ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿ ಗೆಲುವು ಸಾಧಿಸಿ,ಬಿಜೆಪಿಯಿಂದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಉಡುಪಿ: ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿ ಗೆಲುವು ಸಾಧಿಸಿ, ಬಿಜೆಪಿಯಿಂದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಈ ವಿಜಯೋತ್ಸವದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.ಇನ್ನು ಕಾಪು ತಾಲೂಕಿನ ಪಡುಕೆರೆಯಿಂದ ಆರಂಭಗೊಂಡ ಈ ವಿಜಯೋತ್ಸವ ಯಾತ್ರೆಯು ಕಟಪಾಡಿ, ಉದ್ಯಾವರ, ಶಿರ್ವ, ಪಡುಬಿದ್ರಿ ಮೂಲಕ ಸಾಗಿ ಬಳಿಕ ಕಾಪುವಿಗೆ ಬರಲಿದೆ.
ನಂತರ ಕಾಪು ಕಳತ್ತೂರು ಸಭಾಭವನದಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಅಭಿನಂದನೆ ನಡೆಯುವ ಮೂಲಕ ಕಾರ್ಯಕ್ರಮ ಸಮಾಪನಗೊಳ್ಳಲಿದೆ.
ಈ ವಿಜಯೋತ್ಸವದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್. ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ , ಕಾಪು ತಾಲೂಕು ಅಧ್ಯಕ್ಷ ಶ್ರೀಕಾಂತ್ ನಾಯಕ್ , ಮಹಿಳಾ ಮೋರ್ಚಾದ ಅಧ್ಯಕ್ಷ ವೀಣಾ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಪಕ್ಷದ ಪ್ರಮುಖರು, ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.