Connect with us

    LATEST NEWS

    ಉಡುಪಿ: ಅಪ್ರಾಪ್ತ ಬಾಲಕಿಗೆ ನಂಬಿಸಿ ಮೋಸ ಮಾಡಿದ ಪ್ರಕರಣ: ಆರೋಪಿಗೆ 20 ವರ್ಷ ಜೈಲು

    Published

    on

    ಉಡುಪಿ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ನೀಡಿದೆ.

    ಕುಂದಾಪುರದ ನಿವಾಸಿ ಮಿಥುನ್(21) ಶಿಕ್ಷೆಗೆ ಗುರಿಯಾದ ಆರೋಪಿ. ಈತ 17ವರ್ಷ ಪ್ರಾಯದ ನೊಂದ ಬಾಲಕಿಯನ್ನು ಕಾಲೇಜಿಗೆ ತೆರಳುವ ವೇಳೆ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಪುಸಲಾಯಿಸಿದ್ದು, 2023ರ ಜನವರಿಯಿಂದ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದನು. ನಂತರ ಬಾಲಕಿಯ ಆರೋಗ್ಯದಲ್ಲಿ ಆದ ವ್ಯತ್ಯಾಸವನ್ನು ಗಮನಿಸಿದ ಪೋಷಕರು, ವೈದ್ಯಕೀಯ ಪರೀಕ್ಷೆ ನಡೆಸಿದರು. ಇದರಿಂದ ಆಕೆ ಗರ್ಭಿಣಿ ಎಂಬುದು ತಿಳಿದು, ಪ್ರಕರಣ ಬೆಳಕಿಗೆ ಬಂತು. ಸಂತ್ರಸ್ತೆ ಬಾಲಕಿಯ ತಂದೆ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ನಂದ ಕುಮಾರ್, ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

    ಈ ಬಗ್ಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅಭಿಯೋಜನೆ ಪರ ಒಟ್ಟು ಸಲ್ಲಿಸಲಾದ 30ಸಾಕ್ಷಿಗಳ ಪೈಕಿ 16 ಸಾಕ್ಷಿಗಳ ವಿಚಾರಣೆಯನ್ನು, ವಾದ ಹಾಗೂ ಪ್ರತಿವಾದಗಳನ್ನು ಮತ್ತು ಡಿಎನ್‌ಎ ಸಾಕ್ಷಿಯನ್ನು ಪರಿಗಣಿಸಿ, ಆರೋಪಿ ದೋಷಿ ಎಂಬುದಾಗಿ ಅಭಿಪ್ರಾಯ ಪಟ್ಟರು. ಅದರಂತೆ ಆರೋಪಿಗೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆ ಮತ್ತು 21ಸಾವಿರ ರೂ. ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ 15ಸಾವಿರ ರೂ. ಬಾಲಕಿಗೆ, 6ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 2ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಉಪ್ಪಿನಂಗಡಿ: ರಸ್ತೆ ಬದಿ ಪ*ಲ್ಟಿಯಾದ ಕಂಟೈನರ್‌ ಲಾರಿ

    Published

    on

    ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರೇನಹಳ್ಳಿ ಸಮೀಪ ಕಂಟೈನರ್‌ ಲಾರಿಯೊಂದು ಸೋಮವಾರ (ನ.4) ರಾತ್ರಿ ಉಪ್ಪಿನಂಗಡಿ ರಸ್ತೆ ಬದಿ ಪ*ಲ್ಟಿಯಾದ ಘಟನೆ ಸಂಭವಿಸಿದೆ.

    ಲಾರಿಯಲ್ಲಿದ್ದ ಹೊಸ ಕಾರುಗಳು ನ*ಜ್ಜುಗುಜ್ಜಾಗಿವೆ.

    ಬದಿಗೆ ಬಿದ್ದ ಲಾರಿಯನ್ನು ಮಂಗಳವಾರ (ನ.5) ಕ್ರೇನ್‌ ಮೂಲಕ ಮೇಲಕ್ಕೆತ್ತುವ ವೇಳೆ ಕೆಲವು ತಾಸು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

    ಇದರ ಪರಿಣಾಮ ಕೆಲವು ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸ ಬೇಕಾಗಿತ್ತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

    Continue Reading

    BIG BOSS

    BBK11: ಅಸಹ್ಯವಾಗಿ ಟ್ರೋಲ್​ ಮಾಡಿದವರಿಗೆ ಬಿಗ್​ಬಾಸ್​ ಮಾನಸ ಸಖತ್ ಟಾಂಗ್‌; ಹೇಳಿದ್ದೇನು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ವೀಕ್ಷಕರು ಅತಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಸ್ಪರ್ಧಿ ಬಿಗ್​ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

    ಹೌದು, ಬಿಗ್​ಬಾಸ್​ ಮನೆಯಿಂದ ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ 4ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ತಮಾಷೆ ಮಾಡುತ್ತಲೇ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಮಾನಸ 4ನೇ ಸ್ಪರ್ಧಿಯಾಗಿ ಆಚೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

    ಹಾಸ್ಯ ನಟ ತುಕಾಲಿ ಸಂತೋಷ್​ ಪತ್ನಿ ಪಕ್ಕಾ ಹಳ್ಳಿ ಹುಡುಗಿ. ಬಿಗ್​ಬಾಸ್​ ಮನೆಯಲ್ಲೂ ಹಳ್ಳಿ ಭಾಷೆಯಲ್ಲೇ ಮಾತಾಡು ತ್ತಿದ್ದರು. ಹೀಗಾಗಿ ಸಾಕಷ್ಟು ವೀಕ್ಷಕರಲ್ಲಿ ಕೆಲವರಿಗೆ ಮಾನಸ ಮಾತನಾಡುವ ಶೈಲಿ ಮತ್ತು ಡ್ರೆಸ್ಸಿಂಗ್‌ ಬಗ್ಗೆ ಕೊಂಕು ಮಾತಾಡಿದ್ದರು. ಅಲ್ಲದೇ ನನ್ನ ಮಾತಿನಿಂದ ಬೇಸರ ಆಗಿದ್ದರೇ ಕ್ಷಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಹೊರಗಡೆ ಟ್ರೋಲಿಗರು ಅದನ್ನು ಫೋಕಸ್​ ಮಾಡಿ ಅವರನ್ನು ಕೇಳ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು.

    ಬೇರೆ ಬೇರೆ ಪ್ರಾಣಿಗಳ ಪಕ್ಕ ಮಾನಸ ಅವರ ಫೋಟೋವನ್ನು ಹಾಕಿ ಟ್ರೋಲ್​ ಮಾಡಿದ್ದರು. ಆ ಟ್ರೋಲ್​ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಇದೇ ವಿಚಾರವಾಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಮೇಲೆ ಬೇಸರ ಹೊರ ಹಾಕಿದ್ದಾರೆ.

    ಇನ್ನೂ ಈ ಬಗ್ಗೆ​ ಸಂದರ್ಶನದಲ್ಲಿ ಮಾತಾಡಿದ ಅವರು, ಒಂದು ಕಡೆ ಹಂದಿ ಫೋಟೋ ಹಾಕಿ, ಮತ್ತೊಂದು ಕಡೆ ನನ್ನ ಫೋಟೋ ಹಾಕಿದ್ದರು. ನನಗೆ ಬೇಸರ ಆಗಿಲ್ಲ. ಆದ್ರೆ ನನಗಾಗಿ ಟೈಮ್​ ಕೊಟ್ಟು ಫೋಟೋ ಹಾಕಿದ್ದಾರೆ. ಮೊದ ಮೊದಲು ನನಗೆ ಫೋಟೋ ನೋಡಿ ಜಿಗುಪ್ಸೆ ಬಂತು. ಅದನ್ನೂ ನೋಡಿ ಅಳ್ತಾ ಇದ್ದೆ. ಆಮೇಲೆ ಸಂತು ನನಗೆ ಸಮಾಧಾನ ಮಾಡಿದ್ದರು. ಆದರೆ ಕೆಲವರು ತುಂಬಾ ಅಸಹ್ಯವಾಗಿ ಟ್ರೋಲ್​ ಮಾಡಿದವರ ಮನೆಯವರು ಸುಂದರವಾಗಿ ಇದ್ದಾರಾ? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೇ ಇರೋರು ಕೂಡ ಇರ್ತಾರೆ ಅಲ್ವಾ ಅದಕ್ಕಾಗಿ ನಾನು ಅತ್ತಿದ್ದೆ.

    ಇದೇ ವಿಚಾರದ ಬಗ್ಗೆ ಮಾನಸ ಪತಿ, ನನ್ನ ಹೆಂಡತಿ ಸೋಷಿಯಲ್​ ಮೀಡಿಯಾದಲ್ಲಿ ಇಷ್ಟೊಂದು ಫೇಮಸ್ ಆಗೋದಕ್ಕೆ ಟ್ರೋಲರ್ಸ್​ಗಳೇ ಕಾರಣ. ಅವರು ಆತರ ಮಾಡಿದ್ದರಿಂದ ನಾವು ಎಚ್ಚರವಾಗಿ ಇರಲು ಸಾಧ್ಯ. ನಮಗೆ ಯಾರಾದರೂ ದೇವರು ಅಂತ ಇದ್ರೆ ಅದು ಟ್ರೋಲರ್ಸ್​ ಹಾಗೂ ಸೋಷಿಯಲ್​ ಮೀಡಿಯಾ ಅಂತ ಹೇಳಿಕೊಂಡಿದ್ದಾರೆ.

    Continue Reading

    LATEST NEWS

    ಉಡುಪಿ : ಅಪರಿಚಿತರಿಂದ ಅಧಿಕ ಲಾಭಾಂಶದ ಆಮಿಷ : ಬ್ಯಾಂಕ್‌ ಮ್ಯಾನೇಜರ್‌ಗೆ ವಂಚನೆ

    Published

    on

    ಉಡುಪಿ: ಬ್ಯಾಂಕ್‌ ಮ್ಯಾನೇಜರ್‌ವೊಬ್ಬರಿಗೆ ಅಧಿಕ ಲಾಭಾಂ ಶದ ಆಮಿಷವೊಡ್ಡಿದ ಆನ್‌ಲೈನ್‌ ವಂಚಕರು ಅವರ ಖಾತೆಯಿಂದಲೇ 14 ಲಕ್ಷ ರೂ.ಗಳನ್ನು ಹಂತ-ಹಂತವಾಗಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ ಉಡುಪಿಯಲ್ಲಿ ನಡೆದಿದೆ.


    ದೊಂಡೇರಂಗಡಿಯಲ್ಲಿರುವ ಬ್ಯಾಂಕೊಂದರ ಮ್ಯಾನೇಜರ್‌ ಪವನ್‌ ಕುಮಾರ್‌ ವಂಚನೆಗೆ ಒಳಗಾದವರು.

    ಯಾರೋ ಅಪರಿಚಿತರು ಪವನ್‌ ಕುಮಾರ್‌ ಅವರನ್ನು C22 Investment Alliance Trading ಎಂಬ ವಾಟ್ಸಾಪ್‌ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದರು.

    ಅನಂತರ ಅವರ ಮೊಬೈಲ್‌ನಿಂದ ಷೇರು ಮಾರುಕಟ್ಟೆಯ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪವನ್‌ ಕುಮಾರ್‌ ಅವರನ್ನು ನಂಬಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂಬ ಆಸೆ ತೋರಿಸಿದ್ದಾರೆ. ಬಳಿಕ Causeway App ಮೂಲಕ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ.

    ಇದನ್ನು ನಂಬಿದ ಅವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗ ಳಿಗೆ ಅ.7ರಿಂದ 19ರವರೆಗೆ ಹಂತ ಹಂತವಾಗಿ 14,00,000 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೆ ವಂಚನೆ ಎಸಗಿದ್ದಾರೆ.

    ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending