Connect with us

    DAKSHINA KANNADA

    ಉಡುಪಿ: ನಡು ರಸ್ತೆಯಲ್ಲೇ ಗ್ಯಾಂಗ್ ವಾರ್..! ಹೊಡೆದಾಟದ ವೀಡಿಯೋ ವೈರಲ್

    Published

    on

    ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    gang war udupi

    ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು‌ ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ. ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ  ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಉಡುಪಿ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯ ಬಳಿ ನಡೆದ ಘಟನೆ ನಡೆದಿದ್ದು, ಒಂದು ಕಾರಿಗೆ ಇನ್ನೊಂದು ಕಾರು ಮೂಲಕ ಡಿಕ್ಕಿ ಹೊಡೆದಿದ್ದು, ತಂಡದ ಓರ್ವ ಸದಸ್ಯನಿಗೂ ಡಿಕ್ಕಿ ಹೊಡೆಯಲಾಗಿದೆ. ಅಲ್ಲದೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.

    Read More..; ನಾಲ್ವರನ್ನು ಬಲಿ ಪಡೆದ ರಸ್ತೆ ಅಪಘಾತ..! ಧರ್ಮಸ್ಥಳದಿಂದ ವಾಪಾಸಾಗುವಾಗ ಘಟನೆ..!

    ಈ ದೃಶ್ಯವನ್ನು ಸಮೀಪದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇಷ್ಟೊಂದು ಕ್ರೂರವಾಗಿ ನಗರದಲ್ಲಿ ಗ್ಯಾಂಗ್ ವಾರ್ ನಡೆದಿರುವುದು  ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರುಡ ಗ್ಯಾಂಗ್​ನ ಆಶಿಕ್ ಮತ್ತು ರಾಕಿಬ್ ಹೆಸರಿನ ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಕಾಪು ಮೂಲದವರು ಮತ್ತು ರಾಕಿಬ್ ಗುಜ್ಜರಬೆಟ್ಟದವನೆಂದು ಪೊಲೀಸರು ಹೇಳಿದ್ದಾರೆ. ಇದೇ ವಿಡಿಯೋ ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಬಳಕೆಯಾಗಿದ್ದ 2 ಕಾರು, ಒಂದು ಬೈಕ್, ತಲ್ವಾರ್ ಹಾಗೂ ಡ್ಯಾಗರ್​ಗಳನ್ನು ವಶಪಡಿಸಿಕೊಂಡಿದ್ದಾರೆ.. ಉಡುಪಿ ನಗರ‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

    DAKSHINA KANNADA

    ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಪಲ್ಟಿ..!

    Published

    on

    ಮಂಗಳೂರು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ(ಜೂ.16) ಕಮ್ಮಾಜೆ-ಕಾಗುಡ್ಡೆ ಬಳಿ ನಡೆದಿದೆ.

    Read More..; ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾ*ವು

    ಬಿಸಿರೋಡು-ಪೊಳಲಿ ಮಂಗಳೂರು ಸಂಚರಿಸುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರವಿವಾರವಾದ ಕಾರಣ ಬಸ್ಸಿನಲ್ಲಿ ಕೇವಲ ಇಬ್ಬರೇ ಪ್ರಯಾಣಿಕರಿದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಬಸ್‌ ಬಿಸಿ ರೋಡಿನಿಂದ ಕೊಳತ್ತಮಜಲಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

    Continue Reading

    DAKSHINA KANNADA

    ವಿಟ್ಲ : ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ

    Published

    on

    ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3 ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಜೂನ್ 6 ರಂದು ಶಾಲೆಯ ಚುನಾವಣಾ ಅಭ್ಯರ್ಥಿಗಳು ಶಾಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.


    ಜೂನ್ 11 ರಿಂದ ಜೂನ್ 13 ರ ವರೆಗೆ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ 5 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಜೂನ್ 15 ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಚುನಾಯಿತರಾದವರು :

    ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ ಹತ್ತನೇ ತರಗತಿಯ ಸಾಕ್ಷಿ, ಗೃಹ ಮಂತ್ರಿಯಾಗಿ ಅಬೂಬಕರ್ ನವವಿ (10ನೇ ತರಗತಿ), ಸಂವಹನ ಮಂತ್ರಿಯಾಗಿ ಖತಿಜಾ ಇಫ್ಹಾ (10ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಶುಭಂ ಶೆಟ್ಟಿ (10ನೇ ತರಗತಿ ), ಶಿಕ್ಷಣ ಮಂತ್ರಿಯಾಗಿ ನಿಧಿಶಾ (9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಪ್ರಗತಿ (9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕುಮಾರ್ ಎಲ್ (9ನೇ ತರಗತಿ) ಹಾಗೂ ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ದೀಪಿತ್ (8ನೇ ತರಗತಿ) ಚುನಾಯಿತರಾದರು.

    ಸಹಾಯಕ ಮಂತ್ರಿಗಳಾಗಿ ಪ್ರಾಥಮಿಕ ವಿಭಾಗದಿಂದ ಯಶಸ್ವಿ ಟಿ ಎಮ್ (7ನೇ ತರಗತಿ), ದಿಯಾ ವೈ ಶೆಟ್ಟಿ (7ನೇ ತರಗತಿ), ಸನ್ನಿಧಿ ಎಲ್ ಎಸ್ (5ನೇ ತರಗತಿ), ಮುಹಮ್ಮದ್ ಫಹ್ಮಾನ್ (7ನೇ ತರಗತಿ), ಸಾತ್ವಿಕ್ ಕೆ (6ನೇ ತರಗತಿ), ಕೌಶಲ್ ಬಿ (5ನೇ ತರಗತಿ), ಸುಶಾನ್ (6ನೇ ತರಗತಿ) ಹಾಗೂ ಜಿ ಎಸ್ ರಿಷಿಕ್ ಅಂಚನ್ (5ನೇ ತರಗತಿ ಚುನಾಯಿತರಾದರು.

    ಇದನ್ನೂ ಓದಿ : ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

    ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ದರ್ಬೆ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ಲೀಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ಶೋಭಾ ಎಂ ಶೆಟ್ಟಿ ಉಪ ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಸಿದರು.

    ಶಿಕ್ಷಕಿ ರಶ್ಮಿ ಕೆ ಫೆರ್ನಾಂಡೀಸ್ ಚುನಾವಣಾ ಫಲಿತಾ0ಶ ಘೋಷಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಸಹಕರಿಸಿದರು.

    Continue Reading

    DAKSHINA KANNADA

    ಏಕಕಾಲಕ್ಕೆ ಅರಳಿ ನಿಂತ 42 ಬ್ರಹ್ಮಕಮಲ ಪುಷ್ಪ; ಮಧ್ಯರಾತ್ರಿಯೇ ವಿಶೇಷ ಪೂಜೆ ಸಲ್ಲಿಕೆ!

    Published

    on

    ಉತ್ತರ ಕನ್ನಡ: ಶ್ರಾವಣದ ಸಂಜೆಗಳಲ್ಲಿ ಬ್ರಹ್ಮ ಕಮಲ ಅರಳುವುದು ವಾಡಿಕೆ. ಒಮ್ಮೊಮ್ಮೆ ಅದಕ್ಕೆ ವ್ಯತಿರಿಕ್ತವಾಗಿ ಬೇಗವೂ ಬ್ರಹ್ಮ ಕಮಲ ಅರಳುತ್ತದೆ. ಆದರೆ ಒಮ್ಮೆಲೆ ಪುಷ್ಪಗುಚ್ಛದಷ್ಟು ಅಂದವಾಗಿ ಒಂದೆಡೆಗೇ ಅರಳುವ ಬ್ರಹ್ಮಕಮಲದ ಸೊಬಗನ್ನು ನೋಡುವ ಅನುಭವವೇ ಬೇರೆ! ಬ್ರಹ್ಮಕಮಲವು ಅಧ್ಯಾತ್ಮಿಕ ಸ್ಥಾನವನ್ನು ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳಲ್ಲಿ ಹೊಂದಿದೆ. ಹೀಗಾಗಿ ಬ್ರಹ್ಮಕಮಲ ಬರೀ ಹೂವಾಗದೇ ಈ ಹೂವೇ ಆರಾಧನೆಯ ವಸ್ತುವಾಗಿರುವುದು ವಿಶೇಷ!

    ಏಕಕಾಲಕ್ಕೆ 42 ಹೂಗಳು!

    ಯಲ್ಲಾಪುರ ಪಟ್ಟಣದ ರಾಮಾಪುರ ವ್ಯಾಪ್ತಿಯಲ್ಲಿ ವಾಸಿಸುವ ಗಣೇಶ್ ಪಂಡರಾಪುರ ಅವರ ಮನೆಯ ವಿಶೇಷವಾದ ಬ್ರಹ್ಮಕಮಲದ ಹೂವುಗಳು! ಯಾಕೆ ವಿಶೇಷ ಎಂದರೆ, ಹೋದ ವರ್ಷ ಇವರ ಮನೆಯಲ್ಲಿ ಸುಮಾರು 84 ಬ್ರಹ್ಮಕಮಲಗಳು ಒಟ್ಟಿಗೆ ಅರಳಿದ್ದವು. ಈ ವರ್ಷ 42 ಬ್ರಹ್ಮಕಮಲ ಏಕಕಾಲಕ್ಕೆ ಅರಳಿ ನಿಂತಿವೆ.

    ಪುಷ್ಪಕ್ಕೆ ಪೂಜೆ!

    ಮಧ್ಯರಾತ್ರಿ 12: 40 ರ ಸುಮಾರಿಗೆ ಈ ಹೂವುಗಳೆಲ್ಲಾ ಅರಳಿದ್ದವು ತಕ್ಷಣ ಗಣೇಶ್ ಪಂಡರಾಪುರ ಅವರ ಕುಟುಂಬ ವಾಡಿಕೆಯಂತೆ ಪೂಜೆ ಮಾಡಿ ನಂತರ ಮನೆಯವರಿಗೆ ಜನರಿಗೆ ಪ್ರಸಾದ ಹಂಚಿ ಹೂವುಗಳ ಮುಂದೆ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು, ಬ್ರಹ್ಮಕಮಲ ಅರಳುವ ವೇಳೆ ಕೇಳಿದ ಕೋರಿಕೆಗಳು ಈಡೇರುತ್ತವೆ ಎಂಬುದು ಪ್ರಸಿದ್ಧ ಲೋಕಾರೂಢಿಯ ನಂಬಿಕೆ.

    Continue Reading

    LATEST NEWS

    Trending