Connect with us

    LATEST NEWS

    ಉಡುಪಿ: ಮೀನು ಶೆಡ್ ತೆರವು ಪ್ರಕರಣ-ನಗರಸಭೆಯಲ್ಲಿ ಸದಸ್ಯರ ಮಾತಿನ ಜಟಾಪಟಿ

    Published

    on

    ಉಡುಪಿ: ಉಡುಪಿ ನಗರದ ಕಿನ್ನಿಮೂಲ್ಕಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್ ನೆಲಸಮಗೊಳಿಸಿದ ಪ್ರಕರಣದ ಹಿನ್ನೆಲೆ ಇಂದು ಉಡುಪಿ ನಗರಸಭೆಯಲ್ಲಿ ಚರ್ಚೆ ನಡೆದು ಕೋಲಾಹಲ ಸೃಷ್ಠಿಯಾಯಿತು.


    ಕೆಲಹೊತ್ತು ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಜಟಾಪಟಿಗೂ ಕಾರಣವಾಯಿತು. ಕೊನೆಗೆ ಮೀನು ಮಾರಾಟ ಶೆಡ್ಡನ್ನು ಅನಧಿಕೃತವಾಗಿ ಮೀನುಗಾರ ಮಹಿಳೆಯರಿಗೆ ಕಟ್ಟಿಸಿ ಕೊಟ್ಟ ಕಾಂಗ್ರೆಸ್ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮತ್ತು ರಮೇಶ್ ಕಾಂಚನ್ ಸಭೆಯಲ್ಲೇ ವಿಷಾದ ವ್ಯಕ್ತಪಡಿಸಿದರು.

    ಐದು ದಿನಗಳ ಹಿಂದೆ ಕಿನ್ನಿಮೂಲ್ಕಿಯಲ್ಲಿ ಆರು ಮಂದಿ ಮೀನುಗಾರ ಮಹಿಳೆಯರಿಗೆ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಪತಿ ಕಟ್ಟಿಸಿಕೊಟ್ಟದ್ದ ಶೆಡ್ ನ್ನು ನಗರಸಭೆ ಏಕಾಏಕಿ ಕೆಡವಿತ್ತು.
    ಇದರ ಬಗ್ಗೆ ಇಂದಿನ ನಗರಸಭೆ ಮೀಟಿಂಗ್‌ನಲ್ಲಿ ತೀವ್ರ ಚರ್ಚೆ ನಡೆಯಿತು.

    ಕೆಡವಿದ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಎತ್ತಿದಾಗ ಬಿಜೆಪಿ ಸದಸ್ಯರು ಮುಗಿಬಿದ್ದರು. ನಗರಸಭೆ ಸದಸ್ಯರೇ ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದು ತಪ್ಪು. ಅನಧಿಕೃತ ಎಂದ ಮೇಲೆ ನೋಟೀಸ್ ನೀಡಲಾಗುವುದಿಲ್ಲ.


    ಕಾನೂನು ಪ್ರಕಾರ ಕೆಡವಲಾಗಿದೆ ಎಂದು ಬಿಜೆಪಿ ಸದಸ್ಯರು ಉತ್ತರ ನೀಡಿದರು. ನಗರದಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳಿವೆ, ಅದನ್ನು ಯಾವಾಗ ಕೆಡವುತ್ತೀರಿ ಎಂದು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಕೇಳಿದರು.

    ಇದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್ ,ಎಲ್ಲ ಅನಧಿಕೃತ ಕಟ್ಟಡಗಳನ್ನು ಕೆಡವುತ್ತೇವೆ ಎಂದು ಉತ್ತರಿಸಿದರು. ಅಧ್ಯಕ್ಷತೆಯನ್ನು ನಗರ ಸಭಾಧ್ಯಕ್ಷೆ ಸುಮಿತ್ರಾ ನಾಯಕ್ ವಹಿಸಿದ್ದರು.

     

    LATEST NEWS

    ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿ ರತನ್‌ ಟಾಟಾ ಅಂತ್ಯಕ್ರಿಯೆ

    Published

    on

    ಮುಂಬೈ : ಖ್ಯಾತ ಉದ್ಯಮಿ, ಸರಳ ವ್ಯಕ್ತಿತ್ವದ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ(ಅ.10) ನೆರವೇರಿಸಲಾಯಿತು.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 86 ವರ್ಷದ ರತನ್ ಟಾಟಾ ಅವರು ಬುಧವಾರ(ಅ.9) ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧರಾಗಿದ್ದರು.

    ಇಂದು ಸಂಜೆ ಮುಂಬೈನ ವೋರ್ಲಿಯಲ್ಲಿರುವ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮುಂಬೈ ಪೊಲೀಸರು ಟಾಟಾ ಅವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು.

    ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೊದಲಾದ ಗಣ್ಯರು ಅಂತಿಮ ದರ್ಶನ ಪಡೆದರು.

    Continue Reading

    LATEST NEWS

    ಮಹಿಳೆಯ ಕೊ*ಲೆಗೈದು ಶ*ವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆಟೋ ಚಾಲಕ

    Published

    on

    ಮುಳಬಾಗಿಲು(ಕೋಲಾರ): ಮಹಿಳೆಯನ್ನು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಶ*ವದೊಂದಿಗೇ ಅತ್ಯಾ*ಚಾರವೆಸಗಿದ ಕೃ*ತ್ಯ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಬೆಳಕಿಗೆ ಬಂದಿದೆ.

    ಮುಳಬಾಗಿಲು ತಾಲೂಕಿನ ಹೈದರಿನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಎಂಬಾತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊ*ಲೆ ಮಾಡಿ ಬಳಿಕ ಅತ್ಯಾ*ಚಾರ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 24 ರಂದು ಮುಳಬಾಗಿಲಿನ ಹೈದರಿನಗರದಲ್ಲಿ 50 ವರ್ಷದ ಸುಶೀಲಮ್ಮ ಎಂಬ ಮಹಿಳೆಯನ್ನು ಕೊ*ಲೆ ಮಾಡಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಬಳಿಕ ಶ*ವದೊಂದಿಗೆ ಅತ್ಯಾ*ಚಾರವೆಸಗಿದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಮುಳಬಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    Continue Reading

    LATEST NEWS

    ಜಮ್ಮು- ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ‘ಒಮರ್ ಅಬ್ದುಲ್ಲಾ’ ಆಯ್ಕೆ

    Published

    on

    ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಕಟಿಸಿದ್ದಾರೆ.

    “ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿ ಎಲ್ಲರೂ ಒಮರ್ ಅಬ್ದುಲ್ಲಾ ಅವರನ್ನ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು ಎಂದು ಅವರು ತಿಳಿಸಿದ್ದಾರೆ. ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಚುನಾವಣಾ ಪೂರ್ವ ಮೈತ್ರಿ ಸದಸ್ಯರ ಸಭೆಯನ್ನು ಶುಕ್ರವಾರ ನಿಗದಿಪಡಿಸಲಾಗಿದೆ ಎಂದು ಅವರು ಘೋಷಿಸಿದರು.

    ಇದಕ್ಕೂ ಮುನ್ನ, ನ್ಯಾಷನಲ್ ಕಾನ್ಫರೆನ್ಸ್ (NC)ನಿಂದ ಹೊಸದಾಗಿ ಆಯ್ಕೆಯಾದ ಶಾಸಕರು ಪಕ್ಷದ ಪ್ರಧಾನ ಕಚೇರಿ ನವಾ-ಇ-ಸುಬಾದಲ್ಲಿ ಸಭೆ ಸೇರಿ ತಮ್ಮ ನಾಯಕನನ್ನ ಆಯ್ಕೆ ಮಾಡಿದರು. ಒಮರ್ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

    Continue Reading

    LATEST NEWS

    Trending