Wednesday, August 12, 2020

ಗಂಜಿಗಾಗಿ ಅಕ್ಕಿಕೊಡಿ ಅಂತ ನಿತ್ಯ ಕಣ್ಣೀರಾಗುತ್ತಿದ್ದಾರೆ ಈ ಅಣ್ಣ ತಂಗಿ……..!!

Array

ಆಧುನಿಕ ಷಹಜಾನ್….ಮಡಿದ ಪತ್ನಿಯನ್ನು ಮೂರ್ತಿ ರೂಪದಲ್ಲಿ ಮತ್ತೆ ಮನೆ ತುಂಬಿಕೊಂಡ ಪತಿ!

ಕೊಪ್ಪಳ : ಒಂದು ಅಪರೂಪದ ಪ್ರೇಮಕಥೆಗೆ ಕೊಪ್ಪಳ ಸಾಕ್ಷಿಯಾಗಿದೆ. ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ನೆನಪಾರ್ಥವಾಗಿ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿದ್ದಾರೆ. ಈ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು...

ಬೆಂಗಳೂರು ಗಲಭೆ – ಧಾರ್ಮಿಕ ಅವಹೇಳನಕಾರಿ ಫೋಸ್ಟ್ ಹಾಕಿದ ನವೀನ್ ಅರೆಸ್ಟ್

ಬೆಂಗಳೂರು ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತನ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಗೆ ಹಿನ್ನಲೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ...

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..!

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಫೇಸ್ ಬುಕ್‌ ನಲ್ಲಿ ಅವಹೇಳಕಾರಿ  ಪೋಸ್ಟ್​ ಮಾಡಿದ್ದರು ಎಂಬ ಕಾರಣಕ್ಕೆ ನಿನ್ನೆ...

ಗಲಭೆಕೋರರ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ...

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..!

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್‌ ಅವರ ಆಪ್ತರೂ ಆಗಿರುವಂತಹ ನವೀನ್‌ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ...

ಮೊದಲೇ ಕಷ್ಟದಲ್ಲಿದ್ದವರ ಬದುಕಿನಲ್ಲಿ ಕೊರೋನಾ ಸಂಕಷ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಬಾಣಲೆಯಲ್ಲಿ ಸುಡುತ್ತಿದ್ದವರು ಬೆಂಕಿಗೆ ಬಿದ್ದಂತಾಗಿದೆ. ಒಪ್ಪತ್ತು ಅನ್ನಕ್ಕೆ ಕಷ್ಟಪಡುತ್ತಿದ್ದ ಉಡುಪಿಯ ಅಣ್ಣ ತಂಗಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ನೆರವಿನ ಸಹಾಯಹಸ್ತ ಬೇಕಾಗಿದೆ. ದಾನಿಗಳು ನೆರವಾಗಬೇಕಾಗಿದೆ…

ಪುಟ್ಟ ಮನೆಯೊಳಗೆ ಕಷ್ಟವನ್ನೇ ಹೊದ್ದು ಮಲಗಿದ ಸಂಸಾರ. ಗುಡಿಸಲಿನ ಕತ್ತಲೆಯಲ್ಲಿ ಕಮರುತ್ತಿದೆ ಈ ವೃದ್ದ ಅಣ್ಣತಂಗಿಯ ಬದುಕು. ಹೌದು, ಉಡುಪಿಯ ಕಾಪು ತಾಲೂಕಿನ‌ ಇನ್ನಂಜೆಯ ಈ ಒಡಹುಟ್ಟಿದವರ ನೋವಿಗೆ ಕೊನೆ ಮೊದಲಿಲ್ಲ. ಕಷ್ಟವೇ ಇವರ ಮನೆ ದೇವರೇನೋ ಅನಿಸುತ್ತಿದೆ, ವೃದ್ದಾಪ್ಯದಲ್ಲೂ ಈ ಒಡಹುಟ್ಟಿದವರ ಜೀವನ ಅಭದ್ರವಾಗಿದೆ.

ಬೆನ್ನು ಮುರಿದುಕೊಂಡ ಅಣ್ಣ- ಬದುಕನ್ನೇ ಹರಿದು ಮೂರಾಬಟ್ಟೆಯಾದ ತಂಗಿ, ಇಬ್ಬರ ಕಷ್ಟದಲ್ಲೂ ಯಾರಿಗೆ ಹೆಚ್ಚು ಯಾರಿಗೆ ಕಡಿಮೆ ಅನ್ನೋದಕ್ಕೆ ಅಳತೆಗೋಲಿಲ್ಲ. ಅಕ್ಕಪಕ್ಕದವರು, ಸಂಬಂಧಿಗಳಿಂದ ಸಹಾಯ ಪಡೆದು ಇವರು ಜೀವನ‌ ನಡೆಸುತ್ತಿದ್ದರು. ಕೊರೋನಾ ಬಂದ ನಂತರ ಬದುಕು ಕರುಣಾಜನಕವಾಗಿದೆ. ಎಲ್ಲರೂ ಕಷ್ಟದಲ್ಲಿರುವಾಗ ಇವರಿಗೆ ನೆರವಾಗೋದು ಯಾರು? ಊಟಕ್ಕೂ ಗತಿಯಿಲ್ಲದೆ ಕಣ್ಣೀರಿಡುವಂತಾಗಿದೆ. ಸರ್ಕಾರದ ಯಾವ ನೆರವೂ ಇವರಿಗೆ ಸಿಕ್ಕಿಲ್ಲ.

ಅಣ್ಣನ ಹೆಸರು ಸಂಕಪ್ಪ..ತಂಗಿ ಸರಸಕ್ಕ..ಆದರೆ ಇವರ ಬಾಳಲ್ಲಿ ಸರಸ ಸಂತೋಷಗಳು ಮಾಯವಾಗಿ ದಶಕಗಳೇ ಕಳೆಯಿತು. ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಸಂಕಪ್ಪ‌ ಕೆಲಸದ ವೇಳೆ  ಘಾಸಿಯಾಗಿ ಸೊಂಟದ ಬಲ ಕಳೆದುಕೊಂಡರು. ಆ ವೇಳೆಗಾಗಲೇ ಸರಸಕ್ಕನ ಸಂಸಾರವೂ ಮುರಿದುಬಿದ್ದಿತ್ತು. ಗಂಡ ಬಿಟ್ಟ ನಂತರ ಅಣ್ಣನ ಆಶ್ರಯ ಪಡೆದ ಈಕೆ, ಮುಂದೆ ಅಣ್ಣನಿಗೇ ಆಸರೆಯಾಗಬೇಕಾಯ್ತು. ಹೆತ್ತ ಮಕ್ಕಳಿದ್ದರೂ ಸಂಕಪ್ಪ ಅನಾಥ. ತನ್ನ ಎಲ್ಲಾ ಕೆಲಸಗಳಿಗೂ ಈಗ ಸಂಕಪ್ಪ ತಂಗಿಯನ್ನೇ ಅವಲಂಭಿಸಿದ್ದಾರೆ. ಅಕ್ಕಿ ಯಿದ್ದರೆ ಅನ್ನ, ಅನ್ನವಿದ್ದರೆ ಬದುಕು. ಕೊರೋನಾ ಬಂದ ನಂತರ ಬದುಕೇ ನರಕವಾಗಿದೆ.

ಮನೆಕೆಲಸ ಮಾಡುತ್ತಿದ್ದ ಸರಸಕ್ಕನಿಗೆ ಈಗ ಕೆಲಸವೂ ಇಲ್ಲ. ಗಂಜಿ ಉಣ್ಣೋಕಾದರೂ ಅಕ್ಕಿ‌ಕೊಡಿ ಅಂತ ನಿತ್ಯ‌ ಕಣ್ಣೀರಾಗುತ್ತಿದ್ದಾರೆ.ಅನಾರೋಗ್ಯ ದಿಂದ ಔಷಧೀಯ ಗಾಗಿ ಚಿಕಿತ್ಸೆ ಗಾಗಿ ಆಸ್ಪತ್ರೆ ಗೆ ಸಾಗಿಸಬೇಕಾದ್ರೆ ಕುರ್ಚಿ ಕುರಿಸಿ ಎತ್ತಿಕೊಂಡು ಹೋಗಬೇಕಾದ ಅನಿವಾರ್ಯ ತೆ ಯಾಕಂದ್ರೆ ಒಂದೇಡೆ ಸೊಂಟದಲ್ಲಿ‌ ಬಲ ಇಲ್ಲದೆ ಹೋದ್ರೆ ಇನ್ನೊಂದು ಕಡೆ  ಆ ಊರಿಗೆ ಒಳಗಿರುವ ಆ ಮನೆಗೆ ರಸ್ತೆ ಇಲ್ಲದೆ ಪರದಾಡು ಸ್ಥಿತಿ. ರೈಲು ಹಳಿ ದಾಟಿ ಹೋಗಬೇಕಾದ ಸಂಕಷ್ಟ ಪರಿಸ್ಥಿತಿ ಇದೆ.

ಒಡಹುಟ್ಟಿದ ಈ ವೃದ್ದರಿಗೆ ಸಂಕಷ್ಟವೂ ಒಟ್ಟೊಟ್ಟಿಗೆ ಬಂದಿದೆ. ಇದು ಒಂದೆರಡು ದಿನದ ಸಮಸ್ಯೆಯಲ್ಲ. ಶಾಶ್ವತ ನೆರವು ಸಿಗದಿದ್ದರೆ ಈ ಸಮಸ್ಯೆಗೆ ಪರಿಹಾರವೂ ಇಲ್ಲ. ಆದ್ದರಿಂದ ದಾನಿಗಳು ಇವರ ಬಾಳಲ್ಲಿ ಆಶಾಕಿರಣ ಮೂಡಿಸಬೇಕಾಗಿದೆ. ಆರ್ಥಿಕ ನೆರವು ನೀಡಬಯಸುವವರು ಇವರಿಗೆ ಸಹಾಯ ಮಾಡಬಹುದು.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.