹುಟ್ಟಿದವರ ನೋವಿಗೆ ಕೊನೆ ಮೊದಲಿಲ್ಲ. ಕಷ್ಟವೇ ಇವರ ಮನೆ ದೇವರೇನೋ ಅನಿಸುತ್ತಿದೆ, ವೃದ್ದಾಪ್ಯದಲ್ಲೂ ಈ ಒಡಹುಟ್ಟಿದವರ ಜೀವನ ಅಭದ್ರವಾಗಿದೆ.
ಬೆನ್ನು ಮುರಿದುಕೊಂಡ ಅಣ್ಣ- ಬದುಕನ್ನೇ ಹರಿದು ಮೂರಾಬಟ್ಟೆಯಾದ ತಂಗಿ, ಇಬ್ಬರ ಕಷ್ಟದಲ್ಲೂ ಯಾರಿಗೆ ಹೆಚ್ಚು ಯಾರಿಗೆ ಕಡಿಮೆ ಅನ್ನೋದಕ್ಕೆ ಅಳತೆಗೋಲಿಲ್ಲ. ಅಕ್ಕಪಕ್ಕದವರು, ಸಂಬಂಧಿಗಳಿಂದ ಸಹಾಯ ಪಡೆದು ಇವರು ಜೀವನ ನಡೆಸುತ್ತಿದ್ದರು. ಕೊರೋನಾ ಬಂದ ನಂತರ ಬದುಕು ಕರುಣಾಜನಕವಾಗಿದೆ. ಎಲ್ಲರೂ ಕಷ್ಟದಲ್ಲಿರುವಾಗ ಇವರಿಗೆ ನೆರವಾಗೋದು ಯಾರು? ಊಟಕ್ಕೂ ಗತಿಯಿಲ್ಲದೆ ಕಣ್ಣೀರಿಡುವಂತಾಗಿದೆ. ಸರ್ಕಾರದ ಯಾವ ನೆರವೂ ಇವರಿಗೆ ಸಿಕ್ಕಿಲ್ಲ.
ಅಣ್ಣನ ಹೆಸರು ಸಂಕಪ್ಪ..ತಂಗಿ ಸರಸಕ್ಕ..ಆದರೆ ಇವರ ಬಾಳಲ್ಲಿ ಸರಸ ಸಂತೋಷಗಳು ಮಾಯವಾಗಿ ದಶಕಗಳೇ ಕಳೆಯಿತು. ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಸಂಕಪ್ಪ ಕೆಲಸದ ವೇಳೆ ಘಾಸಿಯಾಗಿ ಸೊಂಟದ ಬಲ ಕಳೆದುಕೊಂಡರು. ಆ ವೇಳೆಗಾಗಲೇ ಸರಸಕ್ಕನ ಸಂಸಾರವೂ ಮುರಿದುಬಿದ್ದಿತ್ತು. ಗಂಡ ಬಿಟ್ಟ ನಂತರ ಅಣ್ಣನ ಆಶ್ರಯ ಪಡೆದ ಈಕೆ, ಮುಂದೆ ಅಣ್ಣನಿಗೇ ಆಸರೆಯಾಗಬೇಕಾಯ್ತು. ಹೆತ್ತ ಮಕ್ಕಳಿದ್ದರೂ ಸಂಕಪ್ಪ ಅನಾಥ. ತನ್ನ ಎಲ್ಲಾ ಕೆಲಸಗಳಿಗೂ ಈಗ ಸಂಕಪ್ಪ ತಂಗಿಯನ್ನೇ ಅವಲಂಭಿಸಿದ್ದಾರೆ. ಅಕ್ಕಿ ಯಿದ್ದರೆ ಅನ್ನ, ಅನ್ನವಿದ್ದರೆ ಬದುಕು. ಕೊರೋನಾ ಬಂದ ನಂತರ ಬದುಕೇ ನರಕವಾಗಿದೆ.
ಮನೆಕೆಲಸ ಮಾಡುತ್ತಿದ್ದ ಸರಸಕ್ಕನಿಗೆ ಈಗ ಕೆಲಸವೂ ಇಲ್ಲ. ಗಂಜಿ ಉಣ್ಣೋಕಾದರೂ ಅಕ್ಕಿಕೊಡಿ ಅಂತ ನಿತ್ಯ ಕಣ್ಣೀರಾಗುತ್ತಿದ್ದಾರೆ.ಅನಾರೋಗ್ಯ ದಿಂದ ಔಷಧೀಯ ಗಾಗಿ ಚಿಕಿತ್ಸೆ ಗಾಗಿ ಆಸ್ಪತ್ರೆ ಗೆ ಸಾಗಿಸಬೇಕಾದ್ರೆ ಕುರ್ಚಿ ಕುರಿಸಿ ಎತ್ತಿಕೊಂಡು ಹೋಗಬೇಕಾದ ಅನಿವಾರ್ಯ ತೆ ಯಾಕಂದ್ರೆ ಒಂದೇಡೆ ಸೊಂಟದಲ್ಲಿ ಬಲ ಇಲ್ಲದೆ ಹೋದ್ರೆ ಇನ್ನೊಂದು ಕಡೆ ಆ ಊರಿಗೆ ಒಳಗಿರುವ ಆ ಮನೆಗೆ ರಸ್ತೆ ಇಲ್ಲದೆ ಪರದಾಡು ಸ್ಥಿತಿ. ರೈಲು ಹಳಿ ದಾಟಿ ಹೋಗಬೇಕಾದ ಸಂಕಷ್ಟ ಪರಿಸ್ಥಿತಿ ಇದೆ.
ಒಡಹುಟ್ಟಿದ ಈ ವೃದ್ದರಿಗೆ ಸಂಕಷ್ಟವೂ ಒಟ್ಟೊಟ್ಟಿಗೆ ಬಂದಿದೆ. ಇದು ಒಂದೆರಡು ದಿನದ ಸಮಸ್ಯೆಯಲ್ಲ. ಶಾಶ್ವತ ನೆರವು ಸಿಗದಿದ್ದರೆ ಈ ಸಮಸ್ಯೆಗೆ ಪರಿಹಾರವೂ ಇಲ್ಲ. ಆದ್ದರಿಂದ ದಾನಿಗಳು ಇವರ ಬಾಳಲ್ಲಿ ಆಶಾಕಿರಣ ಮೂಡಿಸಬೇಕಾಗಿದೆ. ಆರ್ಥಿಕ ನೆರವು ನೀಡಬಯಸುವವರು ಇವರಿಗೆ ಸಹಾಯ ಮಾಡಬಹುದು.
You may like
DAKSHINA KANNADA
ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ವರ್ಗಾವಣೆ
Published
7 minutes agoon
19/01/2025By
NEWS DESK4ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ತತ್‌ಕ್ಷಣ ಜಾರಿಗೆ ಬರುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅವರನ್ನು ಹಿಂಪಡೆಯಲಾಗಿದೆ.
ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೂತನ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ.
ಇದನ್ನೂ ಓದಿ : ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ
ರವಿಚಂದ್ರ ನಾಯಕ್ ಅವರು ಈ ಮೊದಲು ಮಂಗಳೂರಿನಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
LATEST NEWS
ಕುಡಿಯಬಾರದು ಎಂದು ಬುದ್ಧಿವಾದ ಹೇಳಿದಕ್ಕೆ ಅಪ್ಪನನ್ನೇ ಕೊಂ*ದ ದುಷ್ಟ ಮಗ
Published
11 minutes agoon
19/01/2025ಮಂಗಳೂರು/ಬೆಂಗಳೂರು: ಕುಡಿದು ಮನೆಗೆ ಬಂದು ಗಲಾಟೆ ಮಾಡಿದಾಗ ಬುದ್ಧಿವಾದ ಹೇಳಿದ ತಂದೆಗೆ ಮಗನು ರಾ*ಡ್‌ನಿಂದ ಹ*ಲ್ಲೆ ನಡೆಸಿ ಹ*ತ್ಯೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ದಲ್ಲಿ ನಡೆದಿದೆ.
ರಘು (29) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜ.10ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದು ತಂದೆ ಜಿ.ರಾಮಚಂದ್ರ (59) ಜತೆಗೆ ಜಗಳ ತೆಗೆದು ಕೊಂ*ದು ಸ್ಥಳದಿಂದ ಪರಾರಿಯಾಗಿದ್ದನು.
ಮೃ*ತ ರಾಮಚಂದ್ರ ಕಳೆದ 30 ವರ್ಷಗಳಿಂದ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮದ್ಯದ ದಾಸನಾಗಿದ್ದ ರಘು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮದ್ಯ ಸೇವಿಸಲು ಹಣ ಕೊಡುವಂತೆ ತಂದೆ-ತಾಯಿಗೆ ನಿತ್ಯವೂ ತೊಂದರೆ ನೀಡುತ್ತಿದ್ದ. ಈತನ ಕಿರುಕುಳದಿಂದ ತಂದೆ-ತಾಯಿ ರೋಸಿ ಹೋಗಿದ್ದರು. ಜ.10ರಂದು ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ರಘು, ತಂದೆ ರಾಮಚಂದ್ರ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ರಾಮಚಂದ್ರ ಅವರು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ರಘು ಕಬ್ಬಿಣದ ರಾಡ್‌ನಿಂದ ತಂದೆ ರಾಮಚಂದ್ರ ಮೇಲೆ ಮನಬಂದಂತೆ ಹ*ಲ್ಲೆ ಮಾಡಿದ್ದಾನೆ. ಹ*ಲ್ಲೆಯಿಂದ ರಾಮಚಂದ್ರ ನೆಲಕ್ಕೆ ಕುಸಿದು ಬಿದ್ದರೂ ಬಿಡದ ರಘು ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊ*ಡೆದ ಪರಿಣಾಮ ರಾಮಚಂದ್ರ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಬಳಿಕ ಆರೋಪಿ ರಘು ಸ್ಥಳದಿಂದ ಪರಾರಿಯಾಗಿದ್ದ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ರಾಜಾಜಿನಗರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ರಘುನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
LATEST NEWS
ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ
Published
26 minutes agoon
19/01/2025By
NEWS DESK4ಕಾಪು : ಸೇಲ್ ಮಾಡಿದ ಬಸ್ಸನ್ನು ತಾವೇ ಕದ್ದಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ತಂದೆ, ಮಗನ ವಿರುದ್ಧ ದೂರು ದಾಖಲಾಗಿತ್ತು. ಇದೀಗ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳಾಗಿದ್ದು, ಸುಳ್ಳು ದೂರು ದಾಖಲಿಸಲಾಗಿದೆ ಎಂದು ವಿದೇಶದಲ್ಲಿರುವ ಬಸ್ ಮಾಲಕ ಸಮೀರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಬಸ್ಸನ್ನು ಕದ್ದಿಲ್ಲ. ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ಅಲ್ಲದೆ ನನಗೆ ಬಸ್ಸಿನ ಎಲ್ಲ ಮೊತ್ತ ಇದುವರೆಗೂ ಸಿಕ್ಕಿಲ್ಲ ಎಂದು ಸಮೀರ್ ಹೇಳಿದ್ದಾರೆ.
ಏನಿದು ಬಸ್ ಕಥೆ?
ತಮ್ಮ ಬಸ್ಸನ್ನು ತುಮಕೂರಿನ ಮೊಹಮ್ಮದ್ ಗೌಸ್ ಎಂಬವರಿಗೆ ಮಾರಾಟ ಮಾಡಲಾಗಿತ್ತು. ಅದನ್ನು 9,50,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಮೊಹಮ್ಮದ್ ಗೌಸ್ ಅವರು ತಮಗೆ ಚೆಕ್ ಮುಖಾಂತರ 9.50 ಲಕ್ಷ ಪಾವತಿಸಿದ್ದರು. ಆದರೆ ಈ ನಡುವೆ ನಗದೀಕರಣಕ್ಕೆ ಚೆಕ್ ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಅಲ್ಲದೆ ಅವರು ಫೋನ್ ಪೇ ಮುಖಾಂತರ 2.26 ಲಕ್ಷ ಹಾಕಿದ್ದಾರೆ. ಒಂದು ಲಕ್ಷ ನಗದು ಹಣ ಕೊಟ್ಟಿದ್ದಾರೆ. ಬಳಿಕ ನನಗೆ ಸೇರಬೇಕಾದ ಹಣವನ್ನು ಅವರು ಕೊಟ್ಟಿಲ್ಲ. ಆರು ತಿಂಗಳಾದರೂ ಹಣ ಬಂದಿಲ್ಲ. ಹೀಗಾಗಿ ಹಣ ಕೇಳಿದಾಗ ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಅಂತಿದ್ದರು. ಈ ನಡುವೆ ಅವರು ಆರು ತಿಂಗಳ ಕಾಲ ಬಸ್ಸನ್ನು ತುಮಕೂರಿನಲ್ಲಿ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನನಗೆ ಬೆದರಿಕೆ ಹಾಕಿದ್ದರಿಂದ ಅಲ್ಲದೆ ಹಣವನ್ನೂ ಪಾವತಿಸದೇ ಇದ್ದಿದ್ದರಿಂದ ಬಸ್ಸನ್ನು ಮರಳಿ ವಾಪಾಸ್ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೌಸ್ ಆರೋಪ ಏನು?
ತುಮಕೂರಿನ ನಿವಾಸಿ , ಮೊಹಮ್ಮದ್ ಗೌಸ್ ಎಂಬವರು ಸ್ನೇಹಿತರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ ಒಎಲ್‌ಎಕ್ಸ್ ಮೂಲಕ ಉಡುಪಿಯ ಕಾಪುವಿನ ಸಮೀರ್ ಅವರ ಬಳಿ ಸೆಕೆಂಡ್ ಹ್ಯಾಂಡ್ ಬಸ್ ಇರುವ ಮಾಹಿತಿ ಪಡೆದುಕೊಂಡಿದ್ದರು. ಸಮೀರ್ ಅವರನ್ನು ಸಂಪರ್ಕಿಸಿ ಬಸ್ ಖರೀದಿಗೆ ಮಗ ಸಿದ್ದೀಕ್ ಹಾಗೂ ಸ್ನೇಹಿತ ಜಾವೇದ್ ಜೊತೆಯಲ್ಲಿ ಕಾಪುವಿನ ಮಲ್ಲಾರ್ ಎಂಬಲ್ಲಿಗೆ ಬಂದಿದ್ದರು.
ಇದನ್ನೂ ಓದಿ : ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು
ಅಲ್ಲಿ ಸಮೀರ್ ಇವರಿಗೆ ಬಸ್ ತೋರಿಸಿದ್ದು, ದಾಖಲೆ ಪತ್ರ ಮತ್ತೆ ಕೊಡುವುದಾಗಿ ಹೇಳಿ ಎರಡು ಲಕ್ಷ ಮುಂಗಡ ಪಡೆದುಕೊಂಡಿದ್ದು, ಬಾಕಿ ಹಣವನ್ನು ಹದಿನೈದು ದಿನಗಳಲ್ಲಿ ಪಡೆದುಕೊಂಡಿದ್ದ. ಆದ್ರೆ, ತುಮಕೂರಿನಲ್ಲಿ ನಿಲ್ಲಿಸಿದ ಬಸ್ಸನ್ನು ಮತ್ತೆ ಉಡುಪಿಗೆ ತಂದಿದ್ದಾರೆ ಎಂದು ಆರೋಪಿಸಿದ್ದರು. ತಂದೆ ಮಗ ಇಬ್ಬರೂ ಸೇರಿ ವಂಚಿಸಿದ್ದಾಗಿ ಕಾಪು ಠಾಣೆಗೆ ಗೌಸ್ ದೂರು ನೀಡಿದ್ದರು.
LATEST NEWS
ಡೈರೆಕ್ಟರ್ ಜೊತೆಗೆ ಸಮಂತಾ ಸಿಕ್ರೇಟ್ ರಿಲೇಶನ್ಶಿಪ್
ನಾಳೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಹಾರಕ್ಕೆ
ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು
ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?
ಮಹಾಕುಂಭ ಮೇಳದಲ್ಲಿ ಜನಪ್ರಿಯರಾಗುತ್ತಿದ್ದಾರೆ ರಷ್ಯಾ ಬಾಬ
ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಗುಂಡಿಕ್ಕಿ ಹ*ತ್ಯೆ
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS5 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS5 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS6 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?